ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 11ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಮನೆ, ಫ್ಲ್ಯಾಟ್ ಖರೀದಿಗಾಗಿ ಪ್ರಯತ್ನ ಮಾಡುತ್ತಿರುವವರು ತಮ್ಮ ನಿರ್ಧಾರದಲ್ಲಿ ಮುಖ್ಯವಾದ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಆಪ್ತರೊಬ್ಬರು ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ಬರಲಿದ್ದಾರೆ. ನಿಮ್ಮಲ್ಲಿ ಕೆಲವರಿಗೆ ವಿದೇಶದಲ್ಲಿ ವ್ಯಾಸಂಗಕ್ಕೆ ಅವಕಾಶ ದೊರೆಯಬಹುದು ಅಥವಾ ಉದ್ಯೋಗಕ್ಕಾಗಿಯಾದರೂ ತೆರಳುವಂಥ ಅವಕಾಶಗಳಿವೆ. ಈ ದಿನ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ, ದರ್ಶನವನ್ನು ಮಾಡಿಬನ್ನಿ.
ಮನರಂಜನೆ, ಹೋಟೆಲ್- ರೆಸ್ಟೋರೆಂಟ್, ರೆಸಾರ್ಟ್ ಹೀಗೆ ಯಾವುದಕ್ಕಾದರೂ ಸ್ನೇಹಿತರು, ಕುಟುಂಬ ಸದಸ್ಯರ ಜತೆಗೆ ತೆರಳುವಂಥ ಸಾಧ್ಯತೆ ಇದೆ. ಮನಸ್ಸಿಗೆ ಉಲ್ಲಾಸ ದೊರೆಯುವಂತೆ ಸಮಯವನ್ನು ಕಳೆಯಲಿದ್ದೀರಿ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳು ವಿಸ್ತರಿಸುವಂತೆ ಕೆಲವು ಸ್ನೇಹ ವೃದ್ಧಿ, ಪರಿಚಯ ಆಗುತ್ತವೆ. ಹೂಡಿಕೆ ವಿಚಾರದಲ್ಲಿಯೂ ಚರ್ಚೆ- ಮಾತುಕತೆಗಳನ್ನು ನಡೆಸುವುದಕ್ಕೆ ಅವಕಾಶ ಇದೆ.
ಬಹಳ ಆರಾಮವಾಗಿ ದಿನ ಕಳೆಯಬೇಕು, ಏನನ್ನೂ ಮಾಡದೆ, ಯಾರ ಜತೆಗೆ ಭೇಟಿ ಆಗದೆ, ಮನೆಯಲ್ಲಿ ಇರಬೇಕು ಎಂದು ಅನ್ನಿಸಲಿದೆ. ಮುಖ್ಯವಾಗಿ ಹಳೇ ಕಾಗದ- ಪತ್ರಗಳು, ಫೋಟೋಗಳು, ಫೈಲ್ ಗಳು, ಎಕ್ಸ್ ಟರ್ನಲ್ ಹಾರ್ಡ್ ಡಿಸ್ಕ್ ನಲ್ಲಿ ಏನೇನಿದೆ ಎಂದೆಲ್ಲ ನೋಡುವುದಕ್ಕಾಗಿಯೇ ಸಮಯವನ್ನು ಎತ್ತಿಡುತ್ತೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವಂಥವರು ಹೊಸ ಸಾಹಸವೊಂದನ್ನು ಮಾಡುವುದಕ್ಕೆ ಆಪ್ತರ ಜತೆಗೆ, ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ನೀವು ಹಾಕಿಕೊಂಡ ಪ್ರಾಜೆಕ್ಟ್, ಕಂಡ ಕನಸುಗಳಿಗೆ ಹಣ ಹೊಂದಿಸುವುದು ಹೇಗೆ ಎಂದು ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ, ಅವರನ್ನು ಹಾಸ್ಟೆಲ್ ಗೆ ಸೇರಿಸುವುದಕ್ಕಾಗಿ ಒಟ್ಟಿನಲ್ಲಿ ಮಕ್ಕಳ ಸಲುವಾಗಿ ಹೆಚ್ಚು ಹಣವನ್ನು ಎತ್ತಿಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಕೆಲವರು ಈಗಿರುವ ಕೆಲಸದ ಜತೆಗೆ ಮತ್ತಷ್ಟು ಹೊಸ ಕೆಲಸಗಳನ್ನು ಹೆಚ್ಚುವರಿ ಆದಾಯಕ್ಕಾಗಿಯೇ ಮಾಡಬೇಕು ಎಂದು ನಿರ್ಧರಿಸುತ್ತೀರಿ.
ಏನನ್ನೋ ಸಾಧಿಸಿದಂಥ ಮಾನಸಿಕ ಸಮಾಧಾನ ಈ ದಿನ ಇರುತ್ತದೆ. ವೈಯಕ್ತಿಕವಾಗಿ ಬಹಳ ಮುಖ್ಯವಾಗಿದ್ದ ಜವಾಬ್ದಾರಿಯೊಂದು ನೀವಂದುಕೊಂಡ ರೀತಿಯಲ್ಲೇ ಪೂರ್ತಿ ಆಗುವಂಥ ಯೋಗ ಇದೆ. ಈ ಹಿಂದೆ ಮಾತುಕತೆ ಆಡಿ, ಅರ್ಧದಲ್ಲೇ ನಿಂತು ಹೋಗಿದ್ದಲ್ಲಿ ಅದು ಮತ್ತೆ ಮುಂದುವರಿಯುವ ಸಾಧ್ಯತೆಗಳು ತೆರೆದುಕೊಳ್ಳಲಿವೆ. ಒಮ್ಮತದಿಂದ ಆಗಬಹುದು ಎಂದು ನೀವಂದುಕೊಂಡಿದ್ದ ಕೆಲ ವಿಚಾರಗಳ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತ ಆಗಬಹುದು.
ಸುಮ್ಮನೆ ಒಂದು ಪ್ರಯತ್ನ ಅನ್ನೋ ಹಾಗೆ ಭೇಟಿ ಮಾಡುವ ವ್ಯಕ್ತಿಯಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ನಿಮ್ಮ ಸಂವಹನ ಈ ದಿನ ಅತ್ಯುತ್ತಮ ಮಟ್ಟದಲ್ಲಿ ಇರುತ್ತದೆ. ಇನ್ನೊಬ್ಬರ ಮೇಲೆ ಪ್ರಭಾವ ಬೀರಿ, ಕೆಲಸಗಳನ್ನು ಸಲೀಸಾಗಿ ಮಾಡಿಸಿಕೊಳ್ಳಲಿದ್ದೀರಿ. ಆಪ್ತರಿಗೆ ಅಥವಾ ಹತ್ತಿರದ ಬಂದುವೊಬ್ಬರಿಗೆ ಉಡುಗೊರೆಗಳನ್ನು ನೀಡುವಂಥ ಸಾಧ್ಯತೆ ಇದೆ. ಒಮ್ಮೆ ಹೇಳಿ ಸುಮ್ಮನಾಗಬೇಕಾದ ವಿಚಾರಗಳಿದ್ದಲ್ಲಿ ಪದೇಪದೇ ಹೇಳುವುದಕ್ಕೆ ಹೋಗದಿರಿ.
ನಾನು ಅಂದುಕೊಂಡಂತೆಯೇ ಆಗಬೇಕು ಎಂಬ ಹಠ ಈ ದಿನ ಮಾಡಲಿಕ್ಕೆ ಹೋಗಬೇಡಿ. ಎಲ್ಲಿಗಾದರೂ ಹೋಗಬೇಕು ಎಂಬ ವಿಚಾರದಲ್ಲಿ ದ್ವಂದ್ವ ಆದಲ್ಲಿ ಹೋಗದಿರುವುದು ಉತ್ತಮ. ಇತರರಿಂದ ಸಹಾಯ ತೆಗೆದುಕೊಳ್ಳುವುದು ಅನಿವಾರ್ಯ ಅಲ್ಲ ಎಂದಾದಲ್ಲಿ ನಿಮ್ಮಷ್ಟಕ್ಕೆ ನೀವು ಕೆಲಸ ಮಾಡಿಕೊಳ್ಳಿ. ಇತರರಿಗೆ ಮಾತು ನೀಡುವ ಮುನ್ನ ಆ ಕೆಲಸ ಸಲೀಸಾಗಿ ಮಾಡುವುದಕ್ಕೆ ಆಗುವುದಿದ್ದಲ್ಲಿ ಮಾತ್ರ ಹೇಳಿ. ಇಲ್ಲದಿದ್ದಲ್ಲಿ ಅವಮಾನದ ಪಾಲಾಗಬೇಕಾಗುತ್ತದೆ.
ನಿಮ್ಮ ಮನಸ್ಸಿನ ಮಾತನ್ನು ಹೇಳಿಕೊಳ್ಳುವಂಥ ದಿನ ಇದಾಗಿರುತ್ತದೆ. ಪ್ರೇಮವೋ ಸಿಟ್ಟೋ ಬೇಸರವೋ ಸಂತಸವೋ ಒಟ್ಟಿನಲ್ಲಿ ಯಾರ ಮುಂದೆ ಹೇಳಬೇಕಿರುತ್ತದೋ ಅವರೆದುರು ಹೇಳಿಕೊಳ್ಳಲಿದ್ದೀರಿ. ಇನ್ನು ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಬಹಳ ಮುಖ್ಯವಾದ ವಿಚಾರದ ಸಲುವಾಗಿ ಆಹ್ವಾನ ಬರುವಂಥ ಅವಕಾಶಗಳಿವೆ. ನಿಮ್ಮ ಮಾತಿನ ಪ್ರಭಾವದಿಂದ ಇತರರಿಗೆ ಅನುಕೂಲ ಆಗಲಿದೆ. ಅದರಿಂದ ನಿಮ್ಮ ಮನಸ್ಸಿಗೂ ಸಮಾಧಾನ ಆಗಲಿದೆ.
ಬೇರೆ ಯಾವುದೋ ವ್ಯಕ್ತಿಗೆ ಕಳುಹಿಸಬೇಕಾದ ಹಣವೋ ದಾಖಲೆಯೋ ಅಥವಾ ಮಾಹಿತಿಯನ್ನೋ ಇನ್ಯಾರಿಗೋ ಕಳುಹಿಸಿ, ಒತ್ತಡಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಇತರರನ್ನು ನಂಬದಿರಿ ಹಾಗೂ ನೀವೇ ಕಳುಹಿಸುವಂತಿದ್ದರೂ ಸರಿಯಾಗಿ ಪರೀಕ್ಷಿಸಿಕೊಳ್ಳಿ. ಸ್ನೇಹಿತರ ನೆರವಿನಿಂದ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ಮುಖ್ಯವಾಗಿ ಸ್ವ- ಉದ್ಯೋಗಿಗಳಿಗೆ ಬೆಳವಣಿಗೆಗೆ ಅವಕಾಶಗಳು ತೆರೆದುಕೊಳ್ಳಲಿವೆ.
ಲೇಖನ- ಎನ್.ಕೆ.ಸ್ವಾತಿ