
ದಿನದ ಆರಂಭದಲ್ಲೇ ಮನೆಯ ಹಿರಿಯರಿಂದ ಆಸ್ತಿ ಅಥವಾ ವಿಲ್‌ಗೆ ಸಂಬಂಧಿಸಿದ ಮಹತ್ವದ ದಾಖಲೆ- ಪತ್ರಗಳ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಇಷ್ಟು ಸಮಯ ಇದ್ದಂಥ ಒತ್ತಡ- ಗೊಂದಲಗಳು ದೂರವಾಗುತ್ತದೆ. ಸೌರಶಕ್ತಿ (Solar) ಅಥವಾ ಕೃಷಿ ಉಪಕರಣಗಳ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಸರ್ಕಾರದಿಂದ ದೊಡ್ಡ ಮಟ್ಟದ ಸಬ್ಸಿಡಿ ಅಥವಾ ಆರ್ಡರ್ ದೊರೆಯಲಿದೆ. ವಾರಾಂತ್ಯದ ನಿಮಿತ್ತ ದೂರದ ಊರಿನ ದೇವಸ್ಥಾನಗಳಿಗೆ ಭೇಟಿ ನೀಡಲು ನೀವು ಆಲೋಚನೆ ಮಾಡುವಿರಿ. ಅಥವಾ ಸಂಬಂಧಿಕರು ನಿಮ್ಮ ಮನೆಗೆ ಬಂದು, ಅವರ ಸಲುವಾಗಿ ಪ್ರವಾಸಕ್ಕೆ ತೆರಳಲು ಆಲೋಚನೆ ಮಾಡುತ್ತೀರಿ. ಬಹಳ ದಿನಗಳಿಂದ ನಿಂತುಹೋಗಿದ್ದ ಹಳೆಯ ಮನೆ ನವೀಕರಣದ ಕೆಲಸಕ್ಕೆ ಈ ದಿನ ಸಮಯ ನಿಗದಿ ಆಗಲಿದೆ. ಉದ್ಯೋಗದಲ್ಲಿ ಬಡ್ತಿಗಾಗಿ ನೀವು ನಡೆಸಿದ ಪ್ರಯತ್ನಕ್ಕೆ ಪೂರಕವಾಗಿ ಮೇಲಧಿಕಾರಿಗಳಿಂದ ಖಚಿತವಾದ ಭರವಸೆ ನಿಮಗೆ ಸಿಗಲಿದೆ.
ಸಿನಿಮಾ ಅಥವಾ ಕಿರುತೆರೆಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಪ್ರತಿಷ್ಠಿತ ಬ್ಯಾನರ್‌ನಿಂದ ಕರೆ ಬರಲಿದೆ. ನಿಮ್ಮ ಈ ಹಿಂದಿನ ಕೆಲಸ- ಕಾರ್ಯಗಳಿಗೆ ಮೆಚ್ಚುಗೆಯ ಜೊತೆಗೆ, ಉತ್ತಮ ಗೌರವಧನ ಸಹ ದೊರೆಯಲಿದೆ. ಇನ್ನು ಹಾಲು ಮತ್ತು ಹೈನುಗಾರಿಕೆ ಕೇಂದ್ರಗಳ ವಿಸ್ತರಣೆಗಾಗಿ ನೀವು ಸಲ್ಲಿಸಿದ್ದ ಸಾಲದ ಅರ್ಜಿಗೆ ಬ್ಯಾಂಕ್‌ನಿಂದ ಮಂಜೂರಾತಿ ಸಿಗಲಿದೆ. ತಾಯಿಯ ಕಡೆಯ ಸಂಬಂಧಿಕರಿಂದ ಬೆಲೆಬಾಳುವ ಉಡುಗೊರೆ ಅಥವಾ ಆಭರಣ ಲಭಿಸುವ ಯೋಗವಿದೆ. ಈ ದಿನ ಯಾವುದಾದರೂ ವಿಷಯದ ಬಗ್ಗೆ ನೀವು ಹೆಚ್ಚು ಮಾತನಾಡುವುದಕ್ಕಿಂತ ಕೇಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದರೆ ಕೌಟುಂಬಿಕ ಕಲಹವೊಂದು ಸುಲಭವಾಗಿ ಬಗೆಹರಿಯಲಿದೆ. ವಿದೇಶದಲ್ಲಿರುವ ಆಪ್ತರಿಂದ ವೀಸಾ ಅಥವಾ ಉದ್ಯೋಗದ ಪ್ರಾಯೋಜಕತ್ವದ ಸುದ್ಧಿ ಬರಲಿದೆ. ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುವ ಬಗ್ಗೆ ಕುಟುಂಬದ ಸದಸ್ಯರ ಜೊತೆಗೆ ಮಾತುಕತೆ ನಡೆಸಲಿದ್ದೀರಿ.
ಚಿನ್ನ ಅಥವಾ ಬೆಳ್ಳಿಯ ಮೇಲೆ ದೀರ್ಘಾವಧಿಗೆ ಹಣವನ್ನು ಹೂಡಿಕೆ ಮಾಡುವವರಿಗೆ ಅಥವಾ ಹಳೆಯ ಒಡವೆಗಳನ್ನು ಅಡವಿಟ್ಟು ಹೊಸ ಉದ್ಯಮ ಆರಂಭಿಸುವವರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ. ಬರವಣಿಗೆ ಮತ್ತು ಪ್ರಕಾಶನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಳೆಯ ಕೃತಿಯೊಂದರ ಮರುಮುದ್ರಣ ದೊಡ್ಡ ಮಟ್ಟದಲ್ಲಿ ಲಾಭವನ್ನು ತಂದುಕೊಡಲಿದೆ. ಇನ್ನು ಹೊಸ ಪುಸ್ತಕವೊಂದರ ರಚನೆ ಸಲುವಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಮನೆಗೆ ಹೊಸದಾಗಿ ಕಂಪ್ಯೂಟರ್ ಅಥವಾ ಓದಿಗೆ ಪೂರಕವಾದ ಪೀಠೋಪಕರಣಗಳನ್ನು ಖರೀದಿಸುವ ಸಾಧ್ಯತೆ ಇದೆ. ಶೀತ ಮತ್ತು ಗಂಟಲಿನ ಸೋಂಕಿನ ಬಗ್ಗೆ ಎಚ್ಚರವಿರಲಿ. ನ್ಯಾಯಾಲಯದ ಹೊರಗಿನ ಸಂಧಾನಗಳಲ್ಲಿ ನಿಮ್ಮ ಮಧ್ಯಸ್ಥಿಕೆಗೆ ಹೆಚ್ಚಿನ ಬೆಲೆ ಸಿಗಲಿದ್ದು, ಇದು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಿಸಲಿದೆ. ಇತರರ ಪ್ರೀತಿ- ದಾಂಪತ್ಯದ ಕಲಹಗಳ ವಿಚಾರಕ್ಕೆ ತಲೆ ಹಾಕಬೇಡಿ.
ವಿಮಾನಯಾನ ಅಥವಾ ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವವರಿಗೆ ಹಠಾತ್ ಟಿಕೆಟ್ ಬುಕ್ಕಿಂಗ್‌ಗಳ ಮೂಲಕ ಲಾಭ ಹೆಚ್ಚಲಿದೆ. ಆರೋಗ್ಯದ ಕಡೆಗಿನ ನಿಮ್ಮ ಗಮನ ಹಾಗೂ ಅದನ್ನು ಕಾಪಾಡಿಕೊಳ್ಳಲು ಬೇಕಾದ ವ್ಯಾಯಾಮ, ಯೋಗ ಇಂಥವುಗಳಿಗೆ ಸೇರ್ಪಡೆ ಆಗುವುದಕ್ಕೆ ಆಲೋಚಿಸುತ್ತೀರಿ. ಮನೆಯಲ್ಲಿ ಸಿಸಿಟಿವಿ ಅಳವಡಿಕೆ ಅಥವಾ ಸೆಕ್ಯೂರಿಟಿ ಸಿಸ್ಟಮ್ ಅಪ್‌ಗ್ರೇಡ್ ಮಾಡಲು ಹಣವನ್ನು ಖರ್ಚು ಮಾಡಲಿದ್ದೀರಿ. ಕಮಾಡಿಟಿ ಮಾರ್ಕೆಟ್ ಅಥವಾ ಷೇರು ಮಾರುಕಟ್ಟೆಯ ಹೂಡಿಕೆಯಲ್ಲಿ ಉತ್ತಮ ಲಾಭ ಕಾಣುವುದಕ್ಕೆ ಸಲಹೆ- ಮಾರ್ಗದರ್ಶನ ದೊರೆಯುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ನೀವು ನಡೆಸಿದ ಸಂಶೋಧನೆಯೊಂದು ಕೆಲಸದ ಸ್ಥಳದಲ್ಲಿ ದೊಡ್ಡ ಸಮಸ್ಯೆಯನ್ನು ಪರಿಹರಿಸಲಿದೆ. ಸಣ್ಣಪುಟ್ಟ ಗಾಯಗಳಾಗುವ ಸಂಭವವಿರುವುದರಿಂದ ಅಡುಗೆಮನೆಯಲ್ಲಿ ಅಥವಾ ಗಾಜಿನ ವಸ್ತುಗಳ ಜೊತೆ ಕೆಲಸ ಮಾಡುವಾಗ ಜಾಗ್ರತೆ ಇರಲಿ.
ಡಿಜಿಟಲ್ ಮಾರ್ಕೆಟಿಂಗ್ ಅಥವಾ ಇ-ಕಾಮರ್ಸ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹೊಸ ಪ್ಲಾಟ್‌ಫಾರ್ಮ್‌ಗಳಿಂದ ಆದಾಯ ಬರಲಿದೆ. ವಾರಾಂತ್ಯದ ಮೋಜಿನ ನಡುವೆಯೂ ವಿದೇಶಿ ಭಾಷೆ ಅಥವಾ ತಂತ್ರಜ್ಞಾನ ಕಲಿಯಲು ಆನ್‌ಲೈನ್ ಕ್ಲಾಸ್‌ಗೆ ಸೇರ್ಪಡೆ ಆಗುವಂಥ ಯೋಗ ಇದೆ. ನಿಮ್ಮ ವಾಹನದ ಇನ್ಶೂರೆನ್ಸ್ ಅಥವಾ ತೆರಿಗೆ ಪಾವತಿಯ ಗಡುವನ್ನು ಒಮ್ಮೆ ಪರಿಶೀಲಿಸಿ, ದಂಡ ಕಟ್ಟುವ ಪರಿಸ್ಥಿತಿ ಬರಬಹುದು. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಂಥವರು ಖರ್ಚಿನ ವಿಚಾರದಲ್ಲಿ ಎಚ್ಚರಿಕೆಯಾಗಿದ್ದರೆ ಮಾತ್ರ ಸಾಲದು, ಕಠಿಣವಾದ ಮಿತಿಯನ್ನು ಸಹ ಹೇರಿಕೊಳ್ಳುವುದು ಒಳ್ಳೆಯದು. ಇನ್ನು ನೀವು ಅಂದುಕೊಳ್ಳದೆಯೇ ಅಥವಾ ಅವರಾಗಿಯೇ ತಿಳಿಸದೆ ದೂರದ ಊರಿನಿಂದ ಹಳೆ ಗೆಳೆಯರು ಮನೆಗೆ ಬರುವುದರಿಂದ ಸಂಜೆ ಪಾರ್ಟಿ ಮೂಡ್ ಇರಲಿದೆ. ಹವಾಮಾನದ ವೈಪರೀತ್ಯದ ಕಾರದಿಂದಾಗಿ ಚರ್ಮದ ಅಲರ್ಜಿ ಕಾಣಿಸಿಕೊಳ್ಳಬಹುದು.
ರೆಡಿಮೇಡ್ ಗಾರ್ಮೆಂಟ್ಸ್ ಅಥವಾ ಬ್ಯೂಟಿ ಪಾರ್ಲರ್ ಉದ್ಯಮದಲ್ಲಿ ಇರುವವರಿಗೆ ಮೇಲಿಂದ ಮೇಲೆ ಆರ್ಡರ್‌ಗಳು ಬರಲಿವೆ. ವೈವಾಹಿಕ ಜೀವನದಲ್ಲಿ ಮೂಡಿದ್ದ ಅಸಮಾಧಾನಗಳನ್ನು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ. ಸಂಗಾತಿಯೊಂದಿಗೆ ಏಕಾಂತವಾಗಿ ದೂರದ ರೆಸಾರ್ಟ್‌ಗೆ ಹೋಗುವ ಯೋಜನೆ ಮಾಡುವಿರಿ. ಐಷಾರಾಮಿ ಕಾರು ಅಥವಾ ಗೃಹಾಲಂಕಾರದ ವಸ್ತುಗಳ ಮೇಲೆ ಇಂದು ದೊಡ್ಡ ಮೊತ್ತದ ಹೂಡಿಕೆ ಮಾಡುವಿರಿ. ಹಳೆಯ ಗೆಳತಿಯೊಬ್ಬರಿಂದ ಹಣಕಾಸಿನ ಸಹಾಯ ಅಥವಾ ಹೊಸ ಉದ್ಯೋಗದ ಐಡಿಯಾ ಸಿಗಲಿದೆ. ಲೇವಾದೇವಿ ವ್ಯವಹಾರ ಮಾಡುತ್ತಾ ಇದ್ದಲ್ಲಿ ಸುರಕ್ಷಿತ ಹೂಡಿಕೆ ಕಡೆಗೆ ಗಮನ ನೆಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಬಾಡಿಗೆ ಆದಾಯ ಬರುವ ರೀತಿಯಲ್ಲಿ ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಹಣವನ್ನು ಹೂಡಿಕೆ ಮಾಡಲಿದ್ದೀರಿ. ಸಕ್ಕರೆ ಕಾಯಿಲೆ ಇರುವವರು ಆಹಾರ ಪದ್ಧತಿಯಲ್ಲಿ ಇಂದು ಶಿಸ್ತು ತಪ್ಪಬೇಡಿ.
ಹೆಚ್ಚು ಸುದ್ದಿ ಮಾಡದೆ, ಯಾರಿಗೂ ತಿಳಿಸದೆ ನೀವು ರಹಸ್ಯವಾಗಿ ಮಾಡುತ್ತಿದ್ದ ಭೂಮಿ ವ್ಯವಹಾರವೊಂದು ಅಂತಿಮ ಹಂತಕ್ಕೆ ತಲುಪಲಿದೆ. ಮೊಲ ಸಾಕಣೆ, ಹಸು ಸಾಕಣೆ ಇಂಥದ್ದರಲ್ಲಿ ತೊಡಗಿಕೊಂಡವರಿಗೆ ಆದಾಯದಲ್ಲಿ ಏರಿಕೆ ಆಗುವಂಥ ಯೋಗ ಇದೆ. ಹಳೆ ನಾಣ್ಯಗಳು ಅಥವಾ ಅಪರೂಪದ ವಸ್ತುಗಳ ಸಂಗ್ರಹ ಮಾಡುವವರಿಗೆ ಬೆಲೆಬಾಳುವ ವಸ್ತುವೊಂದು ಲಭ್ಯವಾಗಲಿದೆ. ವೈದ್ಯಕೀಯ ಫಾಲೋಅಪ್ ಪರೀಕ್ಷೆಗಳು ಇದ್ದಲ್ಲಿ ಅದನ್ನು ಮುಂದಕ್ಕೆ ಹಾಕುತ್ತಾ ಹೋಗಬೇಡಿ. ಮಾನಸಿಕ ಅಶಾಂತಿ ಹೋಗಲಾಡಿಸಲು ಸಮುದ್ರ ತೀರ ಅಥವಾ ನದಿ ತೀರದ ಪ್ರವಾಸ ಕೈಗೊಳ್ಳುವಿರಿ. ವಾರಾಂತ್ಯದ ಮೋಜಿನ ನಡುವೆಯೂ ನಿಮ್ಮ ಇನ್ ಟ್ಯೂಷನ್ ಒಂದು ಮೋಸದ ವ್ಯವಹಾರದಿಂದ ನಿಮ್ಮನ್ನು ರಕ್ಷಿಸಲಿದೆ. ನಿಮ್ಮ ಮಕ್ಕಳು ವಿದೇಶಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ಬಗ್ಗೆ ಸಕಾರಾತ್ಮಕ ಮಾಹಿತಿ ದೊರೆಯಲಿದೆ.
ನಿರ್ಧಾರದ ಧ್ವನಿಯಲ್ಲಿಯೇ ಕೆಲವು ವಿಚಾರಗಳನ್ನು ಹೇಳಿಬಿಡುವುದು ಉತ್ತಮ. ಅದರಲ್ಲೂ ಸಂಬಂಧಿಗಳು- ಸ್ನೇಹಿತರು ಏನಾದರೂ ಕೇಳಿದಲ್ಲಿ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಬೇಡಿ. ಕಾರ್ಖಾನೆ ಅಥವಾ ಗಣಿ ಉದ್ಯಮದಲ್ಲಿ ತೊಡಗಿಕೊಂಡವರಿಗೆ ಯಂತ್ರೋಪಕರಣಗಳ ಬದಲಾವಣೆಗಾಗಿ ದೊಡ್ಡ ಮೊತ್ತದ ಸಾಲ ದೊರೆಯಲಿದೆ. ಮದ್ಯವ್ಯಸನಿಗಳು ಅಥವಾ ತಪ್ಪು ಹಾದಿಯಲ್ಲಿರುವ ಸ್ನೇಹಿತರಿಂದ ದೂರವಿರುವುದು ನಿಮ್ಮ ಇಂದಿನ ನೆಮ್ಮದಿಗೆ ಕಾರಣವಾಗಲಿದೆ. ನಿಮ್ಮ ಹೆಸರಿನಲ್ಲಿದ್ದ ಹಳೆಯ ಮೊಕದ್ದಮೆಯೊಂದು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಜಾ ಆಗುವ ಸಾಧ್ಯತೆ ಇದೆ. ಕೆಲಸದ ಒತ್ತಡದ ನಡುವೆಯೂ ಯೋಗ ಮತ್ತು ಪ್ರಾಣಾಯಾಮಕ್ಕೆ ಸಮಯ ಮೀಸಲಿಡುವಿರಿ. ನಿಮ್ಮ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳ ಸಂಬಳದ ವಿಚಾರದಲ್ಲಿ ಉದಾರವಾಗಿ ವರ್ತಿಸುವಿರಿ, ಇದರಿಂದ ಕೆಲಸದ ವೇಗ ಹೆಚ್ಚಲಿದೆ.
ಫೈರ್ ಅಂಡ್ ಸೇಫ್ಟಿ ಅಥವಾ ಸೆಕ್ಯೂರಿಟಿ ಏಜೆನ್ಸಿಗಳಲ್ಲಿ ಕೆಲಸ ಮಾಡುವವರಿಗೆ ಇಂದು ಅತ್ಯಂತ ಜವಾಬ್ದಾರಿಯುತ ದಿನ. ಜಿಮ್ ಅಥವಾ ಕ್ರೀಡಾ ಸಂಕೀರ್ಣಗಳನ್ನು ಆರಂಭಿಸಲು ಬಯಸುವವರಿಗೆ ಸರ್ಕಾರದ ಅನುಮತಿ ದೊರೆಯುವ ಸೂಚನೆ ಸಿಗಲಿದೆ. ಪೆಟ್ರೋಲಿಯಂ ಅಥವಾ ರಾಸಾಯನಿಕ ಉದ್ಯಮದಲ್ಲಿ ಇರುವವರಿಗೆ ಹೊಸ ಟೆಂಡರ್‌ಗಳು ಲಭ್ಯವಾಗಲಿವೆ. ನಿಮ್ಮ ಮನೆಯಲ್ಲಿ ಸಣ್ಣಪುಟ್ಟ ವಿದ್ಯುತ್ ದೋಷಗಳು ಅಥವಾ ಶಾರ್ಟ್ ಸರ್ಕೀಟ್ ಇಂಥವುಗಳು ಆಗದಂತೆ ನೋಡಿಕೊಳ್ಳಿ. ಅಂಥದ್ದೊಂದು ಸೂಚನೆ ಏನಾದರೂ ಸಿಕ್ಕಿದಲ್ಲಿ ಒಮ್ಮೆ ವಯರಿಂಗ್ ಸರಿಯಾಗಿದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಸೋದರರೊಂದಿಗೆ ಭೂಮಿ ಹಂಚಿಕೆ ವಿಚಾರದಲ್ಲಿ ಇದ್ದ ವೈಷಮ್ಯವು ಹಿರಿಯರ ಮಧ್ಯಸ್ಥಿಕೆಯಿಂದ ಸುಖಾಂತ್ಯ ಕಾಣಲಿದೆ. ತೀರ್ಥಕ್ಷೇತ್ರಗಳ ಭೇಟಿಯಿಂದ ಮಾನಸಿಕ ಶಾಂತಿ ದೊರೆಯಲಿದ್ದು, ಕುಟುಂಬ ಸದಸ್ಯರ ಜೊತೆಗ ತೆರಳುವ ಸಾಧ್ಯತೆ ಹೆಚ್ಚಿದೆ.
ಲೇಖನ- ಎನ್.ಕೆ.ಸ್ವಾತಿ