Daily Horoscope 29 June: ಪ್ರೀತಿಪಾತ್ರರಿಗೆ ನಿಮ್ಮ ಸುಖ, ದುಃಖ ಹಂಚಿಕೊಳ್ಳುವಿರಿ

ಇಂದಿನ (2023 ಜೂನ್​ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 29 June: ಪ್ರೀತಿಪಾತ್ರರಿಗೆ ನಿಮ್ಮ ಸುಖ, ದುಃಖ ಹಂಚಿಕೊಳ್ಳುವಿರಿ
ಪ್ರಾತಿನಿಧಿಕ ಚಿತ್ರImage Credit source: freepik
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 29, 2023 | 12:02 AM

ಶುಭೋದಯ ಗೆಳೆಯರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:13 ರಿಂದ 03:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:08 ರಿಂದ 07:45ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ ಮಧ್ಯಾಹ್ನ 10:59ರ ವರೆಗೆ.

ಮೇಷ: ಕಡಿಮೆ ಸ್ನೇಹಿತರನ್ನು ಹೊಂದಿದ್ದರೂ ಅವರನ್ನು ಬಹಳ ಚೆನ್ನಾಗಿ ಇಟ್ಟುಕೊಳ್ಳುವಿರಿ. ಅನಗತ್ಯ ಕಾರ್ಯಗಳತ್ತ ಮನಸ್ಸು ಹೋದರೂ ಮತ್ತೆ ಕಾರ್ಯದಲ್ಲಿ ಮಗ್ನರಾಗಿರಿ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ಮತ್ತೆ ನೆನಪಿಸಿ ಮುಜುಗರವನ್ನು ಉಂಟುಮಾಡುವಳು. ಕೆಲಸದ ಸ್ಥಳದಲ್ಲಿ ಕೆಲವು ಕೆಲಸಗಳನ್ನು ಹೆಚ್ಚುವರಿಯಾಗಿ ಮಾಡಬೇಕಾದೀತು. ಪ್ರಣಯದ ವಿಚಾರವನ್ನು ನೀವು ನಿರ್ಲಜ್ಜೆಯಿಂದ ಹೇಳಿಕೊಳ್ಳುವಿರಿ. ನಿರೀಕ್ಷಿಸಿದಂತೆ ಎಲ್ಲವೂ ನಡೆಯುವುದು ಕಷ್ಟವಾದೀತು. ಅಧಿಕ ನಿರೀಕ್ಷೆಯನ್ನು ಬಿಟ್ಟುಬಿಡುವುದು ಒಳ್ಳೆಯದು.

ವೃಷಭ: ನಿಮ್ಮನ್ನು ಮಾತುಗಳಿಂದ ಪೀಡಿಸಬಹುದು. ಆದರೆ ಇಂದು ಮೌನವೇ ಹೆಚ್ಚು ಪ್ರಿಯವಾದೀತು. ನಿಮ್ಮ ಎರಡು ಬಗೆಯ ಮನಃಸ್ಥಿತಿಯು ಕೆಲವರಿಗೆ ಇಷ್ಟವಾಗದೇ ಹೋದೀತು. ಕುಟುಂಬದ ಹತ್ತಿರದವರನ್ನು ಕಳೆದುಕೊಳ್ಳಬಹುದು. ಕುಟುಂಬದ ಆಪ್ತರಲ್ಲಿ ನಿಮ್ಮ ಮನಸ್ಸನ್ನು ಹಂಚಿಕೊಳ್ಳುವಿರಿ. ದಾಂಪತ್ಯದಲ್ಲಿ ಮಕ್ಕಳ ಕಾರಣದಿಂದ ಸಂತೋಷವನ್ನು ಕಾಣುವಿರಿ. ಕಾನೂನಿಗೆ ಸಂಬಂಧಿಸಿದ ವಿಚಾರಕ್ಕೆ ನಿಮಗೆ ಕೆಲವು ಸಂದೇಶಗಳನ್ನು ನಿವಾರಿಸಿಕೊಳ್ಳುವಿರಿ. ಧೈರ್ಯದಿಂದ ನೀವು ತೆಗೆದುಕೊಳ್ಳುವ ನಿರ್ಧಾರವು ಅಂತಿಮವಾಗಲಿದೆ.

ಮಿಥುನ: ಭಾವಪರಶವಾರಾಗಿ ಇಂದು ನಿಮ್ಮ ಸುಖ, ದುಃಖಗಳನ್ನು ಹೇಳಿಕೊಳ್ಳುವಿರಿ. ದಿನವನ್ನು ಉತ್ತಮವಾಗಿಸಿಕೊಳ್ಳಲು ನೀವು ಬಯಸುವಿರಿ. ಎಲ್ಲರ ಜೊತೆ ಪ್ರೀತಿಯಿಂದ ಮಾತನಾಡಲು ಇಷ್ಟಪಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡುವವರನ್ನು ಹೆಚ್ಚು ಇಷ್ಟಪಡುವಿರಿ. ಸ್ವಾರ್ಥವನ್ನು ಬಿಟ್ಟು ಕೆಲಸ ಮಾಡಿದರೆ ಹೆಚ್ಚು ಒಳ್ಳೆಯದು.‌ ಇದರಿಂದ ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಬಹುದು. ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳಲು ಮಾರ್ಗವನ್ನು ಹುಡುಕಿಕೊಳ್ಳಿ. ಮಕ್ಕಳ ಸಾಧನೆಯು ಖುಷಿ ಕೊಡುವುದು.

ಕಟಕ: ಬಹಳ ದಿನಗಳ ಅನಂತರ ನಿಮಗೆ ಒಳ್ಳೆಯ ಪ್ರೀತಿ ದೊರೆಯಲಿದೆ. ಇದು ನಿಮ್ಮ ಸಂತೋಷವನ್ನು ಹೆಚ್ಚು ಮಾಡುವುದು. ಕುಟುಂಬ ಹಲವಾರು ಕೆಲಸಗಳಿದ್ದರೂ ಅತ್ತ ಗಮನ ಹೋಗುವುದು ಕಷ್ಟವಸದೀತು. ನಕಾರಾತ್ಮಕ ಆಲೋಚನೆಗಳು ನಿಮಗೆ ಸಹಜವಾಗಿ ಇರಲಿದೆ. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಸಕಾಲವಲ್ಲ. ನಿಮಗೆ ಗೊತ್ತಿಲ್ಲದ ನಿಮ್ಮದೇ ಸಂಗತಿಗಳು ನಿಮಗೆ ಅಚ್ಚರಿಯನ್ನು ತಂದುಕೊಟ್ಟೀತು. ಅಧಿಕಾರಯುತವಾದ ಮಾತುಗಳನ್ನು ಕಡಿಮೆ‌ ಮಾಡಿ, ಸಹಜವಾಗಿ ಮಾತನಾಡಿ ಕೆಲಸವನ್ನು ಮಾಡಿಸಿಕೊಳ್ಳಿ. ಒತ್ತಡಗಳು ಎಂದಿಗಿಂತ ಕಡಿಮೆ ಇರಲಿವೆ.

ಸಿಂಹ: ವಿರೋಧಿಗಳ ನಡೆಯೇ ನೀವು ನಿಮ್ಮ ನಡೆಯನ್ನು ಬಿಡಲು ಒಪ್ಪುವುದಿಲ್ಲ. ಮನಸ್ಥಿತಿಯನ್ನು ಸಮತೋಲನವಾಗಿಡಲು ನಿಮಗೆ ಕಷ್ಟವಾದೀತು. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಕಷ್ಟವಾಗುವುದು. ಸಹೋದರಿಯ ಮಾತನಲ್ಲಿ ನಿಮಗೆ ಕುಹಕವಿರುವುದು ಗೊತ್ತಾಗಿ ಜಗಳವಾಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಇಚ್ಛಿಸುವಿರಿ. ನಿಮ್ಮ ಕೆಲಸದಲ್ಲಿ ಮತ್ತಷ್ಟು ಒತ್ತಡ ಇರಲಿದೆ. ಸಮಾಜಮುಖೀ ಕೆಲಸಗಳನ್ನು ನೀವು ನಿಲ್ಲಿಸುವಿರಿ. ನೀವು ಕಳೆದ ದಿನಗಳನ್ನು ಅವಲೋಕನ‌ ಮಾಡಿ ಸಂತಸಗೊಳ್ಳುವಿರಿ.

ಕನ್ಯಾ: ನೀವು ದುಃಖದ ಅನಂತರ ಸುಖವಿದೆ ಎಂಬ ಕಾರಣಕ್ಕೆ ಎಲ್ಲ ನೋವನ್ನೂ ಸಹಿಸಿಕೊಳ್ಳುವಿರಿ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆಯಬೇಕಾದೀತು. ಸಂಸಾರದಲ್ಲಿ ಸಾರವಿಲ್ಲ ಎನ್ನಿಸಬಹುದು. ಭೂಮಿಯ ವ್ಯವಹಾರವು ಅಲ್ಪ‌ಮಟ್ಟಿಗೆ ಲಾಭ ಮಾಡುವುದು. ಕಾನೂನಿನ ಮಾರ್ಗದಲ್ಲಿ ನಿಮ್ಮ ಎಲ್ಲ‌ ಕೆಲಸಗಳೂ ಇರಲಿ. ಎಷ್ಟು ಹೇಳಿದರೂ ಅರ್ಥವಾಗದ ವಿಷಯವು ಒಂದು‌ ಘಟನೆಯ ಮೂಲಕ ಅರ್ಥವಾದೀತು. ಹೊಸ ವಸ್ತುವನ್ನು ಖರೀದಿಸುವ ಉತ್ಸಾಹವು ನಿಮ್ಮಲ್ಲಿ ಇರಲಿದೆ.

ತುಲಾ: ಸಿಗದೇ ಇರುವುದರ ಬಗ್ಗೆ ನಿಮಗೆ ಮೋಹ‌ ಬೇಡ. ಇನ್ನೂ ಉತ್ತಮವಾದುದು ಸಿಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳಿ.‌ ಮನಸ್ಸು ಶಾಂತವಾಗುವುದು. ಕೋಪವನ್ನು ಕಡಿಮೆ‌ ಮಾಡಿಕೊಂಡರೂ ಇನ್ನಷ್ಟು ತಾಳ್ಮೆ ಅವಶ್ಯಕ. ನಿಮ್ಮ‌ಮನಸ್ಸಿಗೆ ಬಾರದೇ ನೀವು ಏನನ್ನೂ ಕೊಡಲು ಹೋಗಬೇಡಿ. ಇಂದು ಕೊಡುವ ಅಶ್ರದ್ಧೆಯ ದಾನವೂ ನಿಷ್ಪ್ರಯೋಜನವಾಗುವುದು. ಕೆಲಸದ ಸ್ಥಳದಲ್ಲಿ ಸ್ತ್ರೀಯ ಕಾರಣದಿಂದ‌ ಮನಸ್ಸು ಚಂಚಲವಾಗಿ ಕಾರ್ಯವು ವಿಳಂಬವಾಗಬಹುದು. ನಿಮ್ಮ‌‌ ಸೌಂದರ್ಯಕ್ಕೆ ಕೆಲವರು ಆಕರ್ಷಿತರಾಗುವರು. ದಿನವನ್ನು ಬೇರೆ ರೀತಿಯಲ್ಲಿ ಕಳೆಯಲು ಬಯಸುವಿರಿ.

ವೃಶ್ಚಿಕ: ನಿಮಗೆ ಕೇಳಿದ ಬಂದು ಮಾತುಗಳು ಅಪಮಾನಕರವಾಗಿದ್ದು ಏನನ್ನಾದರೂ ಮಾಡಬೇಕು ಎಂಬ ಹಂಬಲ‌ವು ಅತಿಯಾಗುವುದು. ಮನೆಯಿಂದ‌ ಹೊರಗೆ ಅನಿವಾರ್ಯವಾಗಿ ಇರಬೇಕಾದೀತು. ನೀವು ನಿರೀಕ್ಷಿಸಿದ ಉದ್ಯೋಗವು ಸಿಗದೇ ಬೇಸರವಾಗಬಹುದು. ಮಕ್ಕಳ ವಿಚಾರದಿಂದ‌ ನಿಮಗೆ ದೂರುಗಳು ಬರಬಹುದು. ನಿಮ್ಮ ಉದ್ಯೋಗದ ನಿಮಗೆ ಅಸಮಾಧಾನ ಇರಲಿದೆ. ಎಲ್ಲರ ಜೊತೆ ಬೆರೆಯಲು ಇಚ್ಛಿಸಿದರೂ ನಿಮ್ಮನ್ನು ಯಾರೂ ಸೇರಿಸಿಕೊಳ್ಳರು. ನಿಮ್ಮ‌ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಕೆಲವರಿಗೆ ಕಷ್ಟವಾದೀತು. ಅತಿಯಾದ ನಂಬಿಕೆಯಿದ ನಿಮ್ಮ ಇಂದಿನ‌ ಕೆಲಸವು ಬೇರೆ ರೂಪ ಪಡೆದುಕೊಳ್ಳುವುದು.

ಧನಸ್ಸು: ಮನಸ್ಸಿಗೆ ಬಂದಂತೆ ಮಾತಮಾಡದೇ ಅರ್ಥವತ್ತಾದ ಮಾತುಗಳನ್ನು ಅಡುವುದು ಒಳ್ಳೆಯದು. ಕಛೇರಿಯಲ್ಲಿ ನಿಮ್ಮ ಮಾತುಗಳಿಗೆ ಅನಾದರವು ಸಿಗಲಿದೆ. ನಿಮಗೆ ಸರಿಯಾದ ಮಾರ್ಗದರ್ಶನ ಕೊರತೆಯಿಂದ ದಾರಿ ತಪ್ಪುವಿರಿ. ವ್ಯಾಪರವು ನಿಮಗೆ ಕೈ ಹಿಡಿಯದಂತೆ ತೋರುವುದು. ತಂತ್ರಜ್ಞರಾಗಿದ್ದರೆ ನಿಮಗೆ ಉದ್ಯೋಗವನ್ನು ಬಹಳ ಜಾಗರೂಕತೆಯಿಂದ ಮಾಡಬೇಕಾದೀತು. ದುಃಖದ ವಿಷಯವನ್ನು ನೀವು ಧೈರ್ಯವಾಗಿ ಕೇಳುವಿರಿ. ನಿಮ್ಮ ಕನಸನ್ನು ನೀವು ಯಾರಿಗೂ ಸದ್ಯ ಹೇಳುವುದು ಬೇಡ. ನಿಮಗೆ ಇಷ್ಟವಲ್ಲದ ವಿಷಯವನ್ನು ಒತ್ತಾಯಿಸಿದರೂ‌ ಮಾಡಲು ಹೋಗುವುದಿಲ್ಲ.

ಮಕರ: ಇಂದು ಸರಿ‌ ಮಾಡಲು ಸಾಧ್ಯವಾಗದಷ್ಟು ನಿಮ್ಮ‌ ಮನಸ್ಸು ಕೆಡಲಿದೆ. ಲೆಕ್ಕಾಚಾರದ ವಿಷಯದಲ್ಲಿ ನೀವು ಹಿಂದುಳಿದಿರುವುದು ಎಲ್ಲರಿಗೂ ಗೊತ್ತಾಗುವುದು. ಕುಟುಂಬದ ಭಿನ್ನಾಭಿಪ್ರಾಯವನ್ನು ನೀವೇ ಪರಿಹರಿಸಿಕೊಳ್ಳಿ. ನಿಮ್ಮ ಮೇಲಿನ ಗೌರವ ಹಾಗು ಪ್ರೀತಿಯು ಇತರರಿಗೆ ಹೆಚ್ಚಾಗಬಹುದು. ಪ್ರಯಾಣದಲ್ಲಿ ಸುಖವಿರಲಿದೆ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪಗಳು ಬಂದರೂ ಅಲ್ಲಿಯೇ ಶಾಂತವಾಗುವುದು. ಧಾರ್ಮಿಕ ಆಸಕ್ತಿಯು ಇಂದು ಕಡಿಮೆ ಇರಲಿದೆ. ವಿದ್ಯಾರ್ಥಿಗಳು ಗೊಂದಲವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುವಿರಿ. ಇಂದಿನ ಕೆಲಸವನ್ನು ಮುಗಿಸುವಾಗ ಸಂತೃಪ್ತಿ ಇರಲಿದೆ.

ಕುಂಭ: ನಿಮ್ಮ ಮಾತಿನಿಂದ ಇನ್ನೊಬ್ಬರಿಗೆ ಬೇಸರಗವಾಗಲಿದ್ದು ಗೊತ್ತಾದ ಕೂಡಲೆ ಅದನ್ನು ನಿಲ್ಲಿಸಿ. ನಿಯಮ ಉಲ್ಲಂಘನೆ‌ ಮಾಡಿ ದಂಡ ತುಂಬುವಿರಿ. ಉದ್ಯೋಗದಿಂದ‌‌ ಕೆಲವರನ್ನು ಕೈ ಬಿಡುವಿರಿ. ನಿಮಗೆ ಸಿಗುವ ಅವಕಾಶಗಳು ಬೇರೆಯವರ ಪಾಲಾಗಬಹುದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಮನೆಯವರ ಮಾತು ಉತ್ಸಾಹ ಭಂಗವನ್ನು ಮಾಡುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸಹಾಯವನ್ನು ನೀವು ಕೇಳುವಿರಿ. ನೀರಿನಿಂದ‌ ಆದಷ್ಟು ದೂರವಿರಿ. ಒಬ್ಬೊಂಟಿಯಾಗಿರುವುದು ನಿಮಗೆ ಕಷ್ಟವಾದೀತು. ಆರೋಗ್ಯವನ್ನು ನೀವು ನಿರ್ಲಕ್ಷಿಸುವಿರಿ. ಸಾಮನ್ಯ ವಿಷಯವೂ ನಿಮಗೆ ದೊಡ್ಡಾದಾಗಿ ಕಾಣುವುದು.

ಮೀನ: ನಿರುದ್ಯೋಗವು ನಿಮ್ಮ ಮನಸ್ಸಿಗೆ ಬಹಳ‌ ಕಿರಿಕಿರಿಯಾಗಲಿದೆ. ಆಸಕ್ತಿಕರ ವಿಚಾರವನ್ನು ನೀವು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ನಿಮ್ಮ ಮೇಲೆ‌ ಕೆಲವು ಆಕ್ಷೇಪಗಳು ಬರಬಹುದು. ಕಾರ್ಯದಲ್ಲಿ ಶ್ರದ್ಧೆಯು ಕಾರಣಾಂತರಗಳಿಂದ ಕಡಿಮೆ ಆಗಬಹುದು. ತಿಳಿವಳಿಕೆಯ ಕೊರತೆಯಿಂದ ನೀವು ಕಷ್ಟಪಡಬೇಕಾದೀತು. ಹಿತಶತ್ರುಗಳಿಂದ ಕೆಲವು ವಿಚಾರಕ್ಕೆ ತೊಂದರೆಯಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಅನಂತರ ಆಲಸ್ಯದಿಂದ ನೀವು ಸೋಲುವಿರಿ. ಆರ್ಥಿಕವಾಗಿ ನಿಮ್ಮ ಅಲ್ಪ ವೃದ್ಧಿಯು ಸಂತಸವನ್ನು ಕೊಡಲಿದೆ.

ಲೋಹಿತಶರ್ಮಾ-8762924271 (what’s app only)

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ