AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಸಣ್ಣ ಕಲಹಗಳಾಗಬಹುದು ಎಚ್ಚರ!

Horoscope Today: ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಸಣ್ಣ ಕಲಹಗಳಾಗಬಹುದು ಎಚ್ಚರ!

ಪ್ರಸನ್ನ ಹೆಗಡೆ
|

Updated on: Jun 15, 2026 | 6:24 AM

Share

ಜೂನ್​​ 15, 2026 ಸೋಮವಾರದ ದೈನಿಕ ರಾಶಿ ಭವಿಷ್ಯವನ್ನು ಡಾ. ಬಸವರಾಜ ಗುರೂಜಿ ನೀಡಿದ್ದಾರೆ. ಅಮಾವಾಸ್ಯೆ, ಮಿಥುನ ಸಂಕ್ರಮಣದ ವಿಶೇಷತೆಯೊಂದಿಗೆ, ಪ್ರತಿಯೊಂದು ರಾಶಿಯವರಿಗೆ ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿ, ಕುಟುಂಬ, ಮತ್ತು ಸಂಬಂಧಗಳ ಮೇಲೆ ಗ್ರಹಗಳ ಪ್ರಭಾವವನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೆ ಶುಭ ಬಣ್ಣ, ದಿಕ್ಕು, ಅದೃಷ್ಟ ಸಂಖ್ಯೆ ಮತ್ತು ಪಠಿಸಬೇಕಾದ ಮಂತ್ರವನ್ನೂ ತಿಳಿಸಿದ್ದಾರೆ.

ಇಂದು ಪರಾಭವ ನಾಮ ಸಂವತ್ಸರ, ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯಾ ತಿಥಿ ಇರತಕ್ಕಂತದ್ದು. ಇಂದು ಎರಡು ವಿಶೇಷತೆಗಳಿವೆ. ರವಿಯು ಮಧ್ಯಾಹ್ನ 12:58ಕ್ಕೆ ಮಿಥುನ ರಾಶಿಗೆ ಪ್ರವೇಶಿಸುತ್ತಿದ್ದು, ಬುಧ ಗ್ರಹ ಅಲ್ಲಿಯೇ ಇರುವುದರಿಂದ ಬುಧಾದಿತ್ಯ ಯೋಗ ಸೃಷ್ಟಿಯಾಗಿದೆ. ಅಲ್ಲದೆ, ಅಧಿಕ ಜೇಷ್ಠ ಮಾಸದ ಅಮಾವಾಸ್ಯೆ ಇರುವುದರಿಂದ ಪಿತೃಗಳ ಸ್ಮರಣೆಗೆ ಮತ್ತು ಕಾಲಭೈರವ, ಶಿವ, ದುರ್ಗಾ ಆರಾಧನೆಗೆ ಇದು ಬಹಳ ಶ್ರೇಷ್ಠವಾದ ದಿನವಾಗಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More