ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಸಾಧ್ಯ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 35 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:47 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:26 ರಿಂದ 09:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ.
ಮೇಷ ರಾಶಿ: ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ಉದ್ಯಮವನ್ನು ಮಿತಿಮೀರಿದ ನಿರೀಕ್ಷೆಯಲ್ಲಿ ಮುಂದುವರಿಯುವುದು ಬೇಡ. ಅನಂತರ ಕಷ್ಟವಾದೀತು. ಸಂಕೀರ್ಣ ಸ್ಥಿತಿಯನ್ನು ನೀವು ತಿಳಿಯಾಗಿಸುವಿರಿ. ವಿರೋಧಿಗಳು ನಿಮ್ಮ ಸಮೀಪ ಬಾರದೇ ಹೋಗಬಹುದು. ಆಹಾರದಲ್ಲಿ ಇಂದ್ರಿಯನಿಗ್ರಹವು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಆರ್ಥಿಕ ಕಾರಣಗಳಿಂದ ಸಂಗಾತಿಯಿಂದ ದೂರವಾಗಬಹುದು. ವಿಶ್ವಾಸದಲ್ಲಿ ಕೊರತೆ ಇರದು. ವ್ಯಾಪಾರದ ಕೆಲವು ನಿರ್ಧಾರಗಳಿಗೆ ಅಪರಿಚಿತರಿಂದ ಸಲಹೆಯು ಸಿಗುವುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಕೆಲವನ್ನು ನೀವು ಮನಃಪೂರ್ವಕವಾಗಿಯೇ ಕಡೆಗಣಿಸುವಿರಿ. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು.
ವೃಷಭ ರಾಶಿ: ಈ ದಿನವು ನಿಮಗೆ ಅನುಕೂಲಕರವಾಗಿಲ್ಲ. ನೀವು ಯಾರನ್ನಾದರೂ ವೃಥಾ ಸಂಶಯಿಸುವಿರಿ. ವಾದಗಳಲ್ಲಿ ಸಮಯ ಮತ್ತು ಹಣ ಕಳೆದುಹೋಗುತ್ತದೆ. ಕಾನೂನಿನ ವ್ಯವಹಾರವನ್ನು ನೀವೇ ಸ್ವತಃ ಮಾಡಿಕೊಳ್ಳಬೇಕಾಗುವುದು. ತಾಯಿಯ ಕಡೆಯಿಂದ ಲಾಭದ ಭರವಸೆ ಇರುತ್ತದೆ. ವಿವಾಹದ ಸಂಬಂಧವನ್ನು ನೀವು ತಳ್ಳಿಹಾಕುವಿರಿ. ಯಾರ ಮಾತುಗಳೂ ನಿಮಗೆ ಪಥ್ಯವಾದೀತು. ದ್ವಂದ್ವ ನಿಲುವನ್ನು ನೀವು ಸರಿ ಮಾಡಿಕೊಳ್ಳುವ ಅವಶ್ಯಕತೆ ಇರುವುದು. ಸಮಯವನ್ನು ನೀವು ವ್ಯರ್ಥ ಮಾಡಿಕೊಂಡು ಪಶ್ಚಾತ್ತಾಪಪಡುವಿರಿ. ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು. ಉನ್ನತ ವ್ಯಾಸಂಗದಲ್ಲಿ ಆಸಕ್ತಿಯು ಕಡಿಮೆ ಆಗುವುದು. ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮದಾದ ಸ್ವಂತಮನೆಯು ಬೇಕೆನ್ನಿಸಬಹುದು.
ಮಿಥುನ ರಾಶಿ: ನಿಮ್ಮ ಪರಾಕ್ರಮವನ್ನು ಪ್ರದರ್ಶಿಸುವುದು ಬೇಡ. ಸ್ನೇಹಿತರ ಸಹಕಾರವು ನಿಮಗೆ ಸಾಕು ಎನಿಸಬಹುದು. ಸ್ಥಿರಾಸ್ತಿಗೆ ಸಂಬಂಧಿಸಿದ ಕೌಟುಂಬಿಕ ವಿವಾದವನ್ನು ಮುಕ್ತಾಯ ಮಾಡಿಕೊಳ್ಳುವುದು ಉತ್ತಮ. ಅತಿಥಿ ಸತ್ಕಾರವು ನಿಮಗೆ ಖುಷಿ ಕೊಡುವುದು. ಚಿಂತನಶೀಲ ಕೆಲಸದಿಂದ ಯಶಸ್ಸು ಸಿಗುವುದು. ಆರೋಗ್ಯವು ದಿನದಿಂದ ದಿನಕ್ಕೆ ಕ್ಷೀಣಿಸಿದರೂ ಮನಸ್ಸು ಸ್ಥೈರ್ಯವನ್ನು ಉಳಿಸಿಕೊಳ್ಳುವುದು. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗುಉದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ. ಬೇಸರವನ್ನು ಕೆಲಸದಲ್ಲಿ ಗಮನಕೊಡುವ ಮೂಲಕ ಪರಿಹರಿಸಿಕೊಳ್ಳುವಿರಿ. ಸಹಾವಾಸದಿಂದ ನಿಮಗೆ ಅಪವಾದವು ಬರಬಹುದು.
ಕರ್ಕ ರಾಶಿ: ಆರ್ಥಿಕ ವಿಷಯಗಳಲ್ಲಿ ಪ್ರಯೋಜನವಿದೆ ಮತ್ತು ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಉತ್ಸಾಹವು ಹೆಚ್ಚಾಗುತ್ತದೆ ಮತ್ತು ನೀವು ಜನರಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಬಗ್ಗೆ ಸದಭಿಪ್ರಾಯ ಇರುವುದನ್ನು ಕೇಳಿ ಸಂತೋಷವಾದೀತು. ಬಂಧುಗಳೂ ನಿಮ್ಮನ್ನು ಇಷ್ಟಪಡುವರು. ಕೈಯಲ್ಲಿ ಸಾಕಷ್ಟು ಸಂಪತ್ತು ಇದ್ದರೂ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ. ಸ್ವಂತಕ್ಕೆ ಪ್ರಯೋಜನವಿಲ್ಲದ ಯಾವ ಕಾರ್ಯವನ್ನೂ ನೀವು ಮಾಡಲಾರಿರಿ. ಕೋಪಗೊಂಡು ಇಡೀ ದಿನವನ್ನು ಹಾಳುಮಾಡಿಕೊಳ್ಳುವಿರಿ. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ಸಂಗಾತಿಯ ಮೇಲೆ ಬೇಸರದ ಭಾವವೂ ಮೂಡುವ ಸಾಧ್ಯತೆ ಇದೆ. ಬೆಳಗಿನಿಂದಲೇ ಮನಸ್ಸಿಗೆ ಕಿರಿಕಿರಿ ಉಂಟಾದೀತು. ನಿಮ್ಮ ಅಶಿಸ್ತಿನ ವರ್ತನೆಯಿಂದ ಸಹೋದ್ಯೋಗಿಗಳ ನಡುವೆ ಮಾತುಕತೆಗಳು ಆಗಬಹುದು.
ಸಿಂಹ ರಾಶಿ: ಈ ರಾಶಿಯವರಿಗೆ ಇಂದಿನ ದಿನವು ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ. ದಾಂಪತ್ಯ ಸುಖವು ಹೆಚ್ಚಾಗುವುದು. ಸಂಕೀರ್ಣ ಕಾರ್ಯಗಳನ್ನು ಸರಳ ಮಾಡಿಕೊಂಡು ಕಾರ್ಯಗತಗೊಳಿಸಲಾಗುವುದು. ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಂಡು ಮುನ್ನಡೆಯಿರಿ. ಭೂಮಿಗೆ ಹೂಡಿಕೆ ಮಾಡಲು ಆಸಕ್ತಿಯಿಂದ ಇರುವುದು. ನಿಮಗೆ ಇಂದು ಶುಭವಾರ್ತೆಯು ಬರುವುದು. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ. ಕಾರ್ಯದ ಸ್ಥಳದಲ್ಲಿ ಎಂದಿನ ಉತ್ಸಾಹವು ಇರದು. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು. ಸಂಗಾತಿಗೆ ಕಿರಿಕಿರಿ ಉಂಟಾಗುವಂತೆ ಮಾಡುವಿರಿ. ಕಡ್ಡಿ ಮುರಿದಂತೆ ಮಾತನ್ನು ಹೇಳುವುದು ಬೇಡ.
ಕನ್ಯಾ ರಾಶಿ: ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಇಂದು ಶುಭಕರವಾಗಿದ್ದು ಅಹಿತಕರ ವಾತಾವರಣಕ್ಕೆ ಆಸ್ಪದವನ್ನು ಕೊಡಲಾರಿರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಭಯ ಹೆಚ್ಚಾಗುವುದು. ನಿಮ್ಮ ಮೇಲಿನ ಪ್ರಕರಣಗಳು ಒಂದೊಂದಾಗಿ ಬಗೆಹರಿಯುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಸಮಯದೊಂದಿಗೆ ಚಲಿಸುವ ಮೂಲಕ ನೀವು ಪ್ರಗತಿ ಹೊಂದುತ್ತೀರಿ. ಮಿತವಾದ ಆಹಾರ ಸೇವನೆಯನ್ನು ಮಾಡುವಿರಿ. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದ್ದು ಸಂತೋಷವಾಗುವುದು. ಎಲ್ಲ ತೊಂದರಗಳಿಗೂ ಯಾರನ್ನೋ ಬೈಯುತ್ತಾ ಕುಳಿತಿರುವುದರಲ್ಲಿ ಅರ್ಥವಿರದು. ಇಂದು ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳುವಿರಿ. ಚರ್ಮಕ್ಕೆ ಸಂಬಂಧಿಸಿದಂತೆ ಏನಾದರೂ ಕಾಣಿಸಿಕೊಳ್ಳಬಹುದು.
ತುಲಾ ರಾಶಿ: ಇಂದು ಶುಭವನ್ನು ನೀವು ನಿರೀಕ್ಷಿಸಿದರೂ ನಿಮಗೆ ಹತಾಶೆಯು ಬರಬಹುದು. ಇಂದು ನೀವು ನಿಮ್ಮ ಕುಟುಂಬದ ಜೊತೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಿರಿ. ಅದು ನಿಮಗೆ ಹಣವನ್ನು ಸಹ ವೆಚ್ಚ ಮಾಡಿಸಬಹುದು. ಸ್ವಲ್ಪ ಜಾಣ್ಮೆಯಿಂದ ಮುಂದುವರಿದರೆ ನಿಮಗೆ ಅನುಕೂಲಕರವಾದ ಸಂದರ್ಭವು ಸಿಗುವುದು. ಅನಪೇಕ್ಷಿತ ಚರ್ಚೆಯು ನಿಮ್ಮ ನೆಮ್ಮದಿಯನ್ನು ಹಾಳುಮಾಡೀತು. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಅನುಮಾನದ ಬುದ್ಧಿಯಿಂದಲೇ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಮಕ್ಕಳ ವಿವಾಹಕ್ಕಾಗಿ ನೀವು ಓಡಾಡಿ ಆಯಾಸಪಡುವಿರಿ. ನಿಮ್ಮ ಜವಾಬ್ದಾರಿಯ ಮನೋಭಾವಕ್ಕೆ ಹೆಚ್ಚು ಒತ್ತಡವು ಬರಬಹುದು.
ವೃಶ್ಚಿಕ ರಾಶಿ: ಇಂದು ಹಣಕಾಸಿನ ವಿಷಯಗಳಲ್ಲಿ ಪ್ರಯೋಜನ ಪಡೆಯುತ್ತಾರೆ ಮತ್ತು ನಿಮ್ಮ ಎಲ್ಲಾ ಕೆಲಸಗಳು ಇಂದು ಸಮಯಕ್ಕೆ ಸರಿಯಾಗಿ ಮಾಡಲಾಗುತ್ತದೆ. ಸಜ್ಜನರ ಸಂಯೋಗದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯ ಇಂದು ಕಷ್ಟವಾದರೂ ಅನಿವಾರ್ಯವಾಗಬಹುದು. ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಅನುಭವಗಳನ್ನು ನೀವು ಪಡೆಯುತ್ತೀರಿ. ಪ್ರತಿಭೆಯ ಖ್ಯಾತಿಯನ್ನು ನೀವು ಪಡೆಯಬಹುದು. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯಕ್ತಿತ್ವವನ್ನು ಅನುಕರಣೆ ಮಾಡುವಿರಿ. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ಮತ್ತೆ ಮತ್ತೆ ನಿಮಗೆ ಅನಾರೋಗ್ಯವು ಕಾಣಿಸಿಕೊಂಡಿದ್ದು ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಮತ್ತು ದೈವಜ್ಞರನ್ನು ಸಂಪರ್ಕಿಸಿ ದೈವಾನುಕೂಲದ ಬಗ್ಗೆಯೂ ಮಾತನಾಡಿ.
ಧನು ರಾಶಿ: ಈ ರಾಶಿಯವರು ಕಠಿಣ ಪರಿಶ್ರಮದ ಅನಂತರ ನೀವು ಬಯಸಿದ ಲಾಭವನ್ನು ಪಡೆಯುತ್ತೀರಿ. ನೀವು ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು. ಕೆಲವು ಅಹಿತಕರ ಘಟನೆಯಿಂದ ಮನಸ್ಸು ಅತೃಪ್ತವಾಗಿರುತ್ತದೆ. ಒಂದೊಂದಾಗಿ ನಿಮ್ಮ ವ್ಯವಹಾರವನ್ನು ಪೂರ್ಣ ಮಾಡಿಕೊಳ್ಳಿ. ಸುಖ-ದುಃಖಗಳನ್ನು ಸಮಾನವಾಗಿ ಪರಿಗಣಿಸಿ, ಎಲ್ಲವನ್ನೂ ವಿಧಿಗೆ ಬಿಟ್ಟುಬಿಡಿ. ನಿಮ್ಮ ಪಾಲಿನ ಕರ್ತವ್ಯಗಳನ್ನು ಮುಂದುವರಿಸಿ. ನಿಮ್ಮ ಪ್ರೇಮವು ವಿಪರೀತ ಹೊದಲದಲ್ಲಿ ಸಿಕ್ಕಿಕೊಂಡಿದ್ದು ಇದು ಅದೇ ಚಿಂತೆಯು ನಿಮ್ಮನ್ನು ಕಾಡುವುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳು ಕಳೆದುಹೋಗಬಹುದು. ಹೊಸ ವಿಚಾರಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯ ಸಂಭವವಿದೆ.
ಮಕರ ರಾಶಿ: ನಿಮಗೆ ಇಂದು ಗೌರವವನ್ನು ಪಡೆಯುವ ದಿನವಾಗಿರುತ್ತದೆ. ಎಲ್ಲವೂ ನಿಮಗೆ ಅನಿರೀಕ್ಷಿತವಾಗಿ ಘಟಿಸುವುದು. ಹಣಕಾಸಿನ ವಹಿವಾಟುಗಳನ್ನು ತಪ್ಪಿಸಿ ಮತ್ತು ನಿಮ್ಮ ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ನೀವು ಮಾಡುವ ಕೆಲಸಕ್ಕೆ ಕುಟುಂಬದ ವಿರೋಧವು ಬರಬಹುದು. ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪು ನಿರ್ಧಾರ ತೆಗೆದುಕೊಂಡು ಕಷ್ಟಪಡುವಿರಿ. ಸಾಲ ಮಾಡುವ ವಿಚಾರವು ನಿಮಗೆ ಕಹಿಯಾಗಬಹುದು. ಜೊತೆಗಾರರನ್ನು ಆತ್ಮೀಯವಾಗಿ ಕಾಣುವಿರಿ. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು. ಉತ್ಪಾದನೆಯಲ್ಲಿ ಕುಂಟಿತವಾಗಲಿದೆ. ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುವರು.
ಕುಂಭ ರಾಶಿ: ಈ ರಾಶಿಯವರಿಗೆ ಇಂದು ಸಾಮಾನ್ಯವಾಗಿದ್ದರೂ ನಿಮ್ಮ ಹಣಕ್ಕೆ ಸಂಬಂಧಿಸಿದ ಕಾರ್ಯವು ತೃಪ್ತಿ ಕೊಡುವುದು. ಹಣಕಾಸಿನ ವಿಷಯಗಳಲ್ಲಿ ನೀವು ಸ್ನೇಹಿತರನ್ನು ಸಂಪರ್ಕಿಸಬೇಕಾಗುವದು. ಇಂದಿನ ನಿಮ್ಮ ಅತಿಯಾದ ಉತ್ಸಾಹ ಮತ್ತು ಆತುರವು ಕೆಲಸವನ್ನು ಹಾಳುಮಾಡಬಹುದು. ಒಳ್ಳೆಯ ಸುದ್ದಿ ಕೂಡ ಬರುತ್ತದೆ ಮತ್ತು ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಅನಗತ್ಯ ಅನುಮಾನಗಳನ್ನು ತಪ್ಪಿಸಿ. ತಪ್ಪು ಮಾರ್ಗಗಳಿಂದ ಹಣ ಸಂಪಾದನೆಯು ಬೇಡ. ಸಂತೃಪ್ತಿಯಿಂದ ನೀವು ನಿಮ್ಮ ಹಳೆಯ ಎಲ್ಲವನ್ನೂ ಮರೆಯುವಿರಿ. ಹಣದ ಅನಿವಾರ್ಯತೆಯು ಬರಲಿದ್ದು, ಹೇಗೋ ಹೊಂದಿಕೆಯಾಗಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಕೃಷಿಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಅಪೂರ್ಣ ಮಾಡಿಕೊಂಡ ಕಛೇರಿಯ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಅವಿವಾಹಿತರಿಗೆ ಬಂಧುಗಳಲ್ಲಿ ಉತ್ತಮ ಸಂಬಂಧವು ಪ್ರಾಪ್ತವಾಗುವುದು.
ಮೀನ ರಾಶಿ: ಈ ರಾಶಿಯವರಿಗೆ ಲಾಭದಾಯಕ ದಿನವಾಗಿದ್ದು, ನಿಮ್ಮ ಬಾಕಿ ಕಾರ್ಯವು ಪೂರ್ಣಗೊಳ್ಳುತ್ತವೆ. ಇಂದು ನೀವು ಅಪರಿಚಿತರಿಂದ ಬೆಂಬಲ ಪಡೆಯಬಹುದು. ಲಾಭದ ಹಾದಿಯು ಅಡ್ಡಿಯಿಂದ ಚಿಂತೆ ಕಾಡಬಹುದು. ಕಠಿಣ ಪರಿಶ್ರಮ ಅಗತ್ಯವಾಗಿ ಬೇಕಾಗುವುದು. ನಿಮ್ಮ ವಿರೋಧಿಗಳನ್ನೂ ಸಹ ನೀವು ಸೋಲಿಸುವಿರಿ. ನಿರ್ಮಾಣ ಕಾರ್ಯದ ಅಗತ್ಯವನ್ನು ಅನುಭವಿಸಲಾಗುವುದು. ಕೆಲವು ಒಳ್ಳೆಯ ಸುದ್ದಿಗಳು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತವೆ. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ನಿಮ್ಮ ಮನೋವೇಗವು ಕಾರ್ಯಕ್ಕೆ ಹೆಚ್ಚು ಪುಷ್ಟಿಯನ್ನು ನೀಡುವುದು. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ.
-ಲೋಹಿತ ಹೆಬ್ಬಾರ್ – 8762924271 (what’s app only)
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ