Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 22ರ ದಿನಭವಿಷ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 22, 2023 | 1:30 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 22ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 22ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 22ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಇತರರ ಕೆಲಸಕ್ಕಾಗಿ ನೀವು ಎದ್ದು- ಬಿದ್ದು ಕೆಲಸ ಮಾಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಒಂದೋ ಅಭಿಮಾನಕ್ಕೆ ಅಥವಾ ಸ್ನೇಹಕ್ಕೆ ಅಥವಾ ಇವೆರಡೂ ಅಲ್ಲದಿದ್ದಲ್ಲಿ ಮನವೊಲಿಕೆಗಾಗಿ ಹೀಗೆ ಮಾಡುವಂಥ ಸಾಧ್ಯತೆಗಳಿವೆ. ಮಕ್ಕಳ ಶಿಕ್ಷಣದ ಬಗ್ಗೆ ಸಂಗಾತಿ ಜತೆಗೆ ಗಂಭೀರವಾದ ಚರ್ಚೆ ನಡೆಸಲಿದ್ದೀರಿ. ಮನೆ ದೇವರ ಸ್ಮರಣೆ ಮಾಡಿದಲ್ಲಿ ನಿಮ್ಮ ನಿರ್ಧಾರಗಳಲ್ಲಿ ಗೊಂದಲಗಳು ಏರ್ಪಡುವಂತಿದ್ದಲ್ಲಿ ಪರಿಹಾರ ಸಿಗಲಿದೆ. ಪುಷ್ಕಳವಾದ ಊಟ- ತಿಂಡಿ ದೊರೆಯುವಂಥ ಕಾರ್ಯಕ್ರಮಗಳಲ್ಲಿ ಭಾಗೀ ಆಗಲಿದ್ದೀರಿ. ವಾಹನಗಳನ್ನು ಖರೀದಿ ಮಾಡುವಂತೆ ಆಪ್ತರು- ಸ್ನೇಹಿತರಿಂದ ಸಲಹೆಗಳು ಬರಲಿವೆ. ಇದಕ್ಕಾಗಿ ಸಾಲ ಪಡೆಯುವ ಬಗ್ಗೆಯೂ ಆಲೋಚಿಸಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ಬಹಳ ವಿಚಾರಗಳಲ್ಲಿ ನಿಮ್ಮ ಪಟ್ಟು ಬಿಗಿ ಆಗಲಿದೆ. ನಾನು ಹೇಳಿದಂತೆಯೇ ಆಗಬೇಕು ಎಂಬಂಥ ನಿಮ್ಮ ಧೋರಣೆ ಸಾಮಾನ್ಯ ದಿನಗಳಿಗಿಂತ ಬಹಳ ವಿಭಿನ್ನವಾಗಿ ಹಾಗೂ ಬಿಗಿಯಾಗಿ ಇರಲಿದೆ. ರಾಜಕಾರಣದಲ್ಲಿ ಇರುವವರಿಗೆ ಆತ್ಮಗೌರವಕ್ಕೆ ಪೆಟ್ಟು ಬೀಳುವಂಥ ಮಾತುಗಳು ಕೇಳಿಬರಲಿವೆ. ನಿಮ್ಮ ಸಾಮರ್ಥ್ಯ ಹಾಗೂ ಈ ಹಿಂದೆ ನೀವು ಮಾಡಿದ ಸಾಧನೆ ಏನು ಎಂಬ ಪ್ರಶ್ನೆಗಳನ್ನು ಎದುರಿಸಲಿದ್ದೀರಿ. ಯುವತಿಯರಿಗೆ ಇಷ್ಟವಿಲ್ಲದ ಸಂಬಂಧವೊಂದನ್ನು ಮದುವೆಗೆ ಒಪ್ಪಿಕೊಳ್ಳಬೇಕು ಎಂಬ ಒತ್ತಡ ಸೃಷ್ಟಿ ಆಗಲಿದೆ. ನಿಮ್ಮ ಪರವಾಗಿ ಮಾತನಾಡುವವರು ಯಾರು ಇರದೆ ಒಂದಿಷ್ಟು ಬೇಸರ ಆಗುವಂಥ ಸಾಧ್ಯತೆ ಇದೆ. ಶೈಕ್ಷಣಿಕ ವಿಚಾರದಲ್ಲಿ ಅಂದುಕೊಳ್ಳದ ರೀತಿಯಲ್ಲಿ ಕೆಲವು ಬೆಳವಣಿಗೆಗಳು ನಡೆಯಲಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಇದ್ದದ್ದನ್ನು ಇದ್ದಂತೆಯೇ ಹೇಳುತ್ತೇನೆ ಎಂಬ ಧೋರಣೆಗೆ ಈ ದಿನ ಒಂದು ದಿಕ್ಕು- ಗುರಿ ದೊರೆಯಲಿದೆ. ಸೋಷಿಯಲ್ ಮೀಡಿಯಾ ಪ್ರಮೋಷನ್ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸುವವರು, ಯೂಟ್ಯೂಬರ್ ಗಳು ಹಾಗೂ ಮೀಮ್ ಗಳನ್ನು ಮಾಡುವಂಥವರು, ಟ್ರೋಲರ್ ಗಳಿಗೆ ಆದಾಯದ ಹೆಚ್ಚಳಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಪ್ರತಿಷ್ಠಿತ ಸಂಸ್ಥೆಗಳ ಜತೆಗೆ ಒಪ್ಪಂದಗಳು ಏರ್ಪಡುವಂಥ ಸಾಧ್ಯತೆ ಇದೆ. ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥ ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಒತ್ತಡಗಳು ಕಂಡುಬರಲಿದೆ. ಗಡುವಿನೊಳಗೆ ಕೆಲಸ ಮುಗಿಸುವ ಕಡೆಗೆ ಲಕ್ಷ್ಯ ನೀಡುವುದು ಮುಖ್ಯವಾಗುತ್ತದೆ. ಇತರರ ಮೇಲೆ ಸಂಪೂರ್ಣ ಅವಲಂಬನೆ ಒಳ್ಳೆಯದಲ್ಲ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ದಣಿವು, ಮೈ- ಕೈ ನೋವು ಕಾಡಲಿದೆ. ಈ ಹಿಂದೆ ನಿಮ್ಮ ಬಗ್ಗೆ ಉತ್ತಮವಾಗಿ ಮಾತನಾಡಿದ್ದರು ಎಂದು ಸಂಪರ್ಕವನ್ನು ಮುಂದುವರಿಸಿದ್ದಲ್ಲಿ ಅದರಿಂದ ಈ ದಿನ ನಿಮಗೆ ನೆರವಿಗೆ ಬರಲಿದೆ. ಮ್ಯಾನೇಜ್ ಮೆಂಟ್ ಜತೆಗೆ ಗಂಭೀರವಾದ ಚರ್ಚೆಯನ್ನು ಮಾಡಬೇಕು ಎಂದುಕೊಂಡಿದ್ದಲ್ಲಿ ನೀವು ಹೇಳುವ ವಿಚಾರವನ್ನು ನಯವಾಗಿ ದಾಟಿಸುವುದಕ್ಕೆ ಪ್ರಯತ್ನಿಸಿ. ನಿಮ್ಮ ಧ್ವನಿ ಹಾಗೂ ವಿಚಾರ ಎರಡೂ ಒಂದೇ ರೀತಿಯಲ್ಲಿ ಕೇಳಿಸುವಂತೆ ನೋಡಿಕೊಳ್ಳಿ. ಇಲ್ಲದಿದ್ದಲ್ಲಿ ನಿಮ್ಮನ್ನು ಅಹಂಕಾರಿ ಎಂದು ಅಂದುಕೊಳ್ಳುವ ಸಾಧ್ಯತೆ ಇದೆ. ಹೆಣ್ಣುಮಕ್ಕಳು ಚಿನ್ನಾಭರಣ ಖರೀದಿಗಾಗಿ ಖರ್ಚು ಮಾಡುವ ಯೋಗ ಇದೆ. ನೀವು ಅಂದುಕೊಳ್ಳದ ರೀತಿಯಲ್ಲಿ ಹಣಕಾಸಿನ ಹರಿವು ನಿಮ್ಮ ಪಾಲಿಗೆ ಹರಿದುಬರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಹಣಕಾಸು ವಿಚಾರದಲ್ಲಿ ಲೆಕ್ಕಾಚಾರಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ದುಡ್ಡು ಹೊಂದಿಸಬೇಕಾದಂಥ ಜವಾಬ್ದಾರಿ ನಿಮ್ಮ ಮೇಲೆ ಬರಬಹುದು. ಅಥವಾ ನಿಮ್ಮ ನೇತೃತ್ವದಲ್ಲಿ ಆ ಕಾರ್ಯಕ್ರಮ ನಡೆಸಬೇಕು ಎಂದಾಗಬಹುದು. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯಗಳು ಕಾಡಬಹುದು. ಥೈರಾಯ್ಡ್ ಸಮಸ್ಯೆ ಈಗಾಗಲೇ ಇದೆ ಎಂದಾದಲ್ಲಿ ಅದು ಉಲ್ಬಣಗೊಳ್ಳಬಹುದು. ಸೂಕ್ತ ವೈದ್ಯೋಪಚಾರಗಳನ್ನು ಮಾಡಿಕೊಳ್ಳುವ ಕಡೆಗೆ ಲಕ್ಷ್ಯ ನೀಡುವುದು ಮುಖ್ಯವಾಗುತ್ತದೆ. ದೇಹವನ್ನು ತಂಪಾಗಿ ಇರಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಆರ್ಥಿಕ ವಿಚಾರಗಳಲ್ಲಿ ನಿಮ್ಮ ನಿರ್ಧಾರಗಳು ಸರಿಯಾಗಲಿಲ್ಲವೇನೋ ಎಂಬ ಅನುಮಾನ ನಿಮ್ಮನ್ನು ಕಾಡುವುದಕ್ಕೆ ಶುರುವಾಗುತ್ತದೆ. ಸ್ತ್ರೀಯರಾಗಿದ್ದಲ್ಲಿ ಪುರುಷರೆಡೆಗೆ ಹಾಗೂ ಪುರುಷರಾಗಿದ್ದಲ್ಲಿ ಸ್ತ್ರೀಯರ ಕಡೆಗೆ ಆಕರ್ಷಿತರಾಗುವಂಥ ದಿನ ಇದು. ಪರಿಚಯವನ್ನು ಸ್ನೇಹಕ್ಕೆ, ಅಲ್ಲಿಂದ ಪ್ರೇಮಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆಗಳು ಹೆಚ್ಚಿವೆ. ಸೆಮಿನಾರ್ ಗಳಲ್ಲಿ ಭಾಗೀ ಆಗುತ್ತಿದ್ದಲ್ಲಿ ಅಥವಾ ಯಾವುದಾದರೂ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗೀ ಆಗುತ್ತಿದ್ದಲ್ಲಿ ಈ ಸಾಧ್ಯತೆಗಳು ಜಾಸ್ತಿ ಇವೆ. ಲೇಖಕರು, ಮಾಧ್ಯಮಗಳಲ್ಲಿ ಇರುವವರು, ಮ್ಯಾಜಿಷಿಯನ್ ಗಳಿಗೆ ದೂರ ಪ್ರಯಾಣದ ಯೋಗ ಹೆಚ್ಚಿದೆ. ಇದರಿಂದ ನಿಮ್ಮ ಆದಾಯ ಜಾಸ್ತಿ ಮಾಡಿಕೊಳ್ಳುವುದಕ್ಕೆ ದಾರಿ ಗೋಚರಿಸಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮಾನಸಿಕವಾಗಿ ಈ ದಿನ ಗಟ್ಟಿಯಾಗಿ ಇರುವುದು ಮುಖ್ಯವಾಗುತ್ತದೆ. ಯಾವುದೇ ನಿರ್ಧಾರ ಮಾಡಿದರೂ ಅದು ಸರಿ ಎಂದೆನಿಸಿದಾಗ ಬದ್ಧವಾಗಿರುವುದಕ್ಕೆ ಪ್ರಯತ್ನಿಸಿ. ಇದರಿಂದ ನಿಮಗೆ ಅನುಕೂಲ ಆಗಲಿದೆ. ಈ ಹಿಂದೆ ನೀವು ನೆರವು ನೀಡಿದಂಥ ವ್ಯಕ್ತಿಯಿಂದ ನಿಮಗೆ ಅನುಕೂಲ ಒದಗಿ ಬರಲಿದೆ. ಅನಿರೀಕ್ಷಿತವಾಗಿ ಹಣ ಬರಬಹುದು. ಆಹಾರ- ನೀರಿನ ವಿಚಾರದಲ್ಲಿ ಮಾತ್ರ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ. ಮುಖ್ಯವಾದ ಕಾಗದ- ಪತ್ರಗಳನ್ನು ನೋಡಿಕೊಳ್ಳುವಂಥವರು ಎಚ್ಚರಿಕೆಯಿಂದ ಇರಬೇಕು. ಒಂದು ಕಡೆಯಿಂದ ಮತ್ತೊಂದು ಕಡೆ ತೆಗೆದುಕೊಂಡು ಹೋಗುವಂಥ ವೃತ್ತಿಯಲ್ಲಿ ಇರುವವರು ಸಾಮಾನ್ಯಕ್ಕಿಂತ ಹೆಚ್ಚು ಲಕ್ಷ್ಯ ವಹಿಸಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಹಳೆಯ ನೆನಪುಗಳನ್ನು ನಿಮ್ಮನ್ನು ಬಹಳ ಕಾಡಲಿದೆ. ಅದರಲ್ಲೂ ಪ್ರೇಮ ಪ್ರಕರಣಗಳು ಕಾಡುವಂಥ ಸಾಧ್ಯತೆ ಇದೆ. ಆದ್ದರಿಂದ ನಿಮ್ಮಿಂದ ಸಾಧ್ಯವಾದಷ್ಟೂ ಕೆಲಸಗಳಲ್ಲಿ ತೊಡಗಿಕೊಂಡಲ್ಲಿ ಉತ್ತಮ. ಮನೆಯಲ್ಲಿ ಹಿರಿಯರು ನೀಡುವ ಸಲಹೆ- ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಈ ದಿನ ಕೆಲವು ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಉದ್ಯೋಗಸ್ಥರು, ಅದರಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಮಶೀನ್ ಲರ್ನಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು ಹೊಸ ಕೋರ್ಸ್ ಗೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸೋದರ ಸಂಬಂಧಿಗಳ ಭೇಟಿಯಿಂದ ಮನಸ್ಸಿಗೆ ಖುಷಿ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ಹಿಂದೆ ನಿಮ್ಮ ಬಗ್ಗೆ ಲಘುವಾಗಿ, ಹಗುರವಾಗಿ ಮಾತನಾಡಿದವರೇ ಸಹಾಯವನ್ನು ಕೇಳಿಕೊಂಡು ಬರುವ ಸಾಧ್ಯತೆ ಇದೆ. ಅನಗತ್ಯವಾದ ಖರ್ಚನ್ನು ಕಡಿಮೆ ಮಾಡುವ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜತೆಗೆ ಸ್ನೇಹದಿಂದ ವರ್ತಿಸಿ, ಅವರಿಗೆ ಏನಾದರೂ ನಿಮ್ಮ ನೆರವು ಬೇಕು ಎಂದು ನಿಮಗೆ ಅನಿಸಿದಲ್ಲಿ ನೀವಾಗಿಯೇ ಕೇಳುವುದು ಉತ್ತಮ. ವೃತ್ತಿಪರರು, ಹವ್ಯಾಸಿ ಫೋಟೋಗ್ರಾಫರ್ ಗಳಿಗೆ ಉತ್ತಮ ಸಂಸ್ಥೆಗಳಿಂದ ಆಫರ್ ಗಳು ಹುಡುಕಿಕೊಂಡು ಬರಲಿವೆ. ಕಾಲು ನೋವಿನ ಸಮಸ್ಯೆ ಈಗಾಗಲೇ ಇದೆ ಎನ್ನುವವರು ಮಾತ್ರ ಬಹಳ ಜಾಗ್ರತೆಯಿಂದ ಇರಬೇಕಾಗುತ್ತದೆ. ಔಷಧ ಬದಲಾವಣೆ ಮಾಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ.

ಲೇಖನ- ಎನ್‌.ಕೆ.ಸ್ವಾತಿ