Daily Horoscope: ಮಾಡಲು ಹೊರಟ ಕೆಲಸವು ಅರ್ಧಕ್ಕೆ ನಿಲ್ಲಬಹುದು ಎಚ್ಚರ!

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಮಾಡಲು ಹೊರಟ ಕೆಲಸವು ಅರ್ಧಕ್ಕೆ ನಿಲ್ಲಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 30, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 30 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:59 ರಿಂದ 12:36ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:50 ರಿಂದ 05:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:42 ರಿಂದ 09:22ರ ವರೆಗೆ.

ಮೇಷ: ಸಮಯಕ್ಕೆ ಸಿಕ್ಕ ಸ್ಫೂರ್ತಿಯು ನಿಮ್ಮ‌ ಇಂದಿನ ಕೆಲಸವನ್ನು ಚೆನ್ನಾಗಿಸುವುದು. ಯಾರದೋ ಮಾತಿನ ಆಧಾರದ ಮೇಲೆ ನಿಮಗೆ ನಂಬಿಕೆ ಬಾರದು. ಮಾಡಲು ಹೊರಟ ಕೆಲಸವು ಅರ್ಧಕ್ಕೆ ನಿಲ್ಲಬಹುದು. ನೀವು ಇಂದು ನಿಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳಲು ಬಯಸುವಿರಿ. ಮುಖ್ಯವಾದ ಕೆಲಸದ ನಡುವೆ ನಿಮ್ಮ ವೈಯಕ್ತಿಕ ಕೆಲಸವು ಮರೆಯಾಗಬಹುದು. ಮಾತನ್ನು ಹದವರಿತು ಮಾತನಾಡಿ. ಹೆಚ್ಚು ಮಾತನಾಡಿ ಇನ್ನೊಬ್ಬರಿಗೆ ನೋವನ್ನು ಕೊಡುವುದು ಬೇಡ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಬಯಸುವಿರಿ. ಮನೋಗತವನ್ನು ಹೇಳಿಕೊಳ್ಳಿ.

ವೃಷಭ: ಕಾರಣಾಂತರಗಳಿಂದ ನಿಮ್ಮ ಉದ್ಯೋಗದಲ್ಲಿ ತೊಂದರೆಯಾಗಲಿದೆ. ನಿಮ್ಮ ಮೇಲೆ‌ ಕೆಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ಮನೆಯ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ನಿಮ್ಮ ಮಾತನ್ನು ಕೇಳದೇ ಇರುವುದು ನಿಮಗೆ ಬೇಸರವಾಗುವುದು. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು. ಆಲಸ್ಯದಿಂದ ಚಟುವಟಿಕೆಯತ್ತ ಮುಖ ಮಾಡುವಿರಿ. ಆಹಾರದ ಅಭಾವವು ನಿಮಗೆ ಆಗಲಿದೆ. ಮನಸ್ಸಿನ‌ ಏಕಾಗ್ರತೆ ಕೆಡಬಹುದು. ಸರಳವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ.

ಮಿಥುನ: ಒತ್ತಡವನ್ನು ಪರಿಹರಿಸಿಕೊಳ್ಳಲು ದೂರದ ಊರಿಗೆ ಹೋಗುವಿರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಸಂಗಾತಿಯ‌ ಜೊತೆ ಪ್ರಯಾಣವನ್ನು ಇಚ್ಛಿಸುವಿರಿ. ಸರ್ಕಾರಿ ಕೆಲಸಕ್ಕಾಗಿ ನೀವು ಅರ್ಜಿಯನ್ನು ಸಲ್ಲಿಸುವಿರಿ. ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ಕೆಲಸವು ಸಿಗಬಹುದು. ಭೂಮಿಯ ವ್ಯವಹಾರದಿಂದ ಸ್ವಲ್ಪ ಲಾಭವನ್ನು ಗಳಿಸುವಿರಿ. ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುವ ಸಾಧ್ಯತೆ ಇದೆ. ಹಳೆಯ ದ್ವೇಷವನ್ನು ಮುಂದುವರಿಸುವುದು ಬೇಡ. ಸಾಮರಸ್ಯದಿಂದ ಬದುಕುವುದನ್ನು ಇಷ್ಟಪರುವಿರಿ. ತಂದೆಯ ಪ್ರೀತಿ ಸಿಗಲಿದೆ.

ಕಟಕ: ಇಂದು ನಿಮಗೆ ಶ್ರೇಷ್ಠವ್ಯಕ್ತಿಗಳ ಸಹವಾಸ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಇಂದು ಬಂಧುಗಳು ನಿಮ್ಮ ಮನೆಯಲ್ಲಿ‌ ಇರುವರು. ದುರಭ್ಯಾಸದಿಂದ ದೂರವಿರುವುದು ಉತ್ತಮ. ನಿಮ್ಮ ಚಟುವಟಿಕೆಗಳನ್ನು ಬೇರೆಯವರು ಗಮನಿಸುವರು. ಉದ್ಯೋಗವನ್ನು ಬದಲಾಯಿಸಲು ಆಲೋಚಿಸುವಿರಿ. ಬಿಡುವಿನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ಚಂಚಲವಾದ ಮನಸ್ಸನ್ನು ಹಂತಹಂತವಾಗಿ ಪಳಗಿಸಿ. ನಿಮ್ಮ ವಿದ್ಯೆಯನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ಬಂಧುಗಳಿಂದ ಯಥೋಚಿತ ಸತ್ಕಾರವು ದೊರೆಯುವುದು. ಕುಲದೇವತಾರಾಧನಯಿಂದ ಅನುಕೂಲವು ಆಗಬಹುದು.

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ