Daily Horoscope: ಈ ರಾಶಿಯವರಿಗೆ ಅಂದುಕೊಂಡ ಕೆಲಸವು ಆಗದೇ ಹತಾಶಾಭಾವವು ಮೂಡಬಹುದು
ಇಂದಿನ (2023 ಮೇ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ 02:05 ರಿಂದ 03:41ರ ವರೆಗೆ, ಯಮಘಂಡ ಕಾಲ 06:05 ರಿಂದ 07:41ರ ವರೆಗೆ, ಗುಳಿಕ ಕಾಲ 09:17 ರಿಂದ 10:53ರ ವರೆಗೆ.
ಮೇಷ: ಅಂದುಕೊಂಡ ಕೆಲಸವು ಆಗದೇ ಹತಾಶಾಭಾವವು ಮೂಡಬಹುದು. ಅಪರಿಚತವಾದ ಹುದ್ದೆಗಳನ್ನು ಅನಿವಾರ್ಯವಾಗಿ ಅಲಂಕರಿಸಬೇಕಾದೀತು. ಆಸ್ತಿಯ ಇಬ್ಬಾಗಕ್ಕೆ ಸಹಿ ಹಾಕಲೇಬೇಕಾದೀತು. ಅತಿಯಾದ ನಗುವು ಬೇಡ. ಕಳೆದುಕೊಂಡವರ ಬಗ್ಗೆ ಪಶ್ಚಾತ್ತಾಪ ಇರಲಿದೆ. ನಿಮ್ಮ ವಿನಮ್ರತೆಯು ನಿಮಗೆ ವರದಾನವಾಗಿದೆ. ಕಲಾವಿದರು ಹೆಚ್ಚಿನ ಕೀರ್ತಿಯನ್ನು ಪಡೆಯುವರು. ಎಲ್ಲರೂ ಸ್ವಾರ್ಥಿಗಳಂತೆ ಕಂಡಾರು. ಎಲ್ಲದಕ್ಕೂ ಕಾರಣವನ್ನು ಹುಡುಕಿ ಪ್ರಯೋಜನವಾಗದು.
ವೃಷಭ: ಎಲ್ಲರ ಮಾತುಗಳು ನಿಮಗೆ ಕರ್ಣಕಠೋರವಾದೀತು. ಗೃಹೋಪಯೋಗಿ ವಸ್ತುಗಳು ನಿಮಗೆ ದುಬಾರಿ ಎನಿಸಬಹುದು. ಹತ್ತಿರದವರ ಬಳಿ ಹಣವನ್ನು ಪಡೆಯುವಿರಿ. ವಾಸಸ್ಥಳವನ್ನು ಬದಲಿಸಬಹುದು. ಪ್ರತಿಕೂಲ ವಾತಾವರಣವನ್ನು ಉದ್ವೇಗದಿಂದ ಬಗೆಹರಿಸಿಕೊಳ್ಳುವುದು ಬೇಡ. ಅನಗತ್ಯವಾಗಿ ಖರ್ಚನ್ನು ಮಾಡಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಸ್ವಾತಂತ್ರ್ಯವನ್ನು ಬಯಸುವವರು. ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ಮನೆಗೆಲಸವೇ ನಿಮಗೆ ಆಯಾಸ ತರಿಸೀತು.
ಮಿಥುನ: ನಿಮ್ಮವರಿಗೆ ಆಡಿದ ಕಠೋರ ಮಾತುಗಳು ನಿಮ್ಮನ್ನು ಸಿಟ್ಟಿಗೇರಿಸುವುದು. ಹಣವು ವ್ಯಯವಾಗುವ ಸಾಧ್ಯತೆ ಇದೆ. ನಿಮ್ಮ ಕನಸುಗಳು ನಿನಗೆ ಉತ್ಸಾಹವನ್ನು ತಂದುಕೊಡುತ್ತವೆ. ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸುವಿರಿ. ನಿಮ್ಮ ಆಲೋಚನೆಗಳು ಇಷ್ಟವಾದೀತು. ಇರುವ ಸಮಯವನ್ನು ಕುಟುಂಬದ ಜೊತೆ ಕಳೆಯಿರಿ. ನೆಮ್ಮದಿ ಸಿಗಲಿದೆ. ಉಚಿತವಾದುದನ್ನು ಪಡೆಯಲು ಪ್ರಯತ್ನಿಸಿ. ಮಕ್ಕಳು ನಿಮ್ಮನ್ನು ಇಷ್ಟಪಡುವರು. ಸಾಹಸಕ್ಕೆ ಆದಷ್ಟು ಕೈ ಹಾಕುವುದು ಬೇಡ.
ಕಟಕ: ಸಂತೋಷವಾಗಿರಲು ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿದರೂ ಅದು ವ್ಯತ್ಯಾಸ ಆಗಬಹುದು. ಅಥವಾ ಇನ್ನೇನೋ ಆಗಬಹುದು. ಇದು ನಿಮ್ಮನ್ನು ಸಿಟ್ಟಿಗೇಳಿಸುತ್ತದೆ. ಎಲ್ಲರ ಜೊತೆ ಕಲಹವಾಡುವಿರಿ. ಕಿರಿಯರ ಭಾವನೆ ಸ್ಪಂದಿಸುವಿರಿ. ನಿರಂತರ ಶ್ರಮದಿಂದ ಆಯಾಸವಾದ ನಿಮಗೆ ಇಂದು ಸ್ವಲ್ಪ ಬಿಡುಗಡೆಯಂತೆ ತೋರುವುದು. ದೇವರ ಕಾರ್ಯದಲ್ಲಿ ತೊಡಗುವಿರಿ. ನಿಮ್ಮ ಮಾತುಗಳು ಬಲಿಶವೆನಿಸಬಹುದು ಕೆಲವರಿಗೆ. ಭೂಮಿಯ ವ್ಯವಹಾರದಲ್ಲಿ ಸರಿಯಾದ ಯೋಜನೆ ಇರಲಿ.
ಸಿಂಹ: ಇನ್ನೊಬ್ಬರ ಪ್ರಭಾವದ ಮೇಲೆ ನೀವು ಕೆಲಸವನ್ನು ಪಡೆಯುವಿರಿ. ಆಪ್ತರಿಂದ ಅನಿರೀಕ್ಷಿತ ಪಾರಿತೋಷಕಗಳು ಸಿಗಬಹುದು. ಸಂಗಾತಿಯನ್ನು ಮಾತಿನಿಂದ ನೋಯಿಸುವಿರಿ. ಅನಂತರ ಸಮಾಧಮಾಡುವುದು ಅನಿವಾರ್ಯವಾದೀತು. ಮನಸ್ಸನ್ನು ಅರ್ಥಮಾಡಿಕೊಂಡು ಬೇರೆಯವರ ಜೊತೆ ವ್ಯವಹಾರ ಮಾಡಿ. ಪ್ರಯಾಣವು ಶುಭಪ್ರದವಾದೀತು. ಉದ್ಯಮದಲ್ಲಿ ಸಣ್ಣ ಪ್ರಗತಿ ಇರಬಹುದು. ಕಛೇರಿಯಲ್ಲಿ ರಜ ಹಾಕಲು ಸುಳ್ಳು ನೆಪವನ್ನು ತೋರುವಿರಿ. ಖರೀದಿಗೆ ಹೆಚ್ಚಿನ ಸಮಯವನ್ನು ಮೀಸಲಿಡುವಿರಿ.
ಕನ್ಯಾ: ಆರೋಗ್ಯವನ್ನು ಸುಧಾರಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿರುವುದು. ಮಾನಸಿಕವಾದ ಯಾವ ಕ್ಷೋಭೆಯನ್ನೂ ಮನಸ್ಸಿಗೆ ತಂದುಕೊಳ್ಳದೇ ಚಿತ್ತವಿಶ್ರಾಂತಿಯನ್ನೂ ಕೊಡಿ. ಸಂಗಾತಿಯು ನಿಮ್ಮ ಪೂರ್ವವೃತ್ತಾಂತವನ್ನು ಬಿಚ್ಚಿಡಬಹುದು. ಅತಿಯಾದ ನಾಚಿಕೆಯಾಗಬಹುದು. ಕೆಲಸವನ್ನು ಬದಲಿಸುವ ಯೋಚನೆ ಇರಲಿದೆ. ಹೊಸ ಸಂಗತಿಗಳನ್ನು ಕಲಿಯುವಿರಿ. ದೇಹದ ಬಗ್ಗೆ ಹೆಚ್ಚು ಮಮಕಾರ ಇರಲಿದೆ. ಬರಬೇಕಾದ ಹಣದಲ್ಲಿ ಸಂಶಯ ಕಾಡಬಹುದು. ಹೊಸ ವಿಷಯವನ್ನು ಕಲಿಯಲು ಆಲೋಚಿಸುವಿರಿ.
ತುಲಾ: ಹಣದ ಸಮಸ್ಯೆಗಳು ತಾನಾಗಿಯೇ ನಿವಾರಣೆಯಾಗುವುದು. ಕಣ್ಮುಂದೆ ಇಲ್ಲದವರ ನೆನಪು ಇಂದು ಕಾಡಬಹುದು. ನಿಮ್ಮ ತಪ್ಪುಗಳನ್ನು ಗಂಭೀರವಾಗಿ ಸ್ವೀಕರಿಸಿ, ತಿದ್ದಿಕೊಳ್ಳುವ ಪ್ರಯತ್ನ ಮಾಡುವಿರಿ. ನಿಮ್ಮವರ ಬಗ್ಗೆ ದೂರು ಕೊಡಬಹುದು ನಿಮ್ಮ ಬಳಿ. ಅದನ್ನು ಸಮಾಧಾನ ಚಿತ್ತದಿಂದ ಸ್ವೀಕರಿಸಿ. ಪಾಲುದಾರಿಕೆಯಲ್ಲಿ ಹೊಸ ಕಾರ್ಯಗಳನ್ನು ಆರಂಭಿಸಲು ಆಲೋಚಿಸುವಿರಿ. ಅನಗತ್ಯ ವಸ್ತುಗಳ ಬಗ್ಗೆ ಆಸೆ ಬೇಡ. ಸಮಯವು ನಿಮ್ಮನ್ನು ಕಾಯುವುದಿಲ್ಲ. ಮನೆಯಲ್ಲಿ ನೋವಿನ ಮಾತನ್ನು ಆಡಬೇಡಿ.
ವೃಶ್ಚಿಕ: ಧಾರ್ಮಿಕ ಆಚರಣೆಗಳನ್ನು ಬಹಳ ಕುತೂಹಲದಿಂದ ಮಾಡುವಿರಿ. ಅವಸರದಲ್ಲಿ ಪ್ರಯಾಣವನ್ನು ಮಾಡಬೇಡಿ. ಸಾವಧಾನತೆವಿರಲಿ. ಕೇಳಿದವರಿಗೆ ಆಗದು ಎಂದು ಹೇಳದೇ ಇರುವುದನ್ನು ಕೊಡಿ. ಸಂತೃಪ್ತಿಯು ನಿಮಗೆ ಸಿಗಬಹುದು. ಸಂಗಾತಿಯ ಆಸೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ದಿನವನ್ನು ಸುಂದರವಾಗಿ ಮಾಡಿಕೊಳ್ಳಲು ಮೊದಲೇ ಯೋಚಿಸಿ. ನಿದ್ರಾಹೀನತೆಯು ನಿಮ್ಮ ಅಂತಸ್ಸತ್ತ್ವವನ್ನು ಕುಗ್ಗಿಸೀತು. ನಿಯಮಗಳನ್ನು ಪಾಲಿಸುವ ಪ್ರಯತ್ನಮಾಡಿ. ಪರರ ನ್ಯೂನತೆಗಳ ಬಗ್ಗೆ ಆಡಿಕೊಳ್ಳುವುದು ಬೇಡ.
ಧನುಸ್ಸು: ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಇತರರಿಗೆ ಇಷ್ಟವಾದೀತು. ಹಳೆಯ ನೋವನ್ನು ಸ್ಮರಿಸಿಕೊಳ್ಳುವುದು ಬೇಡ. ಆದಯಾದ ಮೂಲವನ್ನು ಹುಡುಕಿಕೊಳ್ಳುವಿರಿ. ಮನೆಗೆ ಹಣದ ಸಹಾಯ ಮಾಡಬೇಕಾದ ಸ್ಥಿತಿ ಬರಬಹುದು. ನಿಮ್ಮವರ ಗೌಪ್ಯತೆಯನ್ನು ಕಾಮಾಡಿಕೊಳ್ಳಿ. ಇಲ್ಲವಾದರೆ ಅವಮಾನವಾದೀತು. ದೂರದ ಪ್ರಯಾಣವನ್ನು ಮಾಡಲೇಬೇಕಾದ ಸ್ಥಿತಿ ಬರಬಹುದು. ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ. ಉತ್ಸಾಹಕ್ಕೆ ಭಂಗ ಬರುವ ಮಾತುಗಳನ್ನು ಕೇಳಬೇಕಾದೀತು. ಅದನ್ನು ಅಲ್ಲಿಯೇ ಬಿಟ್ಟು ಮುನ್ನಡೆಯಿರಿ.
ಮಕರ: ಇಂದಿನ ಕೆಲಸವನ್ನು ಪೂರೈಸಲು ಅನಾರೋಗ್ಯವು ಅಡ್ಡವಾಗಬಹುದು. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟು ತೊಂದರೆಗೆ ಸಿಕ್ಕಿಕೊಳ್ಳಬೇಡಿ. ಆಕರ್ಷಕ ವಸ್ತುಗಳಿಗೆ ಮನಸೋಲಬಹುದು. ಇಂದು ಒಳ್ಳೆಯ ವಿಶ್ವಾಸದ ಜೊತೆ ದಿನವನ್ನು ಆರಂಭಿಸುವಿರಿ. ಸಾಮಾಜಿಕ ಕಲಹವನ್ನು ಪರಿಹರಿಸಲು ನಿಮ್ಮ ಸಹಾಯವನ್ನು ಕೇಳಬಹುದು. ಆಪ್ತರ ಜೊತೆ ಮಾತನಾಡಿ ಇಂದಿನ ಹೆಚ್ಚು ಸಮಯವನ್ನು ಕಳೆಯುವಿರಿ. ಆರ್ಥಿಕ ಸಂಕಷ್ಟವು ನಿಮ್ಮನ್ನು ಬಾಧಿಸಿದರೂ ಅದನ್ನು ಲೀಲಾಜಾಲವಾಗಿ ಮುಗಿಸುವಿರಿ. ಉದ್ಯಮದಲ್ಲಿ ಪ್ರಗತಿ ಇರಲಿದೆ.
ಕುಂಭ: ನಗಲು ಹಿಂದೆ ಮುಂದೆ ನೋಡುವ ಅವಶ್ಯಕತೆಯಿಲ್ಲ. ನಗುವನ್ನು ಸಂಭ್ರಮಿಸಿ.ಮನಃಪೂರ್ತಿಯಾಗಿ ನಗಿ. ಸಣ್ಣ ಪುಟ್ಟ ನೋವುಗಳೂ ಕರಗಿ ನಗುವಾಗಿ ಹರಿಯಲಿ. ಸ್ನೇತರ ಜೊತೆ ಸುತ್ತಡಿ ಹಣವನ್ನು ಖರ್ಚು ಮಾಡುವಿರಿ. ಇದು ಸಂತೋಷದಿಂದ ಮಾಡಿದ್ದಾಗಿರುತ್ತದೆ. ವಿಶೇಷವಾದ ಸ್ಥಾನ, ಮಾನಗಳು ಬರುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಕಲಹವು ಸಹಜವೆನ್ನುವಷ್ಟು ಆಗಿದೆ. ಸಮಾಧಾನವೂ ಹಾಗೇ ಆಗಲಿ. ಹಿರಿಯರ ಮಾತಿಗೆ ಟೀಕೆ, ವ್ಯಾಖ್ಯಾನಗಳು ಬೇಡ. ಅವರ ಮಾತನ್ನು ಅನುಸರಿಸಿ. ಅಧ್ಯಾತ್ಮವನ್ನು ಹೆಚ್ಚು ಇಷ್ಟಪಡುವಿರಿ.
ಮೀನ: ಬೋಧಕವರ್ಗದವರಲ್ಲಿ ಹೆಚ್ಚು ಒತ್ತಡವಿರಬಹುದು. ಹೊಸ ಉತ್ಸಾಹವು ನಿಮ್ಮ ಕೆಲಸಗಳಿಗೆ ಪೂರವಾಗಿ ಇರಲಿದೆ. ಹಣದ ಹರಿವು ತಕ್ಕಮಟ್ಟಿಗೆ ಇರಲಿದೆ. ಕೆಟ್ಟ ಆರೋಗ್ಯವನ್ನು ಸರಿ ಮಾಡಿಕೊಳ್ಳಿ. ಪ್ರೀತಿಪಾತ್ರರ ವರ್ತನೆಯು ನಿಮಗೆ ಹಿಂಸೆಯನ್ನು ಕೊಟ್ಟೀತು. ನಿಮ್ಮ ಬಗ್ಗೆ ನೀವೇ ಅವಲೋಕನ ಮಾಡಿಕೊಳ್ಳಬೇಕಾಗಿದೆ. ಸಾಮರ್ಥ್ಯವನ್ನು ಸದ್ವಿನಿಯೋಗ ಮಾಡಿರಿ. ಟೀಕೆಗಳಿಗೆ ಕಿವಿಗಿಲೊಡದೇ ನಿಮ್ಮ ಕೆಲಸದಲ್ಲಿ ಮುನ್ನಡೆಯಿರಿ. ನಿಮ್ಮ ಸೌಂದರ್ಯದ ಬಗ್ಗೆ ಅತಿಯಾದ ಮೋಹವು ಇರಲಿದೆ. ಕಛೇರಿಯ ಕೆಲಸಗಳು ಸಲೀಸಾಗಿ ಆಗುವುದು.
ಲೋಹಿತಶರ್ಮಾ – 8762924271 (what’s app only)