AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಐದು ರಾಶಿಯವರು ಒಂದಲ್ಲಾ ಒಂದು ಸಲ ಭಾರೀ ಮೊತ್ತದ ಹಣ ಕಳೆದುಕೊಳ್ಳುತ್ತಾರೆ; ಇಲ್ಲಿದೆ ನಷ್ಟದ ಕಾರಣಗಳು

ಐದು ರಾಶಿಯವರಿಗೆ ಬಹಳ ಮುಖ್ಯವಾದ ಎಚ್ಚರಿಕೆಯಿಂದ ಇರಬೇಕು. ಅದೇನೆಂದರೆ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ತಾವು ದುಡಿದ ಹಣದ ದೊಡ್ಡ ಪಾಲನ್ನು ಇವರು ಕಳೆದುಕೊಳ್ಳುತ್ತಾರೆ. ಆದ್ದರಿಂದ ಬಹಳ ಎಚ್ಚರಿಕೆ ವಹಿಸಿ, ನಿರ್ಧಾರ ತೆಗೆದುಕೊಳ್ಳಬೇಕು.

ಈ ಐದು ರಾಶಿಯವರು ಒಂದಲ್ಲಾ ಒಂದು ಸಲ ಭಾರೀ ಮೊತ್ತದ ಹಣ ಕಳೆದುಕೊಳ್ಳುತ್ತಾರೆ; ಇಲ್ಲಿದೆ ನಷ್ಟದ ಕಾರಣಗಳು
horoscope
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 27, 2023 | 3:17 PM

Share

ಯಾರನ್ನಾದರೂ ನಂಬಿ, ಹಣ ಹೂಡಿಕೆ ಮಾಡಿ, ಆ ನಂತರ ಮೋಸ ಹೋದ ಅನುಭವ ಬಹಳ ಬೆಲೆ ಕೇಳುವಂಥದ್ದು. ಅಥವಾ ಅತ್ಯುತ್ಸಾಹ, ವಿಪರೀತ ವಿಶ್ವಾಸದಿಂದ ತೆಗೆದುಕೊಂಡ ನಿರ್ಧಾರ ಸಹ ಕೆಲವು ಸಲ ಸರಿಯಾಗಿಯೇ ಕೈ ಕೊಡುತ್ತದೆ. ಐದು ರಾಶಿಯವರಿಗೆ ಬಹಳ ಮುಖ್ಯವಾದ ಎಚ್ಚರಿಕೆಯಿಂದ ಇರಬೇಕು. ಅದೇನೆಂದರೆ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ತಾವು ದುಡಿದ ಹಣದ ದೊಡ್ಡ ಪಾಲನ್ನು ಇವರು ಕಳೆದುಕೊಳ್ಳುತ್ತಾರೆ. ಆದ್ದರಿಂದ ಬಹಳ ಎಚ್ಚರಿಕೆ ವಹಿಸಿ, ನಿರ್ಧಾರ ತೆಗೆದುಕೊಳ್ಳಬೇಕು.

ವೃಷಭ

ಮತ್ತೊಬ್ಬ ವ್ಯಕ್ತಿಗೆ ಬಹಳ ಕಷ್ಟ ಇದೆ, ಒಂದು ಸಲ ಸಹಾಯ ಮಾಡಿದರೆ ಅದರಿಂದ ಅವರು ಉದ್ಧಾರ ಆಗುತ್ತಾರೆ ಎಂದುಕೊಂಡು ಈ ರಾಶಿಯವರು ಮಾಡಿದ ಸಹಾಯದಿಂದ ದೊಡ್ಡ ಸಮಸ್ಯೆಯನ್ನೇ ಎದುರಿಸುವಂತಾಗುತ್ತದೆ. ಈ ರಾಶಿಯವರಲ್ಲಿ ಕೆಲವರು ತಮ್ಮ ಮನೆ, ಆಸ್ತಿಯನ್ನು ಅಡಮಾನ ಮಾಡಿ, ನೆರವಾಗಿರುವ ಉದಾಹರಣೆ ಸಹ ಕಂಡುಬರುತ್ತದೆ. ಇದಾದ ಮೇಲೆ ಸಹಾಯ ಪಡೆದ ವ್ಯಕ್ತಿಯು ಹಳೆಯದನ್ನೆಲ್ಲ ಮರೆತು ತಾನು ನೆಮ್ಮದಿಯಾಗಿ ಉಳಿದು, ಈ ವೃಷಭ ರಾಶಿಯವರನ್ನೇ ಸಂಕಷ್ಟಕ್ಕೆ ಸಿಲುಕಿಸುತ್ತಾರೆ.

ಸಿಂಹ

ಕಷ್ಟವೋ- ನಷ್ಟವೋ, ಸಾಲವೋ- ಸೋಲವೋ ನಾನು ಹೇಳಿದ್ದೇ ಆಗಬೇಕು ಎಂಬ ಇವರ ಹಠದ ಕಾರಣಕ್ಕೆ ದೊಡ್ಡ ಮೊತ್ತವನ್ನು ಕಳೆದುಕೊಳ್ಳುವಂತಾಗುತ್ತದೆ. ವ್ಯಾಪಾರ- ವ್ಯವಹಾರ, ಷೇರು ಮಾರುಕಟ್ಟೆ ಹೂಡಿಕೆ ಮಾಡುತ್ತಾರೆ ಅಂತಾದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಅನುಭವಿಗಳ ಸಲಹೆ, ಕುಟುಂಬದವರು ಹೇಳಿದ ಮಾತನ್ನು ಕೇಳಿಸಿಕೊಳ್ಳಬೇಕು, ಅನುಸರಿಸಬೇಕು. ಮುಖ್ಯವಾಗಿ, ನನಗೆ ಎಲ್ಲ ಗೊತ್ತು, ನಾನು ತೀರ್ಮಾನ ಮಾಡ್ತೀನಿ ಎಂಬ ಧೋರಣೆ ಬೇಡ.

ವೃಶ್ಚಿಕ

ಭೂಮಿ ಮೇಲಿನ ಹೂಡಿಕೆಯಲ್ಲಿ ಭಾರೀ ಹಣವನ್ನು ಕಳೆದುಕೊಳ್ಳುವಂಥ ಯೋಗ ಇವರ ಪಾಲಿಗಿದೆ. ಆತುರವಾಗಿ ತೆಗೆದುಕೊಂಡಂಥ ನಿರ್ಧಾರವು ಇವರು ಪರಿತಪಿಸುವಂತೆ ಮಾಡುತ್ತದೆ. ನಿಮ್ಮ ಅನುಭವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಏನೇ ಇದ್ದರೂ ಹುಂಬತನದಿಂದಾಗಿ ಹಣ ಕಳೆದುಕೊಳ್ಳುವಂತಾಗುತ್ತದೆ. ಅದರಲ್ಲೂ ಭೂಮಿ, ಮನೆ ಇತ್ಯಾದಿ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಇದನ್ನೂ ಓದಿ: Jupiter transit in Aries: ಗುರು ಗ್ರಹದ ಸಮಸ್ಯೆ ಇರುವ ಈ ಲಗ್ನ, ರಾಶಿಯವರು ಬಹಳ ಜಾಗ್ರತೆಯಿಂದ ಇರಬೇಕು

ಮಕರ

ಒಂದೋ ಬಡ್ಡಿ ಆಸೆಗೆ ಬಿದ್ದು ಅಥವಾ ತಮ್ಮನ್ನು ಹೊಗಳಿದರು ಅನ್ನುವ ಕಾರಣಕ್ಕೆ ಕೈಲಿರುವ ಹಣವನ್ನು ಸಾಲ ಕೊಟ್ಟು ಕಳೆದುಕೊಳ್ಳವಂಥ ಯೋಗ ಇವರಿಗೆ ಇರುತ್ತದೆ. ಆದ್ದರಿಂದ ಇವರು ಇನ್ನೊಬ್ಬರಿಗೆ ಹಣ ನೀಡಬಾರದು. ಇನ್ನು ಈ ರಾಶಿಯವರ ಪೈಕಿ ಕೆಲವರು ಪಾರ್ಟನರ್ ಷಿಪ್ ವ್ಯವಹಾರದಲ್ಲೂ ಹಣ ಕಳೆದುಕೊಳ್ಳವಂಥ ಯೋಗ ಇರುತ್ತದೆ. ವಿಪರೀತ ಶ್ರಮಪಟ್ಟು ದುಡಿಯುವ ಈ ರಾಶಿಯವರು ತಮ್ಮ ಮನೆಯವರಿಗೆ ಗೊತ್ತಾಗದಂತೆ ವ್ಯವಹಾರ ಮಾಡಬಾರದು.

ಮೀನ

ಈ ರಾಶಿಯವರು ಅಧಿಕಾರ ಹಿಡಿಯುವ ಸಲುವಾಗಿ ಮಾಡುವ ಪ್ರಯತ್ನದಲ್ಲಿ ಹಣವನ್ನು ಕಳೆದುಕೊಳ್ಳುತ್ತಾರೆ. ರಾಜಕಾರಣದಲ್ಲಿ ಇದ್ದರಂತೂ ಗೆಲುವೋ ಸೋಲೋ ಆದರೆ ಇವರ ಪಾಲಿಗೆ ಹಣದ ನಷ್ಟ ಕಟ್ಟಿಟ್ಟ ಬುತ್ತಿ. ಇವರಲ್ಲಿ ಕೆಲವರು ಅಪರೂಪದ ವಸ್ತುಗಳನ್ನು ಖರೀದಿ ಮಾಡುವ ಹವ್ಯಾಸ ಇರುವವರಿರುತ್ತಾರೆ. ಅಂಥ ಅಪರೂಪದ ವಸ್ತು ಸಂಗ್ರಹ ಮಾಡುವ ಪ್ರಯತ್ನದಲ್ಲಿ ವಂಚನೆಗೆ ಒಳಗಾಗುವಂಥವರು ಇರುತ್ತಾರೆ.

ರಾಶಿಭವಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ