AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ವಿವಾಹ ಮಾಡಿಸಲು ಬಂಧುಗಳು ಮಾಡಿದ ಪ್ರಯತ್ನವು ನಿಷ್ಪ್ರಯೋಜಕವಾದೀತು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ವಿವಾಹ ಮಾಡಿಸಲು ಬಂಧುಗಳು ಮಾಡಿದ ಪ್ರಯತ್ನವು ನಿಷ್ಪ್ರಯೋಜಕವಾದೀತು
ಇಂದಿನ ರಾಶಿಭವಿಷ್ಯImage Credit source: Getty Images
TV9 Web
| Updated By: Rakesh Nayak Manchi|

Updated on: Jun 28, 2023 | 12:45 AM

Share

ಶುಭೋದಯ ಗೆಳೆಯರೇ, ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ? ಯಾರಿಗೆ ಲಾಭ ಕಾದಿದೆ? ಯಾರಿಗೆ ನಷ್ಟ ಕಾದಿದೆ? ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಶಿವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:36 ರಿಂದ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:45 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:59 ರಿಂದ ಮಧ್ಯಾಹ್ನ 12:36ರ ವರೆಗೆ.

ಧನು: ಗಟ್ಟಿಯಾದ ನಿಯಮಗಳನ್ನು ಮಾಡದೇ ನಿಮ್ಮ ಉದ್ಯಮವನ್ನು ಸರಿದಾರಿಗೆ ತರುವುದು ಅಸಾಧ್ಯ. ‌ಈ ಕಾರಣಕ್ಕಾಗಿ ಕೆಲವರನ್ನು ಎದುರು ಹಾಕಿಕೊಳ್ಳಬೇಕಾದೀತು. ಕೃಷಿಯ ಚಟುವಟಿಕೆಯಲ್ಲಿ ಇಂದು ಆಸಕ್ತಿ ಕಡಿಮೆಯಾಗಿ ಮನೆಯಲ್ಲಿಯೇ ಇರುವಿರಿ. ಮೊಣಕಾಲಿನ ನೋವಿನಿಂದ ಸಂಕಟ ಪಡುವಿರಿ. ದಾಯಾದಿಗಳು ನಿಮ್ಮ ಅವನತಿಯನ್ನು ಕಾಯುತ್ತ ನಿಮ್ಮ ಹಿತಶತ್ರುಗಳಾಗಿರುವರು. ನಿಮ್ಮ ಉದ್ಯೋಗವನ್ನು ತಪ್ಪಿಸಲು ಶತ್ರುಗಳು ಪ್ರಯತ್ನಿಸುವರು. ನೀವು ಪ್ರಭಾವಿ ವ್ಯಕ್ತಿಗಳ ಮೂಲಕ ಗಟ್ಟಿ ಮಾಡಿಕೊಳ್ಳುವುದು ಉತ್ತಮ.

ಮಕರ: ಇಂದು‌ ನೀವು ಸಣ್ಣ ವಿಚಾರವೆಂದು ಕಡೆಗಣಿಸಿದ್ದು ದೊಡ್ಡದಾಗಬಹುದು. ಸರಳವಿಧಾನವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಇಂದಿನ ಹಣದ ಅವಶ್ಯಕತೆಯನ್ನು ಸಹೋದರನ ಮೂಲಕ ಪೂರೈಸಿಕೊಳ್ಳುವಿರಿ. ಬಳಕೆಯಾದ ವಾಹನವನ್ನು ನೀವು ಖರೀದಿಸುವ ಮನಸ್ಸನ್ನು ಮಾಡುವಿರಿ. ಆಪ್ತರು ಕೊಡಬೇಕಾದ ಹಣವನ್ನು ಕೊಡಲು ಸತಾಯಿಸಬಹುದು. ಆಸ್ತಿಯ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಬೇಕಾದೀತು. ಸರ್ಕಾರಿ ಕೆಲಸಗಳನ್ನು ಹಣದ ಮೂಲಕ ಬೇಗ ಮಾಡಿಸಿಕೊಳ್ಳುವಿರಿ. ಮಾತುಗಾರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಅವರು ಅವಕಾಶಗಳನ್ನು ಹುಡುಕುವರು. ನಿಮ್ಮವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು.

ಕುಂಭ: ಇಂದು ನೀವು ಕೆಲಸದಿಂದ ವಿಶ್ರಾಂತಿ ಪಡೆಯುವಿರಿ. ಮಕ್ಕಳು ನಿಮ್ಮ ಕೆಲಸಗಳನ್ನು ಮಾಡಿಕೊಡುವರು. ನಿಮ್ಮ ತಪ್ಪು ತಿಳಿವಳಿಕೆಯನ್ನು ನೀವು ಸರಿಮಾಡಿಕೊಳ್ಳುವಿರಿ. ನಿಮ್ಮ ವಿವಾಹವನ್ನು ಮಾಡಿಸಲು ಬಂಧುಗಳು ಮಾಡಿದ ಪ್ರಯತ್ನವು ನಿಷ್ಪ್ರಯೋಜಕವಾದೀತು. ರಾಜಕಾರಣದಲ್ಲಿ ನಿಮ್ಮ ಪ್ರಭಾವ ಕಡಿಮೆಯಾದೀತು. ನಿಮ್ಮನ್ನು ಬೆಂಬಲಿಸುವರು ಕಡಿಮೆಯಾದರು. ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಬಹುದು. ಸಂಪತ್ತಿಗಾಗಿ ದುರ್ಮಾರ್ಗವನ್ನು ಹಿಡಿಯುವ ಸಾಧ್ಯತೆ ಇದೆ. ಎಷ್ಟೋ ವಿಚಾರಗಳಿಗೆ ನೀವು ನಕಾರಾತ್ಮಕ ಪ್ರತಿಕ್ರಿಯೆ ನೀಡುವಿರಿ.

ಮೀನ: ನಿಮ್ಮ ಯೋಜನೆಗೆ ಹೊಂದಿಕೆಯಾಗುವಂತಹ ವ್ಯಕ್ತಿಗಳ ಭೇಟಿಯಾಗಲಿದೆ. ಅವರ ಜೊತೆ ಹೆಚ್ಚಿನ ಚರ್ಚೆಗಳನ್ನು ಮಾಡುವಿರಿ. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವರು. ನಿಮಗೆ ಕೊಟ್ಟ ಅಧಿಕಾರವನ್ನು ಸದುಪಯೋಗಿ ಮಾಡಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿ. ಸಿಟ್ಟುಗೊಳ್ಳದೇ ತಾಳ್ಮೆಯಿಂದ ಕಾರ್ಯವನ್ನು ಸಾಧಿಸಿ. ಅನೇಕ ದಿನಗಳಿಂದ ಮಾಡಬೇಕು ಎಂದುಕೊಂಡ ಕೆಲಸವನ್ನು ನೀವು ಆರಂಭಿಸುವಿರಿ. ದಾಂಪತ್ಯದಲ್ಲಿ ಸುಖವಾಗಿರಲು ಎಲ್ಲಿಗಾದರೂ ಹೋಗಿಬರುವುದು ಉತ್ತಮ.‌ ಹೊಸಪ್ರದೇಶದಿಂದ ನಿಮಗೆ ಉತ್ಸಾಹ ಬರಲಿದೆ.

-ಲೋಹಿತಶರ್ಮಾ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್