ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 22 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ : ಮೃಗಶಿರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಚತುರ್ಥೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ : ಹರ್ಷಣ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:11 ರಿಂದ 03:48ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:06 ರಿಂದ 07:43ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:20 ರಿಂದ 10:57ರ ವರೆಗೆ.
ಧನುಸ್ಸು: ನೂತನ ಉದ್ಯೋಗವನ್ನು ಅರಸುತ್ತಿರುವಿರಿ. ಸಿಗದೇ ನೀವೂ ಕಂಗಾಲಗಬಹುದು. ಈಗಾಗಲೇ ಉದ್ಯೋಗದಲ್ಲಿ ಇರುವವರು ವೇತನವನ್ನು ಹೆಚ್ಚಿಸಲು ವಿನಂತಿಸಲಿದ್ದೀರಿ. ನಿಮ್ಮದೇ ಆದ ವ್ಯಕ್ತಿತ್ವವು ನಿಮಗೆ ಗೌರವವನ್ನು ತರಿಸಬಹುದು. ದುರ್ಘಟನೆಯನ್ನು ಮನಸ್ಸಿನಿಂದ ಹೊರಹಾಕಲು ಕಷ್ಟವಾದೀತು. ಸಂತೋಷವನ್ನು ನೀವು ಯಾರ ಜೊತೆ ಹಂಚಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಸಂತೋಷ ನಿಂತಿದೆ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ತುಡಿತವಿದ್ದು ಮಾರ್ಗದರ್ಶನ ಹಾಗೂ ಸಹಾಯದ ಕೊರತೆ ಇರಲಿದೆ. ದೂರವಾಣಿಯಿಂದ ಅಪರಿಚಿತ ಕರೆಗಳು ಬರಬಹುದು.
ಮಕರ: ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಔಷಧೋಪಚಾರವನ್ನು ಮಾಡುವಿರಿ. ನಿಮ್ಮ ಉತ್ಸಾಹಕ್ಕೆ ಭಂಗ ಬರುವ ಸನ್ನಿವೇಶವನ್ನು ನೀವು ಎದುರಿಸುವಿರಿ. ನಿಮ್ಮ ಮೂಲ ಸಂಪತ್ತನ್ನು ಖರ್ಚುಮಾಡಬೇಕಾಗಿ ಬರಬಬಹುದು. ಅದರ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮುಂದಾಲೋಚನೆಯು ಹೆಚ್ಚಿನ ಅನುಕೂಲವನ್ನು ಮಾಡಲಿದೆ. ದೃಷ್ಟಿದೋಷವನ್ನು ಪರಿಹರಿಸಿಕೊಳ್ಳುವುದು ಉತ್ತಮ. ನಿಮ್ಮ ಎಂತಹುದೇ ಸಮಸ್ಯೆ ಇದ್ದರೂ ಆಪ್ತರನ್ನು ಭೇಟಿಯಾಗುವುದು ಅನಿವಾರ್ಯವಾಗಬಹುದು. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ. ಮನಸ್ಸಿನ ವಿಚಾರವನ್ನು ತಪ್ಪಿಸಿಕೊಳ್ಳಿ.
ಕುಂಭ: ಅನಗತ್ಯ ಓಡಾಟವನ್ನು ನಿಲ್ಲಿಸಿ. ಇದು ನಷ್ಟದ ಓಡಾಟವೇ ಆಗಲಿದೆ. ದೇಹವನ್ನು ನೀವು ದಂಡಿಸುವಿರಿ. ಕ್ರಮಬದ್ಧವಾಗಿ ಇರದೇ ಇರುವುದರಿಂದ ನೋವುಗಳು ಕಾಣಿಸಿಕೊಳ್ಳಬಹುದು. ಅತಿಯಾದ ದಾಹದಿಂದ ನೀವು ಕಂಗೆಡುವಿರಿ. ಕಛೇರಿಯ ಘಟನೆಯನ್ನು ಮನೆಯಲ್ಲಿ ಹೇಳಿ ಅವರನ್ನು ಆತಂಕಕ್ಕೆ ತಳ್ಳುವವರಿದ್ದೀರಿ. ಸ್ನೇಹಿತರ ಸಹವಾಸದಿಂದ ಧನನಷ್ಟವು ಆಗಲಿದೆ. ಕುಚೋದ್ಯದ ಮನಃಸ್ಥಿತಿ ನಿಮಗೆ ಇಷ್ಡವಾಗದು. ಇದಕ್ಕೆ ಜಗಳವೂ ಆಗಬಹುದು. ಆದಷ್ಟು ತಾಳ್ಮೆಯಿಂದ ಇರುವುದು ಮುಖ್ಯ.
ಮೀನ: ನೀವು ಇಂದು ಅಧ್ಯಾತ್ಮದ ವಿಚಾರದಿಂದ ಪ್ರಭಾವಿತರಾಗಿರುವಿರಿ. ನಿಮ್ಮ ಆತುರದ ನಿರ್ಧಾರದಿಂದ ಕುಟುಂಬಕ್ಕೆ ಸಮಸ್ಯೆಯಾಗಬಹುದು. ಅತಿಯಾದ ಭೋಜನವು ನಿಮಗೆ ಸಂಕಷ್ಟವನ್ನು ಉಂಟುಮಾಡಬಹುದು. ಸಹೋದರನ ಸಹಕಾರದಿಂದ ನೀವು ವಾಹನವನ್ನು ಖರೀದಿಸುವಿರಿ. ಗಂಭೀರವಾದ ವಿಷಯವನ್ನು ಬಹಳ ಲಘುವಾಗಿ ತೆಗೆದುಕೊಳ್ಳುವಿರಿ. ನಿಮ್ಮ ಯೋಜನೆಯ ಸಂಪೂರ್ಣ ಚಿತ್ರಣ ದೊರೆತಮೇಲೆ ಕಾರ್ಯವನ್ನು ಆರಂಭಿಸಿ. ಅವಸರವಾಗಿ ಬೇಡ. ಸಂತಾನ ವಾರ್ತೆಯಿಂದ ಶುಭವಿದೆ.