Horoscope: ದಿನಭವಿಷ್ಯ; ಇಂದು ಈ ರಾಶಿಯವರಿಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು

|

Updated on: Feb 13, 2024 | 12:15 AM

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಫೆಬ್ರವರಿ 13, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ದಿನಭವಿಷ್ಯ; ಇಂದು ಈ ರಾಶಿಯವರಿಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು
ರಾಶಿಭವಿಷ್ಯ
Image Credit source: Getty Images
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ರೇವತೀ, ಯೋಗ : ಸಿದ್ಧ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:41 ರಿಂದ 05:08ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:53 ರಿಂದ 11:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:47 ರಿಂದ 02:14ರ ವರೆಗೆ.

ಮೇಷ ರಾಶಿ: ಯಾವುದಾದರೂ ದುರ್ವ್ಯಸನಕ್ಕೆ ತುತ್ತಾಗಿ ಹಣವನ್ನೂ ಆರೋಗ್ಯವನ್ನೂ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲಸಿಗಬಹುದು. ಕಾರ್ಯಸ್ಥಾನದಲ್ಲಿ ಗೊಂದಲದ, ಹತಾಶೆಯ ವಾತಾವರಣ ಇರಬಹುದು. ಮನೆಯ ಧಾರ್ಮಿಕ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದುಕೊಂಡರೂ ಅದು ಅಸಾಧ್ಯ ಎನಿಸಬಹುದು. ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ಹಿತಶತ್ರುಗಳನ್ನು ಅರಿಯುವಲ್ಲಿ ನಿಮಗೆ ಸೋಲಾಗುವುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ವಿಳಂಬವಾಗಿ ಬರುತ್ತದೆ ಎಂದುಕೊಂಡ ನಿಮ್ಮ ಹಣವು ಬೇಗ ಬರಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ವಿವಾಹಜೀವನವು ಅತ್ಯಂತ ಸುಖದಂತೆ ತೋರುವುದು.

ವೃಷಭ ರಾಶಿ: ಇಂದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು. ಕೊಟ್ಟ ಸಾಲ ಮರಳಿಬರುವ ಆಸೆಯನ್ನು ಬಿಡುವಿರಿ. ನಿಮ್ಮ ಮೇಲೆ ಸಹಾನುಭೂತಿಯು ಉಂಟಾಗುವ ಸಾಧ್ಯತೆ ಇದೆ. ಮೋಸ ಹೋಗುವ ಸಾಧ್ಯತೆ ಇರುತ್ತದೆ. ಜಾಗರೂಕರಾಗಿರಿ. ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ. ನೀವು ಗಣ್ಯರೊಂದಿಗೆ ಇಂದಿನ ಒಡನಾಡವಿರಲಿದೆ. ವಿವಾಹಕ್ಕೆ ಸಂಬಂಧಿಸಿದ ಕಟು ಮಾತುಗಳು ಕೇಳಿಬರಬಹುದು. ನಕಾರಾತ್ಮಕ ವಿಚಾರಗಳ ನಡೆಯೂ ನೀವು ಬಲವಾಗಿದ್ದರೆ ಅದು ವಿದ್ಯೆಯ ಕಾರಣದಿಂದ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಬಂಧುವನ್ನೇ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ನಂಬಿಕೆ ಕಡಮೆ ಆಗುವುದು. ಸಂಬಂಧದಲ್ಲಿ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಳ್ಳಬೇಡಿ. ಯಾರಾದರೂ ಧನಸಹಾಯವನ್ನು ನಿಮ್ಮ ಬಳಿ ಕೇಳಬಹುದು.

ಮಿಥುನ ರಾಶಿ: ಇಂದು ನಿಮ್ಮ ಸಾಮಾರ್ಥ್ಯವನ್ನು ವ್ಯಕ್ತಪಡಿಸಲು ಹೋಗಿ ಮುಗ್ಗರಿಸುವಿರಿ. ಸಹೋದರರಿಂದ ನಿಮಗೆ ಯೋಗ್ಯ ಸಲಹೆಯು ಸಿಗಬಹುದು. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಉತ್ತಮವಾದ ಯೋಜನೆಗಳನ್ನು ರೂಪಿಸಿ. ಪ್ರೇಮ ಅಂಕುರಿಸುವ ಸಾಧ್ಯತೆ ಇದೆ. ನೀರೆರೆದರೆ ಫಲಿಸಲೂ ಬಹುದು. ನಿಮ್ಮ ಸಂಗಾತಿಯು ನಿಮಗೆ ಅನುಕೂಲವನ್ನು ಕಲ್ಪಿಸುವವಳೇ ಆಗಿದ್ದಾಳೆ. ಅಭಿವೃದ್ಧಿಗೆ ಅವಕಾಶವಿದ್ದರೂ ನಿಮಗೆ ಹಿನ್ನಡೆಯಂತೆ ಎಲ್ಲವೂ ಭಾಸವಾಗುವುದು. ಶ್ರಮಕ್ಕೆ ತಕ್ಕ ಫಲವು ಲಭಿಸಿಲ್ಲ ಎಂದು ನಿಮ್ಮ ಮನಸ್ಸಿಗೆ ಗಾಢವಾಗಿ ತಿಳಿಯುವುದು. ಅತಿಯಾಗಿ ಯಾವುದನ್ನು ಮಾಡಲು ಹೋಗುವುದು ಬೇಡ. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ನಿಮ್ಮ ತಮಾಷೆಯು ಇಷ್ಟವಾಗದೇ ಇರಬಹುದು. ಸಂಗಾತಿಯ ಮನೋಭಾವವು ನಿಮಗೆ ಇಂದು ಸರಿ ಹೊಂದದು. ಸಮಯಕ್ಕೆ ಯಾವುದನ್ನೂ ಸರಿಯಗಿ ಮಾಡಲಾಗದು.

ಕಟಕ ರಾಶಿ: ಇಂದು ನಿಮಗೆ ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಸಮಯವನ್ನು ತೆಗದುಕೊಳ್ಳುವಿರಿ. ಎಲ್ಲ ಹತಾಶೆ, ನೋವು, ಸಂಕಟ, ತುಮುಲಗಳನ್ನು ನಿವಾರಿಸಿಕೊಳ್ಳಲು ಒಳ್ಳೆಯ ಸಮಯ ಮತ್ತಾವುದೂ ಇಲ್ಲ. ಘಟನೆಗಳು ಉತ್ತಮ ಮತ್ತು ಗೊಂದಲಮಯವಾಗಿರುವ ಒಂದು ದಿನ. ಇದು ನಿಮ್ಮನ್ನು ದಣಿವು ಹಾಗೂ ಗೊಂದಲದಲ್ಲಿರಿಸುತ್ತದೆ. ಕಳ್ಳತನದ ಆರೋಪವನ್ನು ಎದುರಿಸಬೇಕಾಗಬಹುದು. ನಿಮ್ಮ ನಿರುದ್ಯೋಗವು ಚಿಂತೆಯಾಗಿ ನಿಮ್ಮ ಬಗ್ಗೆಯೇ ನಿಮಗೆ ನಕಾರಾತ್ಮಕ ಭಾವ ಮೂಡುವುದು. ಯಾವುದೋ ಆಲೋಚನೆಯಲ್ಲಿ ಮುಳುಗಿರುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಹಾಸ್ಯಪ್ರಜ್ಞೆ ಕೆಲವರಿಗೆ ಇಷ್ಟವಾಗದು. ದೇಹವು ಅಧಿಕ ಶ್ರಮದಿಂದ ಆಯಾಸಗೊಳ್ಳುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ