AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope 01 July: ಈ ರಾಶಿಯವರು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ

ಇಂದಿನ (2023 ಜುಲೈ​ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 01 July: ಈ ರಾಶಿಯವರು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jul 04, 2023 | 11:18 AM

Share

ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ​ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶುಭ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:59 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:13 ರಿಂದ 03:50 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:08 ರಿಂದ 07:45 ರ ವರೆಗೆ.

ಮೇಷ: ನಿಮ್ಮಿಂದ ಆಗಬೇಕಾದ ಕೆಲಸಗಳು ಬಹಳ ಇದ್ದರೂ ಯಾವುದೇ ಚಿಂತೆ ಇಲ್ಲದೇ ಇರುವಿರಿ. ಆಪ್ತರು ನಿಮ್ಮಿಂದ ದೂರವಾಗಬಹುದು. ಇದು ನಿಮ್ಮನ್ನು ವಿಚಲಿತ ಗೊಳಿಸಬಹುದು. ನಿಮ್ಮನ್ನು ಬಳಸಿಕೊಳ್ಳುವ ಜನರಿದ್ದಾರೆ. ಆದಷ್ಟು ಎಚ್ಚರಿಕೆಯಿಂದ ವ್ಯವಹರಿಸಿ. ನಿಮ್ಮ ಅಂತರಂಗವನ್ನು ನೀವು ತಿಳಿದುಕೊಳ್ಳುವ ಅವಶ್ಯಕತೆ ಇದೆ. ನೀವು ಯಾರನ್ನಾದರೂ ಬಹಳ ಇಷ್ಟಪಡುವಿರಿ. ಮನೆಯಿಂದ ದೂರವಿರಲು ನೀವು ಬಯಸುವಿರಿ. ಉದ್ಯೋಗದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರುವುದು. ಮನೆಯ ಚಿಂತೆಯೂ ನಿಮ್ಮನ್ನು ಕಾಡಬಹುದು. ಕೆಲಸದ ವಿಚಾರದಲ್ಲಿ ಉಭಯ ಸಂಕಟವಾಗಬಹುದು.

ವೃಷಭ: ನಿಮಗೆ ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವಿರಿ. ಪ್ರೀತಿಯನ್ನು ಒಡೆಯಲು ನೀವು ಬಹಳ ಹಾತೊರೆಯುವಿರಿ. ಸಣ್ಣ ವ್ಯಾಪರವು ಲಾಭದಾಯಕವಾಗಲಿದೆ. ಕೊಟ್ಟ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ಮಾಡುವಿರಿ. ನಿಮಗೆ ಭವಿಷ್ಯವನ್ನು ನಿರ್ಧರಿಸಲು ಕಷ್ಟವಾದೀತು. ಇಂದಿನ ನಿಮ್ಮ ಸಮಯವು ಸದುಪತೋಗವಾಗಲಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸತನ್ನು ಮಾಡಲು ಯತ್ನಿಸುವಿರಿ. ಹೊಸ ಗೆಳೆಯರ ಸಹವಾಸ ನಿಮಗೆ ಆಗಲಿದೆ. ನಿಮ್ಮ ನಿಲುವನ್ನು ಸ್ವಲ್ಪ ಸಡಿಲ ಮಾಡಿಕೊಳ್ಳಬೇಕಾದೀತು. ಮನೆಯವರ ಜೊತೆ ದೇವಾಲಯಕ್ಕೆ ಹೋಗುವಿರಿ.

ಮಿಥುನ: ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ತಾಯಿಯಿಂದ ನಿಮಗೆ ಹಿತವಚನವು ಸಿಗಬಹುದು. ಪ್ರೀತಿಯನ್ನು ಉಳಿಸಿಕೊಳ್ಳಲು ನೀವು ಪ್ರಯತ್ನಶೀಲರಾಗುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ನಿಮ್ಮ ಕ್ರಮವು ಬಹಳ ಚೆನ್ನಾಗಿರುವುದು. ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದು ಬೇಡ. ತಾಳ್ಮೆಯ ಪರೀಕ್ಷೆ ಇಂದು ಆಗಬಹುದು. ಮೇಲಧಿಕಾರಿಗಳ ಪ್ರಶಂಸೆ ನಿಮಗೆ ಉತ್ಸಾಹವನ್ನು ಹೆಚ್ಚು ಮಾಡುವುದು. ಅನವಶ್ಯಕ ಖರ್ಚನ್ನು ನೀವು ನಿಯಂತ್ರಿಸುವಿರಿ. ಎಲ್ಲ ವಿಚಾರವನ್ನೂ ನೀವು ಕೇಳಲು ಇಚ್ಛಿಸುವಿರಿ. ದೈವಭಕ್ತಿಯು ಕಡಿಮೆ ಆಗಲಿದೆ. ಶ್ರಮದ ಕೆಲಸಕ್ಕೆ ನೀವು ಹೋಗುವುದಿಲ್ಲ.

ಕಟಕ: ಅಧಿಕ ಒತ್ತಡದಿಂದ ಕೆಲಸವು ನಿಮಗೆ ಸೂಚಿಸದೇ ಹೋಗಬಹುದು. ಸಜ್ಜನರ ಸಹವಾಸದಿಂದ ನಿಮ್ಮಲ್ಲಿ ಸಣ್ಣ ಬದಲಾವಣೆ ಆಗಲಿದೆ. ಕಬ್ಬಿಣದ ವ್ಯಾಪರವು ನಿಮಗೆ ಲಾಭದಾಯಕವಾಗಬುಹುದು. ವೃತ್ತಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿಬರಬಹುದು. ಸಿಗಬೇಕಾದವರು ನಿಮ್ಮಿಂದ ದೂರವಾಗಬಹುದು. ಯಥೇಚ್ಛವಾಗಿ ಆಹಾರವನ್ನು ಸ್ವೀಕರಿಸುವಿರಿ. ಮನೆಗೆ ಬಂದವರಿಗೆ ಒಳ್ಳೆಯ ಆತಿಥ್ಯವನ್ನು ಕೊಡಿ. ವಿದ್ಯಾಭ್ಯಾಸದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ಅತಿಯಾದ ಮಾತು ಕಿರಿಕಿರಿಯನ್ನು ಕೊಟ್ಟೀತು. ಕೆಲವು ಸಂಭವನೀಯತೆಯನ್ನು ನೀವು ಊಹಿಸುವಿರಿ.

ಸಿಂಹ: ಅದೃಷ್ಟವನ್ನು ನೀವು ಹುಡುಕಿಕೊಂಡು ಹೋಗಬೇಡಿ. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ನಿಮಗೆ ಹೆಚ್ಚಿನ ಆದಾಯದ ಅವಶ್ಯಕತೆ ಇರಲಿದೆ. ಅದಕ್ಕಾಗಿ ನೀವು ಏನನ್ನಾದರೂ ಆದಾಯದ ಮೂಲವನ್ನು ಪಡೆದುಕೊಳ್ಳಬೇಕಾಗುವುದು. ಹೊಸತನ್ನು ಯೋಚಿಸಿ ಅದನ್ನು ಕ್ರಿಯಾರೂಪಕ್ಕೆ ತೆಗೆದುಕೊಂಡು ಬನ್ನಿ. ಉದ್ಯೋಗದ ಸ್ಥಳದಲ್ಲಿ ನೀವು ಬಹಳ ಶಿಸ್ತಿನಿಂದ ಕೆಲಸವನ್ನು ಮಾಡುವಿರಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಲು ಸಮಯವನ್ನು ಕೊಡುವಿರಿ. ಸಂಗಾತಿಯು ನಿಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವಳು.

ಕನ್ಯಾ: ಆಗಿಹೋದ ವಿಷಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಿರಿ. ಪ್ರಯಾಣವು ಇಂದು ಕಷ್ಟಕರವಾಗಬಹುದು. ಅನೇಕ ವಿಷಯಗಳತ್ತ ನಿಮ್ಮ ಗಮನವಿರಲಿದ್ದು ಯಾವುದುನ್ನೂ ಸರಿಯಾಗಿ‌ ಪೂರ್ಣ ಮಾಡುವುದಿಲ್ಲ. ದೂರದ ಮಿತ್ರರು ನಿಮಗೆ ಅಗತ್ಯವಿರುವ ಸಹಕಾರವನ್ನು ನೀಡಬಹುದು. ಹೆಚ್ಚು ಪರಿಶ್ರಮದಿಂದ ಕೆಲಸವನ್ನು ಮಾಡುವಿರಿ. ಯಾರ ಸಹಕಾರವನ್ನೂ ಬಯಸದೇ ನಿಮ್ಮ ಜವಾಬ್ದಾರಿಯಲ್ಲಿ ನೀವು ಇರುವಿರಿ. ಸಮಯವನ್ನು ವ್ಯರ್ಥ ಮಾಡಿ ಸಂಕಟಪಡುವಿರಿ. ದಾನ‌ ಮಾಡುವ ಮನಸ್ಸು ನಿಮಗೆ ಇರದು. ಅವಕಾಶವನ್ನು ಬಿಟ್ಟಕೊಂಡು ದುಃಖಿಸುವಿರಿ. ಮಕ್ಕಳಿಂದ ಅಲ್ಪ ಸಂತೋಷವು ಸಿಗಬಹುದು.

ತುಲಾ: ಸಂಗಾತಿಯ ವಿಚಾರವಾಗಿ ನೀವು ಹೆಚ್ಚು ಚಿಂತಯಲ್ಲಿ ಇರುವಿರಿ. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ, ಕೃತಿಯಲ್ಲಿ ನಿಮ್ಮ ಕೆಲಸವಿರಲಿ. ಇಂದು ಹೆಚ್ಚಿನ ಸಮಯವನ್ನು ನೀವು ಖರೀದಿಗೆಂದು ತೆಗೆದಿಡುವಿರಿ. ನಿಮಗೆ ಅಂಟಿದ ಅಪವಾದವು ನಿರಾಧಾರ ಎಂದು ಸಾಬೀತಾಗಬಹುದು. ಸಮಯಸ್ಫೂರ್ತಿಯಿಂದ ತೊಂದರೆಯ ಸನ್ನಿವೇಶವನ್ನು ದಾಟುವಿರಿ. ಸುಮ್ಮನೇ ಅನುಮಾನದಿಂದ ಸ್ನೇಹವನ್ನು ಹಾಳುಮಾಡಿಕೊಳ್ಳಬಹುದು. ಸಿಗಬೇಕಾದ ಸಮಯಕ್ಕೆ ಗೌರವವು ಸಿಗಲಿದೆ. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ.

ವೃಶ್ಚಿಕ: ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ಅನಿವಾರ್ಯವಾಗಿ ಮಾಡುವಿರಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಸಂಕೋಚದ ಸ್ವಭಾವವು ನಿಮ್ಮ ಅನೇಕ ಸಮಸ್ಯೆಗಳನ್ನು ಹಾಗೆಯೇ ಉಳಿಸುತ್ತದೆ. ಸಂಬಂಧಗಳನ್ನು ನೀವು ಇಂದು ಬಿಡಲು ಪ್ರಯತ್ನಿಸುವಿರಿ. ವಾಹನ ಸಂಚಾರಕ್ಕೆ ನಿಮಗೆ ತೊಂದರೆಯಾಗಬಹುದು. ನಿಮ್ಮ ಪ್ರಯಾಣದ ಯೋಜನೆಯನ್ನು ಬದಲಿಸಿಕೊಳ್ಳುವುದು ಉತ್ತಮ. ಹಣದ ಕೊರತೆಯನ್ನು ನೀವು ಸ್ವಲ್ಪಮಟ್ಟಿಗೆ ನೀಗಿಸಿಕೊಳ್ಳುವಿರಿ. ಶುಭ ಸುದ್ದಿಯು ನಿಮಗೆ ಸ್ವಲ್ಪ ಸಂತೋಷವನ್ನು ತರಬಹುದು. ಮಕ್ಕಳ‌ ಜೊತೆ ಇರುವಿರಿ.

ಧನು: ಸ್ವಾವಲಂಬಿಯಾಗಲು ನಿಮಗೆ ಇಷ್ಟವಿದ್ದರೂ ಅದನ್ನು ಮಾಡಲಾಗದು. ನೀವು ಎಲ್ಲವನ್ನೂ ಹೇಳಬೇಕು ಎಂದು ಅಂದುಕೊಂಡರೂ ನಿಮಗೆ ಹೇಳಲಾಗದೇ ದುಃಖವು ಬರಬಹುದು. ಅಪರಿಚಿತ ವ್ಯಕ್ತಿಯ ಸ್ನೇಹವಾಗಲಿದೆ. ಅದು ಪ್ರೇಮವಾಗಿ ಬದಲಾಗಬಹುದು. ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ‌ ಮೇಲಿಟ್ಟ ವಿಶ್ವಾಸವು ಭಂಗವಾಗುವುದು ಬೇಡ. ವ್ಯಾಪಾರವನ್ನು ನಿಮ್ಮ ಮಿತಿಯಲ್ಲಿ ಮಾಡಿ. ಆರ್ಥಿಕವಾಗಿ ಸುಧಾರಣೆ ಮಾಡಿಕೊಳ್ಳಲು ನಿಮಗೆ ದಾರಿಗಳು ಸಿಗಬಹುದು. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡುವುದು ಮುಖ್ಯ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರವಾಗಬಹುದು.

ಮಕರ: ಹಿರಿಯರಿಂದ ನಿಮಗೆ ಪ್ರಶಂಸೆ ಸಿಗಲಿದೆ‌. ನೀವಾಡುವ ಸತ್ಯದ ಮಾತಿನಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು. ಬದಲಾವಣೆಯನ್ನು ನೀವು ಅತಿಯಾಗಿ ಮಾಡಿ ಎಲ್ಲರಿಂದ ಬೈಸಿಕೊಳ್ಳಬೇಕಾಗಬಹುದು. ನಿಮ್ಮ ದಿನಚರ್ಯೆಯಿಂದ ನಿಮ್ಮ ಆರೋಗ್ಯಕ್ಕೆ ಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವು ಇರಬಹುದು. ಆಪ್ತರನ್ನು ನೀವು ಕಳೆದೊಳ್ಳುವ ಸಂಭವವಿದೆ. ಅಧಿಕ ಒತ್ತಡವು ಕಂಡು ಬಂದಲ್ಲಿ ಸ್ವಲ್ಪಕಾಲ ಏಕಾಂತದಲ್ಲಿ ಇರಿ.‌ ಅವಶ್ಯಕತೆಗಷ್ಟೇ ಆಹಾರವನ್ನು ಸ್ವೀಕರಿಸಿ. ಇಲ್ಲವಾದರೆ ಅನಾರೋಗ್ಯ ಉಂಟಾಗಬಹುದು‌. ‌

ಕುಂಭ: ಹಣದ ಹೂಡಿಕೆಯನ್ನು ಸರಿಯಾದ ಕಡೆ ಸರಿಯಾ ಮಾಹಿತಿಯನ್ನು ಪಡೆದು ಮಾಡಿ. ವಂಚನೆಯ ಜಾಲಕ್ಕೆ ಸಿಕ್ಕಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗಬಹುದು. ನಡೆಸಿದ ಪತ್ರವ್ಯವಹಾರದಿಂದಲೇ ಇಂದು ನಿಮಗೆ ಜಯ ಲಭಿಸಲಿದೆ. ನಿಮ್ಮ ಮಾತನ್ನು ಯಾರೂ ಪಾಲಿಸರು ಎಂಬ ಬೇಸರ ಇರಲಿದೆ. ನಿಮ್ಮ ಅವಲೋಕನ ಅತ್ಯಗತ್ಯ. ನಿಮ್ಮ ನೇರ ಮಾತು ಇನ್ನೊಬ್ಬರಿಗೆ ನೋವಾಗಬಹುದು. ಮನಸ್ಸಿನ ಉದ್ವೇಗವನ್ನು ತಡೆಯಲು ಪ್ರಯತ್ನಿಸಬಹುದು. ಸ್ಪರ್ಧೆಯಲ್ಲಿ ನಿಮ್ಮ ತೊಡಗುವಿಕೆ ಕಡಿಮೆಯಾಗಿ ಸೋಲುವಿರಿ. ಜನರ ಜೊತೆ ಬೆರೆಯುವಿಕೆ ಕಡಿಮೆ ಆಗಬಹುದು.

ಮೀನ: ಎಲ್ಲ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿಯು ಒಂದೇ ರೀತಿಯಲ್ಲಿ ಇರದು. ಸಂಗಾತಿಯ ಮಾತುಗಳು ನಿಮ್ಮನ್ನು ಚುಚ್ಚಿದಂತೆ ಆಗುವುದು. ಚಿಂತೆಯಿಂದ ಹೊರಬರಲು ದಾರಿಗಳನ್ನು ಹುಡುಕಿಕೊಳ್ಳುವಿರಿ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ನಂಬಿಕೆ ಬರುವಂತೆ ಕೆಲಸವನ್ನು ಮಾಡುವಿರಿ. ಹಣದ ವಿಚಾರದಲ್ಲಿ ಪಾದರ್ಶಕತೆ ಇರಲಿ. ನಿಮ್ಮ ಆಯ್ಕೆಯ ವಿಚಾರದಲ್ಲಿ ಆಪ್ತರನ್ನು ಕೇಳಿ ಸರಿ ಮಾಡಿಕೊಳ್ಳುವಿರಿ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು. ಅತಿಯಾದ ಚಿಂತೆಯಲ್ಲಿ ಮನಸ್ಸನ್ನು ಹಾಳುಮಾಡಿಕೊಳ್ಳಬೇಡಿ.

-ಲೋಹಿತಶರ್ಮಾ 8762924271 (what’s app only))

Published On - 12:02 am, Sat, 1 July 23

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!