Daily Horoscope 06 September 2024: ಈ ರಾಶಿಯವರು ಇಂದು ಆಪತ್ತಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ-ಎಚ್ಚರ

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 06 September 2024: ಈ ರಾಶಿಯವರು ಇಂದು ಆಪತ್ತಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ-ಎಚ್ಚರ
ರಾಶಿ ಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 06, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:39 ಗಂಟೆ, ರಾಹು ಕಾಲ ಬೆಳಿಗ್ಗೆ 10:59 ರಿಂದ ಸಂಜೆ 12:31, ಯಮಘಂಡ ಕಾಲ ಮಧ್ಯಾಹ್ನ 03:35 ರಿಂದ 05:07ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:54 ರಿಂದ 09:26ರ ವರೆಗೆ.

ಮೇಷ ರಾಶಿ : ಹೇಳಿಕೊಳ್ಳುವ ಸಾಧನೆ ಅಲ್ಲದಿದ್ದರೂ ಒಮ್ಮೊಮ್ಮೆ ಹೇಳಿಕೊಳ್ಳಬೇಕಾಗುತ್ತದೆ. ಇಂದು ನಿಮಗೆ ಬೇರೆ ಬೇರೆ ಕಾರಣಗಳಿಂದ ಜೀವನ ಬಹಳ ಸುಂದರ ಎನಿಸುವುದು. ಉಪಕಾರ ಮಾಡಲು ಹೋಗಿ ಆಪತ್ತಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ನಿಮ್ಮ ನೋವನ್ನು ಹಂಚಿಕೊಳ್ಳುವಿರಿ. ತಂದೆಯ ಜೊತೆ ಸಮಾರಂಭಗಳಿಗೆ ಹೋಗುವಿರಿ. ನಿಮ್ಮ ವಾದವು ಸರಿಯೆನಿಸೀತು. ವಾಹನ ರಿಪೇರಿಯ ಕೆಲಸದಲ್ಲಿ ಇಂದಿನ ಸಮಯವು ವ್ಯರ್ಥವಾಗಬಹುದು. ಮಕ್ಕಳು ನಿಮ್ಮ ಬಳಿ ನಾನಾ ಪ್ರಶ್ನೆಗಳನ್ನು ಕೇಳುವರು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ಸ್ತ್ರೀಯರ ಮೇಲೆ ನಿಮಗೆ ಕರುಣೆ ಬರಬಹುದು. ಕೆಟ್ಟ ಗಳಿಗೆಯೊಂದು ಇಂದು ಹಾದುಹೋಗಿ ಸಣ್ಣ ಅವಘಡವನ್ನು ಮಾಡುವುದು. ಸ್ತ್ರೀಯರಿಗೆ ಅಲಂಕಾರಿಕ ವಸ್ತುಗಳು ಸಿಗಬಹುದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ. ಚುರುಕುತನದ ಅಗತ್ಯತೆ ಬಹಳ ಇದೆ. ಎಲ್ಲರ ಜೊತೆ ನೀವು ಹೋಗಬೇಕಾಗುವುದು.

ವೃಷಭ ರಾಶಿ : ಯಾವುದನ್ನೂ ಸಹಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿ ಇರದು. ನಿಮ್ಮ ದೃಢ ಸಂಕಲ್ಪವು ಯಶಸ್ಸಿನ ಗುಟ್ಟೂ ಆಗುವುದು. ಹಣವನ್ನು ಗಳಿಸುವ ಆಸೆಯು ತೀರ್ವವಾಗಿದ್ದರೂ ಸಫಲವಾಗುವುದಿಲ್ಲ‌. ವಸ್ತುಗಳ ಮಾರಾಟದ ನಿಮಿತ್ತ ನೀವು ಪರ ಊರಿಗೆ ಹೋಗಲಿದ್ದೀರಿ. ಸುಳ್ಳನ್ನು ಕೆಲವು ಕಾಲ ಹೇಳಿದರೆ ಕೇಳಿಯಾರು. ಮತ್ತೆ ನಂಬಿಕೆ ನಷ್ಟವಾದೀತು. ನಿಮ್ಮ ಸ್ವಭಾವಕ್ಕೆ ಹಿಂದಿಕೊಳ್ಳುವವರು ಸಿಗುವುದು ಕಷ್ಟವಾದೀತು. ಇಂದು ಮಾಡುವ ಪ್ರಯಾಣದಲ್ಲಿ ಅಪರಿಚಿತರ ಸಖ್ಯವಾಗಲಿದೆ. ನಿಮ್ಮ ಎಲ್ಲ ವಿವರಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದು ಬೇಡ. ಇನ್ನೊಬ್ಬರ ಬಗ್ಗೆ ಅಸೂಯೆ ಉಂಟಾಗಬಹುದು. ಕಛೇರಿಗೆ ಒಲ್ಲದ ಮನಸ್ಸಿನಿಂದ ಹೋಗುವಿರಿ. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು. ಏನಾದರೂ ಎದುರಿಸುತ್ತೇನೆ ಎಂಬ ದಾರ್ಢ್ಯವು ನಿಮ್ಮಲ್ಲಿ ಇರಲಿದೆ. ಉದ್ಯೋಗದಲ್ಲಿ ಯಾವುದಾದರೊಂದು ರೀತಿಯಲ್ಲಿ ಪ್ರಗತಿಯನ್ನು ಸಾಧಿಸುವಿರಿ.

ಮಿಥುನ ರಾಶಿ : ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವಂತೆ ಎಲ್ಲರಿಗೂ ಬೈಯುತ್ತ ಇರುವಿರಿ. ಇಂದು ಅಪರೂಪಕ್ಕೆ ಸಿಕ್ಕ ಸ್ನೇಹಿತರು ನಿಮ್ಮ ಬಳಿ ಹಣವನ್ನು ಖಾಲಿ‌ಮಾಡಿಸಬಹುದು. ದಾರಿ ಸರಿಯಿಲ್ಲ ಎಂದ ಮಾತ್ರಕ್ಕೆ ಬದಲಿಸಬೇಕೆಂದು ಅಲ್ಲ. ಸರಿ‌ಮಾಡಿಕೊಂಡೂ ಹೋಗಬಹುದು. ಅಸಹಜ ವರ್ತನೆಯು ಮನೆಯಲ್ಲಿ ಸಂದೇಹಕ್ಕೆ ಕಾರಣವಾಗುವುದು. ಹಿರಿಯರನ್ನು ಅನಾದರದಿಂದ ನೋಡಬೇಡಿ. ನಿಮ್ಮ ಅಸಮಾಧಾನವನ್ನು ಆಪ್ತರ ಬಳಿ ಹೇಳಿಕೊಳ್ಳಿ. ಉದ್ಯೋಗದಲ್ಲಿ ಎದುರಾದ ಸನ್ನಿವೇಶಗಳನ್ನು ಶಾಂತ ಮಾಡುವಿರಿ. ಕೇಳದೇ ಇರುವವರಿಗೆ ಏನನ್ನೂ ಕೊಡಬೇಡಿ. ನಿಮ್ಮ ಸುಪ್ತಮತಿಯನ್ನು ಪ್ರಕಟಿಸಿ. ಭೂಮಿಯ ಖರೀದಿಗೆ ಹಿರಿಯರ ಮಾರ್ಗದರ್ಶನವೂ ಇರಲಿ. ಮೋಜಿನ‌ ಆಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಆರೋಗ್ಯವು ಉಪಶಮನವಾಗುವ ಯಾವ ಲಕ್ಷಣವೂ ನಿಮಗೆ ಕಾಣಿಸದು. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು.

ಕರ್ಕಾಟಕ ರಾಶಿ : ಉದ್ಯೋಗದ ಕಾರಣದಿಂದ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಇಂದು ಅನವಶ್ಯಕ ಖರ್ಚಿನ ಕಡೆ ಗಮನವಿರದು. ಹೆಚ್ಚು ಕೋಪವನ್ನು ತೋರಿಸಲಿದ್ದೀರಿ‌. ಸ್ಥಿರಾಸ್ತಿಯನ್ನು ಕೊಡುವ ಆಲೋಚನೆಯನ್ನು ಮಾಡುವಿರಿ. ವಾಹನ ಖರೀದಿಯ ಬಗ್ಗೆ ಆಲೋಚನೆ ಇರಲಿದೆ. ಬಹಳ ಹಿಂದಿನ ಆಸೆಯನ್ನು ಸಂಗಾತಿಯು ಪೂರೈಸುವನು. ‌ಇಂದು ನಿಮ್ಮ ಅನಗತ್ಯ ಮಾತುಗಳಿಂದ ವಿವಾದವು ಹುಟ್ಟಬಹುದು. ನಿಮ್ಮದಲ್ಲದ ವಸ್ತುವಿನ ಬಗ್ಗೆ ನಿಮಗೆ ಚಿಂತೆ‌ ಬೇಡ. ಸಾಲದ ಮರುಪಾವತಿಗೆ ಸಮಯವನ್ನು ಕೇಳುವಿರಿ. ಬಂಧುಗಳ ಮಾತಿನಿಂದ ನಿಮಗೆ ತೊಂದರೆ ಆಗಬಹುದು. ಭಯದಲ್ಲಿ ನೀವು ಬಹಳ ಇಂದಿನ ದಿನವನ್ನು ಕಳೆಯಬೇಕಾದೀತು. ಹಿರಿಯರ ಬಳಿ ಮಾತನಾಡುವಾಗ ವಿನಯವಿರಲಿ. ನಿಮ್ಮ ಮೌನವೂ ಉತ್ತರವಾಗಿರಲಿ.

ಸಿಂಹ ರಾಶಿ : ತಂದೆಯ ಮನಸ್ಸನ್ನು ಅರಿತು ಅವರ ಜೊತೆ ವ್ಯವಹರಿಸಿ. ಇಂದು ನಿಮ್ಮ ಹಿತಶತ್ರುಗಳಿಂದ ತೊಂದರೆ‌ ಕೊಡಬಹುದು. ಅಂದುಕೊಂಡ ಸಮಯಕ್ಕೆ ಕೆಲಸಗಳು ಆಗದು ಎಂದು ಬೇಸರವಾಗಲಿದೆ. ಅದೃಷ್ಟಕ್ಕಾಗಿ ಕಾಯದೇ ಕಾರ್ಯದಲ್ಲಿ ಪ್ರವೃತ್ತರಾಗಿ. ತಾನಾಗಿಯೇ ಎಲ್ಲವೂ ಸೇರಿಕೊಳ್ಳುವುದು. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯು ಬೇಸರ ತರಿಸಿದ್ದು ಹೊರ ಕಡೆ ಸುತ್ತಾಡುವ, ವಿರಾಮ ಪಡೆಯುವ ಮನಸ್ಸಾಗಲಿದೆ. ಇಂದು ನಿಮ್ಮ ಕೆಲಸವು ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ. ಇಂದು ಮನೆಯಲ್ಲಿ ನೀವು ಸಂಭ್ರಮವನ್ನು ಆಚರಿಸುವಿರಿ. ಕಾಲಕ್ಕೆ ಬೇಕಾದ ಮಾರ್ಗದರ್ಶನದ ಅಗತ್ಯವಿರಲಿದೆ. ಆಗಿಹೋದುದಕ್ಕೆ ಕಾರಣವನ್ನು ಹುಡುಕುತ್ತ ಕುಳಿತುಕೊಳ್ಳಬೇಡಿ. ಮುಂದಿನದ್ದರ ಬಗ್ಗೆ ಆಲೋಚನೆ ಇರಲಿ. ಹೂಡಿಕೆಯನ್ನು ಬಹಳ ಮುತುವರ್ಜಿಯಿಂದ ಮಾಡಬೇಕಾದೀತು. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಇಷ್ಟವಾಗುವುದನ್ನು ಬೇರೆಯವರಿಗೆ ಹಂಚುವಿರಿ.

ಕನ್ಯಾ ರಾಶಿ : ಮಕ್ಕಳ ಮೇಲಿನ‌ ಮೋಹಕ್ಕೆ ಅವರ ತಪ್ಪನ್ನು ತಿದ್ದಲಾರಿರಿ. ಸ್ನೇಹಿತರಿಂದ ಇಂದು ಮನೆ ತುಂಬಲಿದೆ. ಮನೆಯ ಹಿರಿಯರ ವಿರುದ್ಧ ಮಾತನಾಡುವಿರಿ. ನಿಮ್ಮ ಮಾತುಗಳನ್ನು ಸ್ಪಷ್ಟವಾಗಿ ತಿಳಿಸಿ. ಗೋಡೆಯ ಮೇಲಿನ ದೀಪದಂತೆ ಆಗುವುದು ಬೇಡ. ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಕೊಡುವುದು ಉತ್ತಮ. ಸಂಗಾತಿಗೆ ನಿಮ್ಮ ಕಡೆಯಿಂದ ಅಚ್ಚರಿಯ ಉಡುಗೊರೆ ಸಿಗಬಹುದು. ನಿಮ್ಮ ಮನಸ್ಸಿನ ನಿಯಂತ್ರಣವು ನಿಮ್ಮ ಕೈಯಲ್ಲಿರಲಿ.‌ ತಂತ್ರಜ್ಞರು ವಿದೇಶ ಪ್ರವಾಸವನ್ನು ಮಾಡಿ ಬರಲಿರುವರು. ನಿಮ್ಮವರನ್ನು ಬೀಳ್ಕೊಡಲು ನಿಮಗೆ ಕಷ್ಟವಾದೀತು. ನಿಮ್ಮ ಸ್ವಭಾವವನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಉದ್ಯಮವನ್ನು ನಡೆಸುವುದು ಕಷ್ಟವೆನಿಸಬಹುದು. ಖಾಸಗಿತನದ ಸಂಸ್ಥೆಯ ಮಾಲಿಕರಾಗುವ ಆಹ್ವಾನ ಬರಲಿದೆ. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಲೆಕ್ಕಾಚಾರದಲ್ಲಿ ನಿರ್ದಿಷ್ಟತೆ ಇದ್ದರೂ ನಡತೆಯಲ್ಲಿ ಅದು ಸಿಗದು.

ತುಲಾ ರಾಶಿ : ಸರ್ಕಾರದ ಕೆಲಸಲದಲ್ಲಿ ಗೊತ್ತಿಲಗಲ್ಲದೇ ತಪ್ಪುಗಳು ಆಗಬಹುದು. ಇಂದು ನಿಮ್ಮೊಳಗೆ ಅತಿಯಾದ ಗೊಂದಲ ಇರುವುದು ಇತರರಿಗೂ ಗೊತ್ತಾಗುವುದು. ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ಮನಸ್ಸಿಗೆ ಅನುಕೂಲಕರವಾದ ವಾತಾವರಣವು ಸಿಗದೇ ಇರಬಹುದು. ಸರಿಯಾದ ಸಮಯಕ್ಕೆ ಬುದ್ಧಿ ಸೂಚಿಸದೇ ಇದ್ದೀತು. ದುರ್ವ್ಯಸನವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಆತ್ಮವಿಶ್ವಾಸವನ್ನು ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳಬೇಕಾಗುವುದು. ಕುಟಂಬದವರು ಸೇರಿಕೊಂಡು ಎಲ್ಲರ ಶ್ರೇಯಸ್ಸಿಗೆ ಧಾರ್ಮಿಕ ಕಾರ್ಯಗಳನ್ನು ಮಾಡುವರು. ಕೆಲವು ಕಾಲ ಒಂಟಿಯಾಗಿ ಇರಬೇಕು ಎನಿಸಬಹುದು. ಹೊಸ ವ್ಯವಹಾರವನ್ನು ಆರಂಭಿಸಿರುವವರಿಗೆ ಗೊಂದಲವಾಗಲಿದೆ. ದೊಡ್ಡವರ ವಿಚಾರದಲ್ಲಿ ನೀವು ಇಂದು ತಗ್ಗಿ ಬಗ್ಗಿ ನಡೆಯಬೇಕಾದೀತು. ಸ್ನೇಹಿತರ ಮಾತುಗಳು ನಿಮ್ಮ ದಾರಿ ತಪ್ಪಿಸಬಹುದು. ಕೋಪವನ್ನು ಕಡಿಮೆ ಮಾಡಿಕೊಂಡು ಕಾರ್ಯದಲ್ಲಿ ತೊಡಗಿಕೊಳ್ಳಿ. ಏಕಾಗ್ರತೆಯ ಕೊರತೆಯನ್ನು ಸರಿ ಮಾಡಿಕೊಳ್ಳಿ. ಯೋಜನೆಗೆ ಸರಿಯಾದ ಚೌಕಟ್ಟು ಬೇಕು.

ವೃಶ್ಚಿಕ ರಾಶಿ : ಐಷಾರಾಮಿಯಾಗಿ ಬದುಕಲು ನಿಮ್ಮ ಹಣವನ್ನೇ ಖರ್ಚುಮಾಡಿ. ನೀವು ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ‌. ಸಣ್ಣ ಪುಟ್ಟ ತೊಂದರೆಗಳಿಗೆ ನೀವು ಇಂದು ಹಿಂದೆ ಹೆಜ್ಜೆ ಇಡುವ ಅವಶ್ಯಕತೆ ಇಲ್ಲ. ಇಲ್ಲ ಸಲ್ಲದ‌ ನೆಪಗಳು ಸುಲಭವಾಗಿ ಸಿಗಬಹುದು. ಸಂಗಾತಿಯ ನಡುವಣ ಕಲಹವನ್ನು ನೀವು ಸರಿ ಮಾಡಿಕೊಳ್ಳಿ. ಸುಳ್ಳಾಡಿ ಆತ್ಮವಂಚನೆಯನ್ನು ಮಾಡಿಕೊಳ್ಳಬೇಡಿ. ನಿಮ್ಮ ವಿರುದ್ಧ ಮಾತನಾಡಿಲ್ಲವೆಂದರೆ ನಿಮ್ಮ ಕ್ರಮ ಸರಿ ಇದೆ ಎಂದಲ್ಲ. ಬೇಕಾದಷ್ಟು ಮಾತ್ರ ಮಾತನಾಡಿ ಉಳಿದದ್ದನ್ನು ಕಾರ್ಯಕ್ಕೆ ಸೀಮಿತಗೊಳಿಸಿ. ನೀರಿನಿಂದ ನೀವು ಭಯಪಡುವಿರಿ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಮನೆಯಲ್ಲಿ ಮದ್ದನ್ನು ಮಾಡಿಕೊಂಡು ಆರಾಮಾಗಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು.

ಧನು ರಾಶಿ : ನಿಮ್ಮ ವರ್ತನೆಗಳೇ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡುವುದು. ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೋಗುವಿರಿ. ಸಾರ್ವಜನಿಕವಾಗಿ ಸ್ಥಾನಮಾನವನ್ನು ಪಡೆಯಲು ಹಂಬಲಿಸುವಿರಿ. ರಾಜಕಾರಣ ಗಾಳಿ ಬೀಸಲಿದೆ. ಸಹೋದರ ನಡುವಿನ ಸ್ನೇಹ ಭಾವವು ದೂರಾಗಬಹುದು. ನಿಮ್ಮ ಸಹೋದರನ ಆರೋಗ್ಯವು ವ್ಯತ್ಯಾಸವಾಗಬಹುದು. ಸಂಗಾತಿಯೇ ನಿಮ್ಮ ಕೆಲಸಗಳನ್ನು ಮಾಡಿಕೊಡಬಹುದು. ಏನಾದರೂ ಮಾಡಬೇಕೆಂಬ ತುಡಿತವಿದ್ದರೂ ಸರಿಯಾದ ತೀರ್ಮಾನ ಸಾಧ್ಯವಾಗದು.‌ ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ವೇಗವಾಗಲಿದೆ. ಜೊತೆ ಇರುವವರ ಮೇಲೆ‌ ನಂಬಿಕೆ ಕಡಿಮೆ ಆದೀತು. ಏನಾದರೂ ಬೇಡದ ಸಂಗತಿಗಳನ್ನು ಬಗೆಗೆ ನಿಮ್ಮ‌ ಆಲೋಚನೆಗಳು ಇರುತ್ತವೆ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನದಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡವುದು ಬೇಡ.

ಮಕರ ರಾಶಿ : ನಿಮ್ಮ ಸುರಕ್ಷತೆಯ ಬಗ್ಗೆ ಮೊದಲು ಗಮನವಿರಲಿ. ಅನಂತರ ಉಳಿದುದರ ರಕ್ಷಣೆ. ಇಂದು ನೀವು ಮಾಡುವ ಪ್ರಯಾಣದಿಂದ ಸುಖವಿರದು. ನಿಮ್ಮ ಮಾತುಗಳು ಇನ್ನೊಬ್ಬರಲ್ಲಿ ಕರುಣೆಯನ್ನು ಉಂಟುಮಾಡುವುದು. ಇಂದಿನ ನಿಮ್ಮ ಕಾರ್ಯಪರತೆಯಿಂದ ಸಂಸ್ಥೆಯು ಯಶಸ್ಸನ್ನು ಸಾಧಿಸಬಹುದು. ನಿಮ್ಮ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದೆ. ಪತ್ರವ್ಯವಹಾರವೇ ನಿಮಗೆ ಸರಿಯಾದ ದಾರಿಯಾಗಬಹುದು. ಇಂದು ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಏಳಬಹುದು. ಒಬ್ಬರು ತಟಸ್ಥರಾಗಿ. ವಿದ್ಯಾರ್ಥಿಗಳು ಇಂದು ಖುಷಿಪಡಲಿದ್ದಾರೆ. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಕುಹುಕವಾಡುವುದು ನಿಮ್ಮ ಇಷ್ಟದವರ ಜೊತೆ ಸಮಯವನ್ನು ಕಳೆಯುವಿರಿ. ವಿವಾದವನ್ನು ಮಾಡಿಕೊಳ್ಳಲು ಹೋಗಬೇಡಿ. ಯಾರೇ ಏನೇ ಹೇಳಿದರೂ ಕೇಳಿಕೊಳ್ಳುವ ತಾಳ್ಮೆ ಅಗತ್ಯವಾಗಿ ಬೇಕು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು.

ಕುಂಭ ರಾಶಿ : ನಿಮಗಿರುವ ಸ್ಥಾನಮಾನದ ಬಗ್ಗೆ ಆತಂಕ ಬರಬಹುದು. ಇಂದು ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಬಹುದು. ಯಾರ ಮೇಲೂ ದ್ವೇಷವನ್ನು ಸಾಧಿಸುವುದು ಬೇಡ. ಇಂದು ನೀವು ಮಕ್ಕಳ ಜೊತೆ ಖುಷಿಯಿಂದ ಕಾಲ ಕಳೆಯುವಿರಿ. ಅನಿದ್ದನ್ನು ಹೇಳಿಕೊಂಡು ಮನಸ್ಸು ನಿರಾಳವಾಗಲಿದೆ. ಅನಿಸಿದ್ದನ್ನು ಹೇಳಿ ಅನಂತರ ಪಶ್ಚಾತ್ತಾಪಪಡುವಿರಿ. ವ್ಯವಹಾರದಿಂದ ವಂಚಿತರಾಗುವಿರಿ. ತಾಯಿಯು ನಿಮಗೆ ಬೇಕಾದ ಸಹಕಾರವನ್ನು ಕೊಡುವಳು. ಉಸಿರಾಟ ತೊಂದರೆ ಕಾಣಿಸಿಕೊಳ್ಳಬಹುದು. ಸಮಯಪಾಲನಯಲ್ಲಿ ಸೋಲುವಿರಿ. ಸಂದರ್ಭವನ್ನು ನೋಡಿಕೊಂಡು ಮಾತನಾಡಿ. ದಿನನಿತ್ಯದ ಕಾರ್ಯವನ್ನು ಮಾಡುವವರಿಗೆ ಲಾಭವಿದೆ. ಮನೆಯವರ ಜೊತೆ ಸಮಯವನ್ನು ಕಳೆಯುವಿರಿ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವು ಕೆಡುವುದು.

ಮೀನ ರಾಶಿ : ಆಸ್ತಿಯ ಆಧಾರದ ಮೇಲೆ ನೀವು ಸಾಲವನ್ನು ಪಡೆಯಬೇಕಾಗಬಹುದು. ನಿಮ್ಮ ಜೀವನಕ್ಕೆ ಇಂದು ಯಾರಾದರೂ ಆಸರೆ ಬೇಕೆನಿಸಬಹುದು. ನಿಮ್ಮದಲ್ಲದ ವಿಚಾರದಲ್ಲಿ ಸಲಹೆಯನ್ನು ಕೊಡಲು ಹೋಗುವುದು ಬೇಡ. ಯಾರದೋ ಅಸೆಗೆ ನೀವು ಬಲಿಯಾಗಬಹುದು. ವಾಹನದಿಂದ ಅಲ್ಪ ಲಾಭವೂ ನಿಮಗೆ ಸಮಾಧಾನ ತರಬಹುದು. ನಿಮ್ಮ ನಡುವಲ್ಲಿ ಬಿಟ್ಟು ಆನಂದಿಸುವರು. ಗೃಹ ನಿರ್ಮಾಣ ಕಾರ್ಯದಲ್ಲಿ ಅತಿಯಾ ಗಡಿಬಿಡಿ ಬೇಡ. ಒಂದೊಂದೇ ಮೆಟ್ಟಿಲೇರಿ ತುದಿಯನ್ನು ಮುಟ್ಟಬೇಕು. ಒಂದೇ ಬಾರಿಗೆ ಆಗುವುದಿಲ್ಲ.‌ ಸಜ್ಜನರ ಸಹವಾಸ ಸಿಗಬಹುದು. ಆರೋಗ್ಯವು ಸರಿಯಿಲ್ಲದ ಕಾರಣ ಕೋಪವು ಹೆಚ್ಚಾಗುವುದು. ಅನಪೇಕ್ಷಿತ ವಿಷಯವನ್ನು ಯಾರ ಜೊತೆಯೂ ಮಾತನಾಡಬೇಡಿ. ನಿಮ್ಮ‌‌ ಕೆಲಸದ ಬಗ್ಗೆ ಗಮನ ಹೆಚ್ಚಿರಲಿ. ಏಕಾಗ್ರತೆಯು ಭಂಗವಾಗಲು ಅನೇಕ ಕಾರಣಗಳು ಇರಲಿವೆ. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ