Nitya Bhavishya: ಈ ರಾಶಿಯವರು ತಾಯಿಯ ಕಡೆಯಿಂದ ಆರ್ಥಿಕ ಲಾಭವನ್ನು ಪಡೆಯುವಿರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 30, 2024 | 12:45 AM

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 30ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Nitya Bhavishya: ಈ ರಾಶಿಯವರು ತಾಯಿಯ ಕಡೆಯಿಂದ ಆರ್ಥಿಕ ಲಾಭವನ್ನು ಪಡೆಯುವಿರಿ
ಪ್ರಾತಿನಿಧಿಕ ಚಿತ್ರ
Follow us on

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 30) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:38 ರಿಂದ 05:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:54 ರಿಂದ ಮಧ್ಯಾಹ್ನ 11:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:46 ರಿಂದ 02:12ರ ವರೆಗೆ.

ಧನು ರಾಶಿ : ನಿಮ್ಮ ಮಾತಿನಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ನೀವು ಯಾರಿಗಾದರೂ ಭರವಸೆ ನೀಡಿದ್ದರೆ, ಅದನ್ನು ಪೂರೈಸಲು ಪ್ರಯತ್ನಿಸುವಿರಿ. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಅನಿರೀಕ್ಷಿತ ಭಡ್ತಿಯನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಮಕ್ಕಳ ವೃತ್ತಿಜೀವನದ ಬಗ್ಗೆ ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನಿಮ್ಮ ಸಂಗಾತಿಯ ಜೊತೆ ಚರ್ಚಿಸಿದರೆ ಅದು ನಿಮಗೆ ಉತ್ತಮವಾಗಿರುತ್ತದೆ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗುವುದು. ಅಗ್ನಿಯ ಭೀತಿಯು ನಿಮಗೆ ಅಧಿಕವಾಗಿ ಕಾಡುವುದು. ಮಕ್ಕಳನ್ನು ತಿದ್ದುವುದು ನಿಮಗೆ ಕಷ್ಟವಾದೀತು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳುವರು. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡಾಡುವುದು.

ಮಕರ ರಾಶಿ : ಇಂದು ನೀವು ಕೆಲವು ಹೊಸಬರನ್ನು ಭೇಟಿ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ತಾಯಿಯ ಕಡೆಯಿಂದ ಆರ್ಥಿಕ ಲಾಭವನ್ನು ಪಡೆಯುತ್ತಿರುವಿರಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ಕೈಲಾದಷ್ಟು ಪ್ರಯತ್ನಿಸುತ್ತೀರಿ. ನಿಮ್ಮ ಸಹೋದರನ ಜೊತೆ ನಿಮ್ಮ ಆಪ್ತತೆಯು ಹೆಚ್ಚಾಗುತ್ತದೆ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳಬಹುದು. ನಿಮ್ಮ ತಂದೆಯು ಕಣ್ಣಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ತೊಂದರೆಗೊಳಗಾಗಬಹುದು. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು. ಆಹಾರವು ಸರಿಯಾಗಿ ಸಿಗದೇ ನಿಮಗೆ ಸಂಕಟವಾಗಬಹುದು. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಒಮ್ಮನಸ್ಸು ಬರುವುದು ಕಷ್ಟವಾಗುವುದು.

ಕುಂಭ ರಾಶಿ : ಇಂದು ನಿಮಗೆ ಅಗತ್ಯವಿರುವ ವಸ್ತುಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ಆದರೆ ನೀವು ನಿಮ್ಮ ಹಿರಿಯರ ಸಲಹೆಯನ್ನು ಅನುಸರಿಸಿದರೆ ಉತ್ತಮವಾದುದನ್ನು ಪಡೆಯುವಿರಿ. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು. ನೀವು ವೈಯಕ್ತಿಕ ವಿಷಯಗಳ ಮೇಲೆ ಸಂಪೂರ್ಣ ಗಮನವನ್ನು ಹೊಂದಿದ್ದರೆ ನಿಮಗೆ ಒಳ್ಳೆಯದು. ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಸಡಿಲಬಿಡುವುದು ಬೇಡ. ನಿಮ್ಮ ವಿರೋಧಿಗಳಲ್ಲಿ ಒಬ್ಬರು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ. ಬಂಧುಗಳಿಂದ ಕೆಲಸವು ಹಾಳಾಗಬಹುದು. ಕಾನೂನಿಗೆ ವಿದ್ಧವಾದ ಕಾರ್ಯವನ್ನು ಸಮರ್ಥಿಸಿಕೊಳ್ಳುವಿರಿ. ಸಂಗಾತಿಯ ಮಾತುಗಳು ಘಟನೆಯಿಂದ ನಿಮಗೆ ಬಹಳ ಬೇಸರ ತರಿಸಬಹುದು.

ಮೀನ ರಾಶಿ : ನಿಮ್ಮ ಸ್ನೇಹಿತರ ಜೊತೆ ನೀವು ಮನೋರಂಜನಾ ಕಾರ್ಯಕ್ರಮಗಳಿಗೆ ಹಾಜರಾಗಬಹುದು. ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಬಹುದು. ನೀವು ಇಂದು ಹೊರಗಿನವರಿಗೆ ಯಾವುದೇ ಆಂತರಿಕ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಬಾರದು. ರಕ್ತ ಸಂಬಂಧಗಳು ಮೊದಲಿಗಿಂತ ಉತ್ತಮವಾಗಿರುತ್ತವೆ. ನಿಮ್ಮ ಯೋಜನೆಗಳನ್ನು ನೀವು ವೇಗಗೊಳಿಸುತ್ತೀರಿ. ಯಾವುದೇ ಹೂಡಿಕೆ ಸಂಬಂಧಿತ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಬಂದರೆ, ಅದರಲ್ಲಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ಇಂದು ನೀವು ದೇವರ ಆರಾಧನೆಯಲ್ಲಿ ಮಗ್ನರಾಗುವಿರಿ. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಮನೆಯ ಕೆಲಸವೆಲ್ಲವೂ ಹಾಗೆಯೇ ಇರಿಸಿಕೊಂಡು ಬಂಧುಗಳ ಮನೆಗೆ ಹೋಗಲಿದ್ದೀರಿ.

-ಲೋಹಿತ ಹೆಬ್ಬಾರ್-8762924271 (what’s app only)