Daily Horoscope: ಈ ರಾಶಿಯವರಿಗೆ ಅತಿ ಆಲಸ್ಯ ಒಳ್ಳೆಯದಲ್ಲ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 23) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಗೆಳೆಯರೇ ನಮಸ್ತೇ! ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿಯುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ : ಆರ್ದ್ರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಮಘಾ, ಯೋಗ : ವಜ್ರ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:57 ರಿಂದ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:49 ರಿಂದ 05:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:43 ರಿಂದ 09:20ರ ವರೆಗೆ.
ಮೇಷ: ಕುಟುಂಬದ ಸಮಸ್ಯೆಗೆ ನಿಮ್ಮ ಮೌನವಾದ ಉತ್ತರ ಎಲ್ಲರಿಗೂ ಆಶ್ಚರ್ಯವನ್ನು ತಂದೀತು. ನಿಮ್ಮ ಅತಿಯಾದ ಉತ್ಸಾಹವು ಯಾರಾದರೂ ನೋಡಿ ಆಡಿಕೊಳ್ಳಬಹುದು. ನಿಮ್ಮ ಕಾರ್ಯಕೌಶಲವು ಸಹೋದ್ಯೋಗಿಗಳಿಗೆ ತಿಳಿಯಬಹುದು. ಮಕ್ಕಳ ವಿಚಾರದಲ್ಲಿ ನೀವು ಅಜಾಗರೂಕಾಗಿರುವಿರಿ. ಧಾರ್ಮಿಕವಾಗಿ ನೀವು ಶ್ರದ್ಧೆ ಸ್ವಲ್ಪ ಕಡಿಮೆ ಇರುವುದು. ನಿಮ್ಮ ಅಂದಾಜಿಗೆ ತಕ್ಕಂತೆ ನಡೆಯದೇ ಇರುವುದು ಬೇಸರವನ್ನು ಉಂಟುಮಾಡೀತು. ಸ್ತ್ರೀಯರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಮಾತುಗಳು ಇತರರಿಗೆ ಹೆಚ್ಚಾದಂತೆ ತೋರೀತು.
ವೃಷಭ: ಆರ್ಥಿಕವಾಗಿ ನೀವು ಸುಧಾರಣೆ ಕಾಣಬೇಕು ಎಂದಿದ್ದರೂ ನೀವು ಆಲಸ್ಯದಿಂದ ಹೊರಬರಬೇಕಾದೀತು. ಉತ್ಸಾಹದ ಕೊರತೆ ಅತಿಯಾಗಿ ತೋರುವುದು. ಅಧಿಕಾರದ ಮಾತು ಇಂದು ನಡೆಯದೇ ಇದ್ದೀತು. ವೇತನವನ್ನು ಹೆಚ್ಚಿಸಲು ನೀವು ವಿನಂತಿ ಮಾಡಿಕೊಳ್ಳಬಹುದು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸ್ನೇಹಿತರ ಭೇಟಿಯಾಗಲು ಇಂದು ಬಹಳ ಸಮಯ ಕಾಯುವಿರಿ. ಯಾರನ್ನಾದರೂ ನಂಬಲು ನಿಮ್ಮ ಮನಸ್ಸು ಸಿದ್ಧವಿರದು. ಸಜ್ಜನರಿಗೆ ಭೋಜನವನ್ನು ಹಾಕಿಸಿ.
ಮಿಥುನ: ಕಾರ್ಯದ ಒತ್ತಡದಿಂದ ತಲೆನೋವು ಆರಂಭವಾದೀತು. ನಿಮ್ಮ ನೆಚ್ಚಿನವರ ಭೇಟಿಯಾಗುವ ಸಂದರ್ಭ ಬಂದರೂ ಕಾರಣಾಂತರಗಳಿಂದ ತಪ್ಪಿಹೋಗಬಹುದು. ನಿಮಗೆ ನಿಮ್ಮ ವಂಶದ ಕಾರಣದಿಂದ ಗೌರವ ಸಿಗಬಹುದು. ಕೆಲಸಗಳಿಗೆ ಪ್ರಂಶಸೆ ಸಿಗಲಿದೆ. ನಿಮ್ಮ ಹಾಸ್ಯ ಸ್ವಭಾವವು ಕೆಲವರಿಗೆ ಕಷ್ಟವಾದೀತು. ಪ್ರಯಾಣವು ಅಗತ್ಯವಿದ್ದರಷ್ಟೇ ಮಾಡಿ. ಯಾರನ್ನೂ ಅವಲಂಬಿಸದ ನಿಮಗೆ ಬೇಗನೆ ಕೆಲಸ ಆಗಬಹುದು. ಕಛೇರಿಯಲ್ಲಿ ನಿಮ್ಮನ್ನು ಪ್ರಶಂಸಿಸಬಹುದು. ಅದನ್ನು ಸಮವಾಗಿ ತೆಗೆದುಕೊಳ್ಳಿ. ಅತಿಯಾದ ವೈಭವೀಕರಣ ಬೇಡ.
ಕರ್ಕ: ನಿಮ್ಮ ಆರೋಗ್ಯವನ್ನು ವಿಚಾರಿಸಲು ಬಂಧುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ನೀವು ಭಾಗಿಯಾಗಲಿದ್ದೀರಿ. ಎಷ್ಟೇ ಪ್ರಯತ್ನಿಸಿದರೂ ನಿಮಗೆ ಸಿಗುವುದು ಕಷ್ಟವಾದಾಗ ಅದನ್ನು ಬಿಟ್ಟು ಮುನ್ನಡೆಯುವುದು ಸೂಕ್ತ. ಉತ್ತಮ ಸಂಗತಿಗಳ ಕಡೆ ನಿಮ್ಮ ಗಮನವಿರಲಿ. ನಕಾರಾತ್ಮಕ ಚಿಂತನೆಯನ್ನು ನೀವು ನಿಧಾನವಾಗಿ ಕಡಿಮೆ ಮಾಡಿಕೊಳ್ಳಿ. ಹಿರಿಯರಿಗೆ ನೀವು ಏನ್ನಾದರೂ ಉಡುಗೊರೆಯಾಗಿ ಕೊಡುವಿರಿ. ಸ್ನೇಹಿತರ ಜೊತೆ ಇಂದಿನ ಸಮಾರಂಭದಲ್ಲಿ ಭಾಗವಹಿಸಿ ಎಲ್ಲರಿಂದ ಮೆಚ್ಚುಗೆ ಪಡೆಯುವಿರಿ. ಆದಷ್ಟು ಗುಟ್ಟಿನ ವಿಚಾರವನ್ನು ಬಿಟ್ಟುಕೊಡಲು ಹೋಗಬೇಡಿ. ಶನೈಶ್ಚರನಿಗೆ ದೀಪವನ್ನು ಬೆಳಗಿ, ಮನಸ್ಸಿನ ಮಂದಗತಿಯನ್ನು ಕಡಿಮೆ ಮಾಡಿಕೊಳ್ಳಿ.