Daily Horoscope: ಈ ರಾಶಿಯವರು ಕುಟುಂಬಕ್ಕೆ ಹತ್ತಿರ ಆದವರನ್ನು ಕಳೆದುಕೊಳ್ಳಬಹುದು
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 29) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 29 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:13 ರಿಂದ 03:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:08 ರಿಂದ 07:45ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ ಮಧ್ಯಾಹ್ನ 10:59ರ ವರೆಗೆ.
ಮೇಷ: ಕಡಿಮೆ ಸ್ನೇಹಿತರನ್ನು ಹೊಂದಿದ್ದರೂ ಅವರನ್ನು ಬಹಳ ಚೆನ್ನಾಗಿ ಇಟ್ಟುಕೊಳ್ಳುವಿರಿ. ಅನಗತ್ಯ ಕಾರ್ಯಗಳತ್ತ ಮನಸ್ಸು ಹೋದರೂ ಮತ್ತೆ ಕಾರ್ಯದಲ್ಲಿ ಮಗ್ನರಾಗಿರಿ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ಮತ್ತೆ ನೆನಪಿಸಿ ಮುಜುಗರವನ್ನು ಉಂಟುಮಾಡುವಳು. ಕೆಲಸದ ಸ್ಥಳದಲ್ಲಿ ಕೆಲವು ಕೆಲಸಗಳನ್ನು ಹೆಚ್ಚುವರಿಯಾಗಿ ಮಾಡಬೇಕಾದೀತು. ಪ್ರಣಯದ ವಿಚಾರವನ್ನು ನೀವು ನಿರ್ಲಜ್ಜೆಯಿಂದ ಹೇಳಿಕೊಳ್ಳುವಿರಿ. ನಿರೀಕ್ಷಿಸಿದಂತೆ ಎಲ್ಲವೂ ನಡೆಯುವುದು ಕಷ್ಟವಾದೀತು. ಅಧಿಕ ನಿರೀಕ್ಷೆಯನ್ನು ಬಿಟ್ಟುಬಿಡುವುದು ಒಳ್ಳೆಯದು.
ವೃಷಭ: ನಿಮ್ಮನ್ನು ಮಾತುಗಳಿಂದ ಪೀಡಿಸಬಹುದು. ಆದರೆ ಇಂದು ಮೌನವೇ ಹೆಚ್ಚು ಪ್ರಿಯವಾದೀತು. ನಿಮ್ಮ ಎರಡು ಬಗೆಯ ಮನಃಸ್ಥಿತಿಯು ಕೆಲವರಿಗೆ ಇಷ್ಟವಾಗದೇ ಹೋದೀತು. ಕುಟುಂಬದ ಹತ್ತಿರದವರನ್ನು ಕಳೆದುಕೊಳ್ಳಬಹುದು. ಕುಟುಂಬದ ಆಪ್ತರಲ್ಲಿ ನಿಮ್ಮ ಮನಸ್ಸನ್ನು ಹಂಚಿಕೊಳ್ಳುವಿರಿ. ದಾಂಪತ್ಯದಲ್ಲಿ ಮಕ್ಕಳ ಕಾರಣದಿಂದ ಸಂತೋಷವನ್ನು ಕಾಣುವಿರಿ. ಕಾನೂನಿಗೆ ಸಂಬಂಧಿಸಿದ ವಿಚಾರಕ್ಕೆ ನಿಮಗೆ ಕೆಲವು ಸಂದೇಶಗಳನ್ನು ನಿವಾರಿಸಿಕೊಳ್ಳುವಿರಿ. ಧೈರ್ಯದಿಂದ ನೀವು ತೆಗೆದುಕೊಳ್ಳುವ ನಿರ್ಧಾರವು ಅಂತಿಮವಾಗಲಿದೆ.
ಮಿಥುನ: ಭಾವಪರಶವಾರಾಗಿ ಇಂದು ನಿಮ್ಮ ಸುಖ, ದುಃಖಗಳನ್ನು ಹೇಳಿಕೊಳ್ಳುವಿರಿ. ದಿನವನ್ನು ಉತ್ತಮವಾಗಿಸಿಕೊಳ್ಳಲು ನೀವು ಬಯಸುವಿರಿ. ಎಲ್ಲರ ಜೊತೆ ಪ್ರೀತಿಯಿಂದ ಮಾತನಾಡಲು ಇಷ್ಟಪಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡುವವರನ್ನು ಹೆಚ್ಚು ಇಷ್ಟಪಡುವಿರಿ. ಸ್ವಾರ್ಥವನ್ನು ಬಿಟ್ಟು ಕೆಲಸ ಮಾಡಿದರೆ ಹೆಚ್ಚು ಒಳ್ಳೆಯದು. ಇದರಿಂದ ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಬಹುದು. ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳಲು ಮಾರ್ಗವನ್ನು ಹುಡುಕಿಕೊಳ್ಳಿ. ಮಕ್ಕಳ ಸಾಧನೆಯು ಖುಷಿ ಕೊಡುವುದು.
ಕಟಕ: ಬಹಳ ದಿನಗಳ ಅನಂತರ ನಿಮಗೆ ಒಳ್ಳೆಯ ಪ್ರೀತಿ ದೊರೆಯಲಿದೆ. ಇದು ನಿಮ್ಮ ಸಂತೋಷವನ್ನು ಹೆಚ್ಚು ಮಾಡುವುದು. ಕುಟುಂಬ ಹಲವಾರು ಕೆಲಸಗಳಿದ್ದರೂ ಅತ್ತ ಗಮನ ಹೋಗುವುದು ಕಷ್ಟವಸದೀತು. ನಕಾರಾತ್ಮಕ ಆಲೋಚನೆಗಳು ನಿಮಗೆ ಸಹಜವಾಗಿ ಇರಲಿದೆ. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಸಕಾಲವಲ್ಲ. ನಿಮಗೆ ಗೊತ್ತಿಲ್ಲದ ನಿಮ್ಮದೇ ಸಂಗತಿಗಳು ನಿಮಗೆ ಅಚ್ಚರಿಯನ್ನು ತಂದುಕೊಟ್ಟೀತು. ಅಧಿಕಾರಯುತವಾದ ಮಾತುಗಳನ್ನು ಕಡಿಮೆ ಮಾಡಿ, ಸಹಜವಾಗಿ ಮಾತನಾಡಿ ಕೆಲಸವನ್ನು ಮಾಡಿಸಿಕೊಳ್ಳಿ. ಒತ್ತಡಗಳು ಎಂದಿಗಿಂತ ಕಡಿಮೆ ಇರಲಿವೆ.