Daily Horoscope: ಈ ರಾಶಿಯವರು ಸದಾ ಪ್ರಯತ್ನಶೀಲರು, ಹೊಸತನ ಬಯಸುವವರು
ಇಂದಿನ (2023 ಮೇ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಸೌಭಾಗ್ಯ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:41 ರಿಂದ 05:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ.
ಮೇಷ: ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಉತ್ಸಾಹವು ನಿಮ್ಮಲ್ಲಿ ಇರುವುದು. ಅಪ್ರಯೋಜಕ ಕೆಲಸಗಳನ್ನು ಮಾಡಲು ನೀವು ಹಿಂದೇಟು ಹಾಕಬಹುದು. ಸ್ನೇಹಿತರ ಸಜವಾಸದಿಂದನಿಮಗೆ ಅಪವಾದ ಬರಬಹುದು. ಪ್ರಯಾಣ ಮಾಡಬೇಕಾಗಿದ್ದರೂ ಭಯವು ನಿಮ್ಮನ್ನು ಕಾಡಬಹುದು. ನಿಮ್ಮ ಸಂಗಾತಿಯನ್ನು ಬೆಂಬಲಿಸಿ, ದುರ್ಬಲಗೊಂಡ ಬಂಧವನ್ನು ಮತ್ತೆ ಬಲಗೊಳಿಸಿಕೊಳ್ಳಿ. ಇಂದು ಶುಭದ ನಿರೀಕ್ಷೆಯಲ್ಲಿ ಇರುವಿರಿ. ಕೊಟ್ಟ ಸಾಲವು ಮರಳಿ ಬರುವ ಸಾಧ್ಯತೆ ಇದೆ. ಇದು ನಿಮ್ಮನ್ನು ಸಂತೋಷವಾಗಿ ಇಡಬಲ್ಲದು. ಕೆಲಸದ ಸ್ಥಳವನ್ನು ಶಿಸ್ತಿನಿಂದ ಇಟ್ಟುಕೊಳ್ಳುವಿರಿ.
ವೃಷಭ: ಹೊಸತನವನ್ನು ತಂದುಕೊಳ್ಳುವಲ್ಲಿ ನೀವು ಸದಾ ಪ್ರಯತ್ನಶೀಲರು. ಆದರೆ ಆಲಸ್ಯವನ್ನು ಬಿಡಬೇಕಾದೀತು. ಪ್ರೀತಿಗೋಸ್ಕರ ಹಣವನ್ನು ಖರ್ಚುಮಾಡುವಿರಿ. ಒಲ್ಲದ ಮನಸ್ಸಿಂದ ಕೆಲಸವನ್ನು ಮಾಡುವಿರಿ. ಇನ್ನೊಬ್ಬರು ಕೇಳಿದ ಸಹಾಯವನ್ನು ಪ್ರೀತಿಯಿಂದ ಮಾಡಿಕೊಡುವಿರಿ. ಅಪರಿಪೂರ್ಣ ಕೆಲಸದ ಯಾದಿಯನ್ನು ತಯಾರಿಸಿ ಮುಂದುವರಿಯಿರಿ. ಅಧ್ಯಾತ್ಮದಲ್ಲಿ ಆಸಕ್ತಿ ಇದ್ದರೂ ಸಮಯದ ಅಭಾವದಿಂದ ಅದು ಅಸಾಧ್ಯವಾದೀತು. ಗುರುಜನರ ಭೇಟಿಯಿಂದ ಮನಸ್ಸು ನೆಮ್ಮದಿಯಿಂದ ಇರಬಹುದು.
ಮಿಥುನ: ಉದ್ಯಮಿಗಳಿಗೆ ಕಳೆದ ಆರಂಭದ ದಿನಗಳನ್ನು ನೆನೆದು ಸಂತೋಷವಾಗಲಿದೆ. ಬಹಳಷ್ಟು ಖರ್ಚಿದ್ದು ಹಣದ ಹೊಂದಾಣಿಕೆ ಕಷ್ಟವಾದೀತು. ನಿಮ್ಮ ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಬಯಸುವಿರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಣಕಾಸಿನ ವ್ಯವಹಾರದ ಬಗ್ಗೆ ಗಂಭೀರ ನಿರ್ಧಾರ ತೆಗೆದುಕೊಳ್ಳಿ. ಕಛೇರಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವಿರಿ. ಪ್ರೀತಿಯನ್ನು ಇಷ್ಟಪಡುವುದಿಲ್ಲ. ಸ್ವಂತ್ರವಾಗಿರಲು ಇಚ್ಛಿಸುವಿರಿ. ಕುಟುಂಬದ ಜೊತೆ ಇದ್ದರೂ ಅಲ್ಲಿಂದ ದೂರವಿರಲು ಪ್ರಯತ್ನಿಸುವಿರಿ.
ಕಟಕ: ಆರಂಭದ ಉತ್ಸಾಹವು ಅಂತ್ಯದ ವರೆಗೆ ಇರಲಾರದು. ಆಹಾರವು ನಿಮ್ಮನ್ನು ಉತ್ಸಾಹದಿಂದ ಇಡುವುದು. ಇತರರಿಗೆ ಧನಸಹಾಯ ಮಾಡಿ ಕಳೆದುಕೊಳ್ಳುವಿರಿ. ಒಂದೇ ರೀತಿಯ ದಿನಚರಿಯಿಂದ ಬೇಸರಗೊಂಡು ಪ್ರಯಾಣದ ಹುರುಪು ನಿಮ್ಮಲ್ಲಿ ಕಾಣಲಿದೆ. ನಿಮ್ಮ ಮಾತುಗಳು ಇತರರಿಗೆ ಸ್ಫೂರ್ತಿಯಾದೀತು. ನಿಮ್ಮ ನಿರೀಕ್ಷೆಯಲ್ಲಿ ಇದ್ದವರಿಗೆ ಬೇಸರ ಮಾಡಿಸಬೇಡಿ. ಮಕ್ಕಳಿಗೆ ಔದಾರ್ಯ ತೋರಿ, ಅವರ ದೃಷ್ಟಿಯಲ್ಲಿ ದೊಡ್ಡವರಾಗುವಿರಿ. ಶಾರೀರಿಕ ಆಯಾಸವನ್ನು ವಿಶ್ರಾಂತಿಯಿಂದ ಪರಿಹರಿಸಿಕೊಳ್ಳಿ. ಒತ್ತಡಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ.
ಸಿಂಹ: ನಿಮ್ಮವರ ಮಾತುಗಳಿಂದ ಗಾಬರಿಯಾಗಲಿದ್ದೀರಿ. ಊಹಿಸದೇ ಇರುವ ಮಾತುಗಳನ್ನು ಕೇಳಬೇಕಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ಮನೆಯಿಂದ ದೂರ ಇರುವರು. ಮಕ್ಕಳ ಸಾಧನೆಯು ನಿಮಗೆ ಖುಷಿ ಕೊಡುವುದು. ಆಸ್ತಿ ಹಂಚಿಕೆಯ ವಿಚಾರದಲ್ಲಿ ಗಾಬರಿ ಬೇಡ. ತಾಯಿಯ ಕಡೆಯಿಂದ ನಿಮಗೆ ಆಗಬೇಕಾದ ಸಹಾಯವು ದೊರೆಯುಬುದು. ಅಸಂಬಂಧ ಮಾತುಗಳನ್ನು ಆಡಿ ಕೆಂಗಣ್ಣಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಉದ್ಯಮದಿಂದ ಸಾಕಷ್ಟು ಲಾಭವಿದ್ದರೂ ಅಸಮಾಧನವು ಕಾಡಬಹುದು. ಸಂಗಾತಿಯ ವಿಚಾರಕ್ಕೆ ನೀವು ತಲೆ ಹಾಕಬೇಡಿ. ಪಾಲುದಾರಿಕೆ ವಿಷಯವು ಪ್ರಸ್ತಾಪವಾದಾಗ ಪ್ರಯೋಜನವನ್ನು ತಿಳಿದುಕೊಳ್ಳಿ.
ಕನ್ಯಾ: ದೈಹಿಕ ಕಸರತ್ತಿನಿಂದ ನಿಮಗೆ ಅನಾರೋಗ್ಯ ಉಂಟಾಗಬಹುದು. ತಂದೆಯ ಆರೋಗ್ಯವು ಚೇತರಿಸಿಕೊಳ್ಳುವುದು. ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಳ್ಳಿ. ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಕೊಡುವಿರಿ. ನಿಮ್ಮ ದೌರ್ಬಲ್ಯಗಳು ಇತರರಿಗೆ ಸಹಾಯವಾದೀತು. ಸಹೋದರನ ಜೊತೆ ಆಪ್ತ ಮಾತುಕತೆ ನಡೆಯಲಿದೆ. ಸ್ನೇಹಿತರ ಸಹಾಯ ಪಡೆಯಲು ಧನವನ್ನು ವ್ಯಯಿಸಬೇಕಾಗುವುದು. ಅಪರಿಚಿತ ಕರೆಗಳಿಗೆ ಸೊಪ್ಪು ಹಾಕಬೇಡಿ. ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳನ್ನು ಕೇಳಬೇಕಾದೀತು.
ತುಲಾ: ಇಂದು ಸಂಬಂಧಗಳಿಗೆ ಬೆಲೆ ಕೊಡದೇ ಹಣದ ಹಿಂದೆ ಹೋಗಿ ಸಂಬಂಧಗಳನ್ನು ಹಾಳುಮಾಡಿಕೊಳ್ಳುವಿರಿ. ಕೆಲವು ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಇಷ್ಟು ದಿನ ಗೌಪ್ಯವಾಗಿದ್ದ ನಿಮ್ಮ ಪ್ರೇಮಪ್ರಕರಣವು ಇಂದುವೆಲ್ಲರಿಗೂ ತಿಳಿದೀತು. ಇಮ್ಮೊಬ್ಬರ ನಡುವೆ ಕಲಹ ತಂದು ನೀವು ಖುಷಿಪಡುವಿರಿ. ಆಹಾರದ ವ್ಯತ್ಯಾಸದಿಂದ ತೊಂದರೆಗಳು ಬಂದಾವು. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಸಕಾಲಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೋಲಬಹುದು. ಅಶಿಸ್ತು ನಿಮಗೆ ಕಿರಿಕಿರಿಯನ್ನು ತರಿಸೀತು. ಸಂಗಾತಿಗೆ ಸಂತೋಷವಾಗುವುದನ್ನು ಮಾಡಿರಿ.
ವೃಶ್ಚಿಕ: ಮಾನಸಿಕ ಸ್ವಾಸ್ಥ್ಯವನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದ ವಾರ್ತೆಗಳು ನಿಮಗೆ ಸಂತೋಷವನ್ನು ತರುವುದು. ಪ್ರೇಮವು ಯಾವುದೇ ಗೊಂದಲವನ್ನು ಸೃಷ್ಟಿಸಬಹುದು. ಸಣ್ಣ ಕೆಲಸವಾದರೂ ಇಂದೇ ಮುಗಿಸಿಕೊಳ್ಳಿ. ಅನಂತರವಾದರೆ ಅನ್ಯ ಕಾರ್ಯಗಳ ನಡುವೆ ವ್ಯಸ್ತರಾಗಬೇಕಾದೀತು. ಸಂಗಾತಿಯ ಅನಾರೋಗ್ಯದಿಂದ ಮನಸ್ಸು ಕುಗ್ಗಬಹುದು. ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ಇರಿಸಿಕೊಳ್ಳಿ ಒತ್ತಡದಿಂದ ದೂರವಿರಲು ಸಮೀಪದ ಉದ್ಯಾನವನವನ್ನು ಆಯ್ಕೆ ಮಾಡಿಕೊಳ್ಳಿ. ವ್ಯಾಪಾರಿಗಳಿಗೆ ಲಾಭದ ದಿನ. ಇಂದು ವಾಹನದಿಂದ ಬಿದ್ದು ಗಾಯಮಾಡಿಕೊಳ್ಳುವಿರಿ. ಜಾಗರೂಕರಾಗಿರಿ.
ಧನುಸ್ಸು: ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನು ಮಾಡಬೇಕಾದೀತು. ಹಣವನ್ನು ಸಂಪಾದಿಸಬೇಕು ಎನ್ನುವ ಅತಿಯಾದ ಆಸೆ ನಿಮ್ಮ ಮನಸ್ಸಿನಲ್ಲಿ ಬೇರೂರುವುದು. ವಿದೇಶದ ಬಂಧುಗಳು ನಿಮಗೆ ಸಹಾಯವನ್ನು ಮಾಡಲಿದ್ದಾರೆ. ರಪ್ತು ವ್ಯವಹಾರಗಳು ನಿಮಗೆ ಅಧಿಕ ಆದಾಯವನ್ನು ತಂದುಕೊಟ್ಟೀತು. ನಿಮ್ಮ ಸಮಯವು ಯೋಜಿತ ಕಾರ್ಯಕ್ಕೆ ವಿನಿಯೋಗವಾಗದೇ ಅನ್ಯ ಕಾರ್ಯಕ್ಕೆ ಬಳಕೆಯಾದೀತು. ನಿಮಗೆ ಬರಬೇಕಾದುದನ್ನು ಹೋರಾಟದಿಂದ ಪಡೆದುಕೊಳ್ಳುವಿರಿ. ಪತ್ನಿಯ ದೌರ್ಬಲ್ಯಗಳನ್ನು ಅಸ್ತ್ರಮಾಡಿಕೊಳ್ಳುವಿರಿ.
ಮಕರ: ಆರೋಗ್ಯವು ಸುದೃಢವಾಗಿ ಇರಲಿದೆ. ಸದಾ ಸಂತೋಷದಿಂದ ಇರುವುದೇ ನಿಮಗೆ ನಿಮ್ಮ ಉತ್ಸಾಹದ ಗುಟ್ಟಾಗಿದೆ. ತಾಯಿಗಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಸಮಾರಂಭದಲ್ಲಿ ಪ್ರಭಾವೀ ಜನರ ಭೇಟಿಯಾಗಲಿದೆ. ಬಾಂಧವ್ಯದಲ್ಲಿ ಬಿರುಕು ಬಂದಿದ್ದು ಅದನ್ನು ಸರಿ ಮಾಡಿಕೊಳ್ಳುವಿರಿ. ಗುಂಪಿನಲ್ಲಿ ಕೆಲಸ ಮಾಡುವುದನ್ನು ಇಷ್ಟಪಡುವಿರಿ. ವೈವಾಹಿಕ ಜೀವನದ ಸುಖದ ಕ್ಷಣಗಳು ನಿಮ್ಮದಾಗಲಿದೆ. ಬುದ್ಧಿಗೆ ಇಂದು ಕಸರತ್ತು ಕೊಡುವಿರಿ. ಪ್ರೇಮ ಪರೀಕ್ಷೆಯಲ್ಲಿ ಪಾಸಾಗುವುದು ಸುಲಭವಿಲ್ಲ. ದುಂದುವೆಚ್ಚಗಳು ನಿಮಗೆ ಆತಂಕವನ್ನು ಉಂಟುಮಾಡಬಹುದು.
ಕುಂಭ: ವಾಹನದ ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಲಾಭವಾಗುವ ಸಾಧ್ಯತೆ ಹೆಚ್ಚು. ಆಕಸ್ಮಿಕ ಧನಲಾಭವು ನಿಮ್ಮನ್ನು ಖುಷಿಯಾಗಿಡಲಿದೆ. ರಾಜಕೀಯವಾಗಿ ಪ್ರೇರಿತವಾದ ಮಾತುಗಳು ನಿಮ್ಮಿಂದ ಬರಬಹುದು. ಶ್ರದ್ಧೆ ಇಲ್ಲದೇ ಇದ್ದರೂ ಕಾರ್ಯಗಳನ್ನು ಮಾಡಬೇಕಾದೀತು. ಮನಸ್ಸು ಚಂಚಲವಾದಾಗ ಹಿರಿಯರ ಮಾತುಗಳನ್ನು ಕೇಳಿ. ಅದು ನಿಮಗೆ ಹಿತವೆನಿಸೀತು. ದೂರದ ಬಂಧುಗಳು ಇಂದು ಪರಿಚಿತರಾಗಿ ಹತ್ತಿರವಾಗಬಹುದು. ವಿದ್ಯಾರ್ಥಿಗಳು ಓದಿನತ್ತ ಗಮನಕೊಡುವುದು ಒಳ್ಳೆಯದು. ಕೃತಘ್ನತೆ ಒಳ್ಳೆಯದಲ್ಲ.
ಮೀನ: ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಿರೋಧಿಗಳು ತಡಯಬಹುದು. ಬಂಧುಗಳ ಸಹಕಾರದಿಂದ ನಿಮ್ಮಋಣ ಬಾಧೆ ಸದ್ಯ ತೀರುವುದು. ಹದಗೆಟ್ಟ ಆರೋಗ್ಯವು ಸರಿಯಾಗುವುದು. ವಿವಾಹಕ್ಕೆ ತಡೆಗಳು ಬರುವ ಸಾಧ್ಯತೆ ಇದೆ.ನಿಮ್ಮನ್ನು ಪಕ್ಕಕ್ಕೆ ಸರಿಸಿ ಕೆಲಸಗಳನ್ನು ಮಾಡಿಕೊಳ್ಳುವರು. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಕೆ ಇರಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿ ಹೆಚ್ಚಬಹುದು. ಮಾನಸಿಕವಾಗಿ ನೀವು ಸ್ವಲ್ಪ ಕುಗ್ಗುವಿರಿ. ನಿದ್ರಾಹೀನತೆಯು ನಿಮ್ಮನ್ನು ಆಲಸ್ಯಕ್ಕೆ ಒಯ್ಯಬಹುದು.
ಲೋಹಿತ ಶರ್ಮಾ – 8762924271 (what’s app only)