Horoscope: ದಿನಭವಿಷ್ಯ, ಈ ರಾಶಿಯವರಿಗೆ ಇಂದು ಇನ್ನೊಬ್ಬರ ಮೇಲೆ ಆಕರ್ಷಣೆ ಆಗಬಹುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 11 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವರೀಯಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:54 ರಿಂದ 09:26ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:01 ರಿಂದ 03:33ರ ವರೆಗೆ.
ಸಿಂಹ ರಾಶಿ: ಸಂಗಾತಿಯ ಜೊತೆ ಸ್ನೇಹ ಕೂಟದಲ್ಲಿ ಭಾಗವಹಿಸುವಿರಿ. ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ವಸ್ತುವನ್ನು ಕಳೆದುಕೊಂಡು ಚಿಂತಿತರಾಗುವಿರಿ. ಸ್ವಾವಲಂವನೆಯಿಂದ ಜೀವನವನ್ನು ನಡೆಸುವಿರಿ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ವ್ಯರ್ಥ ಕಾಲಹರಣವನ್ನು ಮಾಡಿ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುವುದು. ಅಹಂಕಾರವನ್ನು ಎಲ್ಲರೆದುರು ಪ್ರದರ್ಶನ ಮಾಡಲು ಹೋಗುವುದು ಬೇಡ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ.
ಕನ್ಯಾ ರಾಶಿ: ನಕಾರಾತ್ಮಕ ಭಾವನೆಗಳಿಂದ ನಿಮಗೆ ಕಿರಿಕಿರಿಯಾಗಿ ಬಿಡಲೂ ಸಾಧ್ಯವಾಗದು. ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಂಗಾತಿಯ ಪರವಾಗಿ ನೀವು ಮಾತನಾಡುವುದು ಅಚ್ಚರಿಯಾದೀತು. ನಿಮ್ಮವರಿಗೆ ಆದ ಅಪಮಾನದಿಂದ ನೀವು ಕೋಪಗೊಳ್ಳುವಿರಿ. ನಿಮ್ಮ ಔದಾರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಅದೃಷ್ಟವನ್ನು ನಂಬುವುದಕ್ಕಿಂತ ಸಾಮರ್ಥ್ಯವನ್ನು ನಂಬುವುದು ಒಳ್ಳೆಯದು. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ ಕೆಲಸಗಳನ್ನು ಮರೆಸುವುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ನಿಮ್ಮ ಮೇಲೆ ಯಾರಾದರೂ ಆರೋಪವನ್ನು ಮಾಡಬಹುದು. ಇದರಂದ ನೀವು ಉದ್ವೇಗಕ್ಕೆ ಒಳಗಾಗುವಿರಿ.
ತುಲಾ ರಾಶಿ: ಇಂದು ನಿಮ್ಮಲ್ಲಿ ವಿನೋದದ ಮನಃಸ್ಥಿತಿ ಇರುವುದು. ಸಾಮಾಜಿಕ ಚಟುವಟಿಕೆಯಲ್ಲಿ ಬಹಳ ದಿನಗಳ ಅನಂತರ ಭಾಗವಹಿಸುವಿರಿ. ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಮನಸ್ಸು ಮಾರ್ಗವನ್ನು ಹುಡುಕುವುದು. ಧನಲಾಭದಿಂದ ಆರ್ಥಿಕತೆಯೂ ಸುಸ್ಥಿರವಾಗುವುದು. ಬಹಳ ದಿನಗಳಿಂದ ಸಾಗುತ್ತಿದ್ದ ಕೆಲಸವನ್ನು ಇಂದೇ ಮುಗಿಸಬೇಕೆಂದು ನಿರ್ಧರಿಸುವಿರಿ. ಸಂದರ್ಭವನ್ನು ನೋಡಿ ಮಾತನಾಡುವುದು ಉತ್ತಮ. ನಿಮ್ಮ ಸಹಜ ವರ್ತನೆಯೂ ತೋರಿಕೆಯಂತೆ ಕಾಣಬಹುದು. ತಾಯಿಯ ಜೊತೆ ಕಲಹವಾಡಿ ಅವರನ್ನು ಬೇಸರಿಸುವಿರಿ.
ವೃಶ್ಚಿಕ ರಾಶಿ: ಎಲ್ಲ ವ್ಯಕ್ತಿ, ವಸ್ತು, ಹುದ್ದೆಗಳ ಮೇಲೆ ವಿರಕ್ತಿ ಉಂಟಾಗಬಹುದು. ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ಸಂಕಷ್ಟಗಳ ನಿವಾರಣೆಗೆ ದೈವದ ಮೊರೆ ಹೋಗುವಿರಿ. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಈ ದಿನವು ದುರಂತದಲ್ಲಿ ಕೊನೆಯಾಗಬಹುದು. ನಿಮ್ಮ ಉಪಯೋಗವನ್ನು ಪಡೆದು ಕೈ ಬಿಡಬಹುದು. ಉದ್ಯಮದ ಆದಾಯವನ್ನು ಹೆಚರಚು ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದ ಒತ್ತಡವನ್ನು ತಗ್ಗಿಸಿಕೊಳ್ಳಲು ಕೆಲಸವನ್ನು ಹಂಚುವುದು ಉತ್ತಮ. ಸೌಂದರ್ಯವೃದ್ಧಿಯನ್ನು ಹೆಚ್ಚು ಮಾಡಿಕೊಳ್ಳುವಿರಿ. ಇನ್ನೊಬ್ಬರ ಮೇಲೆ ಆಕರ್ಷಣೆ ಉಂಟಾಗಬಹುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ