ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 25 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:51 ರಿಂದ 05:27ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ.
ಸಿಂಹ: ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸ್ವಲ್ಪಮಟ್ಟಿಗೆ ಸಾಧ್ಯವಾಗುವುದು. ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ತರಬಹುದು. ಅದನ್ನು ದೂರವಿರಿಸಲು ಪ್ರಯತ್ನಿಸಿ. ಅಸಹಜ ವರ್ತನೆಯಿಂದ ನಿಮ್ಮವರಿಗೆ ಸಿಟ್ಟು ಬರಬಹುದು. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಸಮಯವನ್ನು ನೀವು ನಿರೀಕ್ಷಿಸುವಿರಿ. ನಿಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ನೀವು ಇನ್ನೊಬ್ಬರಿಂದ ಕೇಳುವಿರಿ. ಮನೋರಂಜನೆ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ಕೆಲವು ವಿಚಾರಗಳನ್ನು ನಿರ್ಲಕ್ಷ್ಯ ಮಾಡಿ ಅವಕಾಶದಿಂದ ವಂಚಿತರಾಗುವಿರಿ. ನಿಮ್ಮ ರಹಸ್ಯ ಪ್ರೇಮವು ಬಯಲಾದೀತು.
ಕನ್ಯಾ: ಇನ್ನೊಬ್ಬರ ಆಲೋಚನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗುವಿರಿ. ನಿಮಗೆ ಇರುವ ಕಾರ್ಯಕುಶಲತೆಯನ್ನು ಮುಚ್ಚಿಕೊಳ್ಳುವರು. ಇನ್ನೊಬ್ಬರಿಗೆ ನೋವನ್ನು ಕೊಟ್ಟು ಅನಂತರ ಪಶ್ಚಾತ್ತಾಪಪಡುವಿರಿ. ಮನೆಯ ಕೆಲಸಕ್ಕೆ ಹಣವನ್ನು ಖರ್ಚು ಮಾಡಬೇಕಾದೀತು. ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡುವಿರಿ. ಒಳ್ಳೆಯ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ಹೆಚ್ಚಿನ ಆದಾಯದ ಉದ್ಯೋಗವನ್ನು ಹುಡುಕುತ್ತಿರುವಿರಿ. ನಿಮ್ಮ ಸರಳತೆಯು ಇತರರಿಗೆ ಪ್ರೇರಣೆಯಾದೀತು. ಪುತ್ರೋತ್ಸವದಲ್ಲಿ ನೀವು ಪಾಲ್ಗೊಳ್ಳುವಿರಿ.
ತುಲಾ: ಸಕಾಲಕ್ಕೆ ನಿಮಗೆ ಹಣವು ಸಿಗದೇ ವ್ಯವಹಾರದಲ್ಲಿ ಗೊಂದಲವಾದೀತು. ನೀವು ಅಂದುಕೊಂಡಂತೆ ನಿಮ್ಮ ಬದುಕು ಸಾಗುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಅವಶ್ಯಕ. ಹಿರಿಯರಿಂದ ನಿಮ್ಮ ಕೆಲಸಕ್ಕೆ ಕೆಲವು ಬೈಗುಳಗಳು ಸಿಗಬಹುದು. ಬಾಲಿಶ ಮಾತುಗಳನ್ನು ಕಡಿಮೆ ಮಾಡಿ. ಇಲ್ಲವಾದರೆ ಗೌರವವು ಕಡಿಮೆ ಆದೀತು. ಧಾರ್ಮಕಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗಬಹುದು. ನೀವು ಕೊಟ್ಟ ವಸ್ತುವನ್ನು ಮರೆತಿದ್ದು ಇಂದು ನೆನಪಾಗಿ ಅದನ್ನು ಹಿಂಪಡೆಯಲು ಪ್ರಯತ್ನಿಸುವಿರಿ. ನಿತ್ಯದ ಕಲಸವನ್ನೇ ಹೊಸ ರೀತಿಯಲ್ಲಿ ಮಾಡಲು ಇಚ್ಛಿಸುವಿರಿ.
ವೃಶ್ಚಿಕ: ನೂತನ ವಸ್ತುವಿನ ಖರೀದಿಯಿಂದ ಮೋಸಹೋಗಬಹುದು. ಅನಗತ್ಯ ವಸ್ತುಗಳನ್ನು ಖರೀದಿಸಿ ಬಂದ ಹಣವನ್ನು ಕಳೆದುಕೊಳ್ಳುವಿರಿ. ಮಕ್ಕಳಿಗೆ ಬೇಕಾದುದನ್ನು ಕೊಡಿಸುವಿರಿ. ಸ್ನೇಹಿತ ಜೊತೆ ಪ್ರವಾಸವನ್ನು ಯೋಜಿಸುವಿರಿ. ಮನೆಯ ವಾತಾವರಣದ ಕಾರಣ ಕಛೇರಿಯಲ್ಲಿ ಕೆಲಸದ ಮಾನಸಿಕತೆ ಇರದು. ಇಂದು ಉದ್ಯಮದ ಉದ್ಯೋಗಿಗಳನ್ನು ಕರೆದು ಹೊಸ ಯೋಜನೆಗಳನ್ನು ಪರಿಚಯಿಸುವಿರಿ. ಉದ್ಯೋಗಿಗಳಿಗೆ ಖುಷಿ ಆಗಿವಂತೆ ಮಾಡುವಿರಿ. ವಿವಾಹಕ್ಕೆ ನಿಮಗೆ ಮನಸ್ಸು ಇರದು. ಸ್ವತಂತ್ರವಾಗಿ ಇರಲು ನೀವು ಬಯಸಬಹುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ