Horoscope: ರಾಶಿಭವಿಷ್ಯ; ಈ ರಾಶಿಯವರು ಇಂದು ಪರಾಕ್ರಮ ಪ್ರದರ್ಶಿಸುವುದು ಬೇಡ

| Updated By: Rakesh Nayak Manchi

Updated on: Feb 14, 2024 | 12:15 AM

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಫೆಬ್ರವರಿ 14, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ರಾಶಿಭವಿಷ್ಯ; ಈ ರಾಶಿಯವರು ಇಂದು ಪರಾಕ್ರಮ ಪ್ರದರ್ಶಿಸುವುದು ಬೇಡ
ದಿನಭವಿಷ್ಯ
Image Credit source: Getty Images
Follow us on

ರಾಶಿ ಭವಿಷ್ಯ (Horoscope) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಸಾಧ್ಯ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 35 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:47 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:26 ರಿಂದ 09:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ.

ಮೇಷ ರಾಶಿ: ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ಉದ್ಯಮವನ್ನು ಮಿತಿಮೀರಿದ ನಿರೀಕ್ಷೆಯಲ್ಲಿ ಮುಂದುವರಿಯುವುದು ಬೇಡ. ಅನಂತರ ಕಷ್ಟವಾದೀತು. ಸಂಕೀರ್ಣ ಸ್ಥಿತಿಯನ್ನು ನೀವು ತಿಳಿಯಾಗಿಸುವಿರಿ. ವಿರೋಧಿಗಳು ನಿಮ್ಮ ಸಮೀಪ ಬಾರದೇ ಹೋಗಬಹುದು. ಆಹಾರದಲ್ಲಿ ಇಂದ್ರಿಯನಿಗ್ರಹವು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಆರ್ಥಿಕ ಕಾರಣಗಳಿಂದ ಸಂಗಾತಿಯಿಂದ ದೂರವಾಗಬಹುದು. ವಿಶ್ವಾಸದಲ್ಲಿ‌ ಕೊರತೆ ಇರದು. ವ್ಯಾಪಾರದ ಕೆಲವು ನಿರ್ಧಾರಗಳಿಗೆ ಅಪರಿಚಿತರಿಂದ ಸಲಹೆಯು ಸಿಗುವುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಕೆಲವನ್ನು ನೀವು ಮನಃಪೂರ್ವಕವಾಗಿಯೇ ಕಡೆಗಣಿಸುವಿರಿ. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು.

ವೃಷಭ ರಾಶಿ: ಈ ದಿನವು ನಿಮಗೆ ಅನುಕೂಲಕರವಾಗಿಲ್ಲ. ನೀವು ಯಾರನ್ನಾದರೂ ವೃಥಾ ಸಂಶಯಿಸುವಿರಿ. ವಾದಗಳಲ್ಲಿ ಸಮಯ ಮತ್ತು ಹಣ ಕಳೆದುಹೋಗುತ್ತದೆ. ಕಾನೂನಿನ ವ್ಯವಹಾರವನ್ನು ನೀವೇ ಸ್ವತಃ ಮಾಡಿಕೊಳ್ಳಬೇಕಾಗುವುದು. ತಾಯಿಯ ಕಡೆಯಿಂದ ಲಾಭದ ಭರವಸೆ ಇರುತ್ತದೆ. ವಿವಾಹದ ಸಂಬಂಧವನ್ನು ನೀವು ತಳ್ಳಿಹಾಕುವಿರಿ. ಯಾರ ಮಾತುಗಳೂ ನಿಮಗೆ ಪಥ್ಯವಾದೀತು. ದ್ವಂದ್ವ ನಿಲುವನ್ನು ನೀವು ಸರಿ ಮಾಡಿಕೊಳ್ಳುವ ಅವಶ್ಯಕತೆ ಇರುವುದು. ಸಮಯವನ್ನು ನೀವು ವ್ಯರ್ಥ ಮಾಡಿಕೊಂಡು ಪಶ್ಚಾತ್ತಾಪಪಡುವಿರಿ. ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು. ಉನ್ನತ ವ್ಯಾಸಂಗದಲ್ಲಿ ಆಸಕ್ತಿಯು ಕಡಿಮೆ ಆಗುವುದು. ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮದಾದ ಸ್ವಂತಮನೆಯು ಬೇಕೆನ್ನಿಸಬಹುದು.

ಮಿಥುನ ರಾಶಿ: ನಿಮ್ಮ ಪರಾಕ್ರಮವನ್ನು ಪ್ರದರ್ಶಿಸುವುದು ಬೇಡ. ಸ್ನೇಹಿತರ ಸಹಕಾರವು ನಿಮಗೆ ಸಾಕು ಎನಿಸಬಹುದು. ಸ್ಥಿರಾಸ್ತಿಗೆ ಸಂಬಂಧಿಸಿದ ಕೌಟುಂಬಿಕ ವಿವಾದವನ್ನು ಮುಕ್ತಾಯ ಮಾಡಿಕೊಳ್ಳುವುದು ಉತ್ತಮ. ಅತಿಥಿ ಸತ್ಕಾರವು ನಿಮಗೆ ಖುಷಿ ಕೊಡುವುದು. ಚಿಂತನಶೀಲ ಕೆಲಸದಿಂದ ಯಶಸ್ಸು ಸಿಗುವುದು.‌ ಆರೋಗ್ಯವು ದಿನದಿಂದ ದಿನಕ್ಕೆ ಕ್ಷೀಣಿಸಿದರೂ ಮನಸ್ಸು ಸ್ಥೈರ್ಯವನ್ನು ಉಳಿಸಿಕೊಳ್ಳುವುದು. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗುಉದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ. ಬೇಸರವನ್ನು ಕೆಲಸದಲ್ಲಿ ಗಮನಕೊಡುವ ಮೂಲಕ ಪರಿಹರಿಸಿಕೊಳ್ಳುವಿರಿ. ಸಹಾವಾಸದಿಂದ ನಿಮಗೆ ಅಪವಾದವು ಬರಬಹುದು.

ಕರ್ಕ ರಾಶಿ: ಆರ್ಥಿಕ ವಿಷಯಗಳಲ್ಲಿ ಪ್ರಯೋಜನವಿದೆ ಮತ್ತು ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಉತ್ಸಾಹವು ಹೆಚ್ಚಾಗುತ್ತದೆ ಮತ್ತು ನೀವು ಜನರಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಬಗ್ಗೆ ಸದಭಿಪ್ರಾಯ ಇರುವುದನ್ನು ಕೇಳಿ ಸಂತೋಷವಾದೀತು. ಬಂಧುಗಳೂ ನಿಮ್ಮನ್ನು ಇಷ್ಟಪಡುವರು. ಕೈಯಲ್ಲಿ ಸಾಕಷ್ಟು ಸಂಪತ್ತು ಇದ್ದರೂ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ. ಸ್ವಂತಕ್ಕೆ ಪ್ರಯೋಜನವಿಲ್ಲದ ಯಾವ ಕಾರ್ಯವನ್ನೂ ನೀವು ಮಾಡಲಾರಿರಿ. ಕೋಪಗೊಂಡು ಇಡೀ ದಿನವನ್ನು ಹಾಳುಮಾಡಿಕೊಳ್ಳುವಿರಿ. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ಸಂಗಾತಿಯ ಮೇಲೆ ಬೇಸರದ ಭಾವವೂ ಮೂಡುವ ಸಾಧ್ಯತೆ ಇದೆ. ಬೆಳಗಿನಿಂದಲೇ ಮನಸ್ಸಿಗೆ ಕಿರಿಕಿರಿ ಉಂಟಾದೀತು. ನಿಮ್ಮ ಅಶಿಸ್ತಿನ ವರ್ತನೆಯಿಂದ ಸಹೋದ್ಯೋಗಿಗಳ ನಡುವೆ ಮಾತುಕತೆಗಳು ಆಗಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ