AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 18, 2023 | 6:00 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 18 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ 02:05 ರಿಂದ 03:41ರ ವರೆಗೆ, ಯಮಘಂಡ ಕಾಲ 06:05 ರಿಂದ 07:41ರ ವರೆಗೆ, ಗುಳಿಕ ಕಾಲ 09:17 ರಿಂದ 10:53ರ ವರೆಗೆ.

ಸಿಂಹ: ಇನ್ನೊಬ್ಬರ ಪ್ರಭಾವದ ಮೇಲೆ ನೀವು ಕೆಲಸವನ್ನು ಪಡೆಯುವಿರಿ. ಆಪ್ತರಿಂದ ಅನಿರೀಕ್ಷಿತ ಪಾರಿತೋಷಕಗಳು ಸಿಗಬಹುದು. ಸಂಗಾತಿಯನ್ನು ಮಾತಿನಿಂದ ನೋಯಿಸುವಿರಿ. ಅನಂತರ ಸಮಾಧಮಾಡುವುದು ಅನಿವಾರ್ಯವಾದೀತು. ಮನಸ್ಸನ್ನು ಅರ್ಥಮಾಡಿಕೊಂಡು ಬೇರೆಯವರ ಜೊತೆ ವ್ಯವಹಾರ ಮಾಡಿ. ಪ್ರಯಾಣವು ಶುಭಪ್ರದವಾದೀತು. ಉದ್ಯಮದಲ್ಲಿ ಸಣ್ಣ ಪ್ರಗತಿ ಇರಬಹುದು. ಕಛೇರಿಯಲ್ಲಿ ರಜ ಹಾಕಲು ಸುಳ್ಳು ನೆಪವನ್ನು ತೋರುವಿರಿ. ಖರೀದಿಗೆ ಹೆಚ್ಚಿನ ಸಮಯವನ್ನು ಮೀಸಲಿಡುವಿರಿ.

ಕನ್ಯಾ: ಆರೋಗ್ಯವನ್ನು ಸುಧಾರಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿರುವುದು.‌ ಮಾನಸಿಕವಾದ ಯಾವ ಕ್ಷೋಭೆಯನ್ನೂ ಮನಸ್ಸಿಗೆ ತಂದುಕೊಳ್ಳದೇ ಚಿತ್ತವಿಶ್ರಾಂತಿಯನ್ನೂ ಕೊಡಿ. ಸಂಗಾತಿಯು ನಿಮ್ಮ ಪೂರ್ವವೃತ್ತಾಂತವನ್ನು ಬಿಚ್ಚಿಡಬಹುದು. ಅತಿಯಾದ ನಾಚಿಕೆಯಾಗಬಹುದು‌. ಕೆಲಸವನ್ನು ಬದಲಿಸುವ ಯೋಚನೆ ಇರಲಿದೆ. ಹೊಸ ಸಂಗತಿಗಳನ್ನು ಕಲಿಯುವಿರಿ. ದೇಹದ ಬಗ್ಗೆ ಹೆಚ್ಚು ಮಮಕಾರ ಇರಲಿದೆ. ಬರಬೇಕಾದ ಹಣದಲ್ಲಿ ಸಂಶಯ ಕಾಡಬಹುದು. ಹೊಸ ವಿಷಯವನ್ನು ಕಲಿಯಲು ಆಲೋಚಿಸುವಿರಿ.

ತುಲಾ: ಹಣದ ಸಮಸ್ಯೆಗಳು ತಾನಾಗಿಯೇ ನಿವಾರಣೆಯಾಗುವುದು. ಕಣ್ಮುಂದೆ ಇಲ್ಲದವರ ನೆನಪು ಇಂದು ಕಾಡಬಹುದು. ನಿಮ್ಮ ತಪ್ಪುಗಳನ್ನು ಗಂಭೀರವಾಗಿ ಸ್ವೀಕರಿಸಿ, ತಿದ್ದಿಕೊಳ್ಳುವ ಪ್ರಯತ್ನ ಮಾಡುವಿರಿ. ನಿಮ್ಮವರ ಬಗ್ಗೆ ದೂರು ಕೊಡಬಹುದು ನಿಮ್ಮ ಬಳಿ.‌ ಅದನ್ನು ಸಮಾಧಾನ ಚಿತ್ತದಿಂದ ಸ್ವೀಕರಿಸಿ. ಪಾಲುದಾರಿಕೆಯಲ್ಲಿ ಹೊಸ ಕಾರ್ಯಗಳನ್ನು ಆರಂಭಿಸಲು ಆಲೋಚಿಸುವಿರಿ‌. ಅನಗತ್ಯ ವಸ್ತುಗಳ ಬಗ್ಗೆ ಆಸೆ ಬೇಡ. ಸಮಯವು ನಿಮ್ಮನ್ನು ಕಾಯುವುದಿಲ್ಲ. ಮನೆಯಲ್ಲಿ ನೋವಿನ ಮಾತನ್ನು ಆಡಬೇಡಿ.

ವೃಶ್ಚಿಕ: ಧಾರ್ಮಿಕ ಆಚರಣೆಗಳನ್ನು ಬಹಳ ಕುತೂಹಲದಿಂದ ಮಾಡುವಿರಿ. ಅವಸರದಲ್ಲಿ ಪ್ರಯಾಣವನ್ನು ಮಾಡಬೇಡಿ. ಸಾವಧಾನತೆವಿರಲಿ. ಕೇಳಿದವರಿಗೆ ಆಗದು ಎಂದು ಹೇಳದೇ ಇರುವುದನ್ನು ಕೊಡಿ. ಸಂತೃಪ್ತಿಯು ನಿಮಗೆ ಸಿಗಬಹುದು. ಸಂಗಾತಿಯ ಆಸೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ದಿನವನ್ನು ಸುಂದರವಾಗಿ ಮಾಡಿಕೊಳ್ಳಲು ಮೊದಲೇ ಯೋಚಿಸಿ. ನಿದ್ರಾಹೀನತೆಯು ನಿಮ್ಮ ಅಂತಸ್ಸತ್ತ್ವವನ್ನು ಕುಗ್ಗಿಸೀತು. ನಿಯಮಗಳನ್ನು ಪಾಲಿಸುವ ಪ್ರಯತ್ನ‌ಮಾಡಿ. ಪರರ ನ್ಯೂನತೆಗಳ ಬಗ್ಗೆ ಆಡಿಕೊಳ್ಳುವುದು ಬೇಡ.