
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 16ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಡ್ರೈಫ್ರೂಟ್ಸ್, ಹೆಲ್ತಿ ಫುಡ್ ಇಂಥವುಗಳ ಖರೀದಿ ಮಾಡುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಕಿವಿಗೆ ಸಂಬಂಧಿಸಿದ ತೊಂದರೆಗಳು ಎದುರಾಗಲಿವೆ. ಅಂಥ ಸಂದರ್ಭ ಕೂಡಲೇ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಉದ್ಯೋಗಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುಂದೂಡುವುದಕ್ಕೆ ಹೋಗಬೇಡಿ. ಇನ್ನು ಕಾರಣವೇ ಇಲ್ಲದೆ ನಿಮ್ಮ ಮೇಲೆ ಹಗೆ ಸಾಧಿಸುವುದಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ತಮ್ಮ ತಪ್ಪಿನ ಅರಿವಾಗಲಿದೆ. ನಿಮ್ಮ ಬಳಿ ಬಂದು, ಇಷ್ಟು ದಿನ ಆದ ಬೆಳವಣಿಗೆಗೆ ಕ್ಷಮೆ ಕೂಡ ಕೇಳಲಿದ್ದಾರೆ. ದಿನಗೂಲಿ ನೌಕರರಿಗೆ ಆದಾಯ ಹೆಚ್ಚಾಗುವಂಥ ಹೊಸ ಕೆಲಸಕ್ಕೆ ಬದಲಾಗುವುದಕ್ಕೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ವ್ಯವಹಾರಸ್ಥರು ತುಂಬ ನಂಬಿಕೆಯಿಟ್ಟು ತೆಗೆದುಕೊಂಡ ರಿಸ್ಕ್ ವೊಂದರಿಂದ ದೊಡ್ಡ ಮಟ್ಟದ ರಿಟರ್ನ್ಸ್ ದೊರೆಯಲಿದ್ದು, ಅದರ ಸಲುವಾಗಿ ನಿಮಗೆ ಇದ್ದ ಆತಂಕ ಕೂಡ ದೂರವಾಗುತ್ತದೆ.
ಏನು ಆಗುತ್ತಿದೆ ಎಂದು ಗೊತ್ತೇ ಇಲ್ಲದಂತೆ ನಿಮ್ಮ ಪರಿಸ್ಥಿತಿ ಆಗಲಿದೆ. ಯಾವುದೇ ತೀರ್ಮಾನ ಮಾಡಿದರೂ ಅದರಿಂದ ಸಮಾಧಾನ ತರುವಂಥದ್ದೇನೂ ಆಗಬಹುದು ಎಂಬ ವಿಶ್ವಾಸ ನಿಮ್ಮಲ್ಲಿ ಮೂಡುವುದಿಲ್ಲ. ನಿಮ್ಮ ಬಳಿ ಇರುವಂಥ ವಾಹನ ಒಂದನ್ನು ಮಾರಾಟ ಮಾಡುವುದಕ್ಕೆ ಮುಂದಾಗಲಿದ್ದೀರಿ. ಕುಟುಂಬ ಸದಸ್ಯರಿಗೆ ಈ ಬಗ್ಗೆ ಒಮ್ಮತ ಇಲ್ಲದಿದ್ದರೂ ನಿಮ್ಮ ನಿಲುವು ಬದಲಿಸುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಹೋಟೆಲ್ ನಲ್ಲಿ ಕೆಲಸ ಮಾಡುವಂಥವರಿಗೆ ಒತ್ತಡದ ದಿನ ಇದಾಗಿರುತ್ತದೆ. ಅನಿರೀಕ್ಷಿತವಾಗಿ ಕೆಲವರು ರಜಾ ಹಾಕುವುದರಿಂದ ಇಬ್ಬರು- ಮೂರು ಜನರ ಕೆಲಸವನ್ನು ನೀವು ಒಬ್ಬರೇ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮ ಸ್ನೇಹಿತರೇ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂಬ ಸಂಗತಿ ಬೇಜಾರಿಗೆ ಕಾರಣ ಆಗಲಿದೆ. ತಂದೆ- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡಬೇಕಾಗುತ್ತದೆ. ವೈದ್ಯರ ಬಳಿ ಕರೆದುಕೊಂಡು ಹೋಗಬೇಕಾಗುತ್ತದೆ.
ಭವಿಷ್ಯದಲ್ಲಿ ಆಗಬಹುದಾದ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ದೊರೆಯುತ್ತಾ ಸಾಗುತ್ತದೆ. ನಿಮಗೆ ದೊಡ್ಡ ಹುದ್ದೆಯೊಂದರ ಜವಾಬ್ದಾರಿ ನೀಡುವ ಕುರಿತು ಮೇಲಧಿಕಾರಿಗಳು ಸುಳಿವು ಕೊಡಲಿದ್ದಾರೆ. ಈ ಹಿಂದೆ ನಿಮ್ಮಿಂದ ಆದಂಥ ಸಹಾಯವನ್ನು ನೆನಪಿನಲ್ಲಿ ಇಟ್ಟುಕೊಂಡು, ಸ್ನೇಹಿತರು ಈಗ ನಿಮ್ಮ ಅಗತ್ಯಕ್ಕೆ ಸ್ಪಂದಿಸಲಿದ್ದಾರೆ. ಬ್ಯಾಂಕ್ ನಲ್ಲಿ ಲಾಕರ್ ಅನ್ನು ಪಡೆದುಕೊಳ್ಳುವುದಕ್ಕೆ ನಿಮ್ಮಲ್ಲಿ ಕೆಲವರು ಪ್ರಯತ್ನವನ್ನು ಮಾಡಲಿದ್ದೀರಿ. ಅಥವಾ ಮನೆಗೆ ಅಂಥ ಲಾಕರ್ ಅನ್ನು ಖರೀದಿಸಿ ತರುವಂಥ ಸಾಧ್ಯತೆ ಇದೆ. ಮದುವೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ಸಂಬಂಧ ಪೈಕಿಯೇ ಹುಡುಗ/ಹುಡುಗಿ ಸಿಗುವಂಥ ಯೋಗ ಇದೆ. ಹೊಸಬರ ಜತೆಗಿನ ಮಾತುಕತೆಯಿಂದ ನಿಮ್ಮ ವೃತ್ತಿ, ವ್ಯಾಪಾರ- ವ್ಯವಹಾರಗಳಿಗೆ ಅನುಕೂಲ ಆಗುವ ಸೂಚನೆಗಳಿವೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ದಿನ ಹಲವು ರೀತಿಯಲ್ಲಿ ಅನುಕೂಲಗಳು ಒದಗಿಬರಲಿವೆ.
ಯಾಕೆ ಒಪ್ಪಿಕೊಂಡೆ ಎಂದು ಹಲಬುವ ರೀತಿಯಲ್ಲಿ ಒಬ್ಬ ವ್ಯಕ್ತಿಯು ಕೆಲಸವೊಂದರ ಸಲುವಾಗಿ ನಿಮ್ಮ ಬೆನ್ನು ಹತ್ತಿ ಇನ್ನಿಲ್ಲದಂತೆ ಕಾಡಲಿದ್ದಾರೆ. ಕ್ರಿಯೇಟಿವ್ ಉದ್ಯೋಗ- ವೃತ್ತಿಯಲ್ಲಿ ಇರುವವರಿಗೆ ಡೆಡ್ ಲೈನ್ ಒಳಗಾಗಿ ಕೆಲಸ ಮುಗಿಸಲೇಬೇಕು ಎಂದು ಸೂಚನೆ ಬಂದು, ಬಹುತೇಕ ಇಡೀ ದಿನ ಕುಟುಂಬದ ವಿಚಾರಗಳಿಗೆ ಗಮನವೇ ನೀಡಲು ಸಾಧ್ಯವಿಲ್ಲದಂತೆ ಆಗಲಿದೆ. ಈ ಮಧ್ಯೆ ಕೆಲವರು ನಿಮಗೆ ಅಹಂಕಾರ ಎಂದು ಅಪಪ್ರಚಾರ ಮಾಡಿಕೊಂಡು ಬರಲಿದ್ದಾರೆ. ದೊಡ್ಡ ತಂಡವೊಂದನ್ನು ಮುನ್ನಡೆಸುವ ಅವಕಾಶವೊಂದು ಈ ರೀತಿಯ ಅಪಪ್ರಚಾರದ ಕಾರಣಕ್ಕೆ ತಪ್ಪಿ ಹೋಗಬಹುದು. ದಾನ- ಧರ್ಮಗಳಿಗೆ ಹಣವನ್ನು ವೆಚ್ಚ ಮಾಡಲಿದ್ದೀರಿ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹೊಣೆಯನ್ನು ವಹಿಸಿಕೊಳ್ಳಲು ಮುಂದಾಗಲಿದ್ದೀರಿ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರತಿಷ್ಠಿತ ಸಂಸ್ಥೆಯೊಂದ ಆಫರ್ ಬರಲಿದೆ.
ಹಲವು ವಿಚಾರಗಳಲ್ಲಿ ಸಂತುಷ್ಟತೆ ಇರಲಿದೆ. ಈಗಾಗಲೇ ಸೈಟು ಇದೆ ಎಂದಾದಲ್ಲಿ ಅಲ್ಲಿ ಮನೆ ನಿರ್ಮಾಣ ಮಾಡುವುದಕ್ಕಾಗಿ ಸಂಬಂಧ ಪಟ್ಟ ವ್ಯಕ್ತಿಗಳ ಜತೆಗೆ ಮಾತುಕತೆ ನಡೆಸುವಂಥ ಸಾಧ್ಯತೆ ಇದೆ. ನೀವು ವಿವಾಹ ವಯಸ್ಕರಾಗಿದ್ದಲ್ಲಿ ಯಾರ ಬಗ್ಗೆ ನೀವು ಪ್ರೀತಿ ಇರಿಸಿಕೊಂಡಿದ್ದಿರೋ ಅವರೇ ನಿಮ್ಮ ಬಳಿ ಬಂದು ಪ್ರೇಮ ನಿವೇದನೆ ಮಾಡುವಂಥ ಯೋಗ ಇದೆ. ನಿಮಗೆ ಸ್ಪಷ್ಟವಾದ ವಿಷಯಗಳನ್ನು ಹೇಳುವುದಕ್ಕೆ ಹಿಂಜರಿಕೆ ಬೇಡ. ಯಾರು- ಏನೆಂದು ಕೊಳ್ತಾರೋ ಅಂತ ನೀವು ಭಾವಿಸಿದಲ್ಲಿ ಕೆಲವು ಅವಕಾಶಗಳನ್ನು ಕೈಯ್ಯಾರೆ ಕಳೆದುಕೊಳ್ಳುವಂತೆ ಆಗಿಬಿಡುತ್ತದೆ. ಆದ್ದರಿಂದ ಬಾಯಿ ಬಿಟ್ಟು, ನಾನು ಅದನ್ನು ಮಾಡುತ್ತೇನೆ ಎಂದು ಹೇಳುವುದು ಒಳ್ಳೆಯದು. ಸ್ನೇಹಿತರು- ಸಂಬಂಧಿಗಳ ಒಡನೆ ಸೇರಿ ರುಚಿಕಟ್ಟಾದ ಊಟ- ತಿಂಡಿ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಮನೆಯಲ್ಲಿಯೂ ಆಹ್ಲಾದಕರವಾದ ವಾತಾವರಣ ಇರುತ್ತದೆ.
ಹಣದ ಬಗ್ಗೆ ವಿಪರೀತ ಗಾಂಭೀರ್ಯ ಬರುವಂಥ ದಿನ ಇದಾಗಿರುತ್ತದೆ. ಇಷ್ಟು ಅವಧಿಯಲ್ಲಿ ಇಂಥಿಷ್ಟು ಮೊತ್ತವನ್ನು ಕೂಡಿಡಲೇ ಬೇಕು ಎಂದು ಸಂಕಲ್ಪ ಮಾಡಿಕೊಳ್ಳಲಿದ್ದೀರಿ. ಈಗ ಮಾಡುತ್ತಿರುವ ಉದ್ಯೋಗ, ವೃತ್ತಿ, ವ್ಯವಹಾರ- ವ್ಯಾಪಾರ ಜೊತೆಗೆ ಆದಾಯ ಮೂಲವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಬೇಕಾದ ಪ್ರಯತ್ನಗಳನ್ನು ಶುರು ಮಾಡಲಿದ್ದೀರಿ. ನಿಮಗೆ ಬಹಳ ಹತ್ತಿರವಾದ ಸ್ನೇಹಿತರು ಪರಿಚಯ ಮಾಡಿಸುವಂಥ ವ್ಯಕ್ತಿಗಳಿಂದ ಹಲವು ರೀತಿಯಲ್ಲಿ ಅನುಕೂಲಗಳು ಒದಗಲಿವೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಸೆಮಿನಾರ್ ಗಳಿಗೆ ಭಾಗೀ ಆಗುವಂತೆ ದೂರದ ಪ್ರದೇಶ ಅಥವಾ ದೂರದ ದೇಶದಿಂದ ಆಹ್ವಾನ ಬರುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ವೃತ್ತಿಗೆ- ಉದ್ಯೋಗಕ್ಕೆ ಸಹಾಯ ಆಗುವಂಥ ಉಪಕರಣ, ಗ್ಯಾಜೆಟ್ ಗಳನ್ನು ಖರೀದಿ ಮಾಡುವುದಕ್ಕೆ ಹಣವನ್ನು ವೆಚ್ಚ ಮಾಡಲಿದ್ದೀರಿ. ಇದಕ್ಕಾಗಿಯೇ ಸ್ವಲ್ಪ ಮೊತ್ತದ ಸಾಲವನ್ನು ಪಡೆಯುವ ಸಾಧ್ಯತೆ ಸಹ ಇದೆ.
ನನ್ನ ಕೆಲಸ ಎಷ್ಟೋ ಅಷ್ಟರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂಬ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಅರ್ಥಾತ್ ಎಷ್ಟು ಹಣ ಬರುತ್ತದೋ ಅದಕ್ಕೆ ತಕ್ಕಂತೆ ಕೆಲಸ ಎಂಬುದನ್ನು ಗಟ್ಟಿ ಮಾಡಿಕೊಂಡು, ಬದ್ಧರಾಗಿ ನಿಲ್ಲಲಿದ್ದೀರಿ. ದೇವಸ್ಥಾನಕ್ಕೆ ಅಥವಾ ನಿಮ್ಮ ಧಾರ್ಮಿಕ ನಂಬಿಕೆಗೆ ಅನುಸಾರವಾಗಿ ಸ್ವಲ್ಪ ಸಮಯ ಪ್ರಶಾಂತತೆ, ನೆಮ್ಮದಿ ನೀಡುವಂಥ ಸ್ಥಳಕ್ಕೆ ತೆರಳುವುದರಿಂದ ಸಮಾಧಾನದಿಂದ ಇರಲು ಸಾಧ್ಯವಾಗುತ್ತದೆ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವಂಥವರಿಗೆ ದೀರ್ಘಾವಧಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯುವಂಥ ಸಾಧ್ಯತೆ ಇದೆ. ಸ್ನೇಹಿತರ ಮನೆಯ ಕುಟುಂಬ ಸಮಸ್ಯೆಯನ್ನು ನಿವಾರಿಸಿ ಕೊಡುವಂತೆ ಸಹಾಯ ಕೇಳಿಕೊಂಡು ಬರಲಿದ್ದಾರೆ. ಇನ್ನು ನಿಮ್ಮಲ್ಲಿ ಕೆಲವರು ಸೋಷಿಯಲ್ ಕಾಂಟ್ಯಾಕ್ಟ್ ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಪಾರ್ಟಿ, ಗೆಟ್ ಟು ಗೆದರ್ ಇಂಥವುಗಳನ್ನು ಆಯೋಜಿಸುವುದಕ್ಕೆ ಹಣವನ್ನು ಖರ್ಚು ಮಾಡಲಿದ್ದೀರಿ.
ಯಾರಿಗೋ ಬಯ್ಯುವುದಕ್ಕೆ ಹೋಗಿ ಇನ್ಯಾರ ಜತೆಗೋ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಸಿಟ್ಟು- ಕೋಪ- ಆಕ್ಷೇಪವನ್ನು ಹೊರಹಾಕುವುದಕ್ಕೆ ಸರಿಯಾದ ಮಾರ್ಗವನ್ನು ಹುಡುಕಿಕೊಳ್ಳುವುದು ಬಹಳ ಮುಖ್ಯ. ವ್ಯಾಪಾರ- ವ್ಯವಹಾರಗಳಲ್ಲಿ ಇರುವವರು ಮುಖ ಹರಿದುಕೊಳ್ಳುವಂತೆ ನಿರ್ದಾಕ್ಷಿಣ್ಯವಾಗಿ ಮಾತನಾಡುವುದಕ್ಕೆ ಹೋಗಬೇಡಿ. ಹೀಗೆ ಮಾಡುವುದರಿಂದ ದೀರ್ಘ ಅವಧಿಗೆ ನಿಮಗೆ ಆಗಬಹುದಾದ ಲಾಭವನ್ನು ಕಳೆದುಕೊಳ್ಳುವಂತೆ ಆಗಲಿದೆ. ಬಹಳ ಸಮಯದಿಂದ ನೀವು ಹುಡುಕುತ್ತಿದ್ದ ಮುಖ್ಯ ದಾಖಲೆಗಳು ಸಿಗುವಂಥ ಯೋಗ ಈ ದಿನ ಇದೆ. ಪ್ರಭಾವಿ ಹುದ್ದೆಯಲ್ಲಿ ಇರುವ ನಿಮ್ಮ ಸ್ನೇಹಿತರೋ ಸಂಬಂಧಿಕರೋ ಈ ವಿಚಾರದಲ್ಲಿ ನೆರವು ನೀಡಲಿದ್ದಾರೆ. ಮದ್ಯಪಾನದ ಅಭ್ಯಾಸ ಇರುವಂಥವರು ಸಮಯ ಹಾಗೂ ಪರಿಸ್ಥಿತಿಯನ್ನು ನೋಡಿಕೊಂಡು, ಒಂದು ಮಿತಿಯಲ್ಲಿ ಇರುವುದು ಒಳ್ಳೆಯದು. ಇಲ್ಲದಿದ್ದಲ್ಲಿ ದೊಡ್ಡ ಅವಮಾನ ಅಥವಾ ಮುಜುಗರದ ಸನ್ನಿವೇಶವನ್ನು ಎದುರಿಸವಂತೆ ಆಗಲಿದೆ.
ನಿಮ್ಮ ಆಲೋಚನೆಗೆ ಹೊಂದುವಂಥ, ನಿಮ್ಮ ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುವಂಥ ಜನರು ಇಲ್ಲವಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಒಂದು ವಿಷಯವನ್ನು ಹತ್ತು ಸಲ ಹೇಳಿದ ನಂತರವೂ ಅದೇ ತಪ್ಪು ಪುನರಾವರ್ತನೆ ಆಗುತ್ತಾ ಇದೆ ಎಂಬುದು ನಿಮ್ಮ ಸಿಟ್ಟಿನ ಮೂಲ ಆಗಲಿದೆ. ಸ್ನೇಹಿತರು ಕೂಡ ನಿಮ್ಮ ಜೊತೆಗೆ ಮಾತನಾಡುವಾಗ ಅನ್ಯಮನಸ್ಕರಾಗಿ ಇರಲಿದ್ದಾರೆ. ಮೊದಲಿನ ಆಸಕ್ತಿ- ಉತ್ಸಾಹದಿಂದ ನಿಮ್ಮನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಪದೇಪದೇ ಅನಿಸಲಿದೆ. ನೀವು ಬಂದೇ ಬರುತ್ತದೆ ಎಂದುಕೊಂಡಿದ್ದ ಹಣವೊಂದು ಬಾರದೆ ಗೊಂದಲಕ್ಕೆ ಕಾರಣ ಆಗಲಿದೆ. ಇನ್ನು ಫಾಲೋಅಪ್ ಮಾಡುವುದು ಸಾಧ್ಯವೇ ಇಲ್ಲ ಎಂದು ಬೇಸರ ಪಟ್ಟುಕೊಳ್ಳುವಂತೆ ಆಗಲಿದೆ. ಒಂದು ತೀರ್ಮಾನವನ್ನು ಪದೇಪದೇ ಬದಲಾವಣೆ ಮಾಡಬೇಕಾಗಿ ಬರಲಿದ್ದು, ಇದರಿಂದ ಕುಟುಂಬ ಸದಸ್ಯರಿಗೆ ಬೇಸರ ಉಂಟಾಗಲಿದೆ. ನೀವು ಏಕೆ ಹೀಗೆ ಮಾಡಿದಿರಿ ಎಂಬುದನ್ನು ದಾಟಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಲೇಖನ- ಎನ್.ಕೆ.ಸ್ವಾತಿ