Nithya Bhavishya: ಈ ರಾಶಿಯವರ ಕಾರ್ಯಕ್ಕೆ ಕೆಲವು ವಿಘ್ನಗಳು ಬರಬಹುದು -ಎಚ್ಚರ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಫೆಬ್ರವರಿ​​​​ 15) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

Nithya Bhavishya: ಈ ರಾಶಿಯವರ ಕಾರ್ಯಕ್ಕೆ ಕೆಲವು ವಿಘ್ನಗಳು ಬರಬಹುದು -ಎಚ್ಚರ
ರಾಶಿ ಭವಿಷ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 15, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಭರಣೀ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 35 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:14 ರಿಂದ 03:41ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:58 ರಿಂದ 08:25ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:52 ರಿಂದ 11:20ರ ವರೆಗೆ.

ಸಿಂಹ ರಾಶಿ : ನೀವು ಯಾವ ವಿಚಾರದಲ್ಲಿಯೂ ರಾಜಿಯಾಗಲು ಒಪ್ಪಲಾರಿರಿ. ನಿಮ್ಮ ಗುಣಮಟ್ಟವು ನಿಮ್ಮದೇ ಕಾರಣದಿಂದ ತಗ್ಗಬಹುದು. ಆಡಳಿತದಲ್ಲಿ ಆಗಬೇಕಾದ ಬದಲಾವಣೆಯನ್ನು ನೀವು ತರುವಿರಿ. ಒಮ್ಮೆಲೇ ಎಲ್ಲವನ್ನೂ ಮಾಡಿ ಮುಗಿಸಬೇಕು ಎನ್ನುವ ಆತುರವು ಬೇಡ. ದೈನಂದಿನ ಬಳಕೆಯ ಉತ್ಪನ್ನಗಳ ವ್ಯಾಪಾರಿಗಳು ಲಾಭ ಗಳಿಸುವರು. ಕೆಲ ದಿನಗಳಿಂದ ನಿಮ್ಮ ಆರೋಗ್ಯ ಹದಗೆಟ್ಟಿದ್ದು, ಮನಸ್ಸೂ ಸರಿಯಾಗಿರದು. ಇಂದು ಸಹೋದರರ ನಡುವೆ ವಾಗ್ವಾದವು ಅಗಲಿದ್ದು ಹಿರಿಯ ಮಧ್ಯಸ್ತಿಕೆಯಿಂದ ಶಾಂತವಾಗುವುದು. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. ಬಹಳ ಕೆಲಸವಿದ್ದರೂ ಒತ್ತಡದಿಂದ ಇರುವಿರಿ. ನಿಮ್ಮ ಬಗ್ಗೆ ನಿಮಗೇ ಪೂರ್ಣ ಪ್ರಮಾಣದ ನಂಬಿಕೆ ಸಾಲದು. ನಿಮ್ಮ ದೌರ್ಬಲ್ಯಗಳನ್ನು ಇತರರು ಆಡಿಕೊಂಡಾರು.

ಕನ್ಯಾ ರಾಶಿ : ಇಂದು ಅನಿವಾರ್ಯ ಓಡಾಟವು ಬರಲಿದ್ದು ವಾಹನ ಚಲಾಯಿಸುವಾಗ ನಿಮಗೆ ಜಾಗರೂಕತೆ ಬೇಕಾಗುವುದು. ಕಟ್ಟ ಅಭ್ಯಾಸದ ಕಡೆಗೆ ಮನಸ್ಸು ಸೆಳೆಯುವುದು. ಅದಕ್ಕೆ ಸ್ನೇಹಿತರ ಪ್ರೋತ್ಸಾಹವೂ ಇರುವುದು. ಕೊಡಬೇಕಾದವರಿಗೆ ಸರಿಯಾದ ಗೌರವವನ್ನು ಕೊಡಿ. ವೈದ್ಯರು ಇಂದು ಒತ್ತಡದಲ್ಲಿ ಇರುವರು. ಕೆಲಸಕ್ಕೆ ಅನುಗುಣವಾಗಿ ಸಮಯವನ್ನು ಹೊಂದಿಸಿಕೊಳ್ಳಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲವನ್ನೂ ಹೇಳುವಿರಿ. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಇಂದು ಹೆಚ್ಚಿನ ಜನರ ಜೊತೆ ಒಡನಾಟ ಮಾಡುವಿರಿ. ಆಸ್ತಿಯ ಹಂಚಿಕೆಯನ್ನು ಮಾಡಬೇಕಾದೀತು.

ತುಲಾ ರಾಶಿ : ಇಂದು ಉದ್ಯಮಕ್ಕೆ ಸಂಬಂಧಿಸಿದ ನೂತನ ಒಪ್ಪಂದಕ್ಕೆ ಮುಂದುವರಿಯಿರಿ. ಎಲ್ಲದಕ್ಕೂ ತಡೆಯೊಡ್ಡುವ ವಿರೋಧಿಗಳು ಶರಣಾಗಲೂಬಹುದು. ಕಲಾವಿದರು ಬಹಳ ಸಂತೋಷವನ್ನು ಅನುಭವಿಸುವರು. ಸಂಗಾತಿಯ ಹೂಡಿಕೆಯನ್ನು ನೀವು ಬಳಸಿಕೊಳ್ಳುವಿರಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ ಲಾಭವನ್ನು ಪಡೆಯುವ ದೀರ್ಘಕಾಲದ ಯೋಜನೆಯ ಕನಸನ್ನು ಕಾಣುವಿರಿ. ನೇರವಾಗಿ ಯಾರನ್ನೂ ದೂರುವುದಿಲ್ಲ. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಕಾಣಿಸುವುದು. ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ವಿಘ್ನಗಳು ಬರಬಹುದು.

ವೃಶ್ಚಿಕ ರಾಶಿ : ನೀವು ಇಂದು ಉದ್ಯಮದ ಕಾರಣಕ್ಕೆ ಸ್ನೇಹಬಂಧವನ್ನು ಬಿಗಿ ಮಾಡಿಕೊಳ್ಳುವಿರಿ. ಕಚೇರಿಯಲ್ಲಿ ನೀವು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ಹಿರಿಯರ ಸೇವೆಯನ್ನು ಮಾಡುವ ಅವಕಾಶವು ಸಿಗಲಿದ್ದು, ಅದನ್ನು ಕಳೆದುಕೊಳ್ಳುವುದು ಬೇಡ. ತಾಳ್ಮೆಯಿಂದ ಏನನ್ನಾದರೂ ಸಾಧಿಸಲು ಪ್ರಯತ್ನಿಸಿ. ಹಿತಶತ್ರುಗಳನ್ನು ನೀವು ದೂರ ಮಾಡಿಕೊಳ್ಳಲಾಗದು. ನಿಮ್ಮ ಜುಟ್ಟವನ್ನು ಅವರೇ ಹಿಡಿದುಕೊಂಡು ಆಡಿಸುವರು. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ. ಹಳಸಿಹೋದ ಹಳೆಯ ಸಂಬಂಧವು ಮತ್ತೆ ಚಿಗುರಬಹುದು.