AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಈ ರಾಶಿಯವರು ಚಿತ್ತವನ್ನು ಸಮಾಧನಾದಲ್ಲಿ ಇಟ್ಟುಕೊಳ್ಳುವುದು ಉತ್ತಮ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಈ ರಾಶಿಯವರು ಚಿತ್ತವನ್ನು ಸಮಾಧನಾದಲ್ಲಿ ಇಟ್ಟುಕೊಳ್ಳುವುದು ಉತ್ತಮ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 30, 2023 | 12:05 AM

Share

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 10:59 ರಿಂದ 12:36ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 03:50 ರಿಂದ 05:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:45 ರಿಂದ ಮಧ್ಯಾಹ್ನ 09:22ರ ವರೆಗೆ.]

ಸಿಂಹ: ಎಲ್ಲ ವಿಚಾರವನ್ನೂ ಆಮೂಲಾಗ್ರವಾಗಿ ತಿಳಿಯಬೇಕು ಎಂಬ ಹಂಬಲವಿರುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಗಿಸಿ ಕಾರ್ಯದಲ್ಲಿ ತೊಡಗುವರು. ಹಿರಿಯರ ಆಚರಣೆಗಳನ್ನು ಅಲ್ಲಗಳೆಯುತ್ತ ಆಚರಿಸುವಿರಿ. ಎಲ್ಲ ವಿಚಾರಗಳನ್ನು ಹಠದಿಂದ ಸಾಧಿಸುತ್ತೇನೆ ಎಂಬ ಆಲೋಚನೆಯು ಒಳ್ಳೆಯದಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಇಂದು ನಿಮ್ಮ‌ ಕನಸು ನನಸಾಗಿಲ್ಲ ಎಂಬ ದುಃಖವು ಇರಲಿದೆ. ವಿಜ್ಞಾನ ಕ್ಷೇತ್ರದಲ್ಲಿ ಶೋಧಿಸುವವರಿಗೆ ಹೆಚ್ಚಿನ‌ ಅನುಕೂಲತೆಗಳು ಇರಲಿವೆ. ಯಾರ ಮಾತನ್ನೂ ಕೇಳದೇ ಸ್ವೇಚ್ಛೆಯಾಗಿ ಇರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಚಿತ್ತವನ್ನು ಸಮಾಧನಾದಲ್ಲಿ ಇಟ್ಟುಕೊಳ್ಳುವುದು ಉತ್ತಮ.

ಕನ್ಯಾ: ಬೇಗ ಮುಗಿಸಬೇಕು ಎನ್ನುವ ಆತುರದಲ್ಲಿ ಕೆಲಸವನ್ನು ಹಾಳುಮಾಡಿಕೊಳ್ಳುವಿರಿ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕುಗ್ಗಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ. ಮನಸ್ಸನ್ನು ಖಾಲಿ ಇಡದೇ ಸದ್ವಿಚಾರಗಳಲ್ಲಿ ತೊಡಗಿಸಿ. ಕೂಡಿಟ್ಟ ಸ್ವಲ್ಪ‌ ಹಣವು ನಿಮಗೆ ಸಿಗಬಹುದು. ಸಣ್ಣ ಆರೋಗ್ಯವನ್ನೂ ನೀವು ದೊಡ್ಡದಾಗಿ ಮಾಡಿಕೊಳ್ಳುವಿರಿ. ಕಾರ್ಯದ ಒತ್ತಡವನ್ನು ಕಂಡು ನಿಮ್ಮ ಸಹಾಯಕ್ಕೆ ಯಾರಾದರೂ ಬರುವರು. ಸಿದ್ಧ ಉಡುಪುಗಳ ಮಾರಾಟದಿಂದ ಲಾಭವಾಗಲಿದೆ. ಅನ್ಯೋನ್ಯತೆ ಭಂಗವಾಗಬಹುದು. ಸಮಾಜದ‌ ಕೆಲಸಗಳನ್ನು ಸಣ್ಣ ಪ್ರಮಾಣದಲ್ಲಿ ಮಾಡುವಿರಿ.

ತುಲಾ: ಏನೇ ಮಾಡಿದರೂ ಪ್ರಶಂಸಿಸಬೇಕು ಎಂಬ ಕಲ್ಪನೆಯನ್ನು ಬದಲಿಸಿಕೊಳ್ಳಿ. ನಿಮ್ಮ ಶುದ್ಧ ನಡತೆಯು ಎಲ್ಲವನ್ನೂ ಮಾಡಿಸೀತು. ಗೊಂದಲವನ್ನು ಪರಿಹರಿಸಿಕೊಳ್ಳಲು ಹೋಗಿ ಗೌಪ್ಯತೆಯನ್ನು ಬಿಚ್ಚಿಡುವಿರಿ. ಸ್ವಲ್ಪ ಆದಾಯವೂ ನಿಮಗೆ ಸುಖವನ್ನು ಕೊಡುವುದು. ವಿವಾಹದ ವಿಚಾರವನ್ನು ತಂದೆಯೇ ನಿಮ್ಮ ಬಳಿ‌ಮಾತನಾಡಬಹುದು. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತಯಾರಿಸಿಕೊಳ್ಳ ಕಷ್ಟವಾದೀತು. ಅಧಿಕಾರಿಗಳ ಜೊತೆ ನಿಮ್ಮ ವರ್ತನೆಯ ನಿಮ್ಮ ಬೆಳವಣಿಗೆಗೆ ಪೂರಕವಾಗಿರಲಿದೆ. ಇತರರ ಕಾರ್ಯಗಳನ್ನು ಪ್ರೀತಿಯಿಂದ ಇಂದು ಮಾಡಿಕೊಡುವಿರಿ. ಬದಲಾದ ವಾತಾವರಣದಿಂದ ದೇಹಕ್ಕೆ ತೊಂದರೆಯಾಗಬಹುದು.

ವೃಶ್ಚಿಕ: ಆಲಸ್ಯದಿಂದ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಇದು ವೃತ್ತಿಜೀವನ ಮೊದಲ ಕಪ್ಪುಚುಕ್ಕೆಯಾಗಲಿದೆ. ಒತ್ತಾಯ ಪೂರ್ವಕವಾಗಿ ಯಾರನ್ನೂ ಇಟ್ಟಕೊಳ್ಳುವ ಕೆಲಸಕ್ಕೆ ಹೋಗಬೇಡಿ. ನಿಮ್ಮವರ ವರ್ತನೆಯಿಂದ ಅವರ ಮೇಲೆ‌ ನಿಮಗೆ ಬೇಸರ ಉಂಟಾಗಬಹುದು. ವಿವಾಹವಾಗಬೇಕೆಂಬ ಆತುರ ಬೇಡ. ಉತ್ತಮ ಕುಲದವರು ಬಾಳಸಂಗಾತಿಯು ಆಗಬಹದು. ತಾಳ್ಮೆಯಿಂದ ಕಾಯುವುದು ಅವಶ್ಯಕ. ಆತುರದ ಕೈಗೆ ಬುದ್ಧಿಯನ್ನು ಕೊಡುವುದು ಬೇಡ. ಪರಪುರುಷರ ಜೊತೆ ಮಾತನಾಡುವುದನ್ನು ಸ್ವಲ್ಪ ಕಡಿಮೆ‌ ಮಾಡಿ. ಅವಶ್ಯಕತೆಗೆ ಮಾತ್ರ ಮಾತುಕತೆಗಳು ಇರಲಿ. ಇನ್ನೊಬ್ಬರ ವಿಚಾರದಲ್ಲಿ ಆಸಕ್ತಿಯು ಹೆಚ್ಚಿರುವುದು.

-ಲೋಹಿತಶರ್ಮಾ 8762924271