Daily Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರು ತಮ್ಮ ಮೇಲೇ ಸಿಟ್ಟಾಗುವ ಸಾಧ್ಯತೆ ಇದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 28 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಶಿವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:36 ರಿಂದ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:45 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:59 ರಿಂದ ಮಧ್ಯಾಹ್ನ 12:36ರ ವರೆಗೆ.
ಮೇಷ: ಧನವ್ಯವಹಾರವನ್ನು ಜಾಗರೂಕತೆಯಿಂದ ಮಾಡಿ. ವ್ಯಾಪರವು ಮಧ್ಯಮಫಲದಿಂದ ಇರಲಿದೆ. ಹೆಚ್ಚು ಪರಿಶ್ರಮದಿಂದ ನಿಮಗೆ ಆಯಾಸವಾದೀತು. ವಿಶ್ರಾಂತಿಯನ್ನು ಒಡೆದು ಮುಂದುವರಿಯುವುದು ಉತ್ತಮ. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಖುಷಿಯಿಂದ ತೊಡಗಿಕೊಳ್ಳುವರು. ಎಲ್ಲವನ್ನೂ ನಿಮ್ಮ ಮೂಲಕವೇ ನಡೆಯಬೇಕು ಎಂಬ ಮಾನಸಿಕ ಸ್ಥಿತಿಯು ಒಳ್ಳೆಯದಲ್ಲ. ನಿಮ್ಮ ಜವಾಬ್ದಾರಿಯ ಕೆಲಸಗಳು ಸರಿಯಾಗಿ ನಡೆತುತ್ತಿದೆಯೇ ಎಂಬುದನ್ನು ಗಮನಸಿ. ಸರ್ಕಾರಿ ಕೆಲಸವನ್ನು ಅಲ್ಲಿರುವ ಆಪ್ತರ ಮೂಲಕ ಮಾಡಿಸಿಕೊಳ್ಳುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡಲಿದ್ದೀರಿ.
ವೃಷಭ: ಅಹಂಕಾರದಿಂದ ಕೂಡಿದ ಮನಸ್ಸಿನ ಜೊತೆ ಯಾರೂ ಬರುವುದಿಲ್ಲ. ನೀವು ಒಂಟಿಯಾಗುವಿರಿ. ಸರಿಯಾದ ವಿಚಾರವನ್ನು ತಿಳಿದು ಮಾತನಾಡುವುದು ಉತ್ತಮ. ಸ್ನೇಹಿತರನ್ನು ನೀವು ಕಳೆದುಕೊಳ್ಳುವಿರಿ. ಸುಖವಾಗಿರಬೇಕು ಎನ್ನುವ ಮನೋಭಾವವೇ ನಿಮ್ಮ ದೊಡ್ಡ ಶತ್ರುವಾಗಿ ನಿಮಗೆ ತೊಂದರೆಯನ್ನು ಕೊಡಬಹುದು. ಯಾವ ಕ್ಷಣವನ್ನೂ ನೀವು ಮನಸ್ಸು ಖಾಲಿಯಾಗದಂತೆ ನೋಡಿಕೊಳ್ಳಿ. ಆರ್ಥಿಕ ಸಹಾಯಕ್ಕೆ ಸಿಗುವವರು ನಿಮ್ಮಿಂದ ಮತ್ತೇನನ್ನೋ ಬಯಸುವರು. ನಿಮ್ಮ ಮಾತು ನೇರವಾಗಿರಲಿ. ಅರ್ಥವತ್ತಾಗಿರಲಿ. ಇಂದು ನಿಮ್ಮ ಆಪ್ತರನ್ನು ಕಡೆಗಣಿಸುವಿರಿ.
ಮಿಥುನ: ಸರ್ಕಾರಿ ಕೆಲಸದಲ್ಲಿ ನಿಮಗೆ ಇಂದು ಹಿನ್ನಡೆಯಾಗಲಿದೆ. ಸೋಲನ್ನು ಒಪ್ಪಿಕೊಳ್ಳಲು ನೀವು ಹಿಂದೇಟು ಹಾಕುವಿರಿ. ದುರಭ್ಯಾಸವನ್ನು ನೀವು ಮಿತ್ರರಿಂದ ಪಡೆಯುವಿರಿ. ಎಲ್ಲರೆದುರು ಮಾತನಾಡುವ ಸಂದರ್ಭ ಬರಲಿದ್ದು ನೀವು ಮುಜಗರಗೊಳ್ಳುವಿರಿ. ನಿಮ್ಮ ನಿಲುವುಗಳಿಂದ ಮನೆಯಲ್ಲಿ ಗೊಂದಲವಾಗಬಹುದು. ನಿಮ್ಮ ಮೇಲೆ ಸಿಟ್ಟಾಗುವ ಸಾಧ್ಯತೆಯೂ ಇದೆ. ಹೆಚ್ಚಿನ ಸಮಯವನ್ನು ಇಂದು ಪ್ರಯಾಣದಲ್ಲಿಯೇ ಕಳೆಯುವಿರಿ. ಅಸ್ವಾಭಾವಿಕ ನಡೆಗಳಿಂದ ನಿಮ್ಮವರಿಗೆ ಅನುಮಾನ ಬರಬಹುದು. ತಂದೆಯ ಮಾತನ್ನು ನೀವು ಖಂಡಿಸುವಿರಿ.
ಕಟಕ: ನಿಮ್ಮ ನಡತೆಯನ್ನು ನೀವೇ ಗಮನಿಸಿಕೊಂಡು ಸರಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕಾರ್ಯ ವೈಫಲ್ಯಕ್ಕೆ ಇನ್ನೊಬ್ಬರನ್ನು ದೂರುವುದು ಸರಿಯಲ್ಲ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ. ಕಳೆದುಕೊಂಡ ಮಾನವನ್ನು ಮರಳಿ ಪಡೆಯಲಾಗದು. ನಿಮ್ಮ ವೃತ್ತಿಯ ಕ್ಷೇತ್ರದಲ್ಲಿ ನಿಮಗೆ ಸ್ವಲ್ಪ ಅಗೌರವವೂ ಇರಬಹುದು. ಆರ್ಥಿಕತೆಯನ್ನು ನೀವು ಬೆಳೆಸಿಕೊಳ್ಳಲು ಹೆಚ್ಚು ಶ್ರಮವು ಅವಶ್ಯಕ. ಸಹೋದ್ಯೋಗಿಯನ್ನು ನೀವು ಮಿತ್ರರನ್ನಾಗಿ ಪಡೆಯುವಿರಿ. ಅವಸರಕ್ಕೆ ಒಳಗಾಗಿ ಏನನ್ನಾದರೂ ಮಾಡಿಕೊಂಡೀರ, ಜಾಗರೂಕರಾಗಿರಿ. ಸರಳ ಜೀವನವನ್ನು ನೀವು ಇಷ್ಟಪಡುವಿರಿ.
-ಲೋಹಿತಶರ್ಮಾ