Daily Horoscope 23 June: ನಿಮ್ಮ ಕೆಲಸಗಳಿಗೆ ಪ್ರಂಶಸೆ ಸಿಗಲಿದೆ, ಕಾರ್ಯದೊತ್ತಡದಿಂದ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
ಇಂದಿನ (2023 ಜೂನ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಶುಭೋದಯ ಗೆಳೆಯರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ : ಆರ್ದ್ರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಮಘಾ, ಯೋಗ : ವಜ್ರ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:57 ರಿಂದ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:49 ರಿಂದ 05:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:43 ರಿಂದ 09:20ರ ವರೆಗೆ.
ಮೇಷ: ಕುಟುಂಬದ ಸಮಸ್ಯೆಗೆ ನಿಮ್ಮ ಮೌನವಾದ ಉತ್ತರ ಎಲ್ಲರಿಗೂ ಆಶ್ಚರ್ಯವನ್ನು ತಂದೀತು. ನಿಮ್ಮ ಅತಿಯಾದ ಉತ್ಸಾಹವು ಯಾರಾದರೂ ನೋಡಿ ಆಡಿಕೊಳ್ಳಬಹುದು. ನಿಮ್ಮ ಕಾರ್ಯಕೌಶಲವು ಸಹೋದ್ಯೋಗಿಗಳಿಗೆ ತಿಳಿಯಬಹುದು. ಮಕ್ಕಳ ವಿಚಾರದಲ್ಲಿ ನೀವು ಅಜಾಗರೂಕಾಗಿರುವಿರಿ. ಧಾರ್ಮಿಕವಾಗಿ ನೀವು ಶ್ರದ್ಧೆ ಸ್ವಲ್ಪ ಕಡಿಮೆ ಇರುವುದು. ನಿಮ್ಮ ಅಂದಾಜಿಗೆ ತಕ್ಕಂತೆ ನಡೆಯದೇ ಇರುವುದು ಬೇಸರವನ್ನು ಉಂಟುಮಾಡೀತು. ಸ್ತ್ರೀಯರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಮಾತುಗಳು ಇತರರಿಗೆ ಹೆಚ್ಚಾದಂತೆ ತೋರೀತು.
ವೃಷಭ: ಆರ್ಥಿಕವಾಗಿ ನೀವು ಸುಧಾರಣೆ ಕಾಣಬೇಕು ಎಂದಿದ್ದರೂ ನೀವು ಆಲಸ್ಯದಿಂದ ಹೊರಬರಬೇಕಾದೀತು. ಉತ್ಸಾಹದ ಕೊರತೆ ಅತಿಯಾಗಿ ತೋರುವುದು. ಅಧಿಕಾರದ ಮಾತು ಇಂದು ನಡೆಯದೇ ಇದ್ದೀತು. ವೇತನವನ್ನು ಹೆಚ್ಚಿಸಲು ನೀವು ವಿನಂತಿ ಮಾಡಿಕೊಳ್ಳಬಹುದು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸ್ನೇಹಿತರ ಭೇಟಿಯಾಗಲು ಇಂದು ಬಹಳ ಸಮಯ ಕಾಯುವಿರಿ. ಯಾರನ್ನಾದರೂ ನಂಬಲು ನಿಮ್ಮ ಮನಸ್ಸು ಸಿದ್ಧವಿರದು. ಸಜ್ಜನರಿಗೆ ಭೋಜನವನ್ನು ಹಾಕಿಸಿ.
ಮಿಥುನ: ಕಾರ್ಯದ ಒತ್ತಡದಿಂದ ತಲೆನೋವು ಆರಂಭವಾದೀತು. ನಿಮ್ಮ ನೆಚ್ಚಿನವರ ಭೇಟಿಯಾಗುವ ಸಂದರ್ಭ ಬಂದರೂ ಕಾರಣಾಂತರಗಳಿಂದ ತಪ್ಪಿಹೋಗಬಹುದು. ನಿಮಗೆ ನಿಮ್ಮ ವಂಶದ ಕಾರಣದಿಂದ ಗೌರವ ಸಿಗಬಹುದು. ಕೆಲಸಗಳಿಗೆ ಪ್ರಂಶಸೆ ಸಿಗಲಿದೆ. ನಿಮ್ಮ ಹಾಸ್ಯ ಸ್ವಭಾವವು ಕೆಲವರಿಗೆ ಕಷ್ಟವಾದೀತು. ಪ್ರಯಾಣವು ಅಗತ್ಯವಿದ್ದರಷ್ಟೇ ಮಾಡಿ. ಯಾರನ್ನೂ ಅವಲಂಬಿಸದ ನಿಮಗೆ ಬೇಗನೆ ಕೆಲಸ ಆಗಬಹುದು. ಕಛೇರಿಯಲ್ಲಿ ನಿಮ್ಮನ್ನು ಪ್ರಶಂಸಿಸಬಹುದು. ಅದನ್ನು ಸಮವಾಗಿ ತೆಗೆದುಕೊಳ್ಳಿ. ಅತಿಯಾದ ವೈಭವೀಕರಣ ಬೇಡ.
ಕರ್ಕ: ನಿಮ್ಮ ಆರೋಗ್ಯವನ್ನು ವಿಚಾರಿಸಲು ಬಂಧುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ನೀವು ಭಾಗಿಯಾಗಲಿದ್ದೀರಿ. ಎಷ್ಟೇ ಪ್ರಯತ್ನಿಸಿದರೂ ನಿಮಗೆ ಸಿಗುವುದು ಕಷ್ಟವಾದಾಗ ಅದನ್ನು ಬಿಟ್ಟು ಮುನ್ನಡೆಯುವುದು ಸೂಕ್ತ. ಉತ್ತಮ ಸಂಗತಿಗಳ ಕಡೆ ನಿಮ್ಮ ಗಮನವಿರಲಿ. ನಕಾರಾತ್ಮಕ ಚಿಂತನೆಯನ್ನು ನೀವು ನಿಧಾನವಾಗಿ ಕಡಿಮೆ ಮಾಡಿಕೊಳ್ಳಿ. ಹಿರಿಯರಿಗೆ ನೀವು ಏನ್ನಾದರೂ ಉಡುಗೊರೆಯಾಗಿ ಕೊಡುವಿರಿ. ಸ್ನೇಹಿತರ ಜೊತೆ ಇಂದಿನ ಸಮಾರಂಭದಲ್ಲಿ ಭಾಗವಹಿಸಿ ಎಲ್ಲರಿಂದ ಮೆಚ್ಚುಗೆ ಪಡೆಯುವಿರಿ. ಆದಷ್ಟು ಗುಟ್ಟಿನ ವಿಚಾರವನ್ನು ಬಿಟ್ಟುಕೊಡಲು ಹೋಗಬೇಡಿ. ಶನೈಶ್ಚರನಿಗೆ ದೀಪವನ್ನು ಬೆಳಗಿ, ಮನಸ್ಸಿನ ಮಂದಗತಿಯನ್ನು ಕಡಿಮೆ ಮಾಡಿಕೊಳ್ಳಿ.
ಸಿಂಹ: ವಿವಾಹಜೀವನಕ್ಕೆ ಕಾಲಿಟ್ಟ ನಿಮಗೆ ಕೆಲವು ಅಸ್ಪಷ್ಟವಾದ ನಡತೆಯಿಂದ ದಿಗ್ಭ್ರಾಂತರಾಗುವ ಸಾಧ್ಯತೆ ಇದೆ. ನಿಮ್ಮ ಬಳಿ ಬಂದು ಕ್ಷಮಾಪಣೆ ಕೇಳಿದಲ್ಲಿ ಕ್ಷಮಿಸುವ ದೊಡ್ಡತನವನ್ನು ತೋರಿಸಿ. ಮಕ್ಕಳಿಂದ ನಿಮಗೆ ಕಿರಿಕಿರಿಯಾಗಲಿದೆ. ಸಂತೋಷದಿಂದ ನೀವು ಇರುವಿರಿ. ಪ್ರೇಮಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. ಮನೆಯ ಕಡೆಯಿಂದ ಅನುಮತಿ ಸಿಗದೇ ದುಃಖಿಸಬೇಕಾಗಬಹುದು. ಬಹಳ ದಿನಗಳ ಅನಂತರ ಉದ್ಯೋಗಕ್ಕೆ ಸೇರಿಕೊಳ್ಳುವ ಅವಕಾಶ ಸಿಗಲಿದೆ. ವಾಹನದಿಂದ ಬಿದ್ದು ಪೆಟ್ಟುಮಾಡಿಕೊಳ್ಳಬಹದು. ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿ.
ಕನ್ಯಾ: ನಿಮ್ಮ ಪೂರ್ವ ನಿರ್ಧಾರವು ಬದಲಾಗಬಹುದು. ನಿಮ್ಮದಾದ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಮೂಲ್ಯವಾದ ವಸ್ತುವನ್ನು ನೀವು ಕಳೆದಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಕ್ಕೆ ಸಂಬಂಧಿಸಿದೆ ನಿಮ್ಮಲ್ಲಿ ಅನಿಶ್ಚಿತತೆ ಇರಲಿದೆ. ಸಂಶೋಧನೆಯಲ್ಲಿ ತೊಡಗಿದ್ದರೆ ಸ್ವಲ್ಪ ಹಿನ್ನಡೆಯೂ ಹಣದ ಕೊರತೆಯೂ ಆಗಬಹುದು. ಯಾರಿಂದಲಾದರೂ ಅಪಮಾನವೂ ಆಗುವ ಸಾಧ್ಯತೆ ಇದೆ. ಧೃತಿಗೆಡದೆ ಮುನ್ನಡೆಯಬೇಕಾಗಬಹುದು. ಸಮೀಪದ ಕುಮಾರಸ್ವಾಮಿಯ ದೇಗುಲಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ.
ತುಲಾ: ನಿಮಗೆ ಹೊಸ ಉದ್ಯಮವನ್ನು ಆರಂಭಿಸುವ ಆಲೋಚನೆ ಇದ್ದರೂ ಸಂಪೂರ್ಣ ಧೈರ್ಯವು ನಿಮಗೆ ಸಾಕಾಗದೇ ಹೋದೀತು. ಮನೆಯಲ್ಲಿ ಇಂದು ಹೆಚ್ಚಿನ ಕೆಲಸವು ಆಗಬಹುದು. ನಿಮ್ಮ ಕ್ರಮಗಳು ಕೆಲವರಿಗೆ ಹಿಡಿಸದೇ ಇದ್ದೀತು. ನಿಮ್ಮನ್ನು ನಿಯಂತ್ರಿಸಲು ಯಾರಾದರೂ ಮೇಲಧಿಕಾರಿಯ ಕಿವಿ ಚುಚ್ಚಬಹುದು. ಹಳೆಯ ವಿಚಾರವು ಪುನಃ ಮುಖ್ಯವೇದಿಕೆ ಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಣ್ಣ ಕಲಹವೂ ಆಗಬಹುದು. ಸಮಾಜದಲ್ಲಿ ಉತ್ತಮ ಕಾರ್ಯವನ್ನು ಮಾಡಲು ನೀವು ಬಯಸುವಿರಿ. ಸ್ನೇಹಿತರ ಜೊತೆ ಸೇರಿಕೊಳ್ಳುವಿರಿ.
ವೃಶ್ಚಿಕ: ಮನೆಯ ಕೆಲಸ ಹಾಗೂ ಕಛೇರಿಯ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟವಾದೀತು. ಅನಾಯಾಸವಾಗಿ ಲಾಭವನ್ನು ಪಡೆಯುವ ಜಾಡ್ಯವು ಬರಬಹುದು. ಹೊಸ ಯೋಜನೆಯೊಂದು ನಿಮಗೆ ಸಿಗಲಿದ್ದು ಬಹಳ ಉತ್ಸಾಹವಿರಲಿದೆ. ನಿಮ್ಮನ್ನು ತಿಳಿದಿಕೊಳ್ಳಲು ಬಯಸುವವರು ನಿಮ್ಮ ಒಡನಾಟವನ್ನು ಮಾಡಬಹುದು. ಬೇರೆಯವರ ನೇರವಾದ ನುಡಿಗಳು ನಿಮಗೆ ನಾಟಬಹುದು. ಮನಸ್ಸು ಬಹಳ ತಳಮಳಗೊಳ್ಳಬಹುದು. ಇತರ ಕೆಲಸದಲ್ಲಿ ಮಗ್ನವಾಗಿ ಮಾಡಬೇಕಾದ ಮುಖ್ಯ ಕೆಲಸವು ನಿಂತುಹೋಗಬಹುದು. ಸ್ವಚ್ಛಂದವಾಗಿ ವಿಹರಿಸುವ ಮನಸ್ಸು ಇರಲಿದೆ.
ಧನು: ಆರ್ಥಿಕತೆಯು ಸ್ವಲ್ಪ ಸುಧಾರಿಸಿದಂತೆ ಕಂಡರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು. ಸಂಗಾತಿಯ ಮಾತು ನಿಮಗೆ ಕೋಪವನ್ನು ತರುವ ಸಾಧ್ಯತೆ ಇದೆ. ಬಂಧುಗಳು ನಿಮ್ಮ ಸಂಪತ್ತನ್ನು ಬಯಸುವರು. ಕೃಷಿಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವ ಯೋಜನೆಯನ್ನು ಸಿದ್ಧಪಡಿಸುವಿರಿ. ಮಕ್ಕಳ ಜೊತೆಗೆ ಇಂದು ಕಳೆದು ಸಂತೋಷವನ್ನು ಪಡೆಯುವಿರಿ. ಇಂದು ನೀವು ಶುಭಸಮಾಚಾರದ ನಿರೀಕ್ಷೆಯಲ್ಲಿ ಇರುವಿರಿ. ಕಲಾವಿದರು ಹೆಚ್ಚಿನ ಪ್ರಸಿದ್ಧಿಗೆ ಶ್ರಮಿಸುವರು. ಆರ್ಥಿಕತೆಯು ವೃದ್ಧಿಯಾಗಲು ಲಕ್ಷ್ಮಿಯ ಸ್ತೋತ್ರವನ್ನು ನೀವು ಮಾಡಿ.
ಮಕರ: ನಿಮ್ಮ ಸಾಮರ್ಥ್ಯವನ್ನು ಅಳೆಯುವ ಸಮಯ ಇಂದು ಬರಬಹುದು. ಧಾರ್ಮಿಕ ವಿಚಾರವನ್ನು ನೀವು ತಿಳಿದವರ ಬಳಿ ಮಾತನಾಡಬಹುದು. ಹಣವನ್ನು ವಿನಾಕಾರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಬಟ್ಟೆಯ ವ್ಯಾಪರವು ನಿಮಗೆ ಲಾಭಾಂಶವನ್ನು ತರಲಿದೆ. ಮಾತುಕತೆಯಲ್ಲಿ ಇಂದಿನ ಕಾಲಹರಣವಾಗಲಿದೆ. ನಿಮಗೆ ಸಿಗಬೇಕಾದ ಸಂಪತ್ತು ಸರಿಯಾದ ಸಮಯಕ್ಕೆ ಸಿಗದೇ ಸ್ನೇಹಿತರ ಬಳಿ ಸಾಲಮಾಡಬೇಕಾದೀತು. ಕಛೇರಿಯಲ್ಲಿ ನೀವು ಯಾರನ್ನೋ ಮೆಚ್ಚಿಸಲು ಹೋಗಿ ಅಪಹಾಸ್ಯಕ್ಕೆ ಸಿಕ್ಕಿಕೊಳ್ಳಬಹುದು. ಹನುಮಾನ್ ಚಾಲೀಸ್ ಪಠಣವು ನಿಮಗೆ ಒಂದಿಷ್ಟು ಧೈರ್ಯವನ್ನು ತಂದುಕೊಡಬಹುದು.
ಕುಂಭ: ನಿಮಗೆ ಖರೀದಿಯಲ್ಲಿ ಇಂದು ಮೋಸವಾಗಬಹುದು. ಕುಲದೇವರ ಸ್ಮರಣೆಯನ್ನು ಮಾಡಿ ಇಂದಿನ ಕಾರ್ಯವನ್ನು ಆರಂಭಿಸಿ. ಉದ್ಯೋಗಕ್ಕೆ ಸೇರಲು ಬೇಕಾದ ತಯಾರಿಯಲ್ಲಿ ನೀವು ಇರುವಿರಿ. ಏಕಾಂತವನ್ನು ಬಯಸಿದರೂ ಇರಲು ನಿಮಗೆ ಅಸಾಧ್ಯವಾದೀತು. ತಂದೆಯಿಂದ ನಿಮಗೆ ಬೇಕಾದ ಸಹಾಯವು ಸಿಗಬಹುದು. ಯಾರದೋ ಮಾತನ್ನು ನಂಬಿ ಬಂಧುಗಳನ್ನು ದೂರ ಮಾಡಿಕೊಳ್ಳಬೇಕಾಗುವುದು. ಕಫದೋಷದಿಂದ ಅನಾರೋಗ್ಯ ಉಂಟಾಗಬಹುದು. ಯಾರ ಜೊತೆಗಾದರೂ ಸುಮ್ಮನೇ ಚರ್ಚೆಗಿಳಿದು ಸೋಲಬೇಕಾದೀತು.
ಮೀನ: ನಿಮಗೆ ಮರಣಭೀತಿ ಕಾಡುವ ಸಾಧ್ಯತೆ ಇದೆ. ಇದ್ದಕಿದ್ದಂತೇ ಏನನ್ನಾದರೂ ಆಲೋಚಿಸಲಿದ್ದೀರಿ. ಮನಸ್ಸಿನ ತೀರ್ಮಾನಕ್ಕೆ ತಕ್ಕಂತೆ ನಿಮ್ಮ ನಡೆ ಇರಲಿದೆ. ಒಳ್ಳೆಯ ವಿಚಾರಕ್ಕೆ ನೀವು ಹೆಚ್ಚಿನ ಒತ್ತುಕೊಡಲಿದ್ದೀರಿ. ಸ್ನೇಹಿತರನ್ನು ಉಳಿಸಿಕೊಳ್ಳಲು ನೀವು ಅನೇಕ ರೀತಿಯಲ್ಲಿ ಮಾತುಗಳನ್ನು ಆಡಿಕೊಳ್ಳುವಿರಿ. ನೌಕರರ ನಡವೆ ವಿವಾದಗಳು ಆಗಬಹುದು. ಸಂಗಾತಿಯನ್ನು ನೀವು ಇಷ್ಟಪಡಲು ಕಾರಣವನ್ನು ಹುಡುಕಬಹುದು. ಸರಳವಾಗಿರಲು ನೀವು ಇಚ್ಛಿಸುವಿರಿ. ಯಾರಿಗಾದೂ ಸಾಲವನ್ನು ಕೊಡಲು ಮುಂದಾಗುವಿರಿ. ಮಂದಗತಿಯಲ್ಲಿ ನಿಮ್ಮ ಇಂದಿನ ಕೆಲಸಗಳು ಸಾಗಬಹುದು.
ಲೋಹಿತಶರ್ಮಾ – 8762924271 (what’s app only)