IND vs SL: ಮಹಾಪರಾಧ ಮಾಡಿದ ಜಡೇಜಾ; ಲಂಕಾ ನಾಯಕನಿಗೆ ಜೀವದಾನ
India vs Sri Lanka: ಗಾಲೆ ಟೆಸ್ಟ್‌ನ ನಾಲ್ಕನೇ ದಿನ ಭಾರತ ಮೇಲುಗೈ ಸಾಧಿಸಿದ್ದರೂ, ರವೀಂದ್ರ ಜಡೇಜಾ ಅವರ ನೋ ಬಾಲ್ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಅವರನ್ನು ಉಳಿಸಿತು. 372 ರನ್‌ಗಳ ಗುರಿ ಬೆನ್ನಟ್ಟಿದ ಲಂಕಾ 84/4 ಆಗಿದ್ದು, ಜಡೇಜಾ ನೋ ಬಾಲ್ ಇಲ್ಲದಿದ್ದರೆ ಭಾರತಕ್ಕೆ ಇನ್ನೊಂದು ನಿರ್ಣಾಯಕ ವಿಕೆಟ್ ಸಿಗುತ್ತಿತ್ತು. ಈ ನೋ ಬಾಲ್ ಪಂದ್ಯದ ಫಲಿತಾಂಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. 372 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆತಿಥೇಯ ಶ್ರೀಲಂಕಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 84 ರನ್‌ಗಳಿಗೆ ನಾಲ್ಕು ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿದೆ. ರವೀಂದ್ರ ಜಡೇಜಾ (Ravindra Jadeja) ಅದೊಂದು ತಪ್ಪನ್ನು ಎಸಗದಿದ್ದರೆ ವಿಕೆಟ್ಗಳ ಸಂಖ್ಯೆ ಇನ್ನು ಹೆಚ್ಚಿರುತ್ತಿತ್ತು. ಕನಿಷ್ಠ ಪಕ್ಷ ಒಂದು ವಿಕೆಟ್ ಆದರೂ ಹೆಚ್ಚಾಗಿ ಸಿಕ್ಕಿರುತ್ತಿತ್ತು. ಆದರೆ ಜಡೇಜಾ ಬೌಲ್ ಮಾಡಿದ ಅದೊಂದು ನೋ ಬಾಲ್ ತಂಡಕ್ಕೆ ಸಿಗಬೇಕಿದ್ದ ವಿಕೆಟ್ ಅನ್ನು ಸಿಗದಂತೆ ಮಾಡಿತು.
ನೋ ಬಾಲ್ ಎಸೆದ ಜಡೇಜಾ
ಶ್ರೀಲಂಕಾದ ಎರಡನೇ ಇನ್ನಿಂಗ್ಸ್ನ 16ನೇ ಓವರ್ ಬೌಲ್ ಮಾಡಿದ ರವೀಂದ್ರ ಜಡೇಜಾ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಸಿಗುವ ಅವಕಾಶ ಸೃಷ್ಟಿಸಿದರು. ಜಡೇಜಾ ಬೌಲ್ ಮಾಡಿದ ಓವರ್ನ ಕೊನೆಯ ಎಸೆತ ಸ್ಟ್ರೈಕ್ನಲ್ಲಿದ್ದ ಲಂಕಾ ನಾಯಕ ಧನಂಜಯ ಡಿ ಸಿಲ್ವಾ ಅವರ ಬ್ಯಾಟ್ನ ಅಂಚನ್ನು ತಾಗಿ ಸ್ಲಿಪ್‌ನಲ್ಲಿ ನಿಂತಿದ್ದ ಕೆಎಲ್ ರಾಹುಲ್ ಅವರ ಕಡೆಗೆ ಹೋಯಿತು. ರಾಹುಲ್ ಕೂಡ ಸುಲಭವಾಗಿ ಕ್ಯಾಚ್ ತೆಗೆದುಕೊಂಡರು. ಇದರಿಂದ ಆಟಗಾರರೆಲ್ಲರೂ ವಿಕೆಟ್ ಸಿಕ್ಕ ಖುಷಿಯನ್ನು ಸಂಭ್ರಮಿಸಲು ಶುರು ಮಾಡಿದರು. ಆದರೆ ಜಡೇಜಾ ಬೌಲ್ ಮಾಡಿದ ಆ ಚೆಂಡು ನೋ ಬಾಲ್ ಎಂದು ಮೂರನೇ ಅಂಪೈರ್ ಘೋಷಿಸುವ ಮೂಲಕ ಟೀಂ ಇಂಡಿಯಾದ ಸಂಭ್ರಮಕ್ಕೆ ತಣ್ಣೀರೆರೆಚಿದರು.
ಅಜೇರಾಗಿ ಉಳಿದಿರುವ ಡಿ ಸಿಲ್ವಾ
ಜಡೇಜಾ ಮಾಡಿದ ಈ ನೋ ಬಾಲ್ನಿಂದ ಬದುಕುಳಿದ ಧನಂಜಯ ಡಿ ಸಿಲ್ವಾ 4ನೇ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದಿದ್ದು, 73 ಎಸೆತಗಳಲ್ಲಿ 3 ಬೌಂಡರಿ ಸಹಿತ 31 ರನ್ ಬಾರಿಸಿದ್ದಾರೆ. ಒಂದು ವೇಳೆ ಅದು ನೋ ಬಾಲ್ ಆಗಿರದಿದ್ದರೆ, ಟೀಂ ಇಂಡಿಯಾ ಅರ್ಧ ಪಂದ್ಯ ಗೆದ್ದಂತ್ತಾಗುತ್ತಿತ್ತು. ಏಕೆಂದರೆ ಟೀಂ ಇಂಡಿಯಾಕ್ಕೆ ಲಂಕಾ ನಾಯಕನ ವಿಕೆಟ್ ಸಿಗುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಜಡೇಜಾ ಮಾಡಿದ ಇದೊಂದು ಲೋಪ ತಂಡಕ್ಕೆ ಎಷ್ಟು ದುಬಾರಿಯಾಗುತ್ತದೆ ಎಂಬುದು ನಾಳೆ ತಿಳಿಯಲಿದೆ.
IND vs SL: 4 ವಿಕೆಟ್ ಕಳೆದುಕೊಂಡ ಲಂಕಾ; ಕೊನೆಯ ದಿನ 288 ರನ್ ಗುರಿ
ರಾಹುಲ್ ತಪ್ಪಿನಿಂದ 60 ರನ್ ದಂಡ
ಶ್ರೀಲಂಕಾದ ಮೊದಲ ಇನ್ನಿಂಗ್ಸ್ನಲ್ಲೂ ಇದೇ ರೀತಿಯ ತಪ್ಪನ್ನು ಕೆಎಲ್ ರಾಹುಲ್ ಮಾಡಿದ್ದರು. ನಿರೋಷನ್ ಡಿಕ್ವೆಲ್ಲಾ ನೀಡಿದ ಸುಲಭವಾದ ಕ್ಯಾಚ್ ಅನ್ನು ಕೆಎಲ್ ರಾಹುಲ್ ಕೈಬಿಟ್ಟರು. ಕೆಎಲ್ ರಾಹುಲ್ ಮಾಡಿದ ಈ ತಪ್ಪು ಟೀಂ ಇಂಡಿಯಾಕ್ಕೆ ತುಂಬಾ ದುಬಾರಿಯಾಯಿತು. ಡಿಕ್ವೆಲ್ಲಾಗೆ ರಾಹುಲ್ ಜೀವದಾನ ನೀಡಿದಾಗ ಅವರು ಕೇವಲ 20 ರನ್ ಬಾರಿಸಿದ್ದರು. ರಾಹುಲ್ ಕ್ಯಾಚ್ ಬಿಟ್ಟ ಬಳಿಕ ಈ ಜೀವದಾನದ ಲಾಭ ಪಡೆದ ಡಿಕ್ವೆಲ್ಲಾ ಬರೋಬ್ಬರಿ 80 ರನ್‌ಗಳ ಇನ್ನಿಂಗ್ಸ್ ಅಡಿದರು. ಮಾತ್ರವಲ್ಲದೆ ಸೋನಲ್ ದಿನುಷಾ ಅವರೊಂದಿಗೆ 6ನೇ ವಿಕೆಟ್ಗೆ 146 ರನ್‌ಗಳ ಜೊತೆಯಾಟ ಕೂಡ ಕಟ್ಟಿದರು. ಇದು ಶ್ರೀಲಂಕಾವನ್ನು ಫಾಲೋ ಆನ್ನಿಂದ ಪಾರು ಮಾಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 pm, Tue, 18 August 26




