
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಜೂನ್. 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ವಜ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:56 ರಿಂದ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:47 ರಿಂದ 05:24ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:42 ರಿಂದ 09:19ರ ವರೆಗೆ.
ಧನು ರಾಶಿ: ಯಾರನ್ನೋ ದ್ವೇಷಿಸುವ ಸ್ವಭಾವವು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ. ಇದು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಕೆಟ್ಟ ಅಭ್ಯಾಸವನ್ನು ಸ್ನೇಹಿತರಿಂದ ಕಲಿತಿದ್ದು ಬಿಡಲಾರಿರಿ. ಮನೆಯಲ್ಲಿ ಇದು ತಿಳಿಯುತ್ತದೋ ಎಂಬ ಆತಂಕವೂ ಇರುವುದು. ಸ್ವಂತ ಉದ್ಯೋಗವನ್ನು ಮಾಡುತ್ತಿರಮದ್ದರೆ ಶುಭವಾರ್ತೆಯ ಬರಬಹುದು. ಯಾವುದನ್ನು ಪಡೆಯುವುದಿದ್ದರು ಅದಕ್ಕೆ ಕೊಡುವ ಮೌಲ್ಯ, ಗೌರವವನ್ನು ಕೊಟ್ಟು ಪಡೆಯಿರಿ. ಮಂಗಲಕರವಾದ ಸಮಾರಂಭಗಳಿಗೆ ಭೇಟಿಯಾಗುವಿರಿ. ನಿಮಗಾಗದವರು ನಿಮ್ಮ ಬಗ್ಗೆ ಹೊಂಚುಹಾಕುತ್ತ ಇರಬಹುದು. ಹಠಾತ್ ಕ್ರೋಧವು ಒಳ್ಳೆಯದಲ್ಲ. ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಯಂತ್ರೋಪಕರ ಅಥವಾ ವಾಹನದಿಂದ ಧನವು ನಷ್ಟವಾಗಿ ಬೇಸರವೂ ಆಗಲಿದೆ. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ನಿಯಮಗಳನ್ನು ಮುರಿದು ವರ್ತಿಸುವುದು ಬೇಡ.
ಮಕರ ರಾಶಿ: ಉದ್ಯಮದಲ್ಲಿ ಇರುವ ದೌರ್ಬಲ್ಯವನ್ನು ಸರಿ ಮಾಡಿಕೊಳ್ಳಿ. ಅದಕ್ಕಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಸಾಲವನ್ನು ಮಾಡಿ ವಾಹನವನ್ನೋ, ಭೂಮಿಯನ್ನೋ, ಮನೆಯನ್ನೋ ಖರೀದಿಸಲು ಹೋಗಬೇಡಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ನಿಮ್ಮ ದೂರನ್ನು ಯಾರೂ ಆಲಿಸದೇ ಇರಬಹುದು. ತಾಯಿಯ ಬಳಿ ನಿಮ್ಮ ನೋವನ್ನು ಹೇಳಿಕೊಳ್ಳುವಿರಿ. ಧನಲಾಭವಿದ್ದರೂ ತಪ್ಪಿಸುವವರ ಕಾರಣ ಅದು ಸಿಗದೇ ಹೋಗಬಹುದು. ನಿಮ್ಮ ತಾಳ್ಮೆಗೆ ಸಹೋದ್ಯೋಗಿಗಳು ಮೆಚ್ಚುಗೆ ಕೊಡುವರು. ಎಲ್ಲದಕ್ಕೂ ಬೇರೆಯವರನ್ನು ದೂಷಿಸುವ ಅಗತ್ಯವಿಲ್ಲ. ನಿಮ್ಮ ತಪ್ಪೂ ಕಾರಣವಾಗಿರಬಹುದು. ತಪ್ಪನ್ನು ನೀವೇ ತಿದ್ದಿಕೊಂಡರೆ ಒಳ್ಳೆಯದು. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು.
ಕುಂಭ ರಾಶಿ: ನಿಮ್ಮ ಶತ್ರುಗಳು ರಾಜಿಯಾಗಲು ಇಂದು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ. ಕೈಬಿಡಬೇಕಂದು ನಿರ್ಧರಿಸಿರುವ ನಿಮಗೆ ಕೆಲಸ ಮಾಡುವ ಸಂಸ್ಥೆಯು ಮತ್ತೆ ನಿಮ್ಮನ್ನು ಸೇರಿಸಿಕೊಳ್ಳಲಿದೆ. ಸಂಗಾತಿಯನ್ನು ಬೆಂಬಲಿಸುವಂತೆ ಹೇಳುವಿರಿ. ರಾತ್ರಿಯಲ್ಲಿ ನಿಮಗೆ ಬೀಳುವ ಕನಸು ಭವಿಷ್ಯವನ್ನೂ ಸೂಚಿಸಲಿದೆ. ಮರುದಿನ ದೇವರಿಗೆ ತುಪ್ಪದ ದೀಪವನ್ನು ಬೆಳಗಿ. ನಿಮಗೆ ಸಲಹೆಯನ್ನು ಕೊಡುವವರು ಹತ್ತಾರು ಮಂದಿ ಇರುವರು. ಅವರ ಸಲಹೆಯನ್ನು ತಳ್ಳಿಹಾಕದೇ ನಯವಾಗಿ ಜಾರಿಕೊಳ್ಳಿ. ಹಣದ ಅನಿವಾರ್ಯತೆಯು ಬರಲಿದ್ದು, ಹೇಗೋ ಹೊಂದಿಕೆಯಾಗಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು. ಹೂಡಿಕೆಯಿಂದ ಇಂದು ದೂರವಿರುವಿರಿ. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು.
ಮೀನ ರಾಶಿ: ನೀವು ದಿನದ ಆರಂಭದಿಂದ ಕೊನೆಯ ತನಕ ಉತ್ಸಾಹವಿರುವುದು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ಮಹಿಳಾ ಅಧಿಕಾರಿಯಿಂದ ಅಪಮಾನವಾಗಲಿದ್ದು ಸಮಾಧನಾದಿಂದ ಉತ್ತರಿಸಿ. ದೂರದ ಊರಿಗೆ ಪ್ರಯಾಣ ಮಾಡುವಿರಿ. ದಾಂಪತ್ಯದಲ್ಲಿ ಜಗಳಗಳು ಆಗಲಿದ್ದು, ನೀವದನ್ನು ಮುಂದುವರಿಸಲು ಹೋಗಬೇಡಿ. ಕೋಪವು ಅಧಿಕವಾಗಿ ಇದ್ದರೂ ಸಹನೆಯನ್ನು ತಂದುಕೊಳ್ಳಿ. ಅಹಂಕಾರದಿಂದ ಯಾರಿಗೂ ಲಾಭವಾಗದು. ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಮುಂದುವರಿಯಿರಿ. ಕುಟುಂಬ ವಿಚಾರಗಳು ನಿಮಗೆ ತಿಳಿಯದು ಎಂಬ ಬಗ್ಗೆ ಚಿಂತೆ ಇರಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಗದಂತೆ ನಿಮ್ಮ ಮಾತಿರಲಿ.
ಲೋಹಿತ ಹೆಬ್ಬಾರ್ – 8762924271 (what’s app only)