ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಭ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:14 ರಿಂದ 09:43ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:13 ರಿಂದ ಮಧ್ಯಾಹ್ನ 12:43ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:42ರ ವರೆಗೆ.
ಸಿಂಹ ರಾಶಿ : ಇಂದು ನೀವು ಸ್ವಯಂ ಸ್ಫೂರ್ತಿಯಿಂದ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವಿರಿ. ಕೆಲವನ್ನು ಅನುಭವದ ಮೂಲಕ ಪಡೆದುಕೊಳ್ಳುವಿರಿ. ಆಪ್ತರನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದ ಸ್ಥಿತಿಯು ಬರಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ಇಂದು ಸಮಯವನ್ನು ಕಳೆಯುವುದು ಕಷ್ಟವಸದೀತು. ಮಾತಿನ ಮೇಲೆ ಹಿಡಿತ ತಪ್ಪಬಹುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಇರುವುದು ನಿಮಗೆ ಸ್ಪಷ್ಟವಾಗಿ ಕಾಣಿಸುವುದು.
ಕನ್ಯಾ ರಾಶಿ : ಇಂದು ಬಹಳ ಚುರುಕುತನದಿಂದ ಎಲ್ಲರ ಕಾರ್ಯವನ್ನು ಮಾಡುವಿರಿ. ಸೌಂದರ್ಯಪ್ರಜ್ಞೆಯು ಇಂದು ಅಧಿಕವಾಗಲಿದೆ. ಹೂಡಿಕೆಯನ್ನು ಕ್ರಮಬದ್ಧವಾಗಿ ಮಾಡುವಿರಿ. ಪ್ರೀತಿಪಾತ್ರರ ಜೊತೆ ವಾದಗಳಿಗೆ ಕಾರಣವಾಗಬಹುದು. ವಿವಾದಾತ್ಮಕ ವಿಷಯಗಳಿಂದ ದೂರವಿರಲು ಒತ್ತಾಯ ಮಾಡಬಹುದು. ಅಹಂಕಾರದಿಂದ ನಿಮ್ಮ ಬಗ್ಗೆ ಇರುವ ಅಭಿಪ್ರಾಯವು ಬದಲಾಗುವುದು. ಮನಶ್ಶಾಂತಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ಹಳೆಯ ಉದ್ಯೋಗಕ್ಕೆ ಪುನಃ ಮರಳುವಿರಿ. ನಿರಂತರ ಕೆಲಸವನ್ನು ಮಾಡುವುದು ಇಷ್ಟವಾಗಲಿದೆ. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ.
ತುಲಾ ರಾಶಿ : ಇಂದು ಆಡಿದ ಕೆಲವರ ಮಾತು ನಿಮಗೇ ಹೇಳಿದಂತೆ ಅನ್ನಿಸಬಹುದು. ತಪ್ಪುಗಳನ್ನು ಸರಿಮಾಡಿಕೊಳ್ಳುವ ಯೋಚನೆ ಬಂದರೆ ನಿಮ್ಮ ಹಾದಿಸುಗಮ. ನಿಮ್ಮ ಕುಟುಂಬದ ಜೊತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ಯಾರ ನಿಂದನೆಯನ್ನೂ ತಲೆಗೆ ತೆಗೆದುಕೊಳ್ಳುವುದು ಬೇಡ. ನಿರ್ಲಕ್ಷ್ಯವೂ ಒಂದು ಮದ್ದು ಎನ್ನುವುದು ಗೊತ್ತಿರಬೇಕು. ನೌಕರರನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಮುಖ್ಯವಾಗುವುದು. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಬಂದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ಯಾವ ಸಂದರ್ಬದಲ್ಲಿಯೂ ಇಂದು ನಿಮ್ಮವರನ್ನು ಬಿಟ್ಟುಕೊಡಲಾರಿರಿ. ಇಂದು ಹಣದ ಹರಿವು ಅಲ್ಪವಾಗಿ ಇರುವುದು. ಆಪ್ತರನ್ನು ಕಳೆದುಕೊಂಡು ಬೇಸರಿಸುವಿರಿ. ವ್ಯಾಪಾರದ ನಷ್ಟವನ್ನು ನಿಮಗೆ ಅರಗಿಸಿಕೊಳ್ಳಲಾಗದು.
ವೃಶ್ಚಿಕ ರಾಶಿ: ನೀವು ದೈಹಿಕವಾಗಿ ಸದೃಢರಾಗಲು ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳಬೇಕಾದೀತು. ಮಕ್ಕಳಿಗೆ ಕೊಡಬೇಕಾದ ಆಸ್ತಿಯ ಬಗ್ಗೆ ಚರ್ಚೆ ಮಾಡುವಿರಿ. ಹಿಂಸೆಯಿಂದ ಏನನ್ನೂ ಪಡೆಯಲಾಗದು. ಯಾರ ಮನಸ್ಸಿಗೂ ಬೇಕೆಂದೇ ನೋವನ್ನು ಕೊಡುವುದು ಬೇಡ. ದೂರ ಬಂಧುಗಳ ಭೇಟಿಯಾಗುವಿರಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಸಿದ್ಧತೆಯನ್ನು ನಡೆಸುವಿರಿ. ಆದಾಯದಿಂದ ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಮನೆಯ ಮುಂದೆ ಬಂದವರನ್ನು ಖಾಲಿ ಕೈಯಲ್ಲಿ ಕಳುಹಿಸುವುದು ಬೇಡ. ಏನಾದರೂ ಕೊಟ್ಟು ಕಳುಹಿಸಿ. ಹಣಕಾಸಿನ ಉದ್ಯೋಗದಲ್ಲಿ ಇರುವವರಿಗೆ ಉತ್ತಮ ಅವಕಾಶವು ಸಿಗುವುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಭಕ್ತಿಯು ಕಡಿಮೆ ಆದಂತೆ ನಿಮಗೆ ಅನ್ನಿಸುವುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ