Astrology: ದಿನ ಭವಿಷ್ಯ: ಹಿತಶತ್ರುಗಳು ನಿಮಗೆ ಏನನ್ನಾದರೂ ಮಾಡಲು ಇಚ್ಛಿಸುವರು-ಎಚ್ಚರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 20, 2024 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.20 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Astrology: ದಿನ ಭವಿಷ್ಯ: ಹಿತಶತ್ರುಗಳು ನಿಮಗೆ ಏನನ್ನಾದರೂ ಮಾಡಲು ಇಚ್ಛಿಸುವರು-ಎಚ್ಚರ
ದಿನಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಗುರುವಾರ (ಜೂನ್. 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ 02:12 ರಿಂದ 03:49ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:06 ರಿಂದ ಬೆಳಿಗ್ಗೆ 07:43ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:20 ರಿಂದ 10:57ರ ವರೆಗೆ.

ಸಿಂಹ ರಾಶಿ : ಇಂದು ಅತಿಯಾದ ಉತ್ಸಾಹದಿಂದ ನಿಮ್ಮ ಮೇಲೆ‌ ನಿಮಗೆ ನಿಯಂತ್ರಣ ಸಿಗದಾದೀತು. ಹಣವನ್ನು ಉಳಿಸಿಯೇ ಉಳಿಸುತ್ತೇನೆ ಎಂಬ ಹುಂಬುತನ ಬೇಡ. ಅಮೂಲ್ಯವಾದುದನ್ನು ಕಳೆದುಕೊಳ್ಳಬೇಕಾಗಬಹುದು. ನಿಮ್ಮ ಮತಿಕೌಶಲಕ್ಕೆ ಕಛೇರಿಯಲ್ಲಿ ಬೆರಗಾಗುವರು. ಅಂದುಕೊಂಡ ಕಾರ್ಯವನ್ನು ಆರಂಭಿಸುವ ಮೊದಲೇ ಹಿಂದೆ ಹೆಜ್ಜೆ ಇಡಬೇಡಿ. ನಿಮ್ಮವರ ಬಳಿ ವಿಧೇಯತೆಯನ್ನು ಇಟ್ಟುಕೊಳ್ಳುವುದು ಉತ್ತಮ. ಸಂಗಾತಿಯ ಬಗ್ಗೆ ನಂಬಿಕೆ ಬರುವುದು ಕಷ್ಟ. ಕೆಲಸವನ್ನು ಬದಲಿಸುವ ಬಗ್ಗೆ ಸದ್ಯ ಯೋಚನೆ ಬೇಡ. ಮಾಡುವಿರಿ. ಹಿತಶತ್ರುಗಳು ನಿಮಗೆ ಏನನ್ನಾದರೂ ಮಾಡಲು ಇಚ್ಛಿಸುವರು. ಆರ್ಥಿಕ ವಿಚಾರದಲ್ಲಿ ಹಿನ್ನಡೆಯಾಗಲಿದೆ. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿಯಾದೀತು. ಮನೆಯ ಕೆಲಸಲ್ಲಿ ಸಮಯವು ಹೋಗಿದ್ದೇ ಗೊತ್ತಾಗದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ.

ಕನ್ಯಾ ರಾಶಿ : ಇಂದು ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಅದನ್ನು ಅಷ್ಟಕ್ಕೇ ನಿಲ್ಲಿಸುವ ಜಾಣ್ಮೆ ನಿಮ್ಮದು. ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ದೈವವೇ ನಿಮ್ಮ ಭವಿಷ್ಯವನ್ನು ಕಂಡು ಪೂರ್ವಭಾವಿಯಾಗಿ ಹಣವನ್ನು ಕೂಡಿಡುವಂತೆ ಪ್ರೇರಿಸಿತ್ತು. ಉದ್ಯಮವನ್ನು ನಡೆಸುತ್ತಿದ್ದರೆ, ಹೊಸಮಾರ್ಗವನ್ನು ಯೋಚಿಸಿ. ನಿಮ್ಮ ಆಸ್ತಿಯನ್ನು ಮಾರಾಟಮಾಡಲು ಆಲೋಚಿಸಿಸುವಿರಿ. ನೂತನ ವಾಹನಖರೀದಿಯನ್ನು ಮಾಡಲಿದ್ದೀರಿ. ಮಾನಸಿಕ ಒತ್ತಡದಿಂದ ಸ್ವಲ್ಪ ಸಮಸ್ಯೆಯನ್ನು ಅನುಭವಿಸುವಿರಿ. ಅನಿವಾರ್ಯವಾದ ವಸ್ತುಗಳನ್ನು ಸ್ವಂತದ್ದಾಗಿಸಿಕೊಳ್ಳಿ. ಶ್ರಮವಹಿಸಿದ ಕಾರ್ಯಕ್ಕೆ ಫಲವು ಸಿಗಬಹುದಿ. ಒಳ್ಳೆಯವರ ಸಂಗ ಸಿಗಬಹುದು ಅಥವಾ ಉತ್ತಮ ಪುಸ್ತಕವನ್ನು ಓದುವಿರಿ. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಸ್ತ್ರೀಯರ ಬಗ್ಗೆ ನಿಮಗೆ ಅನುಕಂಪವಿದ್ದರೂ ಅದನ್ನು ಹೇಳಿಕೊಳ್ಳಲಾಗದು.

ತುಲಾ ರಾಶಿ : ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರಿಗೆ ನೀಡುವ ಉಪದೇಶವು ವ್ಯರ್ಥವಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಕೊಟ್ಟರೆ ಆರ್ಥಿಕ ಸ್ಥಿತಿಯ ಹದ ಕೆಡುವುದು. ತಾಳ್ಮೆಯಿಂದ ಆದಷ್ಟು ವ್ಯವಹಿರಿಸಿ. ಅಪರೂಪದ ವಿಚಾರಗಳು ನಿಮಗೆ ಗೊತ್ತಾಗಲಿದೆ. ನೆರೆ ಹೊರೆಯರ ಜೊತೆ ಚೆನ್ನಾಗಿರಿ. ಪತಿಯ ಮೇಲೆ ಸಿಟ್ಟುಗೊಳ್ಳುವ ಸಾಧ್ಯತೆ ಇದೆ. ಕೆಲವು ಜವಾಬ್ದಾರಿಯ ಹೊರೆ ಕಡಿಮೆಯಾದೀತು. ಮನಸ್ಸನ್ನು ನಕಾರಾತ್ಮಕವಾಗಿ ಹರಿಯಲು ಬಿಡಬೇಡಿ. ಕೃಷಿಗೆ ಸಂಬಂಧಿಸಿದ ಚಟುವಟಿಕೆಲ್ಲಿ ಭಾಗವಹಿಸುವಿರಿ. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ಗುಡ್ಡ ಬೆಟ್ಟಗಳ, ನದಿಪ್ರದೇಶಗ ಸುತ್ತಿವ ಮನಸ್ಸಾದೀತು. ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು. ಇದು ನಿಮಗೆ ಸಾಧನೆಗೆ ಪ್ರೇರಣೆಯೂ ಆಗಬಹುದು.

ವೃಶ್ಚಿಕ ರಾಶಿ : ನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ನಿಮಗೆ ಇನ್ನಷ್ಟು ಬಲ, ಸ್ಫೂರ್ತಿ ಸಿಗುವುದು. ಇಂದು ನೀವು ಹಲವು ದಿನಗಳಿಂದ ಕಾಡುತ್ತಿರುವ ಅಥವಾ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುವಿರಿ. ಪೂರ್ವಸಿದ್ಧತೆ ಚೆನ್ನಾಗಿರಬೇಕಾಗುತ್ತದೆ. ಸ್ನೇಹಿತರಿಂದ ಅಪಹಾಸ್ಯಕ್ಕೆ ಒಳಗಾಗುವಿರೊ. ಇನ್ನೊಬ್ಬರ ವಸ್ತುವನ್ನು ಅನುಮತಿ ಇಲ್ಲದೇ ಪಡೆಯಬೇಡಿ. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕೆಲವೊಂದಿಷ್ಟು ಗೊಂದಲಗಳು ಆಗಬಹುದು. ಬೇರೆ ಕಡೆಗೆ ಇಟ್ಟಿದ್ದ ಗಮನವನ್ನು ಬದಲಿಸಿ, ನಿಮ್ಮ ಜೀವನದ ಬಗ್ಗೆ ಯೋಚಿಸುವುದು ಒಳ್ಳೆಯದು ಎಂದು ಅನ್ನಿಸಬಹುದು. ಮೂರ್ಖರಂತೆ ವರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು.