
ವಸ್ತುನಿಷ್ಠವಾಗಿ ನಡೆದುಕೊಳ್ಳುವುದು ಮುಖ್ಯ. ವ್ಯಕ್ತಿಗತವಾಗಿ ಯಾವುದೇ ಅಭಿಪ್ರಾಯ ಇದ್ದರೆ ಗುಣಕ್ಕೆ ಸಂಬಂಧಿಸಿದಂತೆ ಮತ್ಸರ ಸಾಧಿಸುವುದಕ್ಕೆ ಹೋಗಬೇಡಿ. ಉನ್ನತ ಶಿಕ್ಷಣ ಪಡೆಯುತ್ತಾ ಇರುವವರಿಗೆ ವಿದ್ಯಾರ್ಥಿ ವೇತನ ದೊರೆಯುವ ಬಗ್ಗೆ ಮಾಹಿತಿ ಅಥವಾ ಸುಳಿವು ಸಿಗಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಾ ಇರುವವರು ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಲಿದ್ದೀರಿ. ನಿಮ್ಮಲ್ಲಿ ಕೆಲವರು ಆತ್ಮಗೌರವಕ್ಕೆ ಪೆಟ್ಟಾಗುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.
ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಸಂತೋಷವಾದ ದಿನ ಇದಾಗಿರುತ್ತದೆ. ಮಕ್ಕಳ ಶಿಕ್ಷಣದ ಬಗ್ಗೆ ಮುಖ್ಯ ವಿಚಾರಗಳನ್ನು ಸಂಗಾತಿ ಜೊತೆಗೆ ಹಂಚಿಕೊಳ್ಳಲಿದ್ದೀರಿ. ಕಾರು- ಸ್ಕೂಟರ್ ಖರೀದಿ ಮಾಡಬೇಕು ಎಂದುಕೊಳ್ಳುತ್ತಾ ಇರುವವರು ಆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದೀರಿ. ಬಡ್ತಿ- ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಮಿಶ್ರ ಫಲಿತಾಂಶ ಅನುಭವಕ್ಕೆ ಬರಲಿದೆ. ಸಿನಿಮಾ ಕಲಾವಿದರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅವಕಾಶಗಳು ದೊರೆಯಲಿವೆ. ದೀರ್ಘ ಕಾಲದ ಆದಾಯದ ದಾರಿ ಆಗಲಿದೆ.
ಅಧ್ಯಾತ್ಮದ ಕಡೆಗೆ ಈ ದಿನ ನಿಮಗೆ ಸೆಳೆತ ಇರಲಿದೆ. ನಿಮ್ಮಲ್ಲಿ ಕೆಲವರು ಧ್ಯಾನ- ಯೋಗ ಶಿಬಿರ ಇಂಥವುಗಳಲ್ಲಿ ಭಾಗೀ ಆಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮಗೆ ಕಿರಿಕಿರಿ ಮಾಡುತ್ತಾ ಇದ್ದ ವ್ಯಕ್ತಿ ಅಥವಾ ಗುಂಪು ಸಮಸ್ಯೆಗೆ ಸಿಲುಕಿಕೊಳ್ಳಲಿದ್ದು, ಇದರಿಂದ ಸಮಾಧಾನ ಮೂಡಲಿದೆ. ಸುಗಂಧ ದ್ರವ್ಯಗಳು, ಬೆಲೆಬಾಳುವ ರತ್ನಗಳ ವ್ಯಾಪಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದ್ದು, ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗುತ್ತದೆ. ಕಫ, ನೆಗಡಿ, ಕೆಮ್ಮು- ಜ್ವರದಂಥ ಸಮಸ್ಯೆಯಿಂದ ದೈಹಿಕವಾಗಿ ಸುಸ್ತು ಹಾಗೂ ನಿರಾಸಕ್ತಿ ಕಾಡಲಿದೆ.
ಲೇಖನ- ಎನ್.ಕೆ.ಸ್ವಾತಿ