AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಎಲ್ಲರ ಜೊತೆ ಬೆರೆಯಲು ಇಚ್ಛಿಸಿದರೂ ನಿಮ್ಮನ್ನು ಯಾರೂ ಸೇರಿಸಿಕೊಳ್ಳರು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 29) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಎಲ್ಲರ ಜೊತೆ ಬೆರೆಯಲು ಇಚ್ಛಿಸಿದರೂ ನಿಮ್ಮನ್ನು ಯಾರೂ ಸೇರಿಸಿಕೊಳ್ಳರು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 29, 2023 | 12:20 AM

Share

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:13 ರಿಂದ 03:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:08 ರಿಂದ 07:45ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ ಮಧ್ಯಾಹ್ನ 10:59ರ ವರೆಗೆ.

ಸಿಂಹ: ವಿರೋಧಿಗಳ ನಡೆಯೇ ನೀವು ನಿಮ್ಮ ನಡೆಯನ್ನು ಬಿಡಲು ಒಪ್ಪುವುದಿಲ್ಲ. ಮನಸ್ಥಿತಿಯನ್ನು ಸಮತೋಲನವಾಗಿಡಲು ನಿಮಗೆ ಕಷ್ಟವಾದೀತು. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಕಷ್ಟವಾಗುವುದು. ಸಹೋದರಿಯ ಮಾತನಲ್ಲಿ ನಿಮಗೆ ಕುಹಕವಿರುವುದು ಗೊತ್ತಾಗಿ ಜಗಳವಾಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಇಚ್ಛಿಸುವಿರಿ. ನಿಮ್ಮ ಕೆಲಸದಲ್ಲಿ ಮತ್ತಷ್ಟು ಒತ್ತಡ ಇರಲಿದೆ. ಸಮಾಜಮುಖೀ ಕೆಲಸಗಳನ್ನು ನೀವು ನಿಲ್ಲಿಸುವಿರಿ. ನೀವು ಕಳೆದ ದಿನಗಳನ್ನು ಅವಲೋಕನ‌ ಮಾಡಿ ಸಂತಸಗೊಳ್ಳುವಿರಿ.

ಕನ್ಯಾ: ನೀವು ದುಃಖದ ಅನಂತರ ಸುಖವಿದೆ ಎಂಬ ಕಾರಣಕ್ಕೆ ಎಲ್ಲ ನೋವನ್ನೂ ಸಹಿಸಿಕೊಳ್ಳುವಿರಿ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆಯಬೇಕಾದೀತು. ಸಂಸಾರದಲ್ಲಿ ಸಾರವಿಲ್ಲ ಎನ್ನಿಸಬಹುದು. ಭೂಮಿಯ ವ್ಯವಹಾರವು ಅಲ್ಪ‌ಮಟ್ಟಿಗೆ ಲಾಭ ಮಾಡುವುದು. ಕಾನೂನಿನ ಮಾರ್ಗದಲ್ಲಿ ನಿಮ್ಮ ಎಲ್ಲ‌ ಕೆಲಸಗಳೂ ಇರಲಿ. ಎಷ್ಟು ಹೇಳಿದರೂ ಅರ್ಥವಾಗದ ವಿಷಯವು ಒಂದು‌ ಘಟನೆಯ ಮೂಲಕ ಅರ್ಥವಾದೀತು. ಹೊಸ ವಸ್ತುವನ್ನು ಖರೀದಿಸುವ ಉತ್ಸಾಹವು ನಿಮ್ಮಲ್ಲಿ ಇರಲಿದೆ.

ತುಲಾ: ಸಿಗದೇ ಇರುವುದರ ಬಗ್ಗೆ ನಿಮಗೆ ಮೋಹ‌ ಬೇಡ. ಇನ್ನೂ ಉತ್ತಮವಾದುದು ಸಿಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳಿ.‌ ಮನಸ್ಸು ಶಾಂತವಾಗುವುದು. ಕೋಪವನ್ನು ಕಡಿಮೆ‌ ಮಾಡಿಕೊಂಡರೂ ಇನ್ನಷ್ಟು ತಾಳ್ಮೆ ಅವಶ್ಯಕ. ನಿಮ್ಮ‌ಮನಸ್ಸಿಗೆ ಬಾರದೇ ನೀವು ಏನನ್ನೂ ಕೊಡಲು ಹೋಗಬೇಡಿ. ಇಂದು ಕೊಡುವ ಅಶ್ರದ್ಧೆಯ ದಾನವೂ ನಿಷ್ಪ್ರಯೋಜನವಾಗುವುದು. ಕೆಲಸದ ಸ್ಥಳದಲ್ಲಿ ಸ್ತ್ರೀಯ ಕಾರಣದಿಂದ‌ ಮನಸ್ಸು ಚಂಚಲವಾಗಿ ಕಾರ್ಯವು ವಿಳಂಬವಾಗಬಹುದು. ನಿಮ್ಮ‌‌ ಸೌಂದರ್ಯಕ್ಕೆ ಕೆಲವರು ಆಕರ್ಷಿತರಾಗುವರು. ದಿನವನ್ನು ಬೇರೆ ರೀತಿಯಲ್ಲಿ ಕಳೆಯಲು ಬಯಸುವಿರಿ.

ವೃಶ್ಚಿಕ: ನಿಮಗೆ ಕೇಳಿದ ಬಂದು ಮಾತುಗಳು ಅಪಮಾನಕರವಾಗಿದ್ದು ಏನನ್ನಾದರೂ ಮಾಡಬೇಕು ಎಂಬ ಹಂಬಲ‌ವು ಅತಿಯಾಗುವುದು. ಮನೆಯಿಂದ‌ ಹೊರಗೆ ಅನಿವಾರ್ಯವಾಗಿ ಇರಬೇಕಾದೀತು. ನೀವು ನಿರೀಕ್ಷಿಸಿದ ಉದ್ಯೋಗವು ಸಿಗದೇ ಬೇಸರವಾಗಬಹುದು. ಮಕ್ಕಳ ವಿಚಾರದಿಂದ‌ ನಿಮಗೆ ದೂರುಗಳು ಬರಬಹುದು. ನಿಮ್ಮ ಉದ್ಯೋಗದ ನಿಮಗೆ ಅಸಮಾಧಾನ ಇರಲಿದೆ. ಎಲ್ಲರ ಜೊತೆ ಬೆರೆಯಲು ಇಚ್ಛಿಸಿದರೂ ನಿಮ್ಮನ್ನು ಯಾರೂ ಸೇರಿಸಿಕೊಳ್ಳರು. ನಿಮ್ಮ‌ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಕೆಲವರಿಗೆ ಕಷ್ಟವಾದೀತು. ಅತಿಯಾದ ನಂಬಿಕೆಯಿದ ನಿಮ್ಮ ಇಂದಿನ‌ ಕೆಲಸವು ಬೇರೆ ರೂಪ ಪಡೆದುಕೊಳ್ಳುವುದು.