
ಈ ದಿನ ಬೆಳಗ್ಗೆಯಿಂದ ನಿಮ್ಮ ಶಕ್ತಿ ಮತ್ತು ಆತ್ಮವಿಶ್ವಾಸ ಏರುಗತಿಯಲ್ಲಿ ನಿಧಾನವಾಗಿ ಹೆಚ್ಚಾಗಲಿದೆ. ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸ್ಥಿರತೆಗೆ ದಾರಿ ಮಾಡಿಕೊಡುತ್ತವೆ. ದೀರ್ಘಕಾಲೀನ ಹೂಡಿಕೆಗಳು ಲಾಭದಾಯಕವಾಗುವ ಸೂಚನೆ ಸಿಗಲಿದೆ. ಉದ್ಯೋಗ ಅಥವಾ ವ್ಯಾಪಾರದಲ್ಲಿ ಪ್ರಗತಿ ನಿಧಾನವಾಗಿದೆ ಎಂದೆನಿಸಿದರೂ ಭವಿಷ್ಯದಲ್ಲಿ ಗೌರವ ಮತ್ತು ಗುರುತು ಸಿಗಲಿದೆ. ಕುಟುಂಬದಲ್ಲಿನ ಗೊಂದಲಗಳು ಶಮನಗೊಂಡು ಪರಸ್ಪರ ಬೆಂಬಲ ಹೆಚ್ಚಾಗುತ್ತದೆ. ಹಿರಿಯರ ಸಲಹೆ ಪಾಲಿಸಿದಲ್ಲಿ ಪಾಲುದಾರಿಕೆ ಮತ್ತು ಹಣಕಾಸಿನ ವ್ಯವಹಾರದಲ್ಲಿ ಅನುಕೂಲವಾಗಲಿದೆ. ಮಾನಸಿಕ ಒತ್ತಡದ ನಿಯಂತ್ರಣ ಅಗತ್ಯ, ಯೋಗ ಮತ್ತು ಧ್ಯಾನದಿಂದ ಶಾರೀರಿಕ-ಮಾನಸಿಕ ಶಾಂತಿಗೆ ಸಹಕಾರಿ ಆಗುತ್ತದೆ. ಆಹಾರ ಪದ್ಧತಿಯಲ್ಲಿ ರೋಗನಿರೋಧಕ ಶಕ್ತಿ ಉತ್ತಮಗೊಳ್ಳುವಂಥದ್ದನ್ನು ಬಳಸಿ. ಹೊಸ ಅವಕಾಶಗಳು ಸಿಕ್ಕಾಗ ಸಂಶಯ ತೋರಿಸದೆ ಮುಂದುವರಿಯುವುದು ಉತ್ತಮ. ಯೋಜಿತವಾ ಕ್ರಮ ಮತ್ತು ಸಹನೆಯಿಂದ ಈ ದಿನ ದೊಡ್ಡ ಯಶಸ್ಸು ಪಡೆಯುವಿರಿ.
ಈ ದಿನ ನಿಮ್ಮನ್ನು ಹುಡುಕಿಕೊಂಡು ಬರುವ ಜವಾಬ್ದಾರಿಗಳು ಹಾಗೂ ನಿಗದಿ ಆಗುವ ಗುರಿಗಳು ಜೀವನದ ಕ್ರಮವನ್ನೇ ಬದಲಿಸುತ್ತವೆ. ಹಣಕಾಸಿನ ವಿಚಾರದಲ್ಲಿ ಅತಿಯಾದ ವಿಶ್ವಾಸ ಯಾವುದೇ ಕಾರಣಕ್ಕೂ ಬೇಡ. ಖರ್ಚು ಮತ್ತು ಹೂಡಿಕೆ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ನಿಮ್ಮ ಆದ್ಯತೆ ಆಗಿರಲಿ. ಸಾಲ ತೀರಿಸುವ ಅಥವಾ ಸಣ್ಣ ಮೊತ್ತದ ಉಳಿತಾಯ ಆರಂಭಿಸುವ ನಿರ್ಧಾರಗಳು ಮುಂದಿನ ದಿನಳಲ್ಲಿ ದೊಡ್ಡ ಸಹಾಯ ಒದಗಿಸುತ್ತವೆ. ಉದ್ಯೋಗದಲ್ಲಿ ನಿಮ್ಮ ಪರಿಶ್ರಮ ಮತ್ತು ಸಮಯಪಾಲನೆ ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯಲಿದೆ. ಸ್ಥಾನಮಾನ ಬದಲಾವಣೆ ಅಥವಾ ಹೊಸ ಉದ್ಯೋಗದ ಅವಕಾಶಗಳು ಸಿಗಬಹುದು ಅಥವಾ ಸ್ನೇಹಿತರು ರೆಫರೆನ್ಸ್ ಮಾಡಬಹುದು. ಕುಟುಂಬದಲ್ಲಿ ಪರಸ್ಪರ ಸಹಕಾರ ಮತ್ತು ಕೆಲಸಗಳನ್ನು ಹಂಚಿಕೊಳ್ಳುವುದು ಸಂತೋಷವನ್ನು ಹೆಚ್ಚಿಸುತ್ತದೆ. ಆಹಾರ ಹಾಗೂ ದಿನಚರಿಯಲ್ಲಿ ನಿಯಮ- ಶಿಸ್ತು ಪಾಲಿಸಬೇಕು. ದೇವರ ಧ್ಯಾನ ಹಾಗೂ ಪ್ರಾರ್ಥನೆ ಮನಸ್ಸಿಗೆ ಶಾಂತಿ ನೀಡುತ್ತದೆ.
ನಿಮ್ಮ ದೀರ್ಘಕಾಲದ ಯೋಜನೆಗಳ ಫಲಿತಾಂಶ ನಿಧಾನ ಆದರೂ ಸ್ಥಿರವಾಗಿ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಅನಗತ್ಯ ವ್ಯವಹಾರಗಳಿಂದ ದೂರ ಇದ್ದುಬಿಡಿ. ಖರ್ಚಿಗಿಂತ ಉಳಿತಾಯಕ್ಕೆ ಆದ್ಯತೆ ನೀಡುವುದು ಒಳ್ಳೆಯದು. ಕುಟುಂಬದ ವ್ಯವಹಾರವನ್ನು ನಡೆಸುತ್ತಾ ಇರುವವರಿಗೆ ಹೊಸ ಗ್ರಾಹಕರ ನಂಬಿಕೆ- ವಿಶ್ವಾಸ ಪಡೆದು, ಆದಾಯದ ಹರಿವಿಗೆ ಸಹಾಯ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆಗಿನ ಸಮಾಲೋಚನೆಗೆ ಪ್ರಾಮುಖ್ಯ ನೀಡಿ; ಒಬ್ಬರೇ ಎಲ್ಲ ಹೊಣೆ ಹೊರುವುದಕ್ಕಿಂತ ತಂಡದ ಸಹಕಾರ ಉತ್ತಮ ಫಲ ನೀಡಬಲ್ಲದು. ಮನೆಗೆ ಸಂಬಂಧಿಸಿದ ದಾಖಲೆಗಳು ಅಥವಾ ಕಾನೂನು ವ್ಯಾಜ್ಯಗಳ ಕಾಗದ- ಪತ್ರಗಳನ್ನು ಜೋಪಾನವಾಗಿ ಎತ್ತಿಟ್ಟುಕೊಳ್ಳಿ. ಸರಿಯಾಗಿ ನಿದ್ರೆ ಇಲ್ಲದೆ ಒತ್ತಡ ಅಥವಾ ಸಣ್ಣ ಪ್ರಮಾಣದಲ್ಲಿ ತಲೆನೋವು ಕಂಡುಬರುವ ಸಾಧ್ಯತೆ ಇದೆ. ಯೋಗ, ಹಗುರ ವ್ಯಾಯಾಮ ಹಾಗೂ ನೀರಿನ ಸೇವನೆ ನಿಯಮಿತವಾಗಿ ಮಾಡಿದಲ್ಲಿ ಒಳ್ಳೆಯದು. ಧೈರ್ಯ ಮತ್ತು ಆತ್ಮವಿಮರ್ಶೆ ಈ ದಿನದ ನಿಮ್ಮ ಗೆಲುವಿನ ಗುಟ್ಟು.
ಈ ದಿನ ನಿಮ್ಮ ಗುರಿಗಳನ್ನು ಮರುಪರಿಶೀಲನೆ ಮಾಡುವುದರಿಂದ ಮುಂದಿನ ಹೂಡಿಕೆ ಅಥವಾ ಉದ್ಯೋಗ ನಿರ್ಧಾರಗಳಿಗೆ ಅನುಕೂಲ ಆಗಲಿದೆ. ಹಣಕಾಸಿನ ವಿಷಯದಲ್ಲಿ ಅಲ್ಪ ಪ್ರಮಾಣದ ಲಾಭ ಪಡೆಯುವುದಕ್ಕೂ ಹರಸಾಹಸ ಆಗುತ್ತದೆ. ಇನ್ನು ಸಾಲ ತೀರಿಸಲೇಬೇಕು ಎಂದಿರುವವರಿಗೆ ಪರಿಹಾರ ದಾರಿಗಳು ಕಾಣುತ್ತವೆ. ಕುಟುಂಬದಲ್ಲಿ ಹಿರಿಯರ ಸಲಹೆಯಿಂದ ಮನೆಗೆ ಸಂಬಂಧಿಸಿದ ಖರ್ಚುಗಳು ನಿಯಂತ್ರಣಕ್ಕೆ ಬರುತ್ತವೆ. ದಾಂಪತ್ಯದಲ್ಲಿ ಪರಸ್ಪರ ಗೌರವ ಮತ್ತು ಮಾತಿನ ಸ್ಪಷ್ಟತೆ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು; ಅದಕ್ಕೆ ಅನುಗುಣವಾಗಿ ಹೊಸ ಕೌಶಲಗಳನ್ನು ಕಲಿಯುವುದರಿಂದ ಪ್ರಗತಿ ವೇಗಗೊಳ್ಳುತ್ತದೆ. ವ್ಯಾಪಾರಿಗಳಿಗೆ ಹಳೆಯ ಗ್ರಾಹಕರಿಂದ ದೊಡ್ಡ ಪ್ರಮಾಣದ ಆರ್ಡರ್‌ಗಳು ದೊರೆಯುವ ಸಾಧ್ಯತೆ. ಜೀರ್ಣಕ್ರಿಯೆ ಹಾಗೂ ಶರೀರದ ಶ್ರಮದ ಸಮತೋಲನಕ್ಕೆ ಹಣ್ಣು–ತರಕಾರಿ ಮತ್ತು ಸರಿಯಾದ ಆಹಾರ ಕ್ರಮ ಅನುಸರಿಸುವುದಕ್ಕೆ ಆದ್ಯತೆ ನೀಡಬೇಕು.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನ ಇದಾಗಿರುತ್ತದೆ. ಹಣಕಾಸಿನ ಹೂಡಿಕೆ ಮಾಡುವಾಗ ಹತ್ತಾರು ಕಡೆ ಹಂಚುವ ಬದಲಿಗೆ ಒಂದೇ ಕ್ಷೇತ್ರದಲ್ಲಿ ಹಾಕುವುದು ಲಾಭದಾಯಕ ಆಗಲಿದೆ. ಉದ್ಯೋಗಸ್ಥರು ಸಹೋದ್ಯೋಗಿಗಳ ಜೊತೆಗಿನ ಸಹಕಾರ ಮತ್ತು ಸ್ಪಷ್ಟ ಸಂವಹನದಿಂದ ಉತ್ತಮ ಫಲ ಪಡೆಯುತ್ತೀರಿ. ವ್ಯಾಪಾರಿಗಳಿಗೆ ಹೊಸ ವಿಚಾರ- ಪದ್ಧತಿಗಳನ್ನು ಪ್ರಯೋಗಿಸುವುದಕ್ಕೆ ಅವಕಾಶ ದೊರೆಯಲಿದೆ. ಕುಟುಂಬದಲ್ಲಿ ಸದಸ್ಯರ ಆರೋಗ್ಯ ಮತ್ತು ಶಿಕ್ಷಣಕ್ಕೆ ಗಮನ ಹರಿಸುವುದು ಅಗತ್ಯವಾಗಲಿದೆ. ಗೃಹಿಣಿಯರು ಮನೆ ವ್ಯವಸ್ಥೆಯಲ್ಲಿ ಹೊಸ ಕ್ರಮಗಳಿಂದ ಖರ್ಚನ್ನು ಕಡಿಮೆ ಮಾಡಿ ಉಳಿತಾಯ ಹೆಚ್ಚಿಸುವ ಸಾಧ್ಯತೆಯಿದೆ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡಿ ಹಾಗೂ ಚಿಂತೆ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಯೋಗ–ಧ್ಯಾನದಿಂದ ಮಾನಸಿಕ ಸಮತೋಲನ ಸಿಗುತ್ತದೆ. ಸಂಬಂಧಗಳ ವಿಚಾರದಲ್ಲಿ ತಾಳ್ಮೆ ಮತ್ತು ಮಾತನಾಡುವಾಗ ಪದಗಳ ಬಳಕೆ ಮೇಲೆ ಎಚ್ಚರಿಕೆ ಇರಬೇಕು.
ಇನ್ನೂ ಅಂತಿಮವಾದ ರೂಪ ಸಿಕ್ಕಿಲ್ಲ ಎಂಬಂಥ ನಿಮ್ಮ ಯೋಜನೆಗಳು ಕ್ರಮೇಣ ಸ್ಪಷ್ಟ ಚೌಕಟ್ಟು ಹಾಗೂ ರೂಪು- ರೇಷೆಯನ್ನು ಪಡೆದುಕೊಳ್ಳಲಿವೆ. ಇನ್ನೂ ನಿಮ್ಮ ಕೈಗೆ ಸೇರದ ಹಣದ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳು ಸಮಸ್ಯೆಗೆ ದೂಡುತ್ತವೆ. ಆದ್ದರಿಂದ ಲೆಕ್ಕಾಚಾರ ಸ್ಪಷ್ಟವಾಗಿರಲಿ. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ವಹಿಸಿ, ಅವನ್ನು ಸಮರ್ಥವಾಗಿ ನಿರ್ವಹಿಸಿದರೆ ಪದೋನ್ನತಿ ನೀಡುವುದಾಗಿ ಮೇಲಧಿಕಾರಿಗಳು ಹೇಳಲಿದ್ದಾರೆ. ವ್ಯಾಪಾರಿಗಳಿಗೆ ತಮ್ಮ ಕಾಂಟ್ಯಾಕ್ಟ್ ಬಳಸಿಕೊಂಡು, ಕೈಗೊಳ್ಳುವ ತೀರ್ಮಾನಗಳಿಂದ ಉತ್ತಮ ಲಾಭದ ಸೂಚನೆ ಸಿಗಲಿದೆ. ಕುಟುಂಬದಲ್ಲಿ ಹಿರಿಯರ ಸಲಹೆಯನ್ನು ಪಾಲಿಸುವುದರಿಂದ ಸಂಬಂಧಗಳಲ್ಲಿನ ಗೊಂದಲ ನಿವಾರಣೆ ಮಾಡಿಕೊಳ್ಳಬಹುದು. ಯುವಕರು ತಮ್ಮ ನೈಪುಣ್ಯ ವೃದ್ಧಿಗೆ ಹೊಸ ತರಬೇತಿ ಅಥವಾ ಕೋರ್ಸ್‌ಗಳಿಗೆ ಸೇರ್ಪಡೆ ಆಗುತ್ತೀರಿ. ತಲೆ ನೋವು, ನರದೌರ್ಬಲ್ಯ ಕಾಣಿಸಬಹುದು. ವಿಶ್ರಾಂತಿಗೂ ಸಮಯ ನೀಡಿ. ನಿಮ್ಮ ಸಂಯಮ ಹಲವು ಅನುಕೂಲ ಮಾಡಿಕೊಡಲಿದೆ.
ಎಲ್ಲ ವಿಷಯದಲ್ಲೂ ತಾರ್ಕಿಕವಾಗಿ ಆಲೋಚನೆ ಮಾಡುವುದು ಒಳ್ಳೆಯ ಫಲಿತವನ್ನು ನೀಡಲಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಈ ಮೊದಲು ಕೈಬಿಟ್ಟಿದ್ದ ಒಂದು ಅವಕಾಶ ಮತ್ತೆ ದೊರೆತಂತೆ ಕಾಣುತ್ತದೆ. ಇನ್ನು ಪಾರ್ಟನರ್ ಷಿಪ್ ವ್ಯವಹಾರ ಮಾಡುವವರು ಲೆಕ್ಕ–ಪತ್ರಗಳ ಪರಿಶೀಲನೆ ಸ್ಪಷ್ಟವಾಗಿರುವಂತೆ ನೋಡಿಕೊಳ್ಳಿ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಪ್ರಾಮುಖ್ಯವನ್ನು ಕ್ರಮಬದ್ಧವಾಗಿ ಮಾಡಿಕೊಂಡರೆ ಒತ್ತಡ ಕಡಿಮೆಯಾಗುತ್ತದೆ. ವ್ಯವಹಾರಸ್ಥರಿಗೆ ಹೊಸ ಸರಬರಾಜುದಾರರ ಪರಿಚಯದಿಂದ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ಕುಟುಂಬದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಹೊಸ ಯೋಜನೆಗಳ ರೂಪಿಸಲು ಚರ್ಚೆ ನಡೆಸಲಿದ್ದೀರಿ. ದಾಂಪತ್ಯದಲ್ಲಿನ ಸಣ್ಣ ಅಸಮಾಧಾನಗಳನ್ನು ಮಾತುಕತೆಯಿಂದ ಸರಿಪಡಿಸಿಕೊಳ್ಳಬಹುದು. ಅಜೀರ್ಣದ ಸಮಸ್ಯೆ ಕಾಣಿಸಬಹುದು, ತುಸು ಹಗುರವಾದ ಮತ್ತು ಮನೆಯ ಆಹಾರವನ್ನೇ ತೆಗೆದುಕೊಳ್ಳಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಂಪನ್ಮೂಲಗಳ ಕ್ರೋಡೀಕರಣ ಮಾಡಿಕೊಳ್ಳುವಿರಿ.
ಕುಟುಂಬ, ಉದ್ಯೋಗ, ಆರೋಗ್ಯ ಹೀಗೆ ವಿವಿಧ ವಿಷಯಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಒಂದರ ಸಲುವಾಗಿ ಮತ್ತೊಂದನ್ನು ನಿರ್ಲಕ್ಷ್ಯ ಮಾಡಿದಲ್ಲಿ ಆ ನಂತರ ಪರಿತಪಿಸುವಂತೆ ಆಗಲಿದೆ. ಹಣಕಾಸಿನ ವಿಷಯದಲ್ಲಿ ಭಾವನಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ. ಮ್ಯೂಚುವಲ್ ಫಂಡ್ ನಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ ನಲ್ಲಿ ಹಣ ಹೂಡಿಕೆ ಆರಂಭಿಸಬೇಕು ಎಂದು ಆಲೋಚನೆ ಮಾಡುತ್ತಾ ಇದ್ದಲ್ಲಿ ಈ ದಿನವೇ ಅದಕ್ಕೆ ಬೇಕಾದ ಎಲ್ಲ ಅಗತ್ಯಗಳನ್ನು ಪೂರೈಸಿ. ಉದ್ಯೋಗಸ್ಥರಿಗೆ ಕೌಶಲ್ಯ ಮತ್ತು ಸಮಯಪಾಲನೆ ಈ ಎರಡೂ ಒಳ್ಳೆ ಫಲಿತವನ್ನು ನೀಡಲಿದೆ. ವಿದ್ಯಾರ್ಥಿಗಳು ಏಕಾಗ್ರತೆ ಕಳೆದುಕೊಳ್ಳದೆ ಗಮನ ಕೇಂದ್ರೀಕರಿಸಿದರೆ ಉತ್ತಮ ಫಲಿತಾಂಶ ಕಾಣಬಹುದು. ಕುಟುಂಬದಲ್ಲಿ ಪರಸ್ಪರ ಸಹಕಾರ ಮತ್ತು ಒಟ್ಟಿಗೆ ಸಮಯ ಕಳೆಯುವುದರಿಂದ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ. ಮಾನಸಿಕ ಒತ್ತಡದಿಂದ ಹೊರಬರುವುದಕ್ಕೆ ಧ್ಯಾನ ಅಥವಾ ಪುಸ್ತಕ ಓದಿನಂತಹ ಚಟುವಟಿಕೆಗಳು ನೆರವಾಗುತ್ತವೆ.
ಸಾಧ್ಯವಾದಷ್ಟೂ ಸರಳವಾಗಿ ಇರುವುದಕ್ಕೆ ಪ್ರಯತ್ನಿಸಿ. ನೀವು ಪೂರ್ಣಗೊಳಿಸಬೇಕಾದ ಪ್ರಾಜೆಕ್ಟ್ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ಮಾಡುವುದಕ್ಕೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವ ಕಡೆಗೆ ಗಮನ ಇರಲಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸುವುದಕ್ಕೆ ಬೇಕಾದಂಥ ವೇದಿಕೆ ದೊರೆಯಲಿದೆ. ವ್ಯವಹಾರಸ್ಥರು ಇಲ್ಲಿಯ ತನಕ ಪಾಲನೆ ಮಾಡಿಕೊಂಡು ಬಂದಿದ್ದ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಗ್ರಾಹಕರು ನೀಡುವಂಥ ಸಲಹೆ ಹಾಗೂ ವಿಮರ್ಶೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿ. ಕೌಟುಂಬಿಕ ವಿಚಾರ ಅಂತ ಬಂದಾಗ ಇದು ಮುಖ್ಯ- ಇದು ಮುಖ್ಯವಲ್ಲ ಎಂದು ಏಕಾಏಕಿ ನಿರ್ಣಯಕ್ಕೆ ಬರಬೇಡಿ. ಭಾವನಾತ್ಮಕ ಸಂಗತಿಗಳನ್ನು ಪರಿಗಣಿಸಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಗಳಲ್ಲಿ ಯಶಸ್ಸು ದೊರೆಯಲಿದೆ. ದೈಹಿಕವಾಗಿ ಚಟುವಟಿಕೆಯಿಂದ ಇರುವುದಕ್ಕೆ ಪ್ರಾಮುಖ್ಯ ನೀಡಿ.
ಲೇಖನ- ಎನ್.ಕೆ.ಸ್ವಾತಿ