AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ದಿನಭವಿಷ್ಯ; ಕೆಲವು ಒಳ್ಳೆಯ ಸುದ್ದಿಗಳು ಉತ್ಸಾಹವನ್ನು ಹೆಚ್ಚಿಸುತ್ತವೆ

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಫೆಬ್ರವರಿ 14ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Nitya Bhavishya: ದಿನಭವಿಷ್ಯ; ಕೆಲವು ಒಳ್ಳೆಯ ಸುದ್ದಿಗಳು ಉತ್ಸಾಹವನ್ನು ಹೆಚ್ಚಿಸುತ್ತವೆ
ರಾಶಿ ಭವಿಷ್ಯ
TV9 Web
| Edited By: |

Updated on: Feb 14, 2024 | 12:45 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಸಾಧ್ಯ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 35 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:47 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:26 ರಿಂದ 09:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ.

ಧನು ರಾಶಿ : ಈ ರಾಶಿಯವರು ಕಠಿಣ ಪರಿಶ್ರಮದ ಅನಂತರ ನೀವು ಬಯಸಿದ ಲಾಭವನ್ನು ಪಡೆಯುತ್ತೀರಿ. ನೀವು ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು. ಕೆಲವು ಅಹಿತಕರ ಘಟನೆಯಿಂದ ಮನಸ್ಸು ಅತೃಪ್ತವಾಗಿರುತ್ತದೆ. ಒಂದೊಂದಾಗಿ ನಿಮ್ಮ ವ್ಯವಹಾರವನ್ನು ಪೂರ್ಣ ಮಾಡಿಕೊಳ್ಳಿ. ಸುಖ-ದುಃಖಗಳನ್ನು ಸಮಾನವಾಗಿ ಪರಿಗಣಿಸಿ, ಎಲ್ಲವನ್ನೂ ವಿಧಿಗೆ ಬಿಟ್ಟುಬಿಡಿ. ನಿಮ್ಮ ಪಾಲಿನ ಕರ್ತವ್ಯಗಳನ್ನು ಮುಂದುವರಿಸಿ. ನಿಮ್ಮ ಪ್ರೇಮವು ವಿಪರೀತ ಹೊದಲದಲ್ಲಿ ಸಿಕ್ಕಿಕೊಂಡಿದ್ದು ಇದು ಅದೇ ಚಿಂತೆಯು ನಿಮ್ಮನ್ನು ಕಾಡುವುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳು ಕಳೆದುಹೋಗಬಹುದು. ಹೊಸ ವಿಚಾರಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯ ಸಂಭವವಿದೆ.

ಮಕರ ರಾಶಿ : ನಿಮಗೆ ಇಂದು ಗೌರವವನ್ನು ಪಡೆಯುವ ದಿನವಾಗಿರುತ್ತದೆ. ಎಲ್ಲವೂ ನಿಮಗೆ ಅನಿರೀಕ್ಷಿತವಾಗಿ ಘಟಿಸುವುದು. ಹಣಕಾಸಿನ ವಹಿವಾಟುಗಳನ್ನು ತಪ್ಪಿಸಿ ಮತ್ತು ನಿಮ್ಮ ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ನೀವು ಮಾಡುವ ಕೆಲಸಕ್ಕೆ ಕುಟುಂಬದ ವಿರೋಧವು ಬರಬಹುದು. ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪು ನಿರ್ಧಾರ ತೆಗೆದುಕೊಂಡು ಕಷ್ಟಪಡುವಿರಿ. ಸಾಲ ಮಾಡುವ ವಿಚಾರವು ನಿಮಗೆ ಕಹಿಯಾಗಬಹುದು. ಜೊತೆಗಾರರನ್ನು ಆತ್ಮೀಯವಾಗಿ ಕಾಣುವಿರಿ. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು. ಉತ್ಪಾದನೆಯಲ್ಲಿ ಕುಂಟಿತವಾಗಲಿದೆ. ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುವರು.

ಕುಂಭ ರಾಶಿ : ಈ ರಾಶಿಯವರಿಗೆ ಇಂದು ಸಾಮಾನ್ಯವಾಗಿದ್ದರೂ ನಿಮ್ಮ ಹಣಕ್ಕೆ ಸಂಬಂಧಿಸಿದ ಕಾರ್ಯವು ತೃಪ್ತಿ ಕೊಡುವುದು. ಹಣಕಾಸಿನ ವಿಷಯಗಳಲ್ಲಿ ನೀವು ಸ್ನೇಹಿತರನ್ನು ಸಂಪರ್ಕಿಸಬೇಕಾಗುವದು. ಇಂದಿನ‌ ನಿಮ್ಮ ಅತಿಯಾದ ಉತ್ಸಾಹ ಮತ್ತು ಆತುರವು ಕೆಲಸವನ್ನು ಹಾಳುಮಾಡಬಹುದು. ಒಳ್ಳೆಯ ಸುದ್ದಿ ಕೂಡ ಬರುತ್ತದೆ ಮತ್ತು ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಅನಗತ್ಯ ಅನುಮಾನಗಳನ್ನು ತಪ್ಪಿಸಿ. ತಪ್ಪು ಮಾರ್ಗಗಳಿಂದ ಹಣ ಸಂಪಾದನೆಯು ಬೇಡ. ಸಂತೃಪ್ತಿಯಿಂದ ನೀವು ನಿಮ್ಮ ಹಳೆಯ ಎಲ್ಲವನ್ನೂ ಮರೆಯುವಿರಿ. ಹಣದ ಅನಿವಾರ್ಯತೆಯು ಬರಲಿದ್ದು, ಹೇಗೋ ಹೊಂದಿಕೆಯಾಗಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಕೃಷಿಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಅಪೂರ್ಣ ಮಾಡಿಕೊಂಡ ಕಛೇರಿಯ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಅವಿವಾಹಿತರಿಗೆ ಬಂಧುಗಳಲ್ಲಿ ಉತ್ತಮ ಸಂಬಂಧವು ಪ್ರಾಪ್ತವಾಗುವುದು.

ಮೀನ ರಾಶಿ : ಈ ರಾಶಿಯವರಿಗೆ ಲಾಭದಾಯಕ ದಿನವಾಗಿದ್ದು, ನಿಮ್ಮ ಬಾಕಿ ಕಾರ್ಯವು ಪೂರ್ಣಗೊಳ್ಳುತ್ತವೆ. ಇಂದು ನೀವು ಅಪರಿಚಿತರಿಂದ ಬೆಂಬಲ ಪಡೆಯಬಹುದು. ಲಾಭದ ಹಾದಿಯು ಅಡ್ಡಿಯಿಂದ ಚಿಂತೆ ಕಾಡಬಹುದು. ಕಠಿಣ ಪರಿಶ್ರಮ ಅಗತ್ಯವಾಗಿ ಬೇಕಾಗುವುದು. ನಿಮ್ಮ ವಿರೋಧಿಗಳನ್ನೂ ಸಹ ನೀವು ಸೋಲಿಸುವಿರಿ. ನಿರ್ಮಾಣ ಕಾರ್ಯದ ಅಗತ್ಯವನ್ನು ಅನುಭವಿಸಲಾಗುವುದು. ಕೆಲವು ಒಳ್ಳೆಯ ಸುದ್ದಿಗಳು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತವೆ. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ನಿಮ್ಮ ಮನೋವೇಗವು ಕಾರ್ಯಕ್ಕೆ ಹೆಚ್ಚು ಪುಷ್ಟಿಯನ್ನು ನೀಡುವುದು. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ.

-ಲೋಹಿತ ಹೆಬ್ಬಾರ್ – 8762924271 (what’s app only)

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ