Daily Horoscope: ಇಂದಿನ ರಾಶಿ ಭವಿಷ್ಯ, ಈ ರಾಶಿಯವರ ವೈವಾಹಿಕ ಬದುಕಿನಲ್ಲಿ ಪರಸ್ಪರ ಪ್ರೀತಿಯ ಅಭಾವದಿಂದ ಇಬ್ಬರ ನಡುವೆ ಅಸಮಾಧಾನ ಉಂಟಾಗಬಹುದು
ಇಂದಿನ (2023 ಮೇ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶೋಭನ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:17 ರಿಂದ 10:53ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:05 ರಿಂದ 05:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:05 ರಿಂದ 07:41ರ ವರೆಗೆ.
ಮೇಷ: ನಿಮ್ಮ ದುರಭ್ಯಾಸಗಳಿಂದ ನಿಮ್ಮವರಿಗೆ ಅಪಮಾವಾದೀತು. ಆಯಾಸವಾಗಿದ್ದರೆ ವಿಶ್ರಾಂತಿಯನ್ನು ಸ್ವಲ್ಪ ಪಡೆಯಿರಿ. ಪ್ರಾಪಂಚಿಕ ವಿಷಯದಲ್ಲಿ ಆಸಕ್ತಿ ಕಡಿಮೆ ಇರಲಿದೆ. ಯೋಗ್ಯ ಜನರನ್ನು ಭೇಟಿಯಾಗಿ ನಿಮ್ಮ ಬಗ್ಗೆ ತಿಳಿಸಿ. ಒತ್ತಾಯಕ್ಕೆ ಮಣಿದು ಏನನ್ನಾದರೂ ಮಾಡಲು ಹೋಗಬೇಕಾದೀತು. ಸಂದರ್ಭೋಚಿತ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರದು. ಮಕ್ಕಳನ್ನು ಬಹಳ ಪ್ರೀತಿಸುವಿರಿ. ಬಂದಿದ್ದನ್ನು ಸ್ವೀಕರಿಸುವ ಮನಃಸ್ಥಿತಿ ಇಂದು ಇರಲಿದೆ.
ವೃಷಭ: ಆಹಾರವನ್ನು ಕಡಿಮೆ ಮಾಡಲು ವೈದ್ಯರ ಸಲಹೆಯನ್ನು ಪಡೆಯುವಿರಿ. ಕುಟುಂಬದ ಒತ್ತಡವನ್ನು ಕಛೇರಿಗೆ ಒಯ್ಯವುದು ಬೇಡ. ಬಹು ಮುಖ್ಯ ಕೆಲಸಕ್ಕಾಗಿ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಇಂದು ಮಾಡಬೇಕಾದುದನ್ನು ಮಾಡಿ ಮುಗಿಸಿ. ಇನ್ನೊಂದು ದಿನಕ್ಕೆಂದು ಕಾಯುವುದು ಬೇಡ. ಸಮಯವನ್ನು ಪಡೆದು ಒಂದು ಸರಿಯಾದ ನಿರ್ಧಾರವನ್ನು ಮಾಡಿಕೊಳ್ಳುವುದು ಉತ್ತಮ. ಅಸಡ್ಡೆಯಿಂದ ಸಿಗುವ ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ. ಹೊಸ ವಿಷಯವನ್ನು ತಿಳಿದುಕೊಳ್ಳಲು ನಿರ್ಧಾರವನ್ನು ಮಾಡುವಿರಿ. ಕುಟುಂಬದ ಪ್ರೀತಿಯನ್ನು ಇಂದು ಕಳೆದುಕೊಳ್ಳುವ ಸಾಧ್ಯತೆ ಇದೆ.
ಮಿಥುನ: ನಿಮ್ಮ ಆಹಾರದ ಕ್ರಮವನ್ನು ಬದಲಿಸಿಕೊಳ್ಳಲು ವೈದ್ಯರ ಸಲಹೆಯನ್ನು ಪಡೆಯಬೇಕಾಗಬಹುದು. ಹಣಕಾಸಿನ ತೊಂದರೆ ಬಂದರೂ ಅದನ್ನು ನಿಭಾಯಿಸುವ ಚಾಣಕ್ಷತನ ನಿಮಗೆ ಗೊತ್ತಿದೆ. ತಂದೆಯ ಮಾತನ್ನು ಶ್ರದ್ಧೆಯಿಂದ ಪಾಲಿಸುವಿರಿ. ನಿರುದ್ಯೋಗ ಎಂಬ ಕೊರಗು ನಿಮ್ಮನ್ನು ಕಾಡಬಹುದು. ಕಫಕ್ಕೆ ಸಂಬಂಧಿಸಿದ ಖಾಯಿಲೆಯು ಆರಂಭವಾಗಬಹುದು. ಸಿಕ್ಕ ಉದ್ಯೋಗವನ್ನು ಬಹಳ ಪ್ರೀತಿಸುವಿರಿ. ಸಂಸಾರದ ಬಿಕ್ಕಟ್ಟನ್ನು ಬಿಡಿಸುವ ಪ್ರಯತ್ನ ಮಾಡುವರಿದ್ದೀರಿ. ಸಾಮರಸ್ಯವನ್ನು ಕಾಪಾಡಿಕೊಳ್ಳಲು ನೀವು ಬಯಸಬಹುದು.
ಕಟಕ: ಆಪ್ತರ ಆಲೋಚನೆಗಳನ್ನು ಸ್ವೀಕರಿಸುವಿರಿ. ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಬಯಸುವಿರಿ. ಸಂಗಾತಿಯ ಜೊತೆ ಅಪರೂಪಕ್ಕೆ ದೂರಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ವೃತ್ತಿಯ ಸ್ಥಳದಲ್ಲಿ ಬೇರೆ ಜವಾಬ್ದಾರಿಗಳು ಬರುವಂತಿದ್ದರೂ ಅದನ್ನು ನಿರಾಕರಿಸುವಿರಿ. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ನೋದಿ ಆಡಿಕೊಳ್ಳಬಹುದು. ಇನ್ನೊಬ್ಬರನ್ನು ಅನುಕರಿಸಲಿದ್ದೀರಿ. ಸಂಗಾತಿಯನ್ನು ಸಂತೋಷಗೊಳಿಸಲು ಬಹಳ ಕಷ್ಟಪಡಬೇಕಾದೀತು. ಅತಿಯಾದ ಉತ್ಸಾಹದಲ್ಲಿ ಏನನ್ನಾದರೂ ಹೇಳುವ ಸಾಧ್ಯತೆ ಇದೆ.
ಸಿಂಹ: ಅಸೂಯೆಯಿಂದ ನಿಮ್ಮ ಕೆಲಸವು ಹಿಂದುಳಿಯುವುದು. ಅನಗತ್ಯ ಕೆಲಸಗಳಿಗೆ ಕೈ ಹಾಕಿ ಹಣವನ್ನು ಕಳೆದುಕೊಳ್ಳಬಹುದು. ಸಂಗಾತಿಯ ಮಾತನ್ನು ಅನಾದರ ಮಾಡುವುದು ಬೇಡ. ದುರಭ್ಯಾಸಕ್ಕೆ ಶರಣಾಗಿ ಹಣವನ್ನು ಕಳೆದುಕೊಳ್ಳಬಹುದು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವನ್ನು ಕೊಟ್ಟೀತು. ಕಲಹದ ಸ್ಥಳಕ್ಕೆ ನಿಮ್ಮ ಮಾತನ್ನೂ ಹೇಳುವಿರಿ. ನಿಮ್ಮ ಉದ್ಯಮಕ್ಕೆ ಸ್ಪರ್ಧೆ ಉಂಟಾಗಬಹುದು. ದ್ವೇಷ ಸಾಧಿಸಲು ಹೋಗಿ ಸಮಯವನ್ನೂ ಹಣವನ್ನೂ ಜನರನ್ನೂ ಕಳೆದುಕೊಳ್ಳಬೇಕಾಗಬಹುದು. ಅತಿಯಾದ ನಂಬಿಕೆಯು ಮುಳುವಾದೀತು ನಿಮಗೆ.
ಕನ್ಯಾ: ನಿಮ್ಮ ಆಸಕ್ತಿಯನ್ನು ನೀವು ಬದಲಾಯಿಸಿಕೊಳ್ಳುವುದು ಬೇಡ. ರಮಣೀಯ ಪ್ರದೇಶಗಳು ನಿಮಗೆ ರೋಮಾಂಚನವನ್ನು ಉಂಟುಮಾಡಿಯಾವು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಡುವುದು ಒಳ್ಳೆಯದು. ನಿಮ್ಮ ದಾರಿ ತಪ್ಪಿಸಲು ಕೆಲವು ಮಾತುಗಳು ಬರಬಹುದು. ವಿದ್ಯುತ್ ಉಪಕರಣಗಳಿಗೆ ಹಣವನ್ನು ಖರ್ಚು ಮಾಡುವಿರಿ. ಮಕ್ಕಳು ನಿಮಗೆ ಸಂತೋಷವನ್ನು ಕೊಟ್ಟಾರು. ತೀವ್ರತರವಾದ ಒತ್ತಡಗಳು ನಿಮಗೆ ಕಿರಿಕಿರಿ ಮಾಡೀತು. ನಿಮ್ಮ ಒಳ್ಳೆಯ ಸ್ವಭಾವವನ್ನು ದುರುಪಯೋಗ ಮಾಡಿಕೊಂಡಾರು. ಅಪಮಾನವಾಗುವ ಸ್ಥಳದಲ್ಲಿ ಇರಬೇಡಿ.
ತುಲಾ: ಅಸಾಮಾನ್ಯ ಕೆಲಸವನ್ನು ಮಾಡುವ ಗುರಿ ನಿಮ್ಮದಾಗಲಿದೆ. ಅಪರಿಚಿತ ವ್ಯಕ್ತಿಗಳೂ ನಿಮಗೆ ಸಹಾಯ ಮಾಡಬಹುದು. ಇಂದು ಹೂಡಕೆ ಮಾಡಿ ಬಹುದಿನದ ಬಯಕೆಯನ್ನು ತೀರಿಸಿಕೊಳ್ಳುವಿರಿ. ಬೇರೆಯವರ ಬಗ್ಗೆ ಅಭಿಪ್ರಾಯಗಳನ್ನು ಹೇಳುವ ಚಟ ಒಳ್ಳೆಯದಲ್ಲ. ತಾಳ್ಮೆಯಿಂದ ಆಗುವ ಕೆಲಸವನ್ನು ತಣ್ಣಗೇ ಮಾಡಿ ಮುಗಿಸಿ. ನಿಮ್ಮವರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವ ತುಡಿತ ಅತಿಯಾದೀತು. ಮುಂಬರುವ ದಿನಗಳನ್ನು ಇಂದೇ ಚಿಂತಿಸುವಿರಿ. ಕಳೆದ ದಿನಗಳನ್ನು ಪತ್ನಿಯ ಜೊತೆ ಮೆಲುಕು ಹಾಕುವಿರಿ. ಸ್ನೇಹಿತರ ಮನೆಯಲ್ಲಿ ಉತ್ತಮ ಭೋಜನ ಮಾಡುವಿರಿ.
ವೃಶ್ಚಿಕ: ನಿಮಗೆ ಹಣವನ್ನು ಉಳಿಸುಕೊಳ್ಳಬೇಕು ಎಂಬ ಇಚ್ಛೆ ಇದ್ದರೂ ಬಂದ ಹಣವು ನಿಲ್ಲದೆ ಖಾಲಿಯಾಬಹುದು. ಕಛೇರಿಯಲ್ಲಿ ನಿಮ್ಮನ್ನು ಸೂಕ್ತ ವ್ಯಕ್ತಿ ಎಂದು ಆಯ್ಕೆ ಮಾಡಿದ್ದರೂ ನಿಮಗೆ ಹಿಂಜರಿಕೆ ಉಂಟಾಗಲಿದೆ. ವೃತ್ತಿಯ ಸಾಧನೆಯನ್ನು ಮನೆಯಲ್ಲಿ ಹೇಳಿಕೊಳ್ಳುವಿರಿ. ಇಂದು ನಿಮ್ಮ ತಾಯಿ ನಿಮಗೆ ಮಾನಸಿಕ ಬಲವನ್ನು ತುಂಬುವಳು. ಶತ್ರುಗಳ ಬಗ್ಗೆ ಮಾತನಾಡಿ ಸುಮ್ಮನೇ ಕಾಲಹರಣ ಮಾಡಬೇಡಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಹೊಸತನ್ನು ಹುಡುಕುವ ಬಯಕೆ ಬಹಳ ಇರಲಿದೆ. ಮನೆಯೇ ನಿಮಗೆ ಸಮಾಧಾನದ ಸ್ಥಳವಾಗಬಹುದು.
ಧನುಸ್ಸು: ದೂರಪ್ರಯಾಣದಲ್ಲಿ ಸ್ನೇಹಿತರ ಮನೆಯಲ್ಲಿ ವಾಸ ಮಾಡಬೇಕಾಗಬಹುದು. ನಿಮ್ಮ ಗೌಪ್ಯ ವಿಷಯವನ್ನು ತಿಳಿದುಕೊಳ್ಳುವ ಕುತೂಹಲವಿರಬಹುದು. ಅದಕ್ಕಾಗಿ ಕೆಲವು ಮಾತುಗಳನ್ನು ಆಡಬಹುದು. ದೂರದ ಊರಿಗೆ ಪ್ರಯಾಣವು ಅನಿರೀಕ್ಷಿತವಾಗುವ ಸಾಧ್ಯತೆ ಇದೆ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಹಿರಿಯರ ಮಾತಿನಿಂದ ನಿಮ್ಮ ಸಂವೇದನಾ ಕೇಂದ್ರವು ತೆರೆದುಕೊಳ್ಳಬಹುದು. ಸಹೋದರರ ನಡುವೆ ಸಂಘರ್ಷವಾಗುವ ಸಾಧ್ಯತೆ ಇದೆ. ದಾಂಪತ್ಯದ ಕಲಹವು ಮನೆಯಲ್ಲಿ ಆತಂಕವನ್ನು ಉಂಟುಮಾಡೀತು.
ಮಕರ: ನಿಮ್ಮ ಮಕ್ಕಳು ನಿಮ್ಮನ್ನು ಸಂತೋಷವಾಗಿ ಇಡುವರು. ಅನಿವಾರ್ಯವಾಗಿ ಖರ್ಚು ಮಾಡಬೇಕಾದ ಸಂದರ್ಭ ಬಂದಾಗ ಸ್ನೇಹಿತರ ಸಹಾಯವನ್ನು ಕೇಳುವಿರಿ. ನಿಮ್ಮ ವೈವಾಹಿಕ ಬದುಕಿನಲ್ಲಿ ಪರಸ್ಪರ ಪ್ರೀತಿಯ ಅಭಾವದಿಂದ ಇಬ್ಬರ ನಡುವೆ ಅಸಮಾಧಾನವಾಗಬಹುದು. ಇಬ್ಬರ ಮನಸ್ಸೂ ಹಗುರಾಗಲು ಇಷ್ಟವಾದುದನ್ನು ಮಾಡುವುದು ಒಳ್ಳೆಯದು. ನಿಮ್ಮದೇ ಕೆಲಸದದಲ್ಲಿ ನೀವು ಬಹಳ ಚುರುಕಿನಿಂದ ವ್ಯವಹಾರವನ್ನು ಮಾಡುವಿರಿ. ಬದಲಾವಣೆಗಳನ್ನು ಕಾತರದಿಂದ ಕಾಯುವಿರಿ. ಯೋಗ್ಯತೆಯ ಅನುಸಾರವಾಗಿ ನೀವು ಜವಾಬ್ದಾರಿಗಳನ್ನು ಹಂಚಲಿದ್ದೀರಿ. ಬರಬೇಕಾದ ಹಣವು ಬರುದಿಲ್ಲವೆಂಬ ನಂಬಿಕೆ ಬರಬಹುದು.
ಕುಂಭ: ವೈವಾಹಿಕ ಜೀವನದಲ್ಲಿ ಮನಸ್ತಾಪ ಇರಲಿದೆ. ತಿಳಿವಳಿಕೆಯ ಕೊರತೆಯಿಂದ ವ್ಯವಹಾರದಲ್ಲಿ ನಷ್ಟವಾದೀತು. ಧಾರ್ಮಿಕವಾಗಿ ಶ್ರದ್ಧೆ, ಭಕ್ತಿಗಳು ಕಡಿಮೆ ಆದೀತು. ಈ ದಿನ ನೀವು ಸಕಾರಾತ್ಮಕವಾಗಿ ಚಿಂತನೆಯನ್ನು ಮಾಡುವಿರಿ. ಆಸ್ತಿಯನ್ನು ಖರೀದಿಸಲಿದ್ದೀರಿ. ಪಾಲುದಾರಿಕೆಯಲ್ಲಿ ನಿಮ್ಮ ಸಹಭಾಗಿತ್ವ ಕಡಿಮೆ ಆಗಬಹುದು. ನಿಮ್ಮ ಬಂಧುಗಳು ನಿಮ್ಮ ಯೋಜನೆಗಳನ್ನು ಇಷ್ಟ ಪಡುವರು. ಅವರು ನಿಮ್ಮ ಜೊತೆ ಸಲುಗೆಯಿಂದ ಮಾತನಾಡಲು ಇಚ್ಛಿಸುವಿರಿ. ಪ್ರೇಮಪಾಶವು ನಿಮಗೆ ಹಿತಕರವಾದ ಅನುಭವವನ್ನು ನೀಡೀತು. ಅವಶ್ಯಕ ವಸ್ತುಗಳು ಕಣ್ಮರೆಯಾದಾವು.
ಮೀನ: ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಖುಷಿಯಾಗುವುದು. ಸ್ತ್ರೀಯರಿಂದ ಧನಸಹಾಯವು ಆಗಲಿದೆ. ಇಂದು ನಿಮಗೆ ಸಾಕಷ್ಟು ಸಮಯವಿರಲಿದ್ದು ಸದುಪಯೋಗ ಮಾಡಿಕೊಳ್ಳಬೇಕಿದೆ. ಸಂಗಾತಿಯ ನಡೆವಳಿಕೆಯನ್ನು ಪ್ರಶಂಸಿಸುವರು. ನಿಮ್ಮವರು ನಿಮಗೆ ಕೆಲವು ಕಿವಿಮಾತನ್ನು ಹೇಳಬಹುದು. ವ್ಯಾಪಾರದಲ್ಲಿ ಸ್ವಲ್ಪ ನಷ್ಟವಾಗಲಿದೆ. ನಿಮ್ಮ ಮಕ್ಕಳ ಬಗ್ಗೆ ಅತಿಯಾದ ಚಿಂತೆನೆ ಬೇಡ. ಕೆಟ್ಟ ಅಭ್ಯಾಸವನ್ನು ಬಿಡಲು ಪ್ರಯತ್ನಿಸುವಿರಿ. ಅಕಾರಣವಾಗಿ ಮನಸ್ಸು ಬಹಳ ಚಂಚಲವಾಗಬಹುದು. ಏಕಾಗ್ರತೆಗೆ ಕೆಲವು ಅಭ್ಯಾಸವನ್ನು ಮಾಡಿಕೊಳ್ಳಿ.
-ಲೋಹಿತಶರ್ಮಾ ಇಡುವಾಣಿ (ವಾಟ್ಸ್ಆ್ಯಪ್- 8762924271)