ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ವೃದ್ಧಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 50 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 39 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:14 ರಿಂದ 03:42ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:51 ರಿಂದ 08:20ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:48 ರಿಂದ 11:17ರ ವರೆಗೆ.
ಮೇಷ ರಾಶಿ: ನಿಮ್ಮ ಸ್ನೇಹಿತರು ಅಹಿತಕರ ವರ್ತನೆಗೆ ಪ್ರೋತ್ಸಾಹಿಸಬಹುದು. ತಿರುಗಾಟದಲ್ಲಿ ವಿಶ್ರಾಂತಿಯ ಅಗತ್ಯವಿರುವುದು. ಯಾವುದೇ ಆಸೆಯಿಲ್ಲ ಎಲ್ಲವನ್ನೂ ಸ್ವೀಕರಿಸುವಿರಿ. ಸಂಗಾತಿಯ ನಡುವಿನ ಭಿನ್ನಾಭಿಪ್ರಾಯವು ದೂರವಾಗುವುದು. ಪ್ರೀತಿಯನ್ನು ಯಾರೆದರೂ ಪ್ರಕಟಿಸಲಾರಿರಿ. ಇಂದು ನಿಮ್ಮೊಳಗಿನ ಆತ್ಮವಿಶ್ವಾಸವೇ ಆಗಬೇಕಾದ ಕಾರ್ಯಗಳನ್ನು ಮಾಡಿಸಿಕೊಳ್ಳುವುದು. ಬೇಡವೆಂದು ಬಿಟ್ಟ ಕಾರ್ಯಗಳಿಂದಲೇ ಪ್ರಯೋಜನವಾದೀತು. ವಿದ್ಯಾರ್ಥಿಗಳಲ್ಲಿ ಉತ್ಸಾಹಿಗಳು ಎದ್ದು ಕಾಣಲಿವೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಹಿರಿಯರ ಭೇಟಿಯಿಂದ ಜೀವನಕ್ಕೆ ಹಲವು ಪ್ರಯೋಜನಗಳು ಆಗಲಿವೆ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ. ಸಣ್ಣ ಕಾರಣಕ್ಕೆ ಸ್ನೇಹವನ್ನು ಮುರಿದುಕೊಳ್ಳುವಿರಿ.
ವೃಷಭ ರಾಶಿ: ಇಂದು ನಿರಾಶೆಯ ಮನೋಭಾವವು ನಿಮ್ಮ ಅವಕಾಶಗಳಿಂದ ವಂಚಿಸಬಹುದು. ನಿಮ್ಮ ಆರ್ಥಿಕ ಭಾಗವು ಬಲಗೊಳ್ಳುವ ಸಾಧ್ಯತೆ ಇದೆ. ಮಾತುಗಳು ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು. ನೀವು ಕೆಲವು ಪ್ರವಾಸೀ ತಾಣಗಳಿಗೆ ತೆರಳುವುದರಿಂದ ನಿಮ್ಮ ಪ್ರೇಮ ಜೀವನವವು ಆಪ್ತವಾಗುವುದು. ನೀವು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದಂತೆ ಒತ್ತಡ ನಿಮ್ಮ ಮನಸ್ಸನ್ನು ಅವರಿಸುತ್ತದೆ. ಯಾರ ಸಹಕಾರವನ್ನೂ ಪಡೆಯದೇ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಹಣಕಾಸಿನ ತೊಂದರೆಯನ್ನು ಸರಿ ಮಾಡಿಕೊಳ್ಳುವ ಮಾರ್ಗದ ಅನ್ವೇಷಣೆ ಮಾಡುವಿರಿ. ನೀರಿನ ಭೀತಿಯು ಇರಲಿದೆ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಗುವುದು.
ಮಿಥುನ ರಾಶಿ: ಇಂದು ನಿಮಗೆ ಅಸಮಾಧಾನವನ್ನು ಉಂಟುಮಾಡಬಹುದಾದರೂ ಅದನ್ನು ನೀವು ಮಾಡಿಕೊಳ್ಳುವಿರಿ. ಅನವಶ್ಯಕವಾದ ಚಿಂತೆಗಳು ಮತ್ತು ಉದ್ವೇಗಗಳು ದೇಹದ ಮೇಲೆ ಪರಿಣಾಮ ಬೀರಬಹುದು. ಇಂದು ಭೂಮಿಗೆ ಸಂಬಂಧಿಸಿದ ಯಾವುದೇ ವಿಷಯಕ್ಕೆ ಹಣವನ್ನು ಖರ್ಚು ಮಾಡಬೇಕಾಗಿದೆ. ಏಕತಾನತೆಯನ್ನು ತಪ್ಪಿಸಿಕೊಳ್ಳಲು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಸಣ್ಣ ವ್ಯಾಪಾರಿಗಳಿಗೆ ಲಾಭದ ದಿನವಾಗಲಿದೆ. ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡುವುದಿಲ್ಲ ಬೇಸರವೂ ಇರುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸಿ ನೆಮ್ಮದಿ ಸಿಗುವುದು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟೀತು. ಎಲ್ಲ ವಿಚಾರಕ್ಕೂ ಸಿಟ್ಟು ಉಪಯೋಗಕ್ಕೆ ಬಾರದು. ಮಾತಗಳಲ್ಲಿ ವಕ್ರತೆಯನ್ನು ಕಡಿಮೆ ಮಾಡಿ.
ಕಟಕ ರಾಶಿ: ಇಂದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಅನುಭವಿಗಳ ಮಾರ್ಗದರ್ಶನವನ್ನು ಪಡೆಯುವಿರಿ. ನಿಮ್ಮ ಪ್ರತಿಭೆಯನ್ನು ಸರಿಯಾಗಿ ಇತರರು ಬಳಸಿಕೊಳ್ಳುವರು. ನಿಮ್ಮ ಜೀವನಸಂಗಾತಿಯನ್ನು ಹಲವು ದಿನಗಳ ಅನಂತರ ಭೇಟಿಮಾಡುವಿರಿ. ನೀವು ಇಂದು ಬಂಧುಗಳ ಸತ್ಯವನ್ನು ಅರಿತುಕೊಳ್ಳುತ್ತೀರಿ. ನಿಮ್ಮ ಪಾಲುದಾರರು ಅವರ ಮಾತು ನಡೆಸದಿದ್ದರೆ ಬೇಸರಿಸಿಕೊಳ್ಳಬೇಡಿ. ವಿವಾದವಿಲ್ಲದೇ ಇರಲಾರದಷ್ಟು ನಿಮ್ಮ ಮಾನಸಿಕ ಸ್ಥಿತಿ ಬದಲಾಗಿದೆ. ನಿಮ್ಮ ಸಕಾರಾತ್ಮಕ ಆಲೋಚನೆಗಳೂ ನಿಮಗೆ ಸಹಕಾರವನ್ನು ಕೊಡದು. ಕುಟುಂಬದಲ್ಲಿ ಜವಾಬ್ದಾರಿಯ ಸ್ಥಾನವನ್ನು ಪಡೆಯಬೇಕಾಗುವುದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಸಂಗಾತಿಯ ಮಾತಿನಿಂದ ಕೆಲವು ಮಾರ್ಪಾಡನ್ನು ಮಾಡಿಕೊಳ್ಳುವಿರಿ.
ಸಿಂಹ ರಾಶಿ: ಇಂದು ನೀವು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಖಿನ್ನರಾಗುವಿರಿ. ನೀವು ಸಂತೋಷದ ಬೆಲೆಯನ್ನು ಅರ್ಥಮಾಡಿಕೊಂಡಿರುವಿರಿ. ನಿಮ್ಮ ಮನಃಸ್ಥಿತಿಯನ್ನು ಬದಲಾಯಿಸಲು ಕೆಲವು ಸಾಮಾಜಿಕ ಸಮಾರಂಭಗಳಿಗೆ ಭೇಟಿಕೊಡಿ. ವಾಹನವನ್ನು ಚೆನ್ನಾಗಿ ಚಲಾಯಿಸಲು ಬಯಸುತ್ತಿದ್ದರೆ, ಆರ್ಥಕವಾದ ಸಬಲತೆಹೆ ಬಳಸಿಕೊಳ್ಳಿ. ತಮ್ಮ ಪ್ರೀತಿಪತ್ರರೊಡನೆ ಸಣ್ಣ ಪ್ರಯಾಣ ಕೈಗೊಳ್ಳುವಿರಿ. ನಿಮ್ಮ ಕೈಕೆಳಗಿನವರು ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡಿರದಿದ್ದರಿಂದ ನಿಮಗೆ ಅಸಮಾಧಾನವಾಗಬಹುದು. ಆದಾಯದಲ್ಲಿ ಇತರರಿಗೆ ಸಮಾನವಾಗಿದ್ದರೂ ಖರ್ಚು ಹಾಗಿರುವುದಿಲ್ಲ. ಏನಾದರೊಂದು ಹುಟ್ಟಿಕೊಳ್ಳುತ್ತದೆ. ಕುಟುಂಬಕ್ಕೆ ನಿಮ್ಮಿಂದ ಧನಸಹಾಯದ ಅಪೇಕ್ಷೆ ಇರುವುದು. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ಅವಸರವಸರವಾಗಿ ಇಂದಿನ ಕಾರ್ಯಗಳನ್ನು ಮಾಡುವಿರಿ.
ಕನ್ಯಾ ರಾಶಿ: ನಿಮ್ಮ ಆಕರ್ಷಕ ವರ್ತನೆಯು ಇತರರ ಗಮನ ಸೆಳೆಯುತ್ತದೆ. ಇಂದು ಸಾಲಗಾರನು ನಿಮಗೆ ಹೇಳದೆ ನಿಮಗೆ ಹಣವನ್ನು ನೀಡಬಹುದು. ನಿಮ್ಮ ಪ್ರೇಮದ ಸಂಗಾತಿ ನಿಮ್ಮನ್ನು ಹೊಗಳಬಹುದು. ಅವರನ್ನು ಏಕಾಂಗಿಯಾಗಿ ಬಿಡಬೇಡಿ. ಇಂದು ನೀವು ನಿಮ್ಮ ಗಳಿಕೆಯ ಶಕ್ತಿಯನ್ನು ಹೆಚ್ಚಿಸಲು ಶಕ್ತಿ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ನಿಮ್ಮ ವ್ಯಕ್ತಿತ್ವವು ಸಕಾರಾತ್ಮಕವಾಗಿ ಬೆಳೆಯುತ್ತಿರುವುದು ನಿಮಗೂ ಇತರರಿಗೂ ಸಂತೋಷದ ಸಂಗತಿಯಾಗಿದೆ. ಇಂದು ಆರಂಭಿಸಿದ ಕೆಲಸಗಳನ್ನು ಇಂದೇ ಮುಗಿಸುವಂತೆ ನೋಡಿಕೊಳ್ಳಿ. ಸಾಮಾಜಿಕ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರು ಇಂದು ಒತ್ತಡದಿಂದ ಇರುವರು. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಂಡರೂ ಉಳಿಸಿಕೊಳ್ಳುವುದು ಕಷ್ಟವಾದೀತು.
ತುಲಾ ರಾಶಿ: ನಿಮ್ಮ ಮನೆಯ ಸದಸ್ಯರಿಂದ ಹಣವನ್ನು ಸಾಲ ತೆಗೆದುಕೊಂಡಿದ್ದರೆ ಮರುಪಾವತಿಸಿ. ಇಲ್ಲವಾದರೆ ಸಂಬಂಧವು ಹಾಳಾಗಬಹುದು. ನಿಮ್ಮ ಹೊಸ ಯೋಜನೆಗಳು ಬಗ್ಗೆ ನಿಮ್ಮ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಒಳ್ಳೆಯದು. ಪ್ರೇಮದಲ್ಲಿ ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆ. ನಿಮ್ಮ ಚಟುವಟಿಕೆಯ ಕ್ಷೇತ್ರದಲ್ಲಿ ನೀವು ಅಪರಿಮಿತ ಯಶಸ್ಸು ಸಾಧಿಸುವಿರಿ. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮಗೆ ಶ್ರೇಯಸ್ಸನ್ನು ಕೊಟ್ಟೀತು. ಇಂದು ನಿಮ್ಮ ಭವಿಷ್ಯದ ಗುರಿಯನ್ನು ನಿರ್ಧಾರ ಮಾಡಿಕೊಳ್ಳುವುದು ಉತ್ತಮ. ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚು ಮಾಡುವಿರಿ. ಹತ್ತಿರದ ಬಂಧುಗಳ ಒಡನಾಟವು ಹೆಚ್ಚಿರಲಿದೆ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡುವಿರಿ.
ವೃಶ್ಚಿಕ ರಾಶಿ: ಇಂದು ನೀವು ಸುದೀರ್ಘವಾದ ಅನಾರೋಗ್ಯದಿಂದ ವಿಶ್ರಾಂತಿ ಪಡೆಯುವಿರಿ. ಆತ್ಮವಿಶ್ವಾಸವು ಪ್ರಯೋಜನಕ್ಕೆ ಬರಬಹುದು. ನಿಮ್ಮ ಮಕ್ಕಳ ಚಿಂತನೆಗಳನ್ನು ಬೆಂಬಲಿಸುವುದು ಅಗತ್ಯ. ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಮೂಲಕ ಮಾತ್ರ ನೀವು ನಿಮ್ಮ ಪತ್ನಿಗೆ ಭಾವನಾತ್ಮಕ ಬೆಂಬಲ ನೀಡುವಿರಿ. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಉದ್ಭವಿಸುವ ವಿರೋಧಕ್ಕೆ ವಿವೇಚನಾಯುಕ್ತರಾಗಿರಿ. ನಿಮ್ಮ ಆರ್ಥಿಕ ಯೋಜನೆಗಳು ದಾರಿ ತಪ್ಪಿ ಹೋಗಬಹುದು. ಕುಟುಂಬದ ಜೊತೆ ನಿಕಟ ಸಂಬಂಧವನ್ನು ಇಟ್ಟುಕೊಳ್ಳುವ ಮನಸ್ಸಾಗುವುದು. ಕಾರ್ಯಗಳಿಂದ ಹೆಚ್ಚಿನ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯಮದಲ್ಲಿ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗಿರುವುದು. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿ ಬಂದು ಮಾನಸಿಕ ಹಿಂಸೆಯಾದೀತು. ಮನೆಯಲ್ಲಿ ಜಗಳವಾಡಿ ನೀವು ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ.
ಧನು ರಾಶಿ: ನಿಮ್ಮ ಮನಸ್ಸಿನ ಸೌಂದರ್ಯವೇ ಇಂದು ಮುಖದಲ್ಲಿ ಪ್ರಕಟವಾಗುವುದು. ನಿಮ್ಮ ಸ್ನೇಹಿತರೊಬ್ಬರು ಇಂದು ಹಣವನ್ನು ಕೇಳಬಹುದು. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ. ನಿಮ್ಮ ಟೀಕೆಗಳಿಗೆ ತೀವ್ರರೂಪವನ್ನು ಪಡೆಯಬಹುದು. ನಿಮ್ಮನ್ನು ದೀರ್ಘಕಾಲ ಹಿಡಿದಿಟ್ಟಿರುವ ಒಂದು ಏಕಾಂಗಿತನ ದೂರವಾಗುವುದು. ನೀವು ಸಂಗಾಯಿಂದ ಕೆಲವು ಅಸಮಾಧಾನವನ್ನು ಪಡೆಯುವಿರಿ. ಉದ್ಯೋಗಕ್ಕೆ ಸೇರಲು ಬಹಳ ಶ್ರಮಪಡಬೇಕಾದೀತು. ವಿದ್ಯಾಭ್ಯಾಸಕ್ಕೆ ಅತಿಯಾದ ಹಣಕಾಸಿನ ಖರ್ಚು ಬರಲಿದ್ದು, ನಿಮಗೆ ಕಷ್ಟವಾಗುವುದು. ಅಸೂಯೆಯಿಂದಾಗಿ ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕವಾಗಿ ಧನಲಾಭವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಮನಸ್ಸಿನ ಸ್ಥಿರತೆಯಲ್ಲಿ ಅಭಾವವಿದ್ದು ನಿಮ್ಮ ಗುರಿಯೂ ಬದಲಾಗುವುದು. ಪ್ರೇಮವು ಕೊನೆಗೂ ಅಂದುಕೊಂಡಂತೆ ಆಗಲಿದೆ. ಇಂದು ಖುಷಿಯಿಂದ ಹಣವನ್ನು ಖರ್ಚು ಮಾಡುವಿರಿ.
ಮಕರ ರಾಶಿ: ಇಂದು ನೀವು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ನಿಮ್ಮ ಸಮಯವನ್ನು ಕೊಡುವಿರಿ. ಇಂದು ನೀವು ಯಾರಿಗೂ ಸಾಲ ನೀಡಬೇಡಿ. ಕೊಡುವುದು ಅಗತ್ಯವಾಗಿದ್ದರೆ ದಾಖಲೆಯನ್ನು ಇಟ್ಟುಕೊಡಿ. ನೀವು ಕೆಲಸದ ಜಾಗದಲ್ಲಿ ಅತಿಯಾಗಿ ಶ್ರಮಪಡುವುದರಿಂದ ಕೌಟುಂಬಿಕ ಅಗತ್ಯಗಳು ನಿರ್ಲಕ್ಷಿತವಾಗಬಹುದು. ಪ್ರಣಯದಿಂದ ನಿಮ್ಮ ಹೃದಯವು ಅರಳುವುದು. ಯಾವುದೇ ಧಾರ್ಮಿಕ ಸ್ಥಳದಲ್ಲಿ ನಿಮ್ಮ ಸಮಯವನ್ನು ಕಳೆಯಬಹುದು. ಇಂದು ನಿಮಗೆ ರಾಜಕೀಯ ವ್ಯಕ್ತಿಗಳ ಭೇಟಿಯಾಗುವುದು. ನಿಮ್ಮ ಸಾರ್ವಜನಿಕ ಸಂಪರ್ಕದ ವ್ಯಾಪ್ತಿಯೂ ವಿಶಾಲವಾಗುವುದು. ಮಾರುಕಟ್ಟೆಗೆ ಸಂಬಂಧಿತ ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಹೊಸಬರನ್ನು ಸಾಮಾಜಿಕ ತಾಣದಲ್ಲಿ ಪರಿಚಯ ಮಾಡಿಕೊಳ್ಳುವಿರಿ. ತಂದೆಯ ಮಾತನ್ನು ಉಳಿಸಿಕೊಳ್ಳಲು ನಿಮ್ಮ ಶ್ರಮವು ಬಳಕೆಯಾಗುವುದು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ವಿಚಲಿತವಾಗುವುದು. ಸ್ವಂತ ಶ್ರಮದಿಂದ ಗಳಿಸಿದ್ದು ನಿಮಗೆ ಆಪ್ತವೆನಿಸಲಿದೆ.
ಕುಂಭ ರಾಶಿ: ನಿಮ್ಮಲ್ಲಿ ಇಂದು ಚುರುಕುತನವಿರುವುದು. ನಿಮ್ಮ ಆರೋಗ್ಯವು ಇಂದು ನಿಮಗೆ ಸಹಕಾರಿಯಾಗಲಿದೆ. ಹಣವನ್ನು ಉಳಿಸುವ ನಿಮ್ಮ ಬಯಕೆ ಇಂದು ಪೂರ್ಣಗೊಳ್ಳಬಹುದು. ಧಾರ್ಮಿಕ ಸ್ಥಳಕ್ಕೆ ಭೇಟಿ ನಿಮ್ಮ ಮನಸ್ಸಿಗೆ ಶಾಂತಿಯನ್ನು ಕೊಡಬಹುದು. ನಿಮ್ಮ ಪ್ರೇಮ ಸಂಗಾತಿ ನಿಮಗೆ ಅಪರೂಪದದ್ದನ್ನು ಕೊಡಬಹುದು. ಮಹಿಳಾ ಸದಸ್ಯರು ನಿಮ್ಮ ಕ್ಷೇತ್ರದಲ್ಲಿನ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸುತ್ತಾರೆ. ನೀವು ಇಂದು ಜನರೊಡನೆ ಬೆರೆಯಲು ಬಿಡುವಿನ ವೇಳೆಯನ್ನು ಹೊಂದಿದ್ದೀರಿ. ಏನಾದರೂ ಅವಘಡಗಳು ಸಂಭವಿಸಬಹುದು. ವೈವಾಹಿಕ ಸಂಬಂಧಗಳಲ್ಲಿ ಮಾಧುರ್ಯವು ಇರಲಿದೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆಯು ದೂರಾಗುವುದು. ಉತ್ತಮ ಸ್ಥಳವು ಸಿಕ್ಕಿದ್ದು ನಿಮಗೆ ಖುಷಿಯೂ ಆಗುವುದು. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ಪ್ರೀತಿಗೆ ಯೋಗ್ಯರನ್ನು ಹುಡುಕುವಿರಿ. ವಿದ್ಯಾಭ್ಯಾಸದ ಪ್ರಗತಿಯಿಂದ ಮನೆಯಲ್ಲಿ ಖುಷಿ ಇರಲಿದೆ. ನಿಮ್ಮ ಒರಟಾದ ಮಾತು ನೌಕರರು ಸಿಟ್ಟಾಗುವಂತೆ ಮಾಡುವುದು.
ಮೀನ ರಾಶಿ: ಇಂದು ನಿಮ್ಮ ಹಳೆಯ ಸ್ನೇಹಿತನು ಇಂದು ವ್ಯಾಪಾರದಲ್ಲಿ ಲಾಭ ಗಳಿಸಲು ನಿಮಗೆ ಸಲಹೆ ನೀಡಬಹುದು. ನೀವು ಭರವಸೆಯಿಡಬಹುದಾದ ಯಾರಾದರೂ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ನಿಮ್ಮ ಕನಸುಗಳು ಹಾಗೂ ವಾಸ್ತವವು ಪ್ರೀತಿಯ ಭಾವಪರವಶತೆಯಲ್ಲಿ ಇಂದು ಸೇರಿಹೋಗುತ್ತವೆ. ಕೆಲಸದಲ್ಲಿ ಜನರ ಮುಂದಾಳತ್ವ ವಹಿಸಿ ನಿಮ್ಮ ಪ್ರಾಮಾಣಿಕತೆ ಪ್ರಗತಿ ಹೊಂದಲು ನಿಮಗೆ ಸಹಾಯ ಮಾಡುತ್ತದೆ. ಸಂತಸದ ಪ್ರಯಾಣ ತೃಪ್ತಿಕರವಾಗಿರುತ್ತದೆ. ನಿಮ್ಮ ಮದುವೆ ಈ ದಿನ ಒಂದು ತಿರುವನ್ನು ತೆಗೆದುಕೊಳ್ಳುತ್ತದೆ. ವೃತ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ ಕಛೇರಿಯಲ್ಲಿ ಹೆಚ್ಚಿನ ಕೆಲಸದ ಕಾರಣ ಹೆಚ್ಚುವರಿ ಸಮಯವನ್ನು ನೀಡಬೇಕಾಗಬಹುದು. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದೇ ಪರಸ್ಪರ ಕಲಹವಾಗಬಹುದು. ನಿಮ್ಮ ಗುರಿಯ ಬಗ್ಗೆ ವಿಶ್ವಾಸವು ನಿಮಗಿರಲಿ. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಮನೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜೀವನ ಸಂಗಾತಿಯು ಸಂಪೂರ್ಣ ಬೆಂಬಲವನ್ನು ನೀಡುತ್ತಾನೆ. ನಿಮ್ಮ ಮೇಲೆ ಹಿತಶತ್ರುಗಳು ಬೇಕಂತಲೇ ಆರೋಪವನ್ನು ಮಾಡಬಹುದು.
ಲೋಹಿತ ಹೆಬ್ಬಾರ್ – 8762924271 (what’s app only)