
ನೀವು ಈ ದಿನ ಕೆಲವು ಆತುರದ ನಿರ್ಧಾರ ಮಾಡುವ ಸಾಧ್ಯತೆ ಇದೆ, ಆದರೆ ಇಂತಹ ಸಮಯದಲ್ಲಿ ಮನಸ್ಸು ಶಾಂತವಾಗಿರಲಿದೆ. ಕೆಲಸದ ವಾತಾವರಣದಲ್ಲಿ ಮಿತವಾಗಿ ಮಾತನಾಡುವುದು ನಿಮಗೆ ಗೌರವ ತಂದುಕೊಡುತ್ತದೆ. ಹಣಕಾಸಿನ ವಿಷಯದಲ್ಲಿ ಜನಪ್ರಿಯ ಆಗಿರುವ ನಿಯಮಗಳನ್ನು ಪಾಲನೆ ಮಾಡಿ. ಹೀಗೆ ಮಾಡಿದಲ್ಲಿ ಅನಗತ್ಯ ವೆಚ್ಚಗಳಿಂದ ದೂರವಾಗಲು ಸಾಧ್ಯ. ಕುಟುಂಬದವರ ವಿಚಾರದಲ್ಲಿ ಹೆಚ್ಚು ಅರ್ಥ ಮಾಡಿಕೊಳ್ಳುವ ಸಮಯವನ್ನು ನೀಡಿ. ಅದರಲ್ಲೂ ವಿಶೇಷವಾಗಿ ಹಿರಿಯರ ಮಾತು ಕೇಳುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತವೆ. ಪ್ರೀತಿಯಲ್ಲಿ ಅನುಮಾನ- ಸಂದೇಹಗಳೇ ವಿಜೃಂಭಿಸದಂತೆ ನೋಡಿಕೊಳ್ಳಿ. ಹಣ್ಣು, ನೀರು ಸೇವನೆಗೆ ಆದ್ಯತೆ ನೀಡಿ ಮತ್ತು ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಬಹಳ ಮುಖ್ಯವಾಗುತ್ತದೆ. ಸ್ನೇಹದಲ್ಲಿ ಪ್ರಾಮಾಣಿಕವಾಗಿ ಇರುವುದು ಮುಖ್ಯ. ಊಟ- ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ನಿಮ್ಮ ಪ್ರಾಮುಖ್ಯ ಇರಲಿ.
ನಿಮ್ಮ ಮಾತಿನ ಶಕ್ತಿಯು ಈ ದಿನ ಜೀವನದಲ್ಲಿ ದೊಡ್ಡ ಬದಲಾವಣೆ ತರಬಲ್ಲುದು. ಮೃದುವಾಗಿ ಮಾತನಾಡಿದರೆ- ಎದುರಿಗೆ ಇರುವವರ ಭಾವನೆಗೂ ಬೆಲೆ ನೀಡಿದಲ್ಲಿ ಕಠಿಣ ಪರಿಸ್ಥಿತಿಯೂ ಸುಲಭವಾಗಿ ಕರಗಿ ಹೋಗುತ್ತದೆ. ಕುಟುಂಬದಲ್ಲಿ ಸಂಬಂಧಗಳ ಮಧ್ಯೆ ಇರುವ ಒಡಕುಗಳು ಬಗೆಹರಿದಲ್ಲಿ ಮಾನಸಿಕ ನೆಮ್ಮದಿಯ ಬಾಗಿಲು ತೆರೆಯುತ್ತದೆ. ಹಣಕಾಸಿನಲ್ಲಿ ಹೊಸ ಆದಾಯದ ಸೂಚನೆ ಇದ್ದರೂ ಈಗಲೇ ದೊಡ್ಡ ತಾಳ್ಮೆ ಬೇಡುವ ಹೂಡಿಕೆ ಆರಂಭಿಸಬೇಡಿ. ನಿಮ್ಮ ಸಂಬಂಧಿಕರಿಂದ ವಿವಿಧ ವಿಷಯಗಳಲ್ಲಿ ಸಹಾಯ ಅಥವಾ ಸಲಹೆ ದೊರೆಯಬಹುದು. ಪ್ರೀತಿಯಲ್ಲಿ ಇರುವವರು ಅಹಂಕಾರದಿಂದ ದೂರವಿರಿ, ಪರಸ್ಪರ ಗೌರವವೇ ಗಟ್ಟಿ ಸಂಬಂಧದ ಶಕ್ತಿ ಆಗಿರುತ್ತದೆ. ಪ್ರಾಣಾಯಾಮ- ವ್ಯಾಯಾಮ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ವಿಷಯವನ್ನು ಭಾಗವಾಗಿ ಮಾಡಿಕೊಂಡು ಕಲಿಯುವುದು ಉತ್ತಮ. ಸ್ನೇಹಿತರ ಮಾತುಗಳಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಡಿ. ದೈವಸ್ಮರಣೆಗೆ ಆತ್ಮವಿಶ್ವಾಸ ಹೆಚ್ಚಿಸುವ ಶಕ್ತಿಯಿದೆ.
ಕೆಲವೊಮ್ಮೆ ನೀವು ಪಟ್ಟ ಪರಿಶ್ರಮಕ್ಕೆ ತಕ್ಷಣ ಫಲ ಸಿಗದಿದ್ದರೂ ಅದು ವ್ಯರ್ಥವಾಗುವುದಿಲ್ಲ. ನಿಮ್ಮ ಕೆಲಸದಲ್ಲಿ ಕೆಲವು ವಿಳಂಬಗಳು ಕಂಡರೂ ಅನುಸರಿಸುವಂಥ ಕಾರ್ಯಪದ್ಧತಿ- ವಿಧಾನದಲ್ಲಿ ನಂಬಿಕೆ ಇಟ್ಟು ಮುಂದುವರಿಯಿರಿ. ಒಂದು ವೇಳೆ ನೀವೇನಾದರೂ ಸಂಬಂಧಿಗಳು- ಸ್ನೇಹಿತರಿಂದ ಸಾಲ ಪಡೆದಿದ್ದಲ್ಲಿ ಆ ಬಾಕಿ ಪಾವತಿಯನ್ನು ಕೊಟ್ಟಿದ್ದ ಮಾತಿಗಿಂತ ಮೊದಲೇ ಮಾಡುವುದು ಉತ್ತಮ. ಕುಟುಂಬದವರ ಒತ್ತಡವು ಮನಸ್ಸಿಗೆ ತೊಂದರೆ ನೀಡಿದರೂ ಮಾತುಕತೆ ಮೂಲಕ ಎಲ್ಲವನ್ನು ಸರಿಪಡಿಸಬಹುದು. ಪ್ರೀತಿಯಲ್ಲಿ ಸಹನೆಯಿಂದ ನಡೆದುಕೊಂಡರೆ ಆತ್ಮೀಯತೆ ಹೆಚ್ಚಿಸುತ್ತದೆ. ಆರೋಗ್ಯ ವಿಚಾರದಲ್ಲಿ ನಿಮ್ಮ ನಂಬಿಕೆಗಳು ಬದಲಾಗುವಂಥ ದಿನ ಇದಾಗಿರುತ್ತದೆ. ವಿದ್ಯಾರ್ಥಿಗಳು ನಿಮ್ಮ ರಿವಿಷನ್ ಪೂರ್ಣಗೊಳಿಸುವುದಕ್ಕೆ ಆದ್ಯತೆಯನ್ನು ನೀಡಿದಲ್ಲಿ. ಇನ್ನು ನಿಮ್ಮಲ್ಲಿ ಕೆಲವರಿಗೆ ಸ್ನೇಹಿತರ ಸಲಹೆ ನೀಡಲಿದ್ದಾರೆ, ಆದರೆ ತೀರ್ಮಾನ ನಿಮ್ಮದೇ ಇರಲಿ.
ನಿಮ್ಮ ಚಾತುರ್ಯ ಮತ್ತು ಮಾತನಾಡುವ ಕಲೆ ಅನೇಕ ಅವಕಾಶಗಳನ್ನು ನಿಮಗೆ ತರಲಿದೆ. ಕೆಲಸದ ಸ್ಥಳದಲ್ಲಿ ನೀವು ನೀಡುವ ನಂಬಿಕೆ ಹಾಗೂ ತುಂಬುವ ವಿಶ್ವಾಸವು ಜೊತೆಯಲ್ಲಿ ಇರುವವರಿಗೆ ಸ್ಪಷ್ಟತೆ ನೀಡುತ್ತವೆ. ಹಣಕಾಸಿಗೆ ಸಂಬಂಧಿಸಿದಂತೆ ಹೊಸ ಒಪ್ಪಂದಗಳು ಆಗಬಹುದು ಅಥವಾ ಸಣ್ಣ ಲಾಭವೂ ಸಾಧ್ಯವಿದೆ. ಕುಟುಂಬದಲ್ಲಿ ಯಾರಾದರೂ ನಿಮ್ಮ ಸಹಾಯಕ್ಕಾಗಿ ಎದುರು ನೋಡಿ ಪ್ರಸ್ತಾವವನ್ನು ಮಾಡಲಿದ್ದಾರೆ— ನಿಮ್ಮಿಂದ ಸಾಧ್ಯವಿದ್ದಲ್ಲಿ ಖಂಡಿತಾ ಸಹಕಾರ ನೀಡಿರಿ. ಪ್ರೀತಿಯಲ್ಲಿ ನೇರವಂತಿಕೆಯು ಸಂಬಂಧವನ್ನು ಬಲಪಡಿಸುತ್ತದೆ. ಈ ದಿನ ಸಾಧ್ಯವಾದಷ್ಟೂ ಕಡಿಮೆ ಮಸಾಲೆ ಪದಾರ್ಥಗಳ ಸೇವನೆ ಮಾಡಿ ಮತ್ತು ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳಿ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರಶ್ನೆ ಮಾಡುವ ಅಭ್ಯಾಸವನ್ನು ಬಿಡಬೇಡಿ. ಇದರಿಂದ ನಿಮ್ಮ ಕಲಿಕೆ ವೇಗವಾಗಿ ಸಾಗುತ್ತದೆ. ಸ್ನೇಹಿತರೊಂದಿಗೆ ಚರ್ಚೆಯು ಹೊಸ ಜ್ಞಾನ- ಅವಕಾಶಗಳ ಬಗ್ಗೆ ಮಾಹಿತಿ ಸಿಗುವಂತೆ ಮಾಡುತ್ತದೆ. ಪರಿಣಾಮಕಾರಿ ಸಂವಹನ ಯಶಸ್ಸಿನ ಹಾದಿ ಆಗಲಿದೆ.
ಇಂದು ನಿಮ್ಮ ಮನಸ್ಸಿನ ದೃಢತೆಗೆ ಪರೀಕ್ಷೆಯ ದಿನವಾಗಿ ಇರುತ್ತದೆ. ಕೆಲಸದಲ್ಲಿ ಒತ್ತಡ ಇದ್ದರೂ ನಿಮ್ಮ ಸಕಾರಾತ್ಮಕ ಚಿಂತನೆಯಿಂದಾಗಿ ಪರಿಹಾರಗಳನ್ನು ಹುಡುಕಿಕೊಳ್ಳುತ್ತೀರಿ. ಹಣಕಾಸಿನ ಹರಿವಿಗೆ ಯಾವುದೇ ಅಭಾವ ಇರುವುದಿಲ್ಲ. ಆದರೆ ಅದನ್ನು ಉಳಿಸಿಕೊಳ್ಳುವುದೇ ಮುಖ್ಯ. ಕುಟುಂಬದಲ್ಲಿ ಯಾರಾದರೂ ನಿಮ್ಮ ಸಲಹೆ ಕೇಳಬಹುದು— ತರ್ಕಬದ್ಧವಾಗಿ ಆಲೋಚಿಸಿದ ನಂತರ ಮಾತನಾಡಿರಿ. ಪ್ರೀತಿಯಲ್ಲಿ ಅನುಮಾನ ಅಥವಾ ಶಂಕೆ ಬೇಡ; ಸಂಬಂಧ ಗಟ್ಟಿಯಾಗಿ ಇರುವುದಕ್ಕೆ ನಂಬಿಕೆ ಬಹಳ ಮುಖ್ಯವಾಗುತ್ತದೆ. ಮನೆಯಲ್ಲಿನ ಕಿರಿಯರ ಆರೋಗ್ಯ ಸಮಸ್ಯೆ ಒತ್ತಡದಲ್ಲಿ ಸಿಲುಕಿಕೊಳ್ಳುವಂತೆ ಮಾಡಲಿದೆ. ಸ್ವತಃ ನಿಮಗೇ ಸ್ವಲ್ಪ ವಿಶ್ರಾಂತಿ ಅಗತ್ಯ ಇರುತ್ತದೆ. ವಿದ್ಯಾರ್ಥಿಗಳು ಗೊಂದಲ ತಪ್ಪಿಸಿ, ವಿಷಯದ ಮೇಲ್ಮೈ ಅಧ್ಯಯನಕ್ಕಿಂತ ಗಹನವಾಗಿ ಅಭ್ಯಾಸ ಮಾಡುವುದನ್ನು ಬೆಳೆಸಿಕೊಳ್ಳಿ. ಸ್ನೇಹಿತರಿಂದ ಮಾನಸಿಕ ಬೆಂಬಲ ಸಿಗಬಹುದು. ಒಟ್ಟಿನಲ್ಲಿ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡರೆ ಹಲವು ಶುಭ ವಿಚಾರಗಳು ನಿಮ್ಮ ಪಾಲಿಗೆ ಇವೆ.
ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆ. ಇಂಥ ಸಮಯದಲ್ಲಿ ಗೊಂದಲ ಸಹಜ, ಆದರೆ ಅದು ನಿಮ್ಮ ಬೆಳವಣಿಗೆಗೆ ದಾರಿ ತೋರಿಸುತ್ತದೆ. ಉದ್ಯೋಗ ಸ್ಥಳದಲ್ಲಿ ಹೊಸ ಕಲಿಕೆ ಅಥವಾ ನೀವು ನಿರ್ವಹಿಸುವ ಪಾತ್ರದಲ್ಲಿ ಬದಲಾವಣೆ ಮಾಡುವ ಬಗ್ಗೆ ಸೂಚನೆ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಇರುವ ಎಲ್ಲ ಆಯ್ಕೆಗಳನ್ನು ಪರಿಶೀಲಿಸಿ. ತುಂಬ ಆಕ್ರಮಣಕಾರಿಯಾಗಿ ಹೂಡಿಕೆ ಮಾಡುವುದು ಬೇಡ. ಕುಟುಂಬದಲ್ಲಿ ಶುಭಸುದ್ದಿ ಅಥವಾ ಬೆಳವಣಿಗೆ ನಿರೀಕ್ಷೆ ಮಾಡಬಹುದು. ಸಂತಾನ ಅಪೇಕ್ಷಿತರಿಗೆ ಹೊಸ ಸದಸ್ಯರ ಆಗಮನದ ಸುಳಿವು ದೊರೆಯಲಿದೆ. ಪ್ರೀತಿಯಲ್ಲಿ ಪರಸ್ಪರರನ್ನು ಗೌರವಿಸುವ ಮೂಲಕ ಬಾಂದವ್ಯ ಬಲಪಡಿಸಬಹುದು. ಈ ದಿನ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ನಿರ್ಧಾರ ಮಾಡಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಸರಿಯಾದ ದಿಕ್ಕಿನಲ್ಲಿ ಬಳಸುವ ಕಡೆಗೆ ಗಮನ ನೀಡಿದರೆ ಯಶಸ್ಸು ಖಚಿತ.
ಹಲವು ಸಮಸ್ಯೆಗಳಿಗೆ ಕೆಲವೊಮ್ಮೆ ಮೌನವೇ ಅತ್ಯುತ್ತಮ ಪರಿಹಾರ ಆಗುತ್ತದೆ. ನಿಮ್ಮ ಮಾತುಗಳನ್ನು ಯಾರಾದರೂ ತಪ್ಪಾಗಿ ಅರ್ಥೈಸಬಹುದು ಎಂದೆನಿಸಿದ ಸಂದರ್ಭದಲ್ಲಿ ಮೌನವಾಗಿ ಇದ್ದುಕೊಂಡೇ ಪರಿಸ್ಥಿತಿ ಶಾಂತವಾಗಿಸಲು ಸಾಧ್ಯವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನೀವು ಮಾಡುವಂಥ ಕೆಲಸದಲ್ಲಿ ಏಕಾಗ್ರತೆ ಹಾಗೂ ಗಮನ ಕೇಂದ್ರೀಕರಿಸುವುದು ಬಹಳ ಮುಖ್ಯ; ಧ್ವನಿಗಿಂತ ಕಾರ್ಯ ಮಾಡುವ ಶಕ್ತಿಯೇ ಹೆಚ್ಚು ಮಾತನಾಡಲಿ. ಹಣಕಾಸಿನ ವಿಷಯಕ್ಕೆ ಬಂದರೆ ಆಲೋಚನೆ ಮಾಡದೇ ಖರ್ಚು ಮಾಡಬೇಡಿ. ಕುಟುಂಬದಲ್ಲಿನ ಮಾನಸಿಕ ತುಮುಲವನ್ನು ದೂರವಿಡಲು ಮೃದುವಾದ ನಡೆ ಮುಖ್ಯವಾಗುತ್ತದೆ. ಪ್ರೀತಿಯಲ್ಲಿ ಅರ್ಥೈಸಿಕೊಳ್ಳುವ ಗುಣ ಮುಖ್ಯ—ಜಗಳ ಬೇಡ. ಮನಸ್ಸಿಗೆ ವಿಶ್ರಾಂತಿ ಅಗತ್ಯ; ಧ್ಯಾನ ಪ್ರಯೋಜನಕಾರಿ. ವಿದ್ಯಾರ್ಥಿಗಳು ಸದ್ಯಕ್ಕೆ ಯಾವುದು ಅಗತ್ಯವೋ ಅದಕ್ಕೆ ಆದ್ಯತೆಯನ್ನು ನೀಡಿ. ಸ್ನೇಹ ವಲಯದಲ್ಲಿ ಕೆಲವರು ದೂರವಾಗಬಹುದು, ಆದರೆ ನಿಜವಾದ ಗೆಳೆಯರು ಜೊತೆಯಲ್ಲಿ ಉಳಿಯುತ್ತಾರೆ.
ಸಾಧನೆ ಎಂಬುದು ನೇರವಾಗಿ ನಿಮ್ಮ ಕರ್ಮ ಮತ್ತು ಸಮಯದ ಮೇಲೆ ಅವಲಂಬಿತವಾಗಿ ಇರುತ್ತದೆ. ಉದ್ಯೋಗ ಸ್ಥಳದಲ್ಲಿ ಕೆಲಸ ಮಾಡುವಾಗ ನಿಮ್ಮ ಜವಾಬ್ದಾರಿ ಅರಿತು, ಬುದ್ಧಿವಂತಿಕೆಯಿಂದ ಮಾಡಿದರೆ ಮುಂದಿನ ಹಂತಕ್ಕೆ ಏರುವುದು ಸುಲಭವಾಗುತ್ತದೆ. ಇನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಯೋಚಿಸಿ, ತೀರ್ಮಾನಿಸಿ. ಅಗತ್ಯ ಬಿದ್ದಲ್ಲಿ ಇತರರ ಅಭಿಪ್ರಾಯವನ್ನು ಸಹ ಕೇಳಿ. ಕುಟುಂಬದಲ್ಲಿ ಮಕ್ಕಳ ಭವಿಷ್ಯದ ಯೋಜನೆ ಕುರಿತು ಚರ್ಚಿಸಬಹುದು. ಪ್ರೀತಿಯಲ್ಲಿ ಗೌರವ ಮತ್ತು ಮನಸಿಗೆ ಹತ್ತಿರವಾಗಿರುವ ಮಾತು ಮುಖ್ಯ. ಆಹಾರದ ಪ್ರಮಾಣದಲ್ಲಿ ನಿಯಂತ್ರಣ ಬಹಳ ಮುಖ್ಯ ಮತ್ತು ಎದೆಯುರಿ ಹಾಗೂ ಹುಳಿತೇಗು ಹೆಚ್ಚಾದಲ್ಲಿ ಸೂಕ್ತ ವೈದ್ಯೋಪಚಾರಕ್ಕೆ ಗಮನ ನೀಡಿ. ವಿದ್ಯಾರ್ಥಿಗಳು ತಮ್ಮ ತಪ್ಪುಗಳಿಂದ ಕಲಿಯಿರಿ—ಇತರರ ನಡವಳಿಕೆ ಜತೆಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳುವುದು ಬೇಡ. ಈ ದಿನ ನಿಮ್ಮ ಆಲೋಚನೆ ಹಾಗೂ ಚಿಂತನೆಗಳಿಗೆ ಸ್ನೇಹಿತರಿಂದ ಸಹಕಾರ ದೊರಕಬಹುದು.
ಒಬ್ಬರ ಒತ್ತಾಯದಿಂದ ಬದಲಾವಣೆ ತರುವುದಕ್ಕೆ ಆಗುವುದಿಲ್ಲ, ಆದರೆ ಮುಕ್ತ ಮನಸ್ಸಿನಿಂದ ಸಹಕಾರ ನೀಡಿದಲ್ಲಿ ಅದ್ಭುತಗಳು ಸಂಭವಿಸುತ್ತವೆ. ಕೆಲಸದಲ್ಲಿ ತಂಡದ ಸಹಕಾರ ನಿಮ್ಮ ಸಾಧನೆ ಹೆಚ್ಚಿಸುತ್ತದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಮುಂದಕ್ಕೆ ಹೆಜ್ಜೆ ಇಡಿ. ಹಣಕಾಸಿಗೆ ಸಂಬಂಧಿಸಿದಂತೆ ಒಂದೇ ಸಲಕ್ಕೆ ದೊಡ್ಡ ಯೋಜನೆ ಮಾಡುವುದಕ್ಕೆ ಹೋಗಬೇಡಿ; ಹಂತಹಂತವಾಗಿ ನಡೆಯಿರಿ. ಕುಟುಂಬದಲ್ಲಿ ಹಿರಿಯರ ಬೆಂಬಲ ನಿಮ್ಮ ಬೆಳವಣಿಗೆಗೆ ಸಹಕಾರಿ ಆಗಲಿದೆ. ಪ್ರೀತಿಯಲ್ಲಿ ಇರುವವರಾಗಿದ್ದಲ್ಲಿ ಯಾವುದಕ್ಕೂ ಒತ್ತಾಯ ಮಾಡುವುದು ಬೇಡ— ಅವರು ಏನನ್ನು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಅದನ್ನು ಆಲಿಸಿ, ಅರ್ಥ ಮಾಡಿಕೊಳ್ಳಿ. ಕೆಲಸ ಹಾಗೂ ಬದುಕಿನ ಸಮತೋಲನಕ್ಕೆ ಪ್ರಾಮುಖ್ಯ ನೀಡಿ, ಆರೋಗ್ಯದ ಕಡೆಗೆ ಲಕ್ಷ್ಯ ಕೊಡಿ. ವಿದ್ಯಾರ್ಥಿಗಳು ಸಹಪಾಠಿಗಳಿಂದ ಕಲಿಯುವುದಕ್ಕೆ ಉತ್ತಮ ದಿನವಾಗಿರುತ್ತದೆ. ಇನ್ನು ಸ್ನೇಹದಲ್ಲಿಯೂ ಅರ್ಥಪೂರ್ಣ ಮಾತು ಮತ್ತು ನಂಬಿಕೆ ಮುಖ್ಯವಾಗಿರುತ್ತದೆ.
ಲೇಖನ- ಎನ್.ಕೆ.ಸ್ವಾತಿ