AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 07 January: ಇಂದು ಈ ರಾಶಿಯವರ ಜಾಣತನಕ್ಕೆ ಭಾರೀ ಮೆಚ್ಚುಗೆ ಸಿಗಲಿದೆ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ತೃತೀಯಾ / ಚತುರ್ಥೀ ತಿಥಿ ಬುಧವಾರ ವೃತ್ತಿಯಲ್ಲಿ ಹೊರೆ, ಶ್ರಮ ಅಧಿಕ, ಅನಿರಂತರತೆ, ವಿಶ್ವಾಸ, ನಕಾರಾತ್ಮಕ ಚಿಂತನೆ, ಅನವಶ್ಯಕ ಖರೀದಿ ಇವೆಲ್ಲ ಇಂದಿನ ವಿಶೇಷ.

Horoscope Today 07 January: ಇಂದು ಈ ರಾಶಿಯವರ ಜಾಣತನಕ್ಕೆ ಭಾರೀ ಮೆಚ್ಚುಗೆ ಸಿಗಲಿದೆ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 07, 2026 | 12:16 AM

Share

ಮೇಷ ರಾಶಿ :

ಇಂದಿನ ಮುಖ್ಯ ಕಾರ್ಯವನ್ನು ಮುಂದೂಡುವುದು ಬೇಡ. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಯಂತ್ರಗಳಿಂದ ತೊಂದರೆಯಾಗಬಹುದು. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಿ. ಇಂದು ನಿಮ್ಮದೇ ಸ್ವಂತ ಕಾರ್ಯಗಳು ಇರಲಿದ್ದು, ಬೇರೆ ಕೆಲಸಕ್ಕೆ ಮನಸ್ಸು ಕೊಡುವುದು ಕಷ್ಟವಾದೀತು‌. ಒತ್ತಾಯದಿಂದ ಕೆಲಸವನ್ನು ಮಾಡಬೇಕಾದೀತು. ಹಂಚಿಕೆಯ ಬಗ್ಗೆಯೂ ಸರಿಯಾದ ಆಲೋಚನೆ ಮಾಡುವಿರಿ.

ವೃಷಭ ರಾಶಿ:

ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಶ್ರಮದಿಂದ ನ್ಯಾಯಾಲಯಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ನೌಕರರಿಲ್ಲದೇ ಉದ್ಯಮಕ್ಕೆ ಅಡ್ಡಿಯಾದೀತು. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು. ನಿಶ್ಚಿಂತೆಯಿಂದ ಇರಬೇಕೆಂದುಕೊಂಡರೂ ಕೆಲಸಗಳು ಬರುವುದು. ಮಾತಿನ ತಂತ್ರವು ಫಲಿಸುವುದು. ನಿಮ್ಮ ಕಾರ್ಯಗಳಲ್ಲಿ ಸಾವಧಾನತೆ ಇರಲಿದೆ.

ಮಿಥುನ ರಾಶಿ:

ಬಿಂಬದಂತೆ ಪ್ರತಿಬಿಂಬ ಕಾಣಿಸುವುದು. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಎಲ್ಲರಿಂದಲೂ ಕೇಳಿ ಜಿಗುಪ್ಸೆ ಬಂದೀತು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ‌ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ನಿಮ್ಮವರೇ ನಿಮ್ಮ‌ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ, ಕೂಡಿಡಿ. ಸಾಲದಿಂದ ನೀವು ಬೇಗ ಮುಕ್ತರಾಗುವಿರಿ. ಬೆಂಬಲಕ್ಕೆ‌ ನಿಂತವರನ್ನು ಮರೆಯುವುದು ಬೇಡ. ಕೈಲಾದ ಸಹಕಾರವನ್ನು ಮಾಡಿ. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಅಹಂಕಾರದಂತೆ ತೋರುವುದು. ಅಧಿಕಾರದ ಮಾತುಗಳನ್ನು ಕಡಿಮೆ ಮಾಡಿ.

ಕರ್ಕಾಟಕ ರಾಶಿ:

ಸತತ ಸೋಲಿನಿಂದ ಉತ್ಸಾಹವೂ ಕುಗ್ಗಬಹುದು. ಗೆಳೆಯರ ಸಹಕಾರವು ನಿಮಗೆ ಬೇಕೆನಿಸುವುದು. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಟ್ಟು ಪ್ರಗತಿ ಕಾಣಬಹುದು. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಭೂಮಿಯ ಉತ್ಪನ್ನಗಳಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಸಮೀಪದ ಬಂಧುಗಳ ವಿಯೋಗವೂ ಆಗಬಹುದು. ನಿಮಗೆ ಇದು ನಂಬಲಾಗದ ವಿಚಾರವೂ, ಸಹಿಸಲು ಅಸಾಧ್ಯವೂ ಆಗಬಹುದು. ಎಲ್ಲವುದನ್ನೂ ತಾನೇ ಮಾಡುವುದು ಎಂಬ ಮನೋಭಾವವಿರುವುದು.

ಸಿಂಹ ರಾಶಿ:

ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಮಗೆ ಸಿಕ್ಕ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯ ಮಾಡಲು ಸ್ವಲ್ಪ ಆಲೋಚಿಸುವರು.‌ ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರ ಆಗಮನವಾಗಬಹುದು. ಅಧಿಕ ವಿಶ್ವಾಸದಿಂದ ಕಾರ್ಯದ ಹಾನಿಯಾಗಬಹುದು. ಸದ್ಯವಷ್ಟೇ ಸಾಲದಿಂದ ಮುಕ್ತರಾಗಿದ್ದರೂ ಅನಾರೋಗ್ಯದ ಕಾರಣಕ್ಕೆ ಪುನಃ ಸಾಲ ಮಾಡಬೇಕಾಗಿ ಬರಬಹುದು. ನಿಮಗೆ ಯಾರದ್ದಾದರೂ ಮಾತು ಅಧಿಕಾರದಂತೆ ತೋರೀತು.

ಕನ್ಯಾ ರಾಶಿ:

ನಿಮಗೆ ಗೊತ್ತಿರುವುದಷ್ಟೇ ಸತ್ಯವಾಗಿ ಇರದು. ಸಂಗಾತಿಯ ಪ್ರೀತಿಯನ್ನು ಹೋಲಿಸಿಕೊಳ್ಳುವುದು ಬೇಡ. ಹೊಸತನಕ್ಕೆ ನೀವು ಒಗ್ಗುವುದು ಕಷ್ಟವಾದೀತು. ನಿಮ್ಮ ನಿಷ್ಠೆಯನ್ನು ಬದಲಾಯಿಸುವುದು ಬೇಡ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ಸಂಗಾತಿಯ ಆಯ್ಕೆಯನ್ನು ನಾನಾ ಕಾರಣದಿಂದ ಮುಂದೂಡುವುದು ಸರಿಯಾಗದು. ಆಸ್ತಿಯನ್ನು ಅನ್ಯರಿಗೆ ಕೊಡುವ ಚಿಂತನೆಯೂ ನಿಮ್ಮ ಮನಸ್ಸಿಗೆ ಬರಬಹುದು. ಇಂದು ನೀವು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ವೃತ್ತಿಯ ಸ್ಥಳದಲ್ಲಿ ಪ್ರೇಮವು ಅಂಕುರಿಸುವುದು. ಮಕ್ಕಳಿಂದ ನೀವು ಅನಾದರಕ್ಕೆ ಒಳಗಾಗಬಹುದು. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ.

ತುಲಾ ರಾಶಿ:

ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವಿರಿ. ವಾಹನ ಓಡಾಡವು ಸುಖಕರವಲ್ಲ. ತಾಯಿಗೆ ಕೊಡುವ ಗೌರವವು ಕಡಿಮೆ ಆದೀತು. ಮೇಲಧಿಕಾರಿಗಳ ಮಾತಿನಿಂದ ಮನಸ್ಸು ತಲ್ಲಣಿಸಬಹುದು. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಒಡ ಹುಟ್ಟಿದವರ ಬಗ್ಗೆ ಅಸೂಯೆ ತೋರಿಸುವಿರಿ. ಇಂದು ನಿಮ್ಮ ಮನೋಬಲವು ದುರ್ಬಲವಾಗಬಹುದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೇ ಹೋದೀತು. ಇಂದು ವಾಸದ ಮನೆಯನ್ನು ಬದಲಿಸುವಿರಿ. ಆಹಾರವನ್ನು ಮಿತಿವಾಗಿಯೂ ಹಾಗೂ ಬದಲಾವಣೆಯನ್ನೂ ಮಾಡಿಕೊಳ್ಳುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವುದು. ನಿಮ್ಮ ಬಗ್ಗೆ ಸಹೋದ್ಯೋಗಿಗಳು ಆಡಿಕೊಳ್ಳುವರು. ಅನ್ಯರ ಹಂಗಿನಲ್ಲಿ ಇರುವಂತೆ ಭಾಸವಾಗಬಹುದು.

ವೃಶ್ಚಿಕ ರಾಶಿ:

ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾದೀತು. ಗುರಿಯ ಕಡಗೆ ಮಾತ್ರ ನಿಮ್ಮ ಗಮನವಿರಲಿ. ಹೊಗಳಿಕೆಯಿಂದ ನಿಮಗೆ ಬೇಕಾದುದನ್ನು ಪಡೆದುಕೊಳ್ಳುವಿರಿ. ನಂಬಿಕೆಗಳನ್ನು ಬದಲಾಯಿಸಿಕೊಳ್ಳುವುದು ಸಾಹಸ‌ ಬೇಡ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ನಿಮ್ಮದಾದ ಜೀವನಕ್ರಮವು ನಿಮಗೆ ಹಿಡಿಸದೇ ಇರಬಹುದು. ನಿಮ್ಮ ಹಿಂದಿನ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ. ಹಣವು ಸಿಗದೇ ನಿಮಗೆ ನಿರಾಸೆಯಾಗುವುದು. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ಪ್ರವೃತ್ತರಾಗುವಿರಿ. ವೃತ್ತಿಯನ್ನು ಸಂತೋಷದಿಂದ ಮಾಡುವುದನ್ನು ಕಲಿಯಬೇಕಾಗಬಹುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ಸಂಕಟಪಡಬೇಕಾದೀತು.

ಧನು ರಾಶಿ:

ನಿಮ್ಮ ಸಂಬಂಧಗಳ ಬಗ್ಗೆ ಇಂದು ಹೆಚ್ಚು ಆಲೋಚಿಸುವಿರಿ.‌ ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು. ಉಸಿರಾಟದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಬೇಕಾದೀತು. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ನಿಮ್ಮ ಮನಸ್ಸಿನಲ್ಲಿ ತಳಮಳವಾಗುವುದು. ಅಧಿಕಾರಿಗಳಾಗಿದ್ದರೆ ನೀವೇ ಇಂದು ಆಗಬೇಕಾದ ಕಾರ್ಯಗಳ ಪರಿಶೀಲನೆ ಮಾಡುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಯೋಗ್ಯ ಚಿಕಿತ್ಸೆಯ ಅವಶ್ಯಕತೆ ಇರುಬುದು. ಎಲ್ಲ ಜವಾಬ್ದಾರಿಯನ್ನೂ ಮಕ್ಕಳಿಗೆ ವಹಿಸಿ ನೀವು ನಿಶ್ಚಿಂತರಾಗುವಿರಿ. ನಿಮ್ಮ ಕೆಲಸವು ಪೂರ್ಣವಾಗದೇ ಹೇಳಿಸಿಕೊಳ್ಳುವಿರಿ. ಸಿಟ್ಟಿನಿಂದ ನಿಮ್ಮ ಮನೋವಿಕಾರವು ಆಗಬಹುದು.

ಮಕರ ರಾಶಿ:

ಉದ್ಯೋಗವನ್ನು ಬದಲಿಸಿದ ಕಾರಣ ಸಮಯವು ಓಡಾಟದಲ್ಲಿ ವ್ಯರ್ಥವಾಗಬಹುದು. ಸ್ತ್ರೀಯರಲ್ಲಿ ಸಹಾಯವನ್ನು ಕೇಳಲು ಹಿಂಜರಿಯುವಿರಿ. ನಿಮಗೆ ಇಷ್ಟವಾದದನ್ನು ಪಡೆಯುವ ಕಡೆಗೆ ಗಮನ ಇರಲಿ. ನೀವು ವೃತ್ತಿಯನ್ನು ಮಾಡುತ್ತಲೇ ಉನ್ನತ ಪದವಿಯನ್ನು ಪಡೆಯುವಿರಿ. ಯಶಸ್ಸು ನಿಮ್ಮ ಹಿಂದೆ ತಾನಾಗಿಯೇ ಬರುವುದು. ಇಂದು ನಿಮಗೆ ಅವ್ಯಕ್ತ ಭಯವು ಇರಲಿದೆ. ಸಹೋದರರು ನಿಮಗೆ ಧನ ಸಹಾಯವನ್ನು ಕೇಳಿದರೆ ಮಾಡಬಹುದು. ಸಾಧ್ಯವಾಗುವ ಕೆಲಸದ‌ ಕಡೆ ನಿಮ್ಮ ಗಮನ ಹೆಚ್ಚಿರಲಿ. ಬಡ್ತಿಗಾಗಿ ಮೇಲಧಿಕಾರಿಗಳ ಜೊತೆ ಮಾತನಾಡುವಿರಿ. ನಿಮ್ಮ ಸಾಮರ್ಥ್ಯವನ್ನು ಇತರರಿಗೆ ನೀವೇ ತಿಳಿಸಬೇಕಾಗುವುದು. ಹಿರಿಯರ ಎದುರು ಅಹಂಕಾರವನ್ನು ತೋರಿಸುವುದು ಬೇಡ.

ಕುಂಭ ರಾಶಿ:

ನಿಮ್ಮ ಸ್ವಭಾವದಿಂದ ನಿಮಗೆ ಕಿರಿಕಿರಿಯಾಗಬಹುದು. ಇನ್ನೊಬ್ಬರ ಮಾತುಗಳನ್ನು ನೀವು ಸಹಿಸುವುದು ಕಷ್ಟವಾದೀತು. ಮಕ್ಕಳಿಂದ ಇಂದು ಹೆಚ್ಚು ನಿರೀಕ್ಷಿಸುವಿರಿ.‌ ನಿಮ್ಮ ಸಂಯಮ ಕೆಡಬಹುದು. ವೃತ್ತಿಯಲ್ಲಿ ಕಿರಿಕಿರಿ ಅಧಿಕವಾಗಬಹುದು. ಮೆಚ್ಚುಗೆಯ ಮಾತುಗಳಿಂದ ದೂರವಾದ ಸಂಬಂಧವು ಹತ್ತಿರವಾಯಬಹುದು. ಆರೋಗ್ಯದ ಬಗ್ಗೆ ಆತಂಕ ಬೇಡ. ಉದ್ಯೋಗದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ. ಪಶ್ಚಾತ್ತಾಪವು ನಿಮ್ಮ ನೋವನ್ನು ಪರಿಹರಿಸೀತು. ನಿಮ್ಮ‌ ಚಿಂತನೆಯು ಸಫಲವಾಗಲು ಅಧಿಕ ಸಮಯವು ಬೇಕಾದೀತು.‌ ಸ್ನೇಹಿತರು ನಿಮ್ಮನ್ನು ಇಷ್ಟಪಡುವರು. ಮಾತು ನೇರವಾಗಿದ್ದರೂ ಇತರರು ಇಷ್ಟಪಡುವಂತೆ ಇರುವುದು.

ಮೀನ ರಾಶಿ:

ಸಾಮಾಜಿಕ ಜಾಲತಾಣದಿಂದ ಸಮಸ್ಯೆಗೆ ಸಿಕ್ಕಿಕೊಳ್ಳುವಿರಿ. ದುಷ್ಟ ಮಾನಸಿಕತೆಯು ನಿಮಗೆ ಶೋಭೆ ತರದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯವನ್ನು ಅನ್ಯರ ಬಳಿ ವ್ಯಕ್ತಪಡಿಸಬಹುದು. ಅನಿರೀಕ್ಷಿತ ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ. ಪಾಲುದಾರಿಕೆಯಲ್ಲಿ ನಿಮಗೆ ಆಸಕ್ತಿಯು ಕಡಿಮೆಯಾಗಬಹುದು. ತಿಳಿದವರ ಜೊತೆ ಆಧ್ಯಾತ್ಮಿಕ ವಿಚಾರವನ್ನು ಚರ್ಚಿಸಿ. ಯಾರಾದರೂ ಕರ್ತವ್ಯದ ಬಗ್ಗೆ ನಿಮ್ಮನ್ನು ಎಚ್ಚರಿಸಬಹುದು. ಏರುದನಿಯಲ್ಲಿ ಮಾತನಾಡುವುದು ಬೇಡ. ಆದಾಯದ ಮೂಲವನ್ನು ಸರಿಯಾಗಿ ಇಟ್ಟುಕೊಳ್ಳಿ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ಮುಕ್ತವಾಗಿ ವ್ಯಕ್ತಪಡಿಸಿ.

ಜನವರಿ 07,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತೃತೀಯಾ / ಚತುರ್ಥೀ ನಿತ್ಯನಕ್ಷತ್ರ : ಆಶ್ಲೇಷಾ ಯೋಗ : ಅತಿಗಂಡ, ಕರಣ : ಬವ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12-31 – 13:55, ಯಮಗಂಡ ಕಾಲ 08:17 – 09:41, ಗುಳಿಕ ಕಾಲ 11:06 – 12:31

-ಲೋಹಿತ ಹೆಬ್ಬಾರ್-8762924271 (what’s app only)