AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಜನ ಸಂಚಾರದಲ್ಲಿ ಬದಲಾವಣೆ ಯಾರಿಗೆಲ್ಲ ಅಶುಭ?

ಅಶುಭ ಗ್ರಹವೆನಿಸಿಕೊಂಡಿರುವ ಕುಜನು ಕೆಲವೇ ದಿನಗಳಲ್ಲಿ ಕರ್ಕಾಟಕ ರಾಶಿಯನ್ನು ಪ್ರವೇಶಿಸುವನು. ಈ ರಾಶಿಯು ಕುಜನ ನೀಚರಾಶಿಯೂ ಆಗಿದೆ.‌ ಕುಜನ ಸಂಚಾರದಲ್ಲಿ ಬದಲಾವಣೆಯಾಗುತ್ತಿರುವುದರಿಂದ ಯಾರಿಗೆಲ್ಲ ಅಶುಭ ಆಗಲಿದೆ ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ.

ಕುಜನ ಸಂಚಾರದಲ್ಲಿ ಬದಲಾವಣೆ ಯಾರಿಗೆಲ್ಲ ಅಶುಭ?
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಆಯೇಷಾ ಬಾನು

Updated on: Sep 05, 2024 | 7:05 AM

ಕುಜನು ಅಶುಭ ಗ್ರಹರಲ್ಲಿ ಒಬ್ಬ. ಆತನ ಸಂಚಾರವು ಸದ್ಯ ಮಿಥುನ ರಾಶಿಯಲ್ಲಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಕರ್ಕಾಟಕ ರಾಶಿಯನ್ನು ಪ್ರವೇಶಿಸುವನು. ಈ ರಾಶಿಯು ಕುಜನ ನೀಚರಾಶಿಯೂ ಆಗಿದೆ.‌ ಇಲ್ಲಿ ಆತ ಸಂಪೂರ್ಣ ದುರ್ಬಲನಾಗುವ ಕಾರಣ, ಅದರ ಸೂಚನೆಯನ್ನು ಮೊದಲಿಂದಲೇ ಕೊಡಲು ಆರಂಭಿಸುತ್ತಾನೆ. ಅದನ್ನು ಗಮನಿಸಿ ಮುಂದಿನ ಹೆಜ್ಜೆ ಇಡುವುದು ಸೂಕ್ತ.

ಈಗಿರುವ ರಾಶಿಯ ಅಧಿಪತಿ ಬುಧ. ಕುಜನಿಗೆ ಬುಧನು ಶತ್ರು. ಬುಧನಿಗೂ ಕುಜನು ಶತ್ರುವಾದ ಕಾರಣ ಅಧಿಶತ್ರುಗಳಾದರು. ಆದ್ದರಿಂದ ಕುಜನು ಈ ಕಾರಣದಿಂದಲೂ ದುರ್ಬಲನಾದನು.

ಮೇಷ ರಾಶಿ:

ಕುಜನ ರಾಶಿಯೇ ಆದ ಕಾರಣ ಆತನ ಪ್ರಭಾವವು ಹೆಚ್ಚು ಈ ರಾಶಿಯ ಮೇಲೂ ಇರುವುದು. ಏಕಾದಶದಲ್ಲಿ ಇರುವ ಕಾರಣ ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾದ ಯಾವುದೂ ಸಿಗುವುದು ಕಷ್ಟ. ಬರಬೇಕಾದ ಹಣವೂ ನಿಮಗೆ ಸಿಗುವುದಾದರೂ ಸರಿಯಾದ‌ ಕಾಲಕ್ಕೆ ಸಿಗದೇಹೋಗಬಹುದು.

ಮಿಥುನ ರಾಶಿ:

ಇಲ್ಲಿಯೇ ಕುಜನೂ ಇರುವ ಕಾರಣ ಒತ್ತಡ, ಕೋಪ, ಮನಸ್ತಾಪಗಳನ್ನು ಎದುರಿಸಬೇಕು. ಯಾವುದನ್ನೂ ಸರಿಯಾಗಿ ತೀರ್ಮಾನಿಸಲಾಗದು. ನಿರ್ಧಾರಿಯ ಕಾರ್ಯಗಳು ಪುನಃ ಕೆಲವು ಸಮಯದಲ್ಲಿ ಬದಲಾವಣೆಯಾಗುವುದು. ಶಾರೀರಿಕವಾದ ನೋವುಗಳೂ ಇರುವುದು.

ಸಿಂಹ ರಾಶಿ:

ರಾಶಿಯ ಅಧಿಪತಿ ಇಲ್ಲಿರುವ ಕಾರಣ ಸ್ನೇಹದಲ್ಲಿ ವೈರುಧ್ಯ, ಹೊಂದಾಣಿಕೆಯಲ್ಲಿ ಕಸರತ್ತು, ಸಹೋದರರ ನಡುವೆ ಕಲಹಗಳು ಆಗಾಗ ಆಗುವುದು. ವಿರೋಧಿಗಳಾಗುವ ಸಾಧ್ಯತೆಯೂ ಇದೆ.

ಕನ್ಯಾ ರಾಶಿ:

ಕೌಟುಂಬಿಕ ಸಮಸ್ಯೆಗಳು‌ ಅಪರಿಹಾರ್ಯದಂತೆ ಆಗುವುದು. ವಿದೇಶದಲ್ಲಿ ಇರುವವರಿಗೆ ಕಷ್ಟಗಳನ್ನು ಎದುರಿಸಬೇಕಾದೀತು. ತಾಯಿಯ ಬಗ್ಗೆ ನಿಮಗೆ ಸದ್ಭಾವ ಕಡಿಮೆಯಾಗುವುದು. ಆರೋಗ್ಯದಲ್ಲಿ ವ್ಯತ್ಯಾಸವನ್ನು ನೀವು ಕಾಣಬೇಕಾಗುವುದು.

ಧನು ರಾಶಿ:

ವೈವಾಹಿಕ ಸಂಬಂಧಗಳು ತುಂಡಾಗುವುದು. ಆಸೆಗಳನ್ನು ನೀವು ಪೂರೈಸಿಕೊಳ್ಳಲು ಅಸಮರ್ಥರಾಗುವಿರಿ. ದಾಂಪತ್ಯದಲ್ಲಿ‌ ಸಣ್ಣ ವಿಚಾರಕ್ಕೂ ಕಲಹವಾಗಲಿದೆ.

ಮಕರ ರಾಶಿ:

ಕುಜ ದೃಷ್ಟಿ ಇರುವ ಕಾರಣ ನಿಮಗೆ ಮರಣ ಭೀತಿ ಕಾಡುವುದು. ವಾಹನ ಚಾಲನೆ, ವಿದ್ಯುತ್, ಅಗ್ನಿ, ಯಂತ್ರೋಪಕರಣದ ವಿಚಾರದಲ್ಲಿ ಜಾಗರೂಕತೆ ಅವಶ್ಯಕ. ಒಬ್ಬೊಂಟಿಯಾಗಿ ದೂರ ಪ್ರಯಾಣವನ್ನು ಮಾಡುವುದು ಬೇಡ.

ಸುಬ್ರಹ್ಮಣ್ಯನ ಸ್ಮರಣೆಯಿಂದ ಕಷ್ಟಗಳಿದ್ದರೂ ಅದರಿಂದ ಬಾಧೆಯಾಗದಂತೆ ದಾಟಬಹುದು.

ಷಡಾನನಂ ಕುಂಕುಮರಕ್ತವರ್ಣಂ ಮಹಾಮತಿಂ ದಿವ್ಯಮಯೂರವಾಹನಮ್‌ | ರುದ್ರಸ್ಯ ಸೂನುಂ ಸುರಸೈನ್ಯನಾಥಂ ಗುಹಂ‌ ಸದಾ ಶರಣಮಹಂ ಪ್ರಪದ್ಯೇ ||

ಎನ್ನುವ ಸ್ತೋತ್ರವನ್ನು ನಿತ್ಯವೂ ಜಪಿಸಿ.

– ಲೋಹಿತ ಹೆಬ್ಬಾರ್ – 8762924271

30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ