Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ಅಪರಿಚಿತ ವ್ಯಕ್ತಿಯ ಸ್ನೇಹವಾಗಲಿದೆ, ಈ ಸ್ನೇಹ ಪ್ರೇಮಕ್ಕೆ ತಿರುಗಬಹುದು

| Updated By: Rakesh Nayak Manchi

Updated on: Jul 01, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 1) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ಅಪರಿಚಿತ ವ್ಯಕ್ತಿಯ ಸ್ನೇಹವಾಗಲಿದೆ, ಈ ಸ್ನೇಹ ಪ್ರೇಮಕ್ಕೆ ತಿರುಗಬಹುದು
ಇಂದಿನ ರಾಶಿಭವಿಷ್ಯ
Image Credit source: Getty Images
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 1 ರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶುಭ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:59 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:13 ರಿಂದ 03:50 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:08 ರಿಂದ 07:45 ರ ವರೆಗೆ.

ಧನು: ಸ್ವಾವಲಂಬಿಯಾಗಲು ನಿಮಗೆ ಇಷ್ಟವಿದ್ದರೂ ಅದನ್ನು ಮಾಡಲಾಗದು. ನೀವು ಎಲ್ಲವನ್ನೂ ಹೇಳಬೇಕು ಎಂದು ಅಂದುಕೊಂಡರೂ ನಿಮಗೆ ಹೇಳಲಾಗದೇ ದುಃಖವು ಬರಬಹುದು. ಅಪರಿಚಿತ ವ್ಯಕ್ತಿಯ ಸ್ನೇಹವಾಗಲಿದೆ. ಅದು ಪ್ರೇಮವಾಗಿ ಬದಲಾಗಬಹುದು. ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ‌ ಮೇಲಿಟ್ಟ ವಿಶ್ವಾಸವು ಭಂಗವಾಗುವುದು ಬೇಡ. ವ್ಯಾಪಾರವನ್ನು ನಿಮ್ಮ ಮಿತಿಯಲ್ಲಿ ಮಾಡಿ. ಆರ್ಥಿಕವಾಗಿ ಸುಧಾರಣೆ ಮಾಡಿಕೊಳ್ಳಲು ನಿಮಗೆ ದಾರಿಗಳು ಸಿಗಬಹುದು. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡುವುದು ಮುಖ್ಯ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರವಾಗಬಹುದು.

ಮಕರ: ಹಿರಿಯರಿಂದ ನಿಮಗೆ ಪ್ರಶಂಸೆ ಸಿಗಲಿದೆ‌. ನೀವಾಡುವ ಸತ್ಯದ ಮಾತಿನಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು. ಬದಲಾವಣೆಯನ್ನು ನೀವು ಅತಿಯಾಗಿ ಮಾಡಿ ಎಲ್ಲರಿಂದ ಬೈಸಿಕೊಳ್ಳಬೇಕಾಗಬಹುದು. ನಿಮ್ಮ ದಿನಚರ್ಯೆಯಿಂದ ನಿಮ್ಮ ಆರೋಗ್ಯಕ್ಕೆ ಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವು ಇರಬಹುದು. ಆಪ್ತರನ್ನು ನೀವು ಕಳೆದೊಳ್ಳುವ ಸಂಭವವಿದೆ. ಅಧಿಕ ಒತ್ತಡವು ಕಂಡು ಬಂದಲ್ಲಿ ಸ್ವಲ್ಪಕಾಲ ಏಕಾಂತದಲ್ಲಿ ಇರಿ.‌ ಅವಶ್ಯಕತೆಗಷ್ಟೇ ಆಹಾರವನ್ನು ಸ್ವೀಕರಿಸಿ. ಇಲ್ಲವಾದರೆ ಅನಾರೋಗ್ಯ ಉಂಟಾಗಬಹುದು‌. ‌

ಕುಂಭ: ಹಣದ ಹೂಡಿಕೆಯನ್ನು ಸರಿಯಾದ ಕಡೆ ಸರಿಯಾ ಮಾಹಿತಿಯನ್ನು ಪಡೆದು ಮಾಡಿ. ವಂಚನೆಯ ಜಾಲಕ್ಕೆ ಸಿಕ್ಕಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗಬಹುದು. ನಡೆಸಿದ ಪತ್ರವ್ಯವಹಾರದಿಂದಲೇ ಇಂದು ನಿಮಗೆ ಜಯ ಲಭಿಸಲಿದೆ. ನಿಮ್ಮ ಮಾತನ್ನು ಯಾರೂ ಪಾಲಿಸರು ಎಂಬ ಬೇಸರ ಇರಲಿದೆ. ನಿಮ್ಮ ಅವಲೋಕನ ಅತ್ಯಗತ್ಯ. ನಿಮ್ಮ ನೇರ ಮಾತು ಇನ್ನೊಬ್ಬರಿಗೆ ನೋವಾಗಬಹುದು. ಮನಸ್ಸಿನ ಉದ್ವೇಗವನ್ನು ತಡೆಯಲು ಪ್ರಯತ್ನಿಸಬಹುದು. ಸ್ಪರ್ಧೆಯಲ್ಲಿ ನಿಮ್ಮ ತೊಡಗುವಿಕೆ ಕಡಿಮೆಯಾಗಿ ಸೋಲುವಿರಿ. ಜನರ ಜೊತೆ ಬೆರೆಯುವಿಕೆ ಕಡಿಮೆ ಆಗಬಹುದು.

ಮೀನ: ಎಲ್ಲ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿಯು ಒಂದೇ ರೀತಿಯಲ್ಲಿ ಇರದು. ಸಂಗಾತಿಯ ಮಾತುಗಳು ನಿಮ್ಮನ್ನು ಚುಚ್ಚಿದಂತೆ ಆಗುವುದು. ಚಿಂತೆಯಿಂದ ಹೊರಬರಲು ದಾರಿಗಳನ್ನು ಹುಡುಕಿಕೊಳ್ಳುವಿರಿ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ನಂಬಿಕೆ ಬರುವಂತೆ ಕೆಲಸವನ್ನು ಮಾಡುವಿರಿ. ಹಣದ ವಿಚಾರದಲ್ಲಿ ಪಾದರ್ಶಕತೆ ಇರಲಿ. ನಿಮ್ಮ ಆಯ್ಕೆಯ ವಿಚಾರದಲ್ಲಿ ಆಪ್ತರನ್ನು ಕೇಳಿ ಸರಿ ಮಾಡಿಕೊಳ್ಳುವಿರಿ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು. ಅತಿಯಾದ ಚಿಂತೆಯಲ್ಲಿ ಮನಸ್ಸನ್ನು ಹಾಳುಮಾಡಿಕೊಳ್ಳಬೇಡಿ.

-ಲೋಹಿತಶರ್ಮಾ