Horoscope 22 September: ದಿನಭವಿಷ್ಯ, ಈ ರಾಶಿಯವರಿಗೆ ಒಂಟಿಯಾಗಿ ಇರಬೇಕು ಎನಿಸುವುದು, ಸ್ವಂತಿಕೆಯನ್ನು ಉಳಿಸಿಕೊಳ್ಳಿ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಸೆಪ್ಟೆಂಬರ್ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 22 ) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಅತಿಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:55 ರಿಂದ 12:25 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:57 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:24ರ ವರೆಗೆ.
ಮೇಷ ರಾಶಿ: ಆದಾಯದ ಮೂಲಗಳು ಸೊರಗಿಹೋದಂತೆ ಅನ್ನಿಸಬಹುದು. ಕೊಟ್ಟಿದ್ದನ್ನು ಮರಳಿ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇನ್ನೊಬ್ಬರಿಗೆ ಆಕರ್ಷಿತರಾಗುವಿರಿ. ನಿಮ್ಮ ಶಾಂತ ಮನಸ್ಸಿನಿಂದ ಸಂಕಷ್ಟವನ್ನು ಎದುರಿಸುವಿರಿ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆತುರಾತುರವಾಗಿ ಏನನ್ನೂ ಮಾಡಲು ಹೋಗುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅನುಮಾನ ಸಂದೇಹ ಬರಬಹುದು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗದು. ನಿಮ್ಮ ಆಪ್ತರ ಜೊತೆ ಕೆಲವು ರಹಸ್ಯವನ್ನು ಹೇಳಿಕೊಳ್ಳುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯಕ ಬೇಕು. ವಿವಾಹದ ವಿಚಾರದಲ್ಲಿ ಒಳ್ಳೆಯದಾಗುವುದು. ನಿಮ್ಮನ್ನು ಹೊಗಳಿ ಕೆಲಸ ಮಾಡಿಸಿಕೊಳ್ಳುವರು.
ವೃಷಭ ರಾಶಿ: ಗೆಳೆತನ ಸಾಕು ಎನಿಸಿ ಒಂಟಿಯಾಗಿ ಇರಬೇಕು ಎನಿಸುವುದು. ನಿಮ್ಮದಾದ ಸ್ವಂತಿಕೆಯನ್ನು ಉಳಿಸಿಕೊಳ್ಳಿ. ಮಕ್ಕಳ ವಿಚಾರಕ್ಕೆ ವಾದಗಳು ಆಡಬಹುದು. ನಿಮ್ಮ ವಿರುದ್ಧ ತಂತ್ರಗಳು ನಡೆಯಲಿದ್ದು ನಿಮಗೆ ಗೊತ್ತಾಗದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು. ಹಳೆಯ ಸಾಲಗಳಿಗೆ ನೀವೇ ಮುಕ್ತಿ ಕೊಡಿಸುವಿರಿ. ಉದ್ಯೋಗಿಗಳ ಆದಾಯದಲ್ಲಿ ಅಲ್ಪ ಏರಿಕೆ. ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಅವಿವಾಹಿತರಿಗೆ ವಿವಾಹಯೋಗವು ಬರಬಹುದು. ನಿಮ್ಮ ಸ್ವಭಾವವನ್ನು ಬೇಕೆಂದೇ ಬದಲಿಸಿಕೊಳ್ಳುವಿರಿ. ಎಲ್ಲರ ಜೊತೆ ಅತಿಯಾದ ಸಲುಗೆ ಬೇಡ.
ಮಿಥುನ ರಾಶಿ: ಸಾಮಾಜಿಕ ತಾಣದಿಂದ ನಿಮಗೆ ಕೆಲವು ವ್ಯಕ್ತಿಗಳ ಪರಿಚಯವಾದೀತು. ನಿಮ್ಮ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಿ. ಇಷ್ಟವಾಗದವರು ನಿಮ್ಮೆದುರಿಗೆ ಬರುವಾಗ ಕಣ್ತಪ್ಪಿಸಿಕೊಳ್ಳುವಿರಿ. ದಂಡವನ್ನು ತುಂಬಬೇಕಾದ ಸ್ಥಿತಿಯು ಬರಬಹುದು. ಸ್ವಂತ ವಾಹನದಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದ ಸಂತೋಷದಲ್ಲಿ ಇರುವಿರಿ. ಮನೆಯವರನ್ನು ಕರೆದುಕೊಂಡು ಪ್ರಯಾಣ ಮಾಡುವಿರಿ. ಆಸ್ತಿಯ ದಾಖಲೆಗಳನ್ನು ಅಧಿಕಾರಿಗಳು ವಿಚಾರಿಸಬಹುದು. ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸಂಗಾತಿಯ ಆದಾಯವನ್ನು ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗುವುದು. ಸತ್ಯವನ್ನು ಮುಚ್ಚಿಟ್ಟಿದ್ದು ನಿಮ್ಮ ಮಾತಿನಲ್ಲಿ ಗೊತ್ತಾಗುವುದು.
ಕಟಕ ರಾಶಿ: ಸಾಲದಿಂದ ನಿಮ್ಮ ದೊಡ್ಡ ಆಲೋಚನೆಗಳು ಸಣ್ಣದಾಗುವುವು. ನಿಮ್ಮ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಮಕ್ಕಳ ಬಗ್ಗೆ ಅನವಶ್ಯಕ ಅನುಮಾನ ಇರುವುದು. ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವಿರಿ. ಅಗತ್ಯದ ಖರ್ಚುಗಷ್ಟೇ ಪ್ರಾಧಾನ್ಯವಿರಲಿ. ಅನಿರೀಕ್ಷವಾಗಿ ಬರುವ ಕಾರ್ಯದ ಒತ್ತಡಕ್ಕೆ ಸಿಕ್ಕಿಕೊಳ್ಳುವಿರಿ. ಧ್ಯಾನದ ಅವಶ್ಯಕತೆ ಇದೆ ಎಂದು ಅನ್ನಿಸಬಹುದು. ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಳ್ಳುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾಯವು ಸಿಗುವುದು ಕಷ್ಟವಾದೀತು. ಹೆಚ್ಚು ಆಯ್ಕೆಯಲ್ಲಿ ನಿಮಗೆ ಗೊಂದಲವಾದೀತು.
ಸಿಂಹ ರಾಶಿ: ಸತತ ಪ್ರಯತ್ನದಿಂದ ಆದಾಯ ಹಾಗೂ ಖರ್ಚನ್ನು ಸರಿಯಾಗಿ ತೂಗಿಸಲು ಕಲಿಯುವಿರಿ. ಇಂದಿನ ಕೆಲಸದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡರೂ ಅದನ್ನು ಲೆಕ್ಕಿಸದೇ ಮುಂದೆ ಸಾಗುವಿರಿ. ಅಧಿಕಾರಿಗಳಿಗೆ ಒಂದಿಲ್ಲೊಂದು ಒತ್ತಡವು ಬರಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಬಂಧುಗಳು ನಿಮ್ಮ ಹತ್ತಿರ ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರಬಹುದು. ಬೇಸರ ಮಾಡದೇ ಕಳುಹಿಸಿ ಕೊಡಿ. ಮನಸ್ಸಿನ ಕಿರಿಕಿರಿಯಿಂದ ಕೋಪವು ಬರಬಹುದು. ಸರ್ಕಾರಿ ಕೆಲಸಕ್ಕಾಗಿ ಅರ್ಜಿಯನ್ನು ಹಾಕಿ ಕಾಯುತ್ತ ಕುಳಿತಿರುವಿರಿ. ಸಂಗಾತಿಯ ಕೋಪವನ್ನು ಶಾಂತ ಮಾಡುವಿರಿ. ಇನ್ನೊಬ್ಬರನ್ನು ಅನುಕರಿಸಿ ಹಾಸ್ಯ ಮಾಡುವಿರಿ. ನಿಮಗೆ ಗೊತ್ತಿಲ್ಲದೇ ನಿಮ್ಮ ಬಗ್ಗೆ ಕೆಲವು ಮಾತುಗಳು ಆಪ್ತರು ಆಡಬಹುದು. ಸೋಲನ್ನು ಒಪ್ಪಿಕೊಳ್ಳುವುದು ನಿಮ್ಮ ಸ್ವಭಾವವಾಗಿರದು.
ಕನ್ಯಾ ರಾಶಿ: ಉತ್ತಮ ದಿನದ ನಿರೀಕ್ಷೆಯಿಂದ ನಿಮಗೆ ಬೇಸರವಾಗಬಹುದು. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದು. ಹೇಳದೇ ಮೌನದಿಂದ ಇರುವಿರಿ. ನೆಮ್ಮದಿಗಾಗಿ ಚಡಪಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡಿದೆ. ಆರ್ಥಿಕ ಉಳಿತಾಯಕ್ಕೆ ಹೆಚ್ಚಿನ ಗಮನ ನೀಡಿ. ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಿರಿ. ಬಂಧುಗಳ ಮಾತಿನಿಂದ ಅಸಮಾಧನವು ಇರುವುದು. ಒಬ್ಬರೇ ಹೊರಗೆ ಸುತ್ತಾಟ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ. ಕೆಟ್ಟ ಅಭ್ಯಾಸದತ್ತ ಮನಸ್ಸು ಹರಿಯುವುದು.
ತುಲಾ ರಾಶಿ: ನಿಮ್ಮ ಆಲೋಚನೆಯನ್ನು ದೀರ್ಘವಾಗಿ ಹರಿದುಬಿಡುವಿರಿ. ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ. ಹಿರಿಯರಿಗೆ ಬಾಯ್ತಪ್ಪಿ ಮಾತನಾಡಿ ಪಶ್ಚಾತ್ತಾಪಪಡುವಿರಿ. ತೀರ್ಥಯಾತ್ರೆಯ ಸಂದರ್ಭವು ಬರಬಹುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ. ಮಕ್ಕಳ ಮೇಲೆ ನಿಮ್ಮ ಮೋಹವು ಅತಿಯಾಗಿದ್ದು ಅದು ಬಂಧನವೂ ಆಗಬಹುದು. ಅಸಾಮಾನ್ಯ ಕಾರ್ಯವನ್ನು ಮಾಡಲು ಬಹಳ ಉತ್ಸಾಹವಿರುವುದು. ನಿಮ್ಮ ಹಣದ ಅಭಾವವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಇಂದು ನಿಮ್ಮ ಮನೆಯ ಕೆಲಸದಲ್ಲಿಯೇ ಹೆಚ್ಚು ಆನಂದಿಸುವಿರಿ. ಆಸ್ತಿಯ ಹಂಚಿಕೆಯು ನಿಮಗೆ ಸಮಾಧಾನ ತರದು.
ವೃಶ್ಚಿಕ ರಾಶಿ: ಇಂದಿನ ನಿಮ್ಮ ಮಾತಿನಿಂದ ದ್ವೇಷವು ಬರಬಹುದು. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವು ಪೂರ್ಣವಾಗಬಹುದು. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ನಡೆಯಲಿದ್ದು ತೀರ್ಮಾನವಾಗದು. ಓಡಾಟದ ಸಮಯದಲ್ಲಿ ನಿಮ್ಮ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಅಪರಿಚಿತರು ನಿಮ್ಮಿಂದ ಧನವನ್ನು ಪಡೆಯುವರು. ಮನೆಗೆ ಬಂದ ಅತಿಥಿಯನ್ನು ಸತ್ಕಾರಿಸುವಿರಿ. ವಾಹನದಿಂದ ಬಿದ್ದು ಗಾಯವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಸಹೋದರಿಯ ವಿಚಾರದಲ್ಲಿ ನಿಮಗೆ ಅಸಮಾಧಾನವಾಗುವುದು. ಸಂಗಾತಿಯ ಜೊತೆ ದೇಶಾಂತರ ಹೋಗುವಿರಿ. ನಿಮ್ಮವರ ಕೆಲವು ಮಾತಗಳು ಪ್ರಶಾಂತವಾದ ಮನಸ್ಸನ್ನು ಹಾಳುಮಾಡುವುದು.
ಧನು ರಾಶಿ: ಹಿರಿಯರ ಆಶೀರ್ವಾದವನ್ನು ಪಡೆದು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಜಾಣ್ಮೆಯ ವ್ಯವಹಾರದಿಂದ ನಿಮಗೆ ಲಾಭವಾಗುವುದು. ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುವರು. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗಬಹುದು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಇಂದು ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ರಾಜಕೀಯವಾಗಿ ಬೆಳೆಯಲು ಬಹಳ ಆಸಕ್ತಿಯನ್ನು ತೋರುವಿರಿ. ಕಛೇರಿಯಲ್ಲಿ ಸ್ತ್ರೀಯರ ಅಲ್ಪ ಸಹಕಾರವು ಸಿಗುವುದು. ಸಂಗಾತಿಯ ಅನೇಕ ವಿಚಾರಗಳು ನಿಮಗೆ ತಿಳಿಯದೇ ಇರುವುದು. ಆಗಾಗ ಆರೋಗ್ಯದಲ್ಲಿ ಏರಿಳಿತವು ಆಗಲಿದ್ದು ವೈದ್ಯರ ಸಲಹೆಯನ್ನು ದೈವಜ್ಞರಿಂದ ಪರಿಹಾರವನ್ನೂ ಮಾಡಿರಿ.
ಮಕರ ರಾಶಿ: ವ್ಯಾಪಾರದಲ್ಲಿ ಸಾಧಾರಣ ಆದಾಯವು ಇದ್ದು ನಿಮಗೆ ಸಮಾಧಾನವಾಗುವುದು. ವಾಹನ ಖರೀದಿಯಲ್ಲಿ ಮೋಸವಾಗುವ ಸಂಭವವಿದೆ. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿ. ನಿಮ್ಮ ಅಹಂಕಾರವನ್ನು ಪ್ರದರ್ಶಿಸುವಿರಿ. ವಿದ್ಯಾಭ್ಯಾಸವು ಕಾರಣಾಂತರಗಳಿಂದ ನಿಲ್ಲುವುದು. ನಿಮ್ಮ ಸೋತ ಮನಸ್ಸಿಗೆ ಭರವಸೆಯನ್ನು ತುಂಬುವವರು ಬೇಕಾಗಿದ್ದಾರೆ. ಮನಸ್ಸು ಬಹಳ ದುರ್ಬಲಗೊಂಡು ನಕಾರಾತ್ಮಕ ಆಲೋಚನೆಯೇ ಹೆಚ್ಚು ಇರುವುದು.
ಕುಂಭ ರಾಶಿ: ನಮ್ಮ ಪ್ರಾಮಾಣಿಕತೆಗೆ ಉತ್ತಮ ಯಶಸ್ಸನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿಯು ಇರಲಿದೆ. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಉದ್ಯೋಗವು ಸಾಕೆನಿಸಿ ನೀವು ಹಿಸ ಉದ್ಯಮವನ್ನು ಆರಂಭಿಸುವ ಯೋಚನೆ ಇರುವುದು. ಆಸ್ತಿ ಖರೀದಿಯನ್ನು ಮಾಡಲು ಅವಕಾಶವು ಸಿಗಬಹುದು. ಅನಿರೀಕ್ಷಿತವಾಗಿ ಉಡುಗೊರೆಯನ್ನು ಆಪ್ತರಿಂದ ಪಡೆಯುವಿರಿ. ಇಷ್ಟಪಟ್ಟವರ ಭೇಟಿಯು ಮನಸ್ಸಿಗೆ ಹಿತವೆನಿಸುವುದು. ಮಕ್ಕಳ ವಿಚಾರದಲ್ಲಿ ಜವಾಬ್ದಾರಿಯು ಅಗತ್ಯವಾಗಿ ಬೇಕಾಗುವುದು.
ಮೀನ ರಾಶಿ: ನಿಮಗೆ ಅಂದಾಜು ಸಿಗದೇ ಇಂದಿನ ಹಣವು ಅಧಿಕವಾಗಿ ಖರ್ಚಾಗುವುದು. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಇಂದು ನಿಮಗೆ ವೃತ್ತಿಯಲ್ಲಿ ಸಹಾಕಾರವು ಸಿಗದೇ ತೊಂದರೆಪಡುವಿರಿ. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ವಾಗ್ವಾದವೇ ಆಗಿ ಮನಸ್ಸು ಮುರಿಯಬಹುದು. ನಿಮಗೆ ವಿರೋಧಿಗಳ ಭಯವು ಕಾಡುವುದು. ಸಾಮಾಜಿಕ ಕೆಲಸದಲ್ಲಿ ಆಸಕ್ತಿಯು ಕಡಿಮೆ ಆಗುವುದು. ಕುಟುಂಬಕ್ಕೆ ನಿಮ್ಮ ಸಹಕಾರವು ಲಭ್ಯವಾಗದು.
ಲೋಹಿತಶರ್ಮಾ – 8762924271 (what’s app only)