AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಪ್ರೀತಿ ಗೊಂದಲ ಸೃಷ್ಟಿಸಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಪ್ರೀತಿ ಗೊಂದಲ ಸೃಷ್ಟಿಸಬಹುದು
ಇಂದಿನ ರಾಶಿ ಭವಿಷ್ಯImage Credit source: stock.adobe
Rakesh Nayak Manchi
|

Updated on:May 19, 2023 | 10:13 PM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 19  ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಸೌಭಾಗ್ಯ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:41 ರಿಂದ 05:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ.

ಸಿಂಹ: ನಿಮ್ಮವರ ಮಾತುಗಳಿಂದ ಗಾಬರಿಯಾಗಲಿದ್ದೀರಿ. ಊಹಿಸದೇ ಇರುವ ಮಾತುಗಳನ್ನು ಕೇಳಬೇಕಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ಮನೆಯಿಂದ ದೂರ ಇರುವರು. ಮಕ್ಕಳ ಸಾಧನೆಯು ನಿಮಗೆ ಖುಷಿ ಕೊಡುವುದು. ಆಸ್ತಿ ಹಂಚಿಕೆಯ ವಿಚಾರದಲ್ಲಿ ಗಾಬರಿ ಬೇಡ. ತಾಯಿಯ ಕಡೆಯಿಂದ ನಿಮಗೆ ಆಗಬೇಕಾದ ಸಹಾಯವು ದೊರೆಯುಬುದು. ಅಸಂಬಂಧ ಮಾತುಗಳನ್ನು ಆಡಿ ಕೆಂಗಣ್ಣಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಉದ್ಯಮದಿಂದ ಸಾಕಷ್ಟು ಲಾಭವಿದ್ದರೂ ಅಸಮಾಧನವು ಕಾಡಬಹುದು. ಸಂಗಾತಿಯ ವಿಚಾರಕ್ಕೆ ನೀವು ತಲೆ ಹಾಕಬೇಡಿ. ಪಾಲುದಾರಿಕೆ ವಿಷಯವು ಪ್ರಸ್ತಾಪವಾದಾಗ ಪ್ರಯೋಜನವನ್ನು ತಿಳಿದುಕೊಳ್ಳಿ.

ಕನ್ಯಾ: ದೈಹಿಕ ಕಸರತ್ತಿನಿಂದ ನಿಮಗೆ ಅನಾರೋಗ್ಯ ಉಂಟಾಗಬಹುದು. ತಂದೆಯ ಆರೋಗ್ಯವು ಚೇತರಿಸಿಕೊಳ್ಳುವುದು. ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಳ್ಳಿ. ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಕೊಡುವಿರಿ. ನಿಮ್ಮ ದೌರ್ಬಲ್ಯಗಳು ಇತರರಿಗೆ ಸಹಾಯವಾದೀತು. ಸಹೋದರನ ಜೊತೆ ಆಪ್ತ ಮಾತುಕತೆ ನಡೆಯಲಿದೆ. ಸ್ನೇಹಿತರ ಸಹಾಯ ಪಡೆಯಲು ಧನವನ್ನು ವ್ಯಯಿಸಬೇಕಾಗುವುದು. ಅಪರಿಚಿತ ಕರೆಗಳಿಗೆ ಸೊಪ್ಪು ಹಾಕಬೇಡಿ. ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳನ್ನು ಕೇಳಬೇಕಾದೀತು.

ತುಲಾ: ಇಂದು ಸಂಬಂಧಗಳಿಗೆ ಬೆಲೆ ಕೊಡದೇ ಹಣದ ಹಿಂದೆ ಹೋಗಿ ಸಂಬಂಧಗಳನ್ನು ಹಾಳುಮಾಡಿಕೊಳ್ಳುವಿರಿ. ಕೆಲವು ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಇಷ್ಟು ದಿನ ಗೌಪ್ಯವಾಗಿದ್ದ ನಿಮ್ಮ ಪ್ರೇಮಪ್ರಕರಣವು ಇಂದುವೆಲ್ಲರಿಗೂ ತಿಳಿದೀತು. ಇಮ್ಮೊಬ್ಬರ ನಡುವೆ ಕಲಹ ತಂದು ನೀವು ಖುಷಿಪಡುವಿರಿ. ಆಹಾರದ ವ್ಯತ್ಯಾಸದಿಂದ ತೊಂದರೆಗಳು ಬಂದಾವು. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಸಕಾಲಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೋಲಬಹುದು. ಅಶಿಸ್ತು ನಿಮಗೆ ಕಿರಿಕಿರಿಯನ್ನು ತರಿಸೀತು. ಸಂಗಾತಿಗೆ ಸಂತೋಷವಾಗುವುದನ್ನು ಮಾಡಿರಿ.

ವೃಶ್ಚಿಕ: ಮಾನಸಿಕ ಸ್ವಾಸ್ಥ್ಯವನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದ ವಾರ್ತೆಗಳು ನಿಮಗೆ ಸಂತೋಷವನ್ನು ತರುವುದು. ಪ್ರೇಮವು ಯಾವುದೇ ಗೊಂದಲವನ್ನು ಸೃಷ್ಟಿಸಬಹುದು. ಸಣ್ಣ ಕೆಲಸವಾದರೂ ಇಂದೇ ಮುಗಿಸಿಕೊಳ್ಳಿ. ಅನಂತರವಾದರೆ ಅನ್ಯ ಕಾರ್ಯಗಳ ನಡುವೆ ವ್ಯಸ್ತರಾಗಬೇಕಾದೀತು. ಸಂಗಾತಿಯ ಅನಾರೋಗ್ಯದಿಂದ ಮನಸ್ಸು ಕುಗ್ಗಬಹುದು. ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ಇರಿಸಿಕೊಳ್ಳಿ ಒತ್ತಡದಿಂದ ದೂರವಿರಲು ಸಮೀಪದ ಉದ್ಯಾನವನವನ್ನು ಆಯ್ಕೆ ಮಾಡಿಕೊಳ್ಳಿ. ವ್ಯಾಪಾರಿಗಳಿಗೆ ಲಾಭದ ದಿನ. ಇಂದು ವಾಹನದಿಂದ ಬಿದ್ದು ಗಾಯಮಾಡಿಕೊಳ್ಳುವಿರಿ. ಜಾಗರೂಕರಾಗಿರಿ.

-ಲೋಹಿತಶರ್ಮಾ ಇಡುವಾಣಿ

Published On - 6:01 am, Fri, 19 May 23