ಈ ರಾಶಿಗಳವರು ತಮಗೆ ಸಿಕ್ಕ ಅವಕಾಶ ಬಳಸಿಕೊಂಡು ಸಿಕ್ಕಾಪಟ್ಟೆ ಶ್ರೀಮಂತರಾಗ್ತಾರೆ, ಆದರೆ….

ಈ ರಾಶಿಯವರು ತಮ್ಮ ಜೀವನದ ವಿವಿಧ ಹಂತದಲ್ಲಿ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಿಕ್ಕಾಪಟ್ಟೆ ಶ್ರೀಮಂತರಾಗುತ್ತಾರೆ. ಕೆಲವರು ಅದನ್ನ ಉಳಿಸಿಕೊಳ್ಳುವುದು ಕಷ್ಟ ಅಂದುಕೊಳ್ಳಿ. ಆದರೆ...

ಈ ರಾಶಿಗಳವರು ತಮಗೆ ಸಿಕ್ಕ ಅವಕಾಶ ಬಳಸಿಕೊಂಡು ಸಿಕ್ಕಾಪಟ್ಟೆ ಶ್ರೀಮಂತರಾಗ್ತಾರೆ, ಆದರೆ....
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 22, 2023 | 1:26 PM

ರಾಶಿಯವರು ತಮ್ಮ ಜೀವನದ ವಿವಿಧ ಹಂತದಲ್ಲಿ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಿಕ್ಕಾಪಟ್ಟೆ ಶ್ರೀಮಂತರಾಗುತ್ತಾರೆ. ಕೆಲವರು ಅದನ್ನ ಉಳಿಸಿಕೊಳ್ಳುವುದು ಕಷ್ಟ ಅಂದುಕೊಳ್ಳಿ. ಆದರೆ ರಾಜ ವೈಭೋಗವನ್ನಂತೂ ಅನುಭವಿಸುತ್ತಾರೆ. ಇಲ್ಲಿ ಆ ರಾಶಿಗಳ ಬಲ ಹಾಗೂ ದೌರ್ಬಲ್ಯವನ್ನು ಸಹ ನೀಡಲಾಗಿದೆ. ಸಾಮಾನ್ಯವಾಗಿ ಕಂಡುಬರುವಂಥ ಈ ಗುಣಗಳಿಗೆ ಪರಿಹಾರ ಏನು ಅಂತ ಅವರೇ ಹುಡುಕಿಕೊಳ್ಳಬೇಕು. ಇನ್ನು ಜೀವನದಲ್ಲಿ ಸಿಕ್ಕಾಪಟ್ಟೆ ಹಣ ಮಾಡುವಂಥವರು ಯಾರು, ಈ ರಾಶಿಯವರ ವಿಶೇಷ ಏನು ಅಂತ ಇಲ್ಲಿದೆ ನೋಡಿ.

ಮೇಷ

ತಮ್ಮ ಹದಿನೆಂಟು- ಹತ್ತೊಂಬತ್ತನೇ ವಯಸ್ಸಿನಲ್ಲೇ ದುಡಿಮೆ ಇವರಿಗೆ ಕಿಕ್ ಕೊಡುವುದಕ್ಕೆ ಶುರುವಾಗುತ್ತೆ. ಬಹಳ ಚಿಕ್ಕವಯಸ್ಸಿನಲ್ಲೇ ಹಣ ಮಾಡುವ ಇವರು ತಮ್ಮ ಮಧ್ಯ ವಯಸ್ಸಿನಲ್ಲಿ ಹುಂಬತನದ ಕಾರಣಕ್ಕೆ ವಿಪರೀತ ಸಾಲ ತಗೊಂಡು, ರಿಸ್ಕ್ ವ್ಯವಹಾರಗಳನ್ನ ಮಾಡಿ ಹಣವನ್ನು ಕಳೆದುಕೊಳ್ಳುವುದೂ ಹೌದು. ಈ ರಾಶಿಯವರು ತಮ್ಮ ಸಂಗಾತಿ ಮಾತನ್ನ ಕೇಳಿಸಿಕೊಳ್ಳಬೇಕು ಹಾಗೂ ಪಾಲಿಸಬೇಕು. ಹಾಗೆ ಮಾಡಿದಲ್ಲಿ ಹಣ ಉಳಿಸಿಕೊಳ್ಳುವ ಅವಕಾಶ ಇರುತ್ತೆ.

ಕರ್ಕಾಟಕ

ದುಬಾರಿ ಮನೆ, ಕಾಸ್ಟ್ಲಿ ಬ್ರ್ಯಾಂಡ್, ಕಾಸ್ಟ್ಲಿ ಕಾರು ಇಂಥವನ್ನು ಬಹಳ ಇಷ್ಟಪಡುವ ಇವರು ಅದಕ್ಕಾಗಿಯೇ ಶ್ರೀಮಂತರಾಗಬೇಕು ಅಂದುಕೊಳ್ಳುತ್ತಾರೆ. ಸಿನಿಮಾ, ಫ್ಯಾಷನ್, ಗ್ಲ್ಯಾಮರ್ ಕಡೆಗೆ ಬೇಗ ಆಕರ್ಷಿತರಾಗುತ್ತಾರೆ. ಆದರೆ ಇವರು ಬಹಳ ಎಮೋಷನಲ್. ಗಂಡಸರಾದಲ್ಲಿ ಹೆಂಗಸರ ಕಾರಣಕ್ಕೆ, ಹೆಂಗಸರಾದಲ್ಲಿ ಗಂಡಸರ ಕಾರಣಕ್ಕೆ ಹಣ, ಆಸ್ತಿ ಹಾಗೂ ಕಡೆಗೆ ಗೌರವವನ್ನು ಸಹ ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ.

ಕನ್ಯಾ

ಈ ರಾಶಿಯವರು ಬಹಳ ಕ್ಯಾಲ್ಕುಲೇಟಿವ್. ದಿನಕ್ಕೆ ಇಷ್ಟು ಗಂಟೆ, ಇಷ್ಟು ನಿಮಿಷ ಹೀಗೀಗೆ ಅಂತ ತುಂಬ ಪ್ಲ್ಯಾನ್ಡ್ ಆಗಿ ಹಣ ಮಾಡುತ್ತಾರೆ. ಎಂಥ ಬಡತನದಲ್ಲೇ ಹುಟ್ಟಲಿ ತಮ್ಮ ನಲವತ್ತನೇ ಬರ್ತ್ ಡೇ ಒಳಗಾಗಿ ಬದುಕನ್ನೇ ಬದಲಿಸಿಕೊಂಡು ಬಿಟ್ಟಿರುತ್ತಾರೆ. ಇವರ ಸಮಸ್ಯೆ ಏನೆಂದರೆ ಹಳೆಯದನ್ನ ಮರೆಯಲ್ಲ, ದ್ವೇಷವನ್ನ ಮಾಡುವುದನ್ನ ಬಿಡಲ್ಲ, ಶತ್ರುಗಳನ್ನ ಅವರಷ್ಟಕ್ಕೆ ಇರುವುದಕ್ಕೆ ಬಿಟ್ಟುಬಿಡಲ್ಲ. ಇದಕ್ಕಾಗಿಯೇ ಹಣ, ನೆಮ್ಮದಿಯಲ್ಲಿ ದೊಡ್ಡ ಪಾಲು ಕಳೆದುಕೊಳ್ಳುವಂತಾಗುತ್ತದೆ.

ಧನುಸ್ಸು

ಈ ರಾಶಿಯವರು ಬಹಳ ಡಿಫರೆಂಟು. ಇವರಿಗೆ ಹಣವೊಂದೇ ಯಾವತ್ತಿಗೂ ಕಿಕ್ ಕೊಡಲ್ಲ. ಪವರ್ ಅಂದರೆ ಅಧಿಕಾರಕ್ಕೋಸ್ಕರ ಹಾಗೂ ತಮ್ಮ ಮಾತು ನಡೆಯಬೇಕು ಅನ್ನೋದರ ಕಾರಣಕ್ಕೆ ಸಿಕ್ಕಾಪಟ್ಟೆ ಹಣ ಮಾಡ್ತಾರೆ ಹಾಗೂ ಅದನ್ನು ಪವರ್ ಪಡೆಯುವ ಸಲುವಾಗಿಯೇ ಬಳಸಿಕೊಳ್ಳುವ ಬಗ್ಗೆ ಆಲೋಚನೆ ಮಾಡ್ತಾರೆ. ನಲವತ್ತು ವರ್ಷದ ನಂತರ ಇವರು ತಾವಂದುಕೊಂಡಂತೆ ಬದುಕುತ್ತಾರೆ. ಜನಪ್ರಿಯರೂ ಆಗುತ್ತಾರೆ.

ಇದನ್ನೂ ಓದಿ:Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 22ರ ದಿನಭವಿಷ್ಯ

ತುಲಾ

ಈ ರಾಶಿಯವರು ನಾಲ್ಕೈದು ಇನ್ ಕಮ್ ಸೋರ್ಸ್ ಮಾಡಿಕೊಳ್ಳುವ ವಿಚಾರದಲ್ಲಿ ಬಲೇ ಕಿಲಾಡಿಗಳು. ಲಾಭದ ಪ್ರಮಾಣ ಜಾಸ್ತಿ ಇರುವ ಬಿಜಿನೆಸ್​​​ಗಳನ್ನೇ ಮಾಡುವ ಜನ ಇವರು. ಕಡಿಮೆ ಬಂಡವಾಳ, ಹೆಚ್ಚು ಲಾಭ, ಮಾತು ಕೂಡ ಹೆಚ್ಚು ಖರ್ಚು ಮಾಡದೆ ನಗುವಿನಲ್ಲೇ ಬಿಜಿನೆಸ್ ಮಾಡಿ ಮುಗಿಸಿಬಿಡುತ್ತಾರೆ. ಆದರೆ ಸಿಟ್ಟಿನ ಸ್ವಭಾವ ಇರುತ್ತದೆ. ಅದು ಕೂಡ ತಮ್ಮ ಆಸ್ತಿಯೇ ಹೋದರೂ ಕಾಂಪಿಟೇಟರ್ ನ ಇಲ್ಲ ಅನ್ನಿಸಿಬಿಡಬೇಕು ಎಂಬ ಧೋರಣೆ. ಇದರಿಂದಲೇ ಜೀವನದ ಒಂದಲ್ಲ ಒಂದು ಹಂತದಲ್ಲಿ ಕೋರ್ಟ್ ಮೆಟ್ಟಿಲು ಹತ್ತುವಂತಾಗುತ್ತೆ, ಹಣ ಹೋಗುತ್ತೆ.

ವೃಷಭ

ಈ ರಾಶಿಯವರಿಗೆ ದುಡ್ಡು ಅಂದರೆ ಕಾನ್ಫಿಡೆನ್ಸ್ ಅಂತಲೇ. ಬ್ಯಾಂಕ್ ಬ್ಯಾಲೆನ್ಸ್, ಸೈಟು- ಮನೆ ಇವುಗಳ ಬಗ್ಗೆ ಸದಾ ಲೆಕ್ಕಾಚಾರ ಹಾಕಿಕೊಳ್ಳುತ್ತಾ ಇರುತ್ತಾರೆ. ಉದ್ಯೋಗ ಮಾಡುವುದು, ಇನ್ನೊಬ್ಬರು ಆರ್ಡರ್ ಮಾಡಿದರೆ ಮಾತು ಕೇಳುವುದು ಇವರಿಗೆ ಬಹಳ ರೇಜಿಗೆ. ಜನ ಸಂಪರ್ಕ, ಅದೇ ಸೋಷಿಯಲ್ ಕಾಂಟ್ಯಾಕ್ಟ್ ಇವರ ಬಂಡವಾಳ. ಸಾಲ ಬೇಕು ಅಂತ ಇವರು ಪ್ರಯತ್ನ ಪಟ್ಟುಬಿಟ್ಟರೆ ಸಿಗದಿರುವ ಚಾನ್ಸೇ ಇಲ್ಲ. ಅದೇ ಇವರ ವೀಕ್ ನೆಸ್ ಕೂಡ ಹೌದು.

Published On - 5:18 am, Thu, 22 June 23

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು