ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:39 ಗಂಟೆ, ರಾಹು ಕಾಲ ಬೆಳಿಗ್ಗೆ 10:59 ರಿಂದ ಸಂಜೆ 12:31, ಯಮಘಂಡ ಕಾಲ ಮಧ್ಯಾಹ್ನ 03:35 ರಿಂದ 05:07ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:54 ರಿಂದ 09:26ರ ವರೆಗೆ.
ಮೇಷ ರಾಶಿ : ಹೇಳಿಕೊಳ್ಳುವ ಸಾಧನೆ ಅಲ್ಲದಿದ್ದರೂ ಒಮ್ಮೊಮ್ಮೆ ಹೇಳಿಕೊಳ್ಳಬೇಕಾಗುತ್ತದೆ. ಇಂದು ನಿಮಗೆ ಬೇರೆ ಬೇರೆ ಕಾರಣಗಳಿಂದ ಜೀವನ ಬಹಳ ಸುಂದರ ಎನಿಸುವುದು. ಉಪಕಾರ ಮಾಡಲು ಹೋಗಿ ಆಪತ್ತಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ನಿಮ್ಮ ನೋವನ್ನು ಹಂಚಿಕೊಳ್ಳುವಿರಿ. ತಂದೆಯ ಜೊತೆ ಸಮಾರಂಭಗಳಿಗೆ ಹೋಗುವಿರಿ. ನಿಮ್ಮ ವಾದವು ಸರಿಯೆನಿಸೀತು. ವಾಹನ ರಿಪೇರಿಯ ಕೆಲಸದಲ್ಲಿ ಇಂದಿನ ಸಮಯವು ವ್ಯರ್ಥವಾಗಬಹುದು. ಮಕ್ಕಳು ನಿಮ್ಮ ಬಳಿ ನಾನಾ ಪ್ರಶ್ನೆಗಳನ್ನು ಕೇಳುವರು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ಸ್ತ್ರೀಯರ ಮೇಲೆ ನಿಮಗೆ ಕರುಣೆ ಬರಬಹುದು. ಕೆಟ್ಟ ಗಳಿಗೆಯೊಂದು ಇಂದು ಹಾದುಹೋಗಿ ಸಣ್ಣ ಅವಘಡವನ್ನು ಮಾಡುವುದು. ಸ್ತ್ರೀಯರಿಗೆ ಅಲಂಕಾರಿಕ ವಸ್ತುಗಳು ಸಿಗಬಹುದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ. ಚುರುಕುತನದ ಅಗತ್ಯತೆ ಬಹಳ ಇದೆ. ಎಲ್ಲರ ಜೊತೆ ನೀವು ಹೋಗಬೇಕಾಗುವುದು.
ವೃಷಭ ರಾಶಿ : ಯಾವುದನ್ನೂ ಸಹಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿ ಇರದು. ನಿಮ್ಮ ದೃಢ ಸಂಕಲ್ಪವು ಯಶಸ್ಸಿನ ಗುಟ್ಟೂ ಆಗುವುದು. ಹಣವನ್ನು ಗಳಿಸುವ ಆಸೆಯು ತೀರ್ವವಾಗಿದ್ದರೂ ಸಫಲವಾಗುವುದಿಲ್ಲ. ವಸ್ತುಗಳ ಮಾರಾಟದ ನಿಮಿತ್ತ ನೀವು ಪರ ಊರಿಗೆ ಹೋಗಲಿದ್ದೀರಿ. ಸುಳ್ಳನ್ನು ಕೆಲವು ಕಾಲ ಹೇಳಿದರೆ ಕೇಳಿಯಾರು. ಮತ್ತೆ ನಂಬಿಕೆ ನಷ್ಟವಾದೀತು. ನಿಮ್ಮ ಸ್ವಭಾವಕ್ಕೆ ಹಿಂದಿಕೊಳ್ಳುವವರು ಸಿಗುವುದು ಕಷ್ಟವಾದೀತು. ಇಂದು ಮಾಡುವ ಪ್ರಯಾಣದಲ್ಲಿ ಅಪರಿಚಿತರ ಸಖ್ಯವಾಗಲಿದೆ. ನಿಮ್ಮ ಎಲ್ಲ ವಿವರಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದು ಬೇಡ. ಇನ್ನೊಬ್ಬರ ಬಗ್ಗೆ ಅಸೂಯೆ ಉಂಟಾಗಬಹುದು. ಕಛೇರಿಗೆ ಒಲ್ಲದ ಮನಸ್ಸಿನಿಂದ ಹೋಗುವಿರಿ. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು. ಏನಾದರೂ ಎದುರಿಸುತ್ತೇನೆ ಎಂಬ ದಾರ್ಢ್ಯವು ನಿಮ್ಮಲ್ಲಿ ಇರಲಿದೆ. ಉದ್ಯೋಗದಲ್ಲಿ ಯಾವುದಾದರೊಂದು ರೀತಿಯಲ್ಲಿ ಪ್ರಗತಿಯನ್ನು ಸಾಧಿಸುವಿರಿ.
ಮಿಥುನ ರಾಶಿ : ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವಂತೆ ಎಲ್ಲರಿಗೂ ಬೈಯುತ್ತ ಇರುವಿರಿ. ಇಂದು ಅಪರೂಪಕ್ಕೆ ಸಿಕ್ಕ ಸ್ನೇಹಿತರು ನಿಮ್ಮ ಬಳಿ ಹಣವನ್ನು ಖಾಲಿಮಾಡಿಸಬಹುದು. ದಾರಿ ಸರಿಯಿಲ್ಲ ಎಂದ ಮಾತ್ರಕ್ಕೆ ಬದಲಿಸಬೇಕೆಂದು ಅಲ್ಲ. ಸರಿಮಾಡಿಕೊಂಡೂ ಹೋಗಬಹುದು. ಅಸಹಜ ವರ್ತನೆಯು ಮನೆಯಲ್ಲಿ ಸಂದೇಹಕ್ಕೆ ಕಾರಣವಾಗುವುದು. ಹಿರಿಯರನ್ನು ಅನಾದರದಿಂದ ನೋಡಬೇಡಿ. ನಿಮ್ಮ ಅಸಮಾಧಾನವನ್ನು ಆಪ್ತರ ಬಳಿ ಹೇಳಿಕೊಳ್ಳಿ. ಉದ್ಯೋಗದಲ್ಲಿ ಎದುರಾದ ಸನ್ನಿವೇಶಗಳನ್ನು ಶಾಂತ ಮಾಡುವಿರಿ. ಕೇಳದೇ ಇರುವವರಿಗೆ ಏನನ್ನೂ ಕೊಡಬೇಡಿ. ನಿಮ್ಮ ಸುಪ್ತಮತಿಯನ್ನು ಪ್ರಕಟಿಸಿ. ಭೂಮಿಯ ಖರೀದಿಗೆ ಹಿರಿಯರ ಮಾರ್ಗದರ್ಶನವೂ ಇರಲಿ. ಮೋಜಿನ ಆಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಆರೋಗ್ಯವು ಉಪಶಮನವಾಗುವ ಯಾವ ಲಕ್ಷಣವೂ ನಿಮಗೆ ಕಾಣಿಸದು. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು.
ಕರ್ಕಾಟಕ ರಾಶಿ : ಉದ್ಯೋಗದ ಕಾರಣದಿಂದ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಇಂದು ಅನವಶ್ಯಕ ಖರ್ಚಿನ ಕಡೆ ಗಮನವಿರದು. ಹೆಚ್ಚು ಕೋಪವನ್ನು ತೋರಿಸಲಿದ್ದೀರಿ. ಸ್ಥಿರಾಸ್ತಿಯನ್ನು ಕೊಡುವ ಆಲೋಚನೆಯನ್ನು ಮಾಡುವಿರಿ. ವಾಹನ ಖರೀದಿಯ ಬಗ್ಗೆ ಆಲೋಚನೆ ಇರಲಿದೆ. ಬಹಳ ಹಿಂದಿನ ಆಸೆಯನ್ನು ಸಂಗಾತಿಯು ಪೂರೈಸುವನು. ಇಂದು ನಿಮ್ಮ ಅನಗತ್ಯ ಮಾತುಗಳಿಂದ ವಿವಾದವು ಹುಟ್ಟಬಹುದು. ನಿಮ್ಮದಲ್ಲದ ವಸ್ತುವಿನ ಬಗ್ಗೆ ನಿಮಗೆ ಚಿಂತೆ ಬೇಡ. ಸಾಲದ ಮರುಪಾವತಿಗೆ ಸಮಯವನ್ನು ಕೇಳುವಿರಿ. ಬಂಧುಗಳ ಮಾತಿನಿಂದ ನಿಮಗೆ ತೊಂದರೆ ಆಗಬಹುದು. ಭಯದಲ್ಲಿ ನೀವು ಬಹಳ ಇಂದಿನ ದಿನವನ್ನು ಕಳೆಯಬೇಕಾದೀತು. ಹಿರಿಯರ ಬಳಿ ಮಾತನಾಡುವಾಗ ವಿನಯವಿರಲಿ. ನಿಮ್ಮ ಮೌನವೂ ಉತ್ತರವಾಗಿರಲಿ.