Horoscope: ಇಂದು ನಿಮ್ಮವರೇ ನಿಮಗೆ ವಂಚನೆ ಮಾಡಬಹುದು ಎಚ್ಚರ!

| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2024 | 12:05 AM

ಸೆಪ್ಟೆಂಬರ್​ 23,​ 2024ರ​​ ನಿಮ್ಮ ರಾಶಿಭವಿಷ್ಯ:ರಾಜಕಾರಣಿಗಳ ಕಾರ್ಯಕ್ಕೆ ಪ್ರಶಂಸೆಯು ಸಿಗಲಿದೆ. ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಸುಲಭ. ಅದರ ನಿರ್ವಹಣೆ ಕಷ್ಟ. ವಿರೋಧಿಗಳನ್ನು ಸೃಷ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ. ವಾಹನ ಖರೀದಿಯ ಆಲೋಚನೆಯನ್ನು ಕೈ ಬಿಡುವಿರಿ. ಹಾಗಾದರೆ ಸೆಪ್ಟೆಂಬರ್​ 23ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಇಂದು ನಿಮ್ಮವರೇ ನಿಮಗೆ ವಂಚನೆ ಮಾಡಬಹುದು ಎಚ್ಚರ!
ಇಂದು ನಿಮ್ಮವರೇ ನಿಮಗೆ ವಂಚನೆ ಮಾಡಬಹುದು ಎಚ್ಚರ!
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯ ನಕ್ಷತ್ರ: ರೋಹಿಣೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:24, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ ಮಧ್ಯಾಹ್ನ 12:25ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:55 ರಿಂದ 03:26ರ ವರೆಗೆ.

ಮೇಷ ರಾಶಿ: ಯಾರಮೇಲೂ ಸ್ವಾಮಿತ್ವವನ್ನು ಸ್ಥಾಪಿಸಲು ಹೋಗಬಹುದು. ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ. ಆಸ್ತಿಯ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಸರ್ಕಾರಿಯ ಕೆಲಸದ ವಿಳಂಬದಿಂದ ನಿಮಗೆ ಬೇಸರವಾಗಲಿದೆ. ರಾಜಕಾರಣಿಗಳ ಕಾರ್ಯಕ್ಕೆ ಪ್ರಶಂಸೆಯು ಸಿಗಲಿದೆ. ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಸುಲಭ. ಅದರ ನಿರ್ವಹಣೆ ಕಷ್ಟ. ವಿರೋಧಿಗಳನ್ನು ಸೃಷ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ. ವಾಹನ ಖರೀದಿಯ ಆಲೋಚನೆಯನ್ನು ಕೈ ಬಿಡುವಿರಿ. ಸಹೋದರರ ಜೊತೆಗಿನ ಸಂಬಂಧವು ಒಂದು ಮಾತಿನಿಂದ ಹಾಳಾಗಬಹುದು. ಸಂಪತ್ತಿನ ರಕ್ಷಣೆಯು ನಿಮಗೆ ಕಷ್ಟವಾದೀತು. ನಿಮ್ಮ ಅಮೂಲ್ಯ ವಸ್ತುವನ್ನು ನಿಮಗೆ ಗೊತ್ತಿಲ್ಲದೇ ಕೊಟ್ಟು ಬಿಡುವಿರಿ. ನಿಮ್ಮ ಮಾತುಗಳು ಅನ್ಯಾರ್ಥವನ್ನು ಕೊಡಲಿದೆ. ಬೇಡವೆಂದರೂ ಕೆಲವು ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳಬಹುದು. ನಿಮ್ಮ‌ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ತಂದೆಯ ಮಾತು ಹಿಡಿಸದೇಹೋಗಬಹುದು. ಯಾವ ಕರ್ಮವನ್ನಾದರೂ ಫಲ ಬರುವತನಕ ಕಾಯಬೇಕು.

ವೃಷಭ ರಾಶಿ; ನಿಮಗೆ ಇಂದು ಯಾವ ಭರವಸೆಯೂ ವಿಶ್ವಾಸಾರ್ಹವಾಗದು. ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿವುದು. ದೃಷ್ಟಿದೋಷದಿಂದ ನೀವು ಪೀಡಿತರಾಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಳೆದುಕೊಂಡು ಕಳವಳಗೊಳ್ಳುವಿರಿ. ಸಹೋದ್ಯೋಗಿಗಳಿಂದ ನಿಮಗೆ ಧೈರ್ಯ ಬರುವುದು. ಆಸ್ತಿಯ ವಿಚಾರದಲ್ಲಿ ವಂಚನೆ ಆಗುವ ಸಾಧ್ಯತೆ ಇದೆ. ಅನಾರೋಗ್ಯವನ್ನು ಇಂದಿನ‌ ವಿಶ್ರಾಂತಿಯಿಂದ ಸರಿಮಾಡಿಕೊಳ್ಳುವಿರಿ. ಇನ್ನೊಬ್ಬರನ್ನು ಕಂಡು ಅಸೂಯೆಪಡುವುದನ್ನು ಬಿಟ್ಟರೆ ನೆಮ್ಮದಿಯು ಸಿಗಬಹುದು. ದಾಂಪತ್ಯವನ್ನು ಸರಿದೂಗಿಸಿಕೊಳ್ಳುವ ಕಲೆಯನ್ನು ನೀವು ಬಲ್ಲವರಾಗಿದ್ದೀರಿ. ಕಾರ್ಯಸ್ಥಾನದ ಬದಲಾವಣೆಯಾಗಲಿದೆ. ವಿವಾಹದ ಮಾತುಕತೆ ಗೊಂದಲದಲ್ಲಿ ಮುಕ್ತಾಯವಾಗಬಹುದು. ಹೊಸ ವಸ್ತುಗಳ ಬಳಕೆಯನ್ನು ತಿಳಿಯದೇ ಅದನ್ನು ಹಾಳು ಮಾಡಿಕೊಳ್ಳುವಿರಿ. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ನಿಮ್ಮ ಅತಿಯಾದ ಉತ್ಸಾಹದಿಂದಲೇ ಇಂದಿನ ಕಾರ್ಯವು ಬೇಗ ಮುಗಿಯಬಹುದು.

ಮಿಥುನ ರಾಶಿ: ಇಂದು ನಿಮ್ಮ ಜವಾಬ್ದಾರಿಯವ ಕೆಲಸಗಳ ಜೊತೆ ಸಹೋದ್ಯೋಗಿಯ ಕಾರ್ಯವನ್ನೂ ಮಾಡಬೇಕಾದೀತು. ಇಂದು ನಿಮ್ಮವರೇ ನಿಮಗೆ ವಂಚನೆ ಮಾಡಬಹುದು. ನಿಮ್ಮ ಆಸ್ತಿಯ ಮೇಲೆ ಬೇರೆಯವರ ಕಣ್ಣು ಬೀಳಲಿದೆ. ಕೆಲವರು ನಿಮ್ಮಿಂದ ಉಪಕಾರವನ್ನು ಪಡೆದುಕೊಳ್ಳುವವರಿದ್ದಾರೆ. ಅನಂತರ ನಿರ್ಲಕ್ಷ್ಯಿಸಬಹುದು. ಸಂಗಾತಿಯನ್ನು ಹಲವು ದಿನಗಳ ಅನಂತರ ಭೇಟಿಯಾಗುವಿರಿ. ಸಂಗಾತಿಯ ಜೊತೆ ಖುಷಿಯ ಸಮಾಚಾರವನ್ನು ಹಂಚಿಕೊಳ್ಳುವಿರಿ. ಇನ್ನೊಬ್ಬರಿಂದ ಲಾಭವನ್ನು ಬಯಸುವುದು ಸರಿಯಾಗದು. ನಿಮ್ಮವರೇ ನಿಮಗ ಸಹಕಾರ ಕೊಡದಿರುವುದು ಬೇಸರ ತರಿಸಬಹುದು. ಮನೆಯ ವಸ್ತುಗಳ ಖರೀದಿಯು ಉತ್ಸಾಹದಿಂದ ಸಾಗಲಿದೆ. ಪ್ರೀತಿಯು ಕೆಲವು ಗೊಂದಲವನ್ನು ಸೃಷ್ಟಿಸೀತು. ನಿಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಗುರಿಯು ಬದಲಾಗುವುದು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಬೇಡ ಆಲೋಚನೆಗಳನ್ನು ತಲೆಯಿಂದ ತೆಗದೆಹಾಕಿ.

ಕರ್ಕಾಟಕ ರಾಶಿ: ಭೂ ವ್ಯವಹಾರವನ್ನು ಅನುಭವಿಗಳ ಜೊತೆ ಇದ್ದು ಮಾಡಿ. ನಿಮ್ಮ ಮಾತುಕತೆಗಳಿಂದ ನೀವಿನ್ನೂ ತಿಳಿದುಕೊಳ್ಳಬೇಕು ಎಂದು ಅನ್ನಿಸುವುದು. ಹಣಕಾಸಿನ ಸಹಾಯವನ್ನು ಮಿತ್ರರಿಂದ ಪಡೆಯುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಆತಂಕವಾಗಲಿದೆ. ಬಂಧುಗಳನ್ನು ಪ್ರೀತಿಸುವಿರಿ. ಸಾಲದಿಂದ ಮುಕ್ತರಾಗಲು ಎಷ್ಟೇ ಪರಿಶ್ರಮಿಸಿದರೂ ಸಾಧ್ಯವಾಗದು. ತಾಳ್ಮೆಯನ್ನು ಕಳೆದುಕೊಳ್ಳದೇ ವರ್ತಿಸುವುದು ಮುಖ್ಯವಾಗಲಿದೆ. ರಾಜಕೀಯವನ್ನು ಮನೆಗೆ ತರುವುದು ಬೇಡ. ನೀವು ದ್ವೇಷಿಸುವವರ ಬಳಿಯೇ ಸಹಾಯ ಕೇಳುವ ಸಂದರ್ಭವು ಬರಬಹುದು. ತೊಂದರೆಗಳನ್ನು ನೆನೆನೆದು ದುಃಖಿಸುವಿರಿ. ಕಾನೂನಾತ್ಮಕ ಜಯವು ನಿಮಗೆ ಸಂತೋಷವನ್ನು ಕೊಡುವುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು. ಇಂದು ಮನೆಯವರು ನಿಮ್ಮ ಯಾವ ಮಾತನ್ನೂ ಒಪ್ಪಿಕೊಳ್ಳಲಾರರು.