ಈ ರಾಶಿಯವರಿಗೆ ಲವ್ ಮ್ಯಾರೇಜ್ ಆಗಿಬರಲ್ಲವಂತೆ; ಯಾಕೆ ಗೊತ್ತಾ?
ಪ್ರೀತಿಸಿ ಮದುವೆ ಆಗಿದ್ದೆವು. ಆದರೆ ಡೈವೋರ್ಸ್ ಆಗಿಹೋಯಿತು ಅಂತ ಹೇಳಿಕೊಳ್ಳುವವರ ಸಂಖ್ಯೆಗೆ ಕಡಿಮೆಯೇನೂ ಇಲ್ಲ. ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರು ಲವ್ ಮ್ಯಾರೇಜ್ ಆಗದಿದ್ದರೆ ಉತ್ತಮ.
ಪ್ರೀತಿಸಿ ಮದುವೆ ಆಗಿದ್ದೆವು. ಆದರೆ ಡೈವೋರ್ಸ್ ಆಗಿಹೋಯಿತು ಅಂತ ಹೇಳಿಕೊಳ್ಳುವವರ ಸಂಖ್ಯೆಗೆ ಕಡಿಮೆಯೇನೂ ಇಲ್ಲ. ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರು ಲವ್ ಮ್ಯಾರೇಜ್ ಆಗದಿದ್ದರೆ ಉತ್ತಮ. ಅದರಲ್ಲೂ ಮನೆಯವರನ್ನು ಎದುರು ಹಾಕಿಕೊಂಡು, ಎಲ್ಲರನ್ನೂ ದೂರ ಮಾಡಿಕೊಂಡು ಮದುವೆಯಾದರೋ ಬದುಕು ಕಷ್ಟ ಕಷ್ಟ. ಇನ್ನು ತಡ ಮಾಡುವುದು ಬೇಡ, ಯಾವ ರಾಶಿಯವರು ಲವ್ ಮ್ಯಾರೇಜ್ ಆಗಬಾರದು ಮತ್ತು ಆದಲ್ಲಿ ಏನು ಸಮಸ್ಯೆ ಆಗುತ್ತದೆ ಅಂತ ತಿಳಿಯುವುದಕ್ಕೆ ಈ ಲೇಖನವನ್ನು ಓದಿ.
ಕುಂಭ
ಹಣಕಾಸಿನ ವಿಚಾರದಲ್ಲಿ ಬಹಳ ಲೆಕ್ಕಾಚಾರದ ಜನ ಇವರು. ಜತೆಗೆ ಭವಿಷ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುತ್ತಾರೆ. ಸಂಗಾತಿಯ ಸಣ್ಣ ಬೇಜವಾಬ್ದಾರಿ, ದುಂದು ವೆಚ್ಚಗಳು ಇವೆಲ್ಲವನ್ನು ಸಹಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ ಇವರಿಗೆ. ಜತೆಗೆ ಭವಿಷ್ಯದಲ್ಲಿ ಹಣದ ಅಗತ್ಯ ಇರುತ್ತದೆ ಅಂತ ಹಗಲು- ರಾತ್ರಿ ಎನ್ನದೆ ದುಡಿಯುತ್ತಾರೆ. ಆದರೆ ಇದೇ ಕಾರಣಕ್ಕೆ ಇವರ ಸಂಗಾತಿ ಆರೋಪಗಳು ಮಾಡುತ್ತಾ, ದಿನವೂ ಜಗಳ ಆಡುವ ಹಾಗೆ ಆಗುತ್ತದೆ. ಅದರಲ್ಲೂ ತಮಗೆ ಹೆಚ್ಚು ಸಮಯ ನೀಡುವುದಿಲ್ಲ, ಖರ್ಚು ಮಾಡಲ್ಲ- ಮಾಡುವುದಕ್ಕೆ ಬಿಡಲ್ಲ, ಯಾವುದೇ ನಿರ್ಧಾರ ಮಾಡುವ ಮುಮಚೆ ಏನನ್ನೂ ಕೇಳಲ್ಲ ಅಂತ ಕೋಪ ಮಾಡಿಕೊಂಡು ದೂರವಾಗುತ್ತಾರೆ. ಆದ್ದರಿಂದ ಇವರಿಗೆ ಪ್ರೀತಿ ಹಾಗೂ ಅದು ಮುಂದುವರಿದು ಮದುವೆ ಹಂತಕ್ಕೆ ಬಂದ ಮೇಲೆ ಸಂಭಾಳಿಸುವುದಕ್ಕೆ ಆಗಲ್ಲ.
ಕನ್ಯಾ
ಇವರು ಬಹಳ ಪರ್ಫೆಕ್ಟ್. ಲೆಕ್ಕಾಚಾರ, ಪ್ಲ್ಯಾನಿಂಗ್ ಹಾಗೂ ಗಾಂಭೀರ್ಯ ಇವೆಲ್ಲದರಲ್ಲೂ ಸೂಪರ್. ಆದರೆ ಇವರು ಇದನ್ನು ತಮ್ಮ ಸಂಗಾತಿ ಮೇಲೂ ಹೇರುತ್ತಾರೆ. ತಮ್ಮಂತೆಯೇ ಇರಬೇಕು ಎಂದು ಕೂತಲ್ಲಿ, ನಿಂತಲ್ಲಿ ಚೊರೆ ಮಾಡುವುದಕ್ಕೆ ಶುರು ಮಾಡುತ್ತಾರೆ. ಪ್ರೀತಿಸುವಾಗ, ಆಹಾ ಎಂಥ ಶಿಸ್ತು, ಗಾಂಭೀರ್ಯ ಎಂದುಕೊಂಡವರೇ ಇವರ ಜತೆ ಹೆಣಗುವುದು ಬಹಳ ಕಷ್ಟ ಎಂದು ಬೇಗ ಸುಸ್ತಾಗಿ ಬಿಡುತ್ತಾರೆ. ಮತ್ತೂ ವಿಚಿತ್ರ ಏನೆಂದರೆ ಇವರು ಯಾವುದಕ್ಕೂ ಸಮಾಧಾನ ಮಾಡಬೇಕು ಅಂತ ಅಂದುಕೊಳ್ಳುವುದೇ ಇಲ್ಲ. ಎಲ್ಲವೂ ಆಯಾ ವ್ಯಕ್ತಿಯೇ ಅರ್ಥ ಮಾಡಿಕೊಳ್ಳಬೇಕು, ಸನ್ನಿವೇಶವನ್ನು ಅರ್ಥ ಮಾಡಿಕೊಂಡು ಹೇಳದೆಯೇ ಎಲ್ಲವನ್ನೂ ತಿಳಿದುಕೊಳ್ಳಬೇಕು ಅಂತಾರೆ. ಪ್ರೀತಿಸಿ ಮದುವೆ ಆದ ಮೇಲೆ ಸಂಗಾತಿ ಇವರಿಗೆ ಬಹಳ ಬೇಗ ಬೋರ್ ಆಗಿಬಿಡುತ್ತಾರೆ.
ಮೇಷ
ಮಾತನಾಡುವ ಮುಂಚೆ ಆಗಲಿ, ಮಾತನಾಡಿದ ಮೇಲೆ ಆಗಲಿ ಅದರ ಪರಿಣಾಮವನ್ನು ಆಲೋಚಿಸದ ಜನ ಇವರು. ಪ್ರೀತಿಸುವಾಗ ಎಂಥ ನೇರವಂತಿಕೆ, ಎಷ್ಟು ಧೈರ್ಯ, ನೇರನೇರವಾಗಿ ಮಾತನಾಡುವ ಇಂಥವರನ್ನ ಮದುವೆ ಆಗಬೇಕು ಅಂದುಕೊಂಡು ಕೈ ಹಿಡಿದಿರುತ್ತಾರಲ್ಲಾ ಅವರು ಬಹಳ ಬೇಗ ಹೈರಾಣಾಗಿ ಆಗಿಬಿಡುತ್ತಾರೆ. ನಾನು ಇರೋದು ಹೀಗೆ. ಇದೇ ರೀತಿ ಒಪ್ಪಿಕೊಳ್ಳುವ ಹಾಗಿದ್ದರೆ ಇರಬಹುದು, ಇಲ್ಲದಿದ್ದರೆ ನಿನ್ನ ದಾರಿ ನೀನು ನೋಡಿಕೋ ಅಂತಲೂ ಮುಖದ ಮೇಲೆ ಹೇಳಿಬಿಡುತ್ತಾರೆ. ಬಹಳ ಎಮೋಷನಲ್ ಆಗಿರುವವರು ಏನಾದರೂ ಇವರನ್ನ ಮದುವೆ ಆಗಿಬಿಟ್ಟರೆ ಬಹಳ ಬೇಗ ಡಿಸಪಾಯಿಂಟ್ ಆಗಿ, ದೂರವಾಗಿ ಹೋಗುತ್ತಾರೆ.
ಇದನ್ನೂ ಓದಿ:Daily Horoscope 22 June: ಸಂಗಾತಿಯ ಮೇಲೆ ಅನುಮಾನ ಬೇಡ, ನಿಮ್ಮನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿರಿ
ವೃಶ್ಚಿಕ
ಈ ರಾಶಿಯವರಿಗೆ ಸೋಷಿಯಲ್ ಸ್ಟೇಟಸ್, ಸೋಷಿಯಲ್ ಕಾಂಟ್ಯಾಕ್ಟ್ ಬಹಳ ಮುಖ್ಯ ಅನ್ನೋ ಹಾಗೆ ಕಾಣಿಸಿಕೊಳ್ಳುತ್ತಾರೆ. ಆದರೆ ವಿಪರೀತ ಎನಿಸುವಷ್ಟು ಪೊಸೆಸಿವ್ ನೆಸ್. ಪ್ರೀತಿಸುವಾಗ ಎಲ್ಲೇ ಹೋದರೂ ಜತೆಗೆ ಬರ್ತಾರೆ, ಡ್ರಾಪ್ ಮಾಡ್ತಾರೆ, ಒಂದು ಕ್ಷಣ ಬಿಟ್ಟಿರಲ್ಲ ಅಂತೆನ್ನಿಸುವ ಇವರು ಮದುವೆಯ ನಂತರ ಭಾರ ಎನಿಸುವುದಕ್ಕೆ ಶುರು ಆಗುತ್ತಾರೆ. ಡ್ರೆಸ್, ವಾಚ್, ಆಭರಣದಿಂದ ಮೊದಲಾಗಿ ಎಲ್ಲವನ್ನೂ ಇವರು ಹೇಳಿದ್ದೇ ಹಾಕಿಕೊಳ್ಳಬೇಕು. ಇನ್ನು ಹೇಳಿದ ಸಮಯಕ್ಕೆ ಮನೆಗೆ ಬಾರಲಿಲ್ಲವೋ ಅಥವಾ ಅವರು ಹೇಳಿದ ಜಾಗಕ್ಕೆ ಹೋಗುವುದು ತಡವಾಯಿತೋ ಪ್ರಶ್ನೆಗಳ ಮಳೆಯನ್ನೇ ಸುರಿಸಿ, ಕೂಗಾಡಿ- ಕಿರುಚಾಡಿ, ರಂಪ- ರಾದ್ಧಾಂತ ಆಗಿಬಿಡುತ್ತದೆ. ಪ್ರೀತಿಸುವಾಗ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದವರು ವಿಲವಿಲ ಅಂದುಹೋಗ್ತಾರೆ.
ಮೀನ
ಈ ರಾಶಿಯವರು ಪದೇಪದೇ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇರುತ್ತೆ. ಮತ್ತು ಈ ವಿಚಾರವನ್ನು ಸಂಗಾತಿಗೆ ಹೇಳಿಯೂ ಹೇಳುತ್ತಾರೆ. ಅಯ್ಯೋ, ಪ್ರೀತಿಸಿ ದೂರವಾಗಿರುವ ದುಃಖದಲ್ಲಿದ್ದಾರೆ. ಇವರನ್ನು ಸಮಾಧಾನ ಮಾಡಬೇಕು, ಇವರ ಬಾಳಿಗೆ ದಾರಿ ಆಗಬೇಕು ಅಂತೆಲ್ಲ ಯೋಚಿಸಿ ಹತ್ತಿರವಾಗುವವರು ಜಾಸ್ತಿ. ಆದರೆ ಪ್ರೀತಿಯಲ್ಲಿ ಇರುವಾಗಲೇ ಈ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು. ಮತ್ತೆ ಮೀನ ರಾಶಿಯವರೂ ಅಷ್ಟೆ. ಇಷ್ಟ ಆಯಿತು ಅಂದಿದ್ದೆಲ್ಲ ಪ್ರೀತಿ ಅಂದುಕೊಳ್ಳಬಾರದು. ಹಾಗೊಂದು ವೇಳೆ ಇಷ್ಟ ಆದವರನ್ನೆಲ್ಲ ಮದುವೆ ಆಗ್ತೀನಿ ಅಂತ ಹೊರಟರೆ ಸಂಖ್ಯೆ ಏನಾಗಬಹುದು ಹೇಳಿ. ಆದ್ದರಿಂದ ಈ ರಾಶಿಯವರು ಹಾಗೂ ಇವರನ್ನು ಪ್ರೀತಿಸುವವರು ‘ಫ್ಯಾಕ್ಟ್ ಚೆಕ್’ ಮಾಡಿಕೊಳ್ಳುವುದು ಒಳ್ಳೆಯದು.
Published On - 5:42 am, Thu, 22 June 23