Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

|

Updated on: May 18, 2023 | 6:15 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 18 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ 02:05 ರಿಂದ 03:41ರ ವರೆಗೆ, ಯಮಘಂಡ ಕಾಲ 06:05 ರಿಂದ 07:41ರ ವರೆಗೆ, ಗುಳಿಕ ಕಾಲ 09:17 ರಿಂದ 10:53ರ ವರೆಗೆ.

ಧನುಸ್ಸು: ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಇತರರಿಗೆ ಇಷ್ಟವಾದೀತು. ಹಳೆಯ ನೋವನ್ನು ಸ್ಮರಿಸಿಕೊಳ್ಳುವುದು ಬೇಡ. ಆದಯಾದ ಮೂಲವನ್ನು ಹುಡುಕಿಕೊಳ್ಳುವಿರಿ. ಮನೆಗೆ ಹಣದ ಸಹಾಯ ಮಾಡಬೇಕಾದ ಸ್ಥಿತಿ ಬರಬಹುದು. ನಿಮ್ಮವರ ಗೌಪ್ಯತೆಯನ್ನು ಕಾಮಾಡಿಕೊಳ್ಳಿ. ಇಲ್ಲವಾದರೆ ಅವಮಾನವಾದೀತು. ದೂರದ ಪ್ರಯಾಣವನ್ನು ಮಾಡಲೇಬೇಕಾದ ಸ್ಥಿತಿ ಬರಬಹುದು. ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ. ಉತ್ಸಾಹಕ್ಕೆ ಭಂಗ ಬರುವ ಮಾತುಗಳನ್ನು ಕೇಳಬೇಕಾದೀತು. ಅದನ್ನು ಅಲ್ಲಿಯೇ ಬಿಟ್ಟು ಮುನ್ನಡೆಯಿರಿ.

ಮಕರ: ಇಂದಿನ ಕೆಲಸವನ್ನು ಪೂರೈಸಲು ಅನಾರೋಗ್ಯವು ಅಡ್ಡವಾಗಬಹುದು. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟು ತೊಂದರೆಗೆ ಸಿಕ್ಕಿಕೊಳ್ಳಬೇಡಿ. ಆಕರ್ಷಕ ವಸ್ತುಗಳಿಗೆ ಮನಸೋಲಬಹುದು. ಇಂದು ಒಳ್ಳೆಯ ವಿಶ್ವಾಸದ ಜೊತೆ ದಿನವನ್ನು ಆರಂಭಿಸುವಿರಿ. ಸಾಮಾಜಿಕ ಕಲಹವನ್ನು ಪರಿಹರಿಸಲು ನಿಮ್ಮ ಸಹಾಯವನ್ನು ಕೇಳಬಹುದು. ಆಪ್ತರ ಜೊತೆ ಮಾತನಾಡಿ ಇಂದಿನ ಹೆಚ್ಚು ಸಮಯವನ್ನು ಕಳೆಯುವಿರಿ. ಆರ್ಥಿಕ ಸಂಕಷ್ಟವು ನಿಮ್ಮನ್ನು ಬಾಧಿಸಿದರೂ ಅದನ್ನು ಲೀಲಾಜಾಲವಾಗಿ ಮುಗಿಸುವಿರಿ. ಉದ್ಯಮದಲ್ಲಿ ಪ್ರಗತಿ ಇರಲಿದೆ.

ಕುಂಭ: ನಗಲು ಹಿಂದೆ ಮುಂದೆ ನೋಡುವ ಅವಶ್ಯಕತೆಯಿಲ್ಲ. ನಗುವನ್ನು ಸಂಭ್ರಮಿಸಿ.‌ಮನಃಪೂರ್ತಿಯಾಗಿ ನಗಿ. ಸಣ್ಣ ಪುಟ್ಟ ನೋವುಗಳೂ ಕರಗಿ ನಗುವಾಗಿ ಹರಿಯಲಿ. ಸ್ನೇತರ ಜೊತೆ ಸುತ್ತಡಿ ಹಣವನ್ನು ಖರ್ಚು ಮಾಡುವಿರಿ. ಇದು ಸಂತೋಷದಿಂದ ಮಾಡಿದ್ದಾಗಿರುತ್ತದೆ. ವಿಶೇಷವಾದ ಸ್ಥಾನ, ಮಾನಗಳು ಬರುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಕಲಹವು ಸಹಜವೆನ್ನುವಷ್ಟು ಆಗಿದೆ. ಸಮಾಧಾನವೂ ಹಾಗೇ ಆಗಲಿ. ಹಿರಿಯರ ಮಾತಿಗೆ ಟೀಕೆ, ವ್ಯಾಖ್ಯಾನಗಳು ಬೇಡ. ಅವರ ಮಾತನ್ನು ಅನುಸರಿಸಿ. ಅಧ್ಯಾತ್ಮವನ್ನು ಹೆಚ್ಚು ಇಷ್ಟಪಡುವಿರಿ.

ಮೀನ: ಬೋಧಕವರ್ಗದವರಲ್ಲಿ ಹೆಚ್ಚು ಒತ್ತಡವಿರಬಹುದು. ಹೊಸ ಉತ್ಸಾಹವು ನಿಮ್ಮ ಕೆಲಸಗಳಿಗೆ ಪೂರವಾಗಿ ಇರಲಿದೆ. ಹಣದ ಹರಿವು ತಕ್ಕಮಟ್ಟಿಗೆ ಇರಲಿದೆ. ಕೆಟ್ಟ ಆರೋಗ್ಯವನ್ನು ಸರಿ ಮಾಡಿಕೊಳ್ಳಿ. ಪ್ರೀತಿಪಾತ್ರರ ವರ್ತನೆಯು ನಿಮಗೆ ಹಿಂಸೆಯನ್ನು ಕೊಟ್ಟೀತು. ನಿಮ್ಮ ಬಗ್ಗೆ ನೀವೇ ಅವಲೋಕನ ಮಾಡಿಕೊಳ್ಳಬೇಕಾಗಿದೆ. ಸಾಮರ್ಥ್ಯವನ್ನು ಸದ್ವಿನಿಯೋಗ ಮಾಡಿರಿ. ಟೀಕೆಗಳಿಗೆ ಕಿವಿಗಿಲೊಡದೇ ನಿಮ್ಮ ಕೆಲಸದಲ್ಲಿ ಮುನ್ನಡೆಯಿರಿ. ನಿಮ್ಮ ಸೌಂದರ್ಯದ ಬಗ್ಗೆ ಅತಿಯಾದ ಮೋಹವು ಇರಲಿದೆ. ಕಛೇರಿಯ ಕೆಲಸಗಳು ಸಲೀಸಾಗಿ ಆಗುವುದು.

-ಲೋಹಿತಶರ್ಮಾ – 8762924271 (what’s app only)