Rashi Bhavishya: ಇಂದಿನ ರಾಶಿ ಭವಿಷ್ಯ, ವೈವಾಹಿಕ ಜೀವನದ ಸುಖದ ಕ್ಷಣಗಳು ಈ ರಾಶಿಯವರದ್ದಾಗಲಿದೆ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 19 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಸೌಭಾಗ್ಯ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:41 ರಿಂದ 05:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ.
ಧನುಸ್ಸು: ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನು ಮಾಡಬೇಕಾದೀತು. ಹಣವನ್ನು ಸಂಪಾದಿಸಬೇಕು ಎನ್ನುವ ಅತಿಯಾದ ಆಸೆ ನಿಮ್ಮ ಮನಸ್ಸಿನಲ್ಲಿ ಬೇರೂರುವುದು. ವಿದೇಶದ ಬಂಧುಗಳು ನಿಮಗೆ ಸಹಾಯವನ್ನು ಮಾಡಲಿದ್ದಾರೆ. ರಪ್ತು ವ್ಯವಹಾರಗಳು ನಿಮಗೆ ಅಧಿಕ ಆದಾಯವನ್ನು ತಂದುಕೊಟ್ಟೀತು. ನಿಮ್ಮ ಸಮಯವು ಯೋಜಿತ ಕಾರ್ಯಕ್ಕೆ ವಿನಿಯೋಗವಾಗದೇ ಅನ್ಯ ಕಾರ್ಯಕ್ಕೆ ಬಳಕೆಯಾದೀತು. ನಿಮಗೆ ಬರಬೇಕಾದುದನ್ನು ಹೋರಾಟದಿಂದ ಪಡೆದುಕೊಳ್ಳುವಿರಿ. ಪತ್ನಿಯ ದೌರ್ಬಲ್ಯಗಳನ್ನು ಅಸ್ತ್ರಮಾಡಿಕೊಳ್ಳುವಿರಿ.
ಮಕರ: ಆರೋಗ್ಯವು ಸುದೃಢವಾಗಿ ಇರಲಿದೆ. ಸದಾ ಸಂತೋಷದಿಂದ ಇರುವುದೇ ನಿಮಗೆ ನಿಮ್ಮ ಉತ್ಸಾಹದ ಗುಟ್ಟಾಗಿದೆ. ತಾಯಿಗಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಸಮಾರಂಭದಲ್ಲಿ ಪ್ರಭಾವೀ ಜನರ ಭೇಟಿಯಾಗಲಿದೆ. ಬಾಂಧವ್ಯದಲ್ಲಿ ಬಿರುಕು ಬಂದಿದ್ದು ಅದನ್ನು ಸರಿ ಮಾಡಿಕೊಳ್ಳುವಿರಿ. ಗುಂಪಿನಲ್ಲಿ ಕೆಲಸ ಮಾಡುವುದನ್ನು ಇಷ್ಟಪಡುವಿರಿ. ವೈವಾಹಿಕ ಜೀವನದ ಸುಖದ ಕ್ಷಣಗಳು ನಿಮ್ಮದಾಗಲಿದೆ. ಬುದ್ಧಿಗೆ ಇಂದು ಕಸರತ್ತು ಕೊಡುವಿರಿ. ಪ್ರೇಮ ಪರೀಕ್ಷೆಯಲ್ಲಿ ಪಾಸಾಗುವುದು ಸುಲಭವಿಲ್ಲ. ದುಂದುವೆಚ್ಚಗಳು ನಿಮಗೆ ಆತಂಕವನ್ನು ಉಂಟುಮಾಡಬಹುದು.
ಕುಂಭ: ವಾಹನದ ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಲಾಭವಾಗುವ ಸಾಧ್ಯತೆ ಹೆಚ್ಚು. ಆಕಸ್ಮಿಕ ಧನಲಾಭವು ನಿಮ್ಮನ್ನು ಖುಷಿಯಾಗಿಡಲಿದೆ. ರಾಜಕೀಯ ಪ್ರೇರಿತವಾದ ಮಾತುಗಳು ನಿಮ್ಮಿಂದ ಬರಬಹುದು. ಶ್ರದ್ಧೆ ಇಲ್ಲದೇ ಇದ್ದರೂ ಕಾರ್ಯಗಳನ್ನು ಮಾಡಬೇಕಾದೀತು. ಮನಸ್ಸು ಚಂಚಲವಾದಾಗ ಹಿರಿಯರ ಮಾತುಗಳನ್ನು ಕೇಳಿ. ಅದು ನಿಮಗೆ ಹಿತವೆನಿಸೀತು. ದೂರದ ಬಂಧುಗಳು ಇಂದು ಪರಿಚಿತರಾಗಿ ಹತ್ತಿರವಾಗಬಹುದು. ವಿದ್ಯಾರ್ಥಿಗಳು ಓದಿನತ್ತ ಗಮನಕೊಡುವುದು ಒಳ್ಳೆಯದು. ಕೃತಘ್ನತೆ ಒಳ್ಳೆಯದಲ್ಲ.
ಮೀನ: ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಿರೋಧಿಗಳು ತಡಯಬಹುದು. ಬಂಧುಗಳ ಸಹಕಾರದಿಂದ ನಿಮ್ಮಋಣ ಬಾಧೆ ಸದ್ಯ ತೀರುವುದು. ಹದಗೆಟ್ಟ ಆರೋಗ್ಯವು ಸರಿಯಾಗುವುದು. ವಿವಾಹಕ್ಕೆ ತಡೆಗಳು ಬರುವ ಸಾಧ್ಯತೆ ಇದೆ. ನಿಮ್ಮನ್ನು ಪಕ್ಕಕ್ಕೆ ಸರಿಸಿ ಕೆಲಸಗಳನ್ನು ಮಾಡಿಕೊಳ್ಳುವರು. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಕೆ ಇರಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿ ಹೆಚ್ಚಬಹುದು. ಮಾನಸಿಕವಾಗಿ ನೀವು ಸ್ವಲ್ಪ ಕುಗ್ಗುವಿರಿ. ನಿದ್ರಾಹೀನತೆಯು ನಿಮ್ಮನ್ನು ಆಲಸ್ಯಕ್ಕೆ ಒಯ್ಯಬಹುದು.
-ಲೋಹಿತಶರ್ಮಾ ಇಡುವಾಣಿ