Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 5ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 5ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 5ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ಆಯೇಷಾ ಬಾನು

Updated on: Sep 05, 2024 | 6:27 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈ ದಿನ ಮನ್ಯುಸೂಕ್ತದ ಶ್ರವಣ ಮಾಡಿದಲ್ಲಿ ಒಂದು ಬಗೆಯ ಸಮಾಧಾನ, ನೆಮ್ಮದಿ ನೆಲೆಸಲಿದೆ. ಹೀಗೆ ಮಾಡಿದರೆ ಹಲವು ಸವಾಲುಗಳು ಸುಲಭವಾಗಿ ಎದುರಿಸಬಹುದು. ಯಾವುದೇ ವಿಚಾರವಾಗಿರಲಿ, ಅದೆಷ್ಟೇ ಸಣ್ಣ ಪ್ರಮಾಣದ್ದಾಗಿರಲಿ ಪೂರ್ತಿಯಾಗಿ ಆ ಬಗ್ಗೆ ತಿಳಿದುಕೊಳ್ಳದೆ ನಿಮ್ಮ ಅಭಿಪ್ರಾಯವನ್ನು ಹೇಳದಿರಿ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸವನ್ನು ಒಪ್ಪಿಕೊಳ್ಳದಿರಿ. ನಿಮ್ಮ ಮನೆಯ ಸಮೀಪದಲ್ಲಿ ಕೆಲವು ಕೋರ್ಸ್ ನಡೆಯುತ್ತಿರುವುದು ಗಮನಕ್ಕೆ ಬರಲಿದ್ದು, ಅದಕ್ಕೆ ಸೇರಿಕೊಳ್ಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಕುಟುಂಬದ ಹಿರಿಯ ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರು ಕಾಗದ- ಪತ್ರಗಳು, ಸರ್ಕಾರದಿಂದ ತೆಗೆದುಕೊಳ್ಳಬೇಕಾದ ಪರವಾನಗಿಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಮನೆಯಲ್ಲಿ ಎಲ್ಲೋ ಇಟ್ಟು, ಬಹಳ ಸಮಯದಿಂದ ಸಿಗದೇ ಇದ್ದ ವಸ್ತುವೊಂದು ಈ ದಿನ ದೊರೆಯುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಒಂದೇ ವಿಷಯ ಅಥವಾ ವಿಚಾರದ ಬಗ್ಗೆ ಬಹಳ ಹೊತ್ತು ಚರ್ಚೆ ಆಗಲಿದೆ. ಎಲ್ಲ ಸೇರಿಕೊಂಡು ಕೆಲವು ಜವಾಬ್ದಾರಿಗಳನ್ನು ನಿಮ್ಮ ಮೇಲೆ ಹಾಕುವಂಥ ಸಾಧ್ಯತೆಗಳಿವೆ. ಎಲ್ಲರ ಪರವಾಗಿ ನೀವೇ ಕೆಲವು ಸಿದ್ಧತೆಗಳನ್ನು ಮಾಡಬೇಕಾಗಬಹುದು ಅಥವಾ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಬಹುದು. ಹೀಗೆ ಆಗುವುದರಿಂದ ಇತರರು ಒಪ್ಪಿಕೊಂಡರು ಅನ್ನುವ ಕಾರಣಕ್ಕೆ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವು ಸಂಗತಿಗಳನ್ನು ನೀವೂ ಒಪ್ಪಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವವರು ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೊಬೈಲ್ ಫೋನ್, ಲ್ಯಾಪ್‌ಟಾಪ್, ಟ್ಯಾಬ್ ಸೇರಿದಂತೆ ಇತರ ವಸ್ತುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಯಾವುದೇ ಮುಖ್ಯ ಕೆಲಸ ಇದ್ದರೂ ಸಾಧ್ಯವಾದಲ್ಲಿ ಈ ದಿನ ಅದನ್ನು ಮುಂದಕ್ಕೆ ಹಾಕಿ. ಇನ್ನು ಸಿನಿಮಾ ರಂಗದಲ್ಲಿ ಇರುವಂಥವರಿಗೆ ಕೈಗೆ ಸಿಕ್ಕಂತೆಯೇ ಆಗಿ, ಪ್ರಮುಖ ಅವಕಾಶವೊಂದು ಕೈ ತಪ್ಪಿಹೋಗಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಾನು ಅಂದುಕೊಂಡಿದ್ದೇ ಆಗಬೇಕು ಎಂಬ ಹಠ ಈ ದಿನ ಒಳ್ಳೆಯದಲ್ಲ. ಹೀಗೆ ಮಾಡಿದಲ್ಲಿ ನಿಮ್ಮ ಆತ್ಮೀಯರು ಹಾಗೂ ಬಹಳ ಮೆಚ್ಚುವಂಥವರ ಜತೆಗೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಏರ್ಪಡಬಹುದು. ಇನ್ನು ಹಳೆಯ ನೋವು ಎಂದು ಕಾಡುತ್ತಿದ್ದಲ್ಲಿ ಮಂಡಿನೋವು ಈ ದಿನ ನಿಮಗೆ ಕಾಡಬಹುದು. ತೂಕದ ಸಮಸ್ಯೆ ಎದುರಿಸುತ್ತಿರುವವರು ಇಳಿಸಿಕೊಳ್ಳುವ ಕಡೆಗೆ ಗಮನ ವಹಿಸಿ. ಸರಿಯಾದ ವೈದ್ಯರ ಹಾಗೂ ಸೂಕ್ತ ಔಷಧೋಪಚಾರದ ಅಗತ್ಯ ಕಂಡುಬರಲಿದೆ. ಮಕ್ಕಳ ಶಿಕ್ಷಣದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ತೀರ್ಮಾನವೊಂದನ್ನು ತೆಗೆದುಕೊಳ್ಳಬೇಕಾಗಲಿದೆ. ಇದು ನಿಮ್ಮನ್ನು ಭಾವನಾತ್ಮಕವಾಗಿ ಬಹಳ ಒತ್ತಡಕ್ಕೆ ಸಿಲುಕಿಸಲಿದೆ. ನಿಮ್ಮ ಅಸಹಾಯಕತೆಯನ್ನು ಕೆಲವರು ಗೇಲಿ ಮಾಡಬಹುದು. ಅಥವಾ ಮತ್ತೆ ಕೆಲವರು ಅನುಕಂಪ ಸಹ ತೋರಿಸಬಹುದು. ನಿಮ್ಮ ಅಂತರಂಗದ ವಿಚಾರ ಎಂಬ ಕಾರಣಕ್ಕೆ ಇಷ್ಟು ಸಮಯ ಯಾರ ಜತೆಗೂ ಹಂಚಿಕೊಳ್ಳದೆ ಉಳಿದಿದ್ದು ಈ ದಿನ ಬಹಿರಂಗ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ವಿನಾ ಕಾರಣವಾಗಿ ಇತರರು ನಿಮ್ಮನ್ನು ಗುರಿ ಮಾಡಿಕೊಂಡು ಆಕ್ಷೇಪ, ಟೀಕೆ ಮಾಡುತ್ತಿದ್ದಾರೆ ಎಂದೆನಿಸಲಿದೆ. ಇಷ್ಟು ಸಮಯ ನಿಮ್ಮ ಪರವಾಗಿ ನಿಲ್ಲುತ್ತಿದ್ದವರು ಅಥವಾ ಮಾತನಾಡುತ್ತಿದ್ದವರೂ ನೆರವಿಗೆ ಬಾರದಿರುವುದರಿಂದ ಒಂದು ಬಗೆಯ ಅಸಹಾಯಕತೆ ಕಾಡಲಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಈ ದಿನ ವಿಪರೀತ ಮರೆವಿನ ಸಮಸ್ಯೆ ಕಾಡುತ್ತದೆ. ಅದಕ್ಕೆ ಮುಖ್ಯವಾದ ಕಾರಣ ಒತ್ತಡದ ಸನ್ನಿವೇಶಗಳು ಅಥವಾ ನೀವಾಗಿಯೇ ಹಾಕಿಕೊಳ್ಳುವ ಅಸಾಧ್ಯವಾದ ಗುರಿಗಳು ಎಂದು ಸಹ ಆಗಲಿದೆ. ಯಾರೋ ಒಬ್ಬರ ಮೇಲಿನ ಸಿಟ್ಟಿನಿಂದ ಎಲ್ಲರಿಗೂ ಅನ್ವಯ ಆಗುವಂಥ ಕಠಿಣ ನಿಯಮಗಳನ್ನು ತರುವುದು ಸರಿಯಲ್ಲ. ನಿಶ್ಚಿತವಾದ ಗುರಿ ಇಟ್ಟುಕೊಂಡು ಮುಂದಕ್ಕೆ ಸಾಗಿ. ಊಟ- ತಿಂಡಿ ಸರಿಯಾದ ಪ್ರಮಾಣದಲ್ಲಿ ನಿದ್ದೆಯನ್ನು ಮಾಡುವುದರ ಕಡೆಗೆ ಲಕ್ಚ್ಯ ನೀಡಿ. ಈ ದಿನ ನಿಮ್ಮಿಂದ ಸಾಧ್ಯವಾದಲ್ಲಿ ಕನಿಷ್ಠ ಹತ್ತು ನಿಮಿಷಗಳ ಕಾಲ ಓಂಕಾರದ ಧ್ಯಾನ ಮಾಡುವುದು ಉತ್ತಮ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ಸಾಧ್ಯವಾದಲ್ಲಿ ಗಣಪತಿಯ ದೇವಸ್ಥಾನಕ್ಕೆ ಭೇಟಿ ನೀಡಿ, ಯಥಾಶಕ್ತಿ ಸೇವೆಗೆ ಕೊಡಿ. ಖರ್ಚಿನ ವಿಚಾರವಾಗಿ ಮನೆಯಲ್ಲಿ ಸಿಕ್ಕಾಪಟ್ಟೆ ಚರ್ಚೆಗಳು ಆಗಲಿವೆ. ನಿಮ್ಮ ಶ್ರಮದ ಫಲವನ್ನು ಇನ್ಯಾರೋ ಪಡೆಯುತ್ತಿದ್ದಾರೆ ಎಂದು ನಿಮಗೆ ಬಲವಾಗಿ ಅನಿಸುವುದಕ್ಕೆ ಶುರು ಆಗುತ್ತದೆ. ಪ್ರಮುಖ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮುಂದಿನ ಹಂತಕ್ಕೆ ಬಡ್ತಿ ಸಿಗುವುದು ಬಹಳ ಕಷ್ಟವಾದದ್ದು ಎಂದು ಅನಿಸುತ್ತದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಗೆ ನಿಮ್ಮಿಂದ ಕೈ ಮೀರಿದ ಭರವಸೆಗಳನ್ನು ನೀಡಲು ಹೋಗದಿರಿ. ಒಂದು ವೇಳೆ ನೀವೇನಾದರೂ ಹೋಟೆಲ್, ರೆಸ್ಟೋರೆಂಟ್ ಅಥವಾ ರೆಸಾರ್ಟ್ ಗೆ ತೆರಳುತ್ತಿದ್ದೀರಿ ಅಂತಾದಲ್ಲಿ ಈ ದಿನ ನಿಮಗೆ ಬಹಳ ಮುಖ್ಯವಾದ ವ್ಯಕ್ತಿಯೊಬ್ಬರು ಅಲ್ಲಿ ಪರಿಚಯ ಆಗಲಿದ್ದಾರೆ. ಇಂದಿನ ಪರಿಚಯವು ಮುಂದೆ ನಿಮಗೆ ಅನುಕೂಲವಾಗಿ ಮಾರ್ಪಟ್ಟರೂ ಅಚ್ಚರಿ ಪಡಬೇಕಿಲ್ಲ. ಈ ದಿನ ನಿಮ್ಮ ಪಾಲಿಗೆ ಎಲ್ಲ ಅವಕಾಶಗಳು ಸಹ ಸವಾಲಿನ ರೀತಿಯಲ್ಲಿ ಬರಲಿವೆ. ಅವುಗಳನ್ನು ಬಳಸಿಕೊಳ್ಳುವ ಬಗ್ಗೆ ಆಲೋಚಿಸಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಯಾವ ಕೆಲಸ ಆದ ಮೇಲೆ ಯಾವುದು ಎಂಬ ಬಗ್ಗೆ ನಿಶ್ಚಿತವಾದ ಆಲೋಚನೆ, ಗುರಿ ಬಹಳ ಮುಖ್ಯವಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡದಂತೆ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರೇ ಕೆಲವು ಗೊಂದಲವನ್ನು ಸೃಷ್ಟಿ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಒಂದು ಸಲ ತೆಗೆದುಕೊಂಡ ನಿರ್ಧಾರವನ್ನು ಬದಲಿಸಿಕೊಳ್ಳಲಿಕ್ಕೆ ಹೋಗಬೇಡಿ. ತೀರಾ ನಿಮಗೇ ಒಂದು ಬಗೆಯ ಅನುಮಾನ ಕಾಡುತ್ತಿದೆ, ಯಾಕೆ ಬೇಕು ನಿರ್ಣಯ ಬದಲಿಸಿಕೊಂಡು ಬಿಡೋಣ ಎಂಬ ರೀತಿಯ ಅನಿವಾರ್ಯ ಅಂತಾದಲ್ಲಿ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಕ್ಷಣವೇ ತನ್ನಿ. ಇಲ್ಲದಿದ್ದಲ್ಲಿ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂಥ ಸನ್ನಿವೇಶ ಸೃಷ್ಟಿ ಆಗಬಹುದು. ಹೊಸದಾಗಿ ವಸ್ತುಗಳನ್ನು ಖರೀದಿ ಮಾಡಬೇಕು ಎಂದಾದರೆ ಅದರ ಅಗತ್ಯ ಎಷ್ಟಿದೆ ಎಂಬ ಬಗ್ಗೆ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ, ನಿರ್ಧಾರವನ್ನು ಕೈಗೊಳ್ಳುವುದು ಉತ್ತಮ. ಈ ದಿನ ವಾಹನಗಳ ಪಾರ್ಕಿಂಗ್ ಮಾಡುವ ಸಂದರ್ಭದಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಅಗತ್ಯ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಉಡುಗೊರೆಗಳನ್ನು ನೀಡುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಸಣ್ಣ- ಪುಟ್ಟ ವಿಚಾರಗಳು ಸಹ ಸಂತೋಷವನ್ನು ನೀಡಲಿವೆ. ನಿಮ್ಮಲ್ಲಿ ಪ್ರೇಮಿಗಳಿಗೆ ಬಹಳ ಒಳ್ಳೆ ಸಮಯ ಇದು. ಏಕಾಂತದಲ್ಲಿ ಭೇಟಿ ಮಾಡಿ, ದಿಢೀರನೆ ಕಿರು ಪ್ರವಾಸಗಳಿಗೆ ತೆರಳುವ ಯೋಗ ಇದೆ. ಸಂಬಂಧಿಕರ ಮನೆಗಳಲ್ಲಿನ ಕಾರ್ಯಕ್ರಮಗಳಿಗೆ ನಿಮಗೆ ಆಹ್ವಾನ ಬರಲಿದೆ. ಗೇಟೆಟ್ ಕಮ್ಯುನಿಟಿಯಲ್ಲಿ ಸೈಟು ಹುಡುಕುತ್ತಾ ಇರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ದೇಹದ ತೂಕಕ್ಕೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅಡುಗೆ- ಪೌರೋಹಿತ್ಯ ವೃತ್ತಿಯಲ್ಲಿ ಇರುವವರಿಗೆ ಹಣಕಾಸು ಹರಿವು ಸ್ವಲ್ಪ ಸರಾಗ ಆಗಲಿದೆ. ದೂರದ ಬಂಧುಗಳು ಕೆಲ ಸಮಯ ನಿಮ್ಮ ಮನೆಯಲ್ಲೇ ಅಥವಾ ನಿಮ್ಮ ಸಹಾಯದಿಂದ ಎಲ್ಲಾದರೂ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಳ್ಳಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಹೆಣ್ಣುಮಕ್ಕಳಿಗೆ ಬಹಳ ದಿನಗಳಿಂದ ಇರುವಂಥ ಚಿಂತೆ ಈ ದಿನ ದೂರವಾಗಲಿದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಆಗಬಹುದಾದ ವಂಚನೆಯ ಸುಳಿವು ಸಿಗಲಿದೆ. ಕೃತಕ ಗರ್ಭಧಾರಣೆ ಮೂಲಕ ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ತಹಬಂದಿಗೆ ಬರಲಿದೆ. ಮನೆ ದೇವರ ಅನುಗ್ರಹಕ್ಕಾಗಿ ಮನಸ್ಸಿನಲ್ಲಿ ಸ್ಮರಣೆಯನ್ನು ಮಾಡಿ. ತೀರ್ಥಕ್ಷೇತ್ರಗಳನ್ನು ದರ್ಶನ ಮಾಡಬೇಕು ಎಂದುಕೊಂಡಿರುವವರು ಸ್ವಲ್ಪ ಮುಂದಕ್ಕೆ ಹಾಕಬೇಕಾದ ಸಂದರ್ಭ ಎದುರಾಗಬಹುದು. ನಿಮಗೆ ಬರಬೇಕಾದ ಹಣ ಬಾಕಿ ಉಳಿದಿದ್ದಲ್ಲಿ ಅದಕ್ಕೆ ಈ ದಿನ ಪ್ರಯತ್ನವನ್ನು ಮಾಡಿದಲ್ಲಿ ವಸೂಲಿ ಆಗುವಂಥ ಸಾಧ್ಯತೆಗಳು ಜಾಸ್ತಿ ಇವೆ. ಸ್ವಂತ ಉದ್ಯೋಗಗಳನ್ನು ಮಾಡುತ್ತಿರುವವರಿಗೆ ಕುಟುಂಬ ನಿರ್ವಹಣೆ- ಸಾಲ ಮರುಪಾವತಿಯಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆಗಳಿವೆ. ನಾಲಗೆಯ ಮೇಲೆ ಹಿಡಿತವನ್ನು ಇರಿಸಿಕೊಳ್ಳುವುದು ಮುಖ್ಯ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ವಿಲಾಸಿ ಕಾರುಗಳನ್ನು ಖರೀದಿ ಮಾಡಬೇಕು ಎಂದಿರುವವರು ಅದಕ್ಕಾಗಿ ಬೇಕಾದ ಲೋನ್ ತೆಗೆದುಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಮನೆಗೆ ಗೃಹಾಲಂಕಾರ ವಸ್ತುಗಳನ್ನು ಖರೀದಿಸಿ ತರಲಿದ್ದೀರಿ. ಅದೇ ರೀತಿ ತಾತ್ಕಾಲಿಕವಾಗಿ ಬೇರೆಯವರ ಮನೆಯಲ್ಲಿ ಇರಲಿ ಎಂದು ಇಟ್ಟಿದ್ದ ವಸ್ತುಗಳನ್ನು ವಾಪಸ್ ಮನೆಗೆ ತರಲಿದ್ದೀರಿ. ಜಿಮ್, ಯೋಗ, ಧ್ಯಾನ ಹೀಗೆ ಹೊಸತನ್ನು ಕಲಿಯುವುದಕ್ಕೆ ಆಸಕ್ತರಾಗಿ ಸೇರ್ಪಡೆ ಆಗುತ್ತೀರಿ. ಮುಖ್ಯವಾಗಿ ಆರೋಗ್ಯದ ಬಗ್ಗೆ ನೀವು ನೀಡುವ ಪ್ರಾಶಸ್ತ್ಯ ಹೆಚ್ಚಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಜವಾಬ್ದಾರಿಗಳು ದೊರೆಯಲಿವೆ. ವಿದೇಶಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಕಾಂಟ್ಯಾಕ್ಟ್‌ಗಳ ಮೂಲಕವಾಗಿ ಸಹಾಯ ಆಗಲಿದೆ. ನಗರದ ಹೊರಭಾಗಗಳಲ್ಲಿ ವಾಸ ಮಾಡುವವರಿಗೆ ಇದು ಎಚ್ಚರಿಕೆಯ ಮಾತು: ಬೆಲೆಬಾಳುವ ವಸ್ತುಗಳನ್ನು ಜೋಪಾನ ಮಾಡಿಟ್ಟುಕೊಳ್ಳಿ, ರಾತ್ರಿ ವೇಳೆ ಸಂಚರಿಸುವಾಗಂತೂ ಧರಿಸದಿರುವುದು ಉತ್ತಮ.

ಲೇಖನ- ಎನ್‌.ಕೆ.ಸ್ವಾತಿ

ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ